ಕುಂಭ ರಾಶಿಯಲ್ಲಿ ಶನಿ, ಬುಧ ಸಂಯೋಗ: ಸ್ವಂತ ಉದ್ಯಮ ವಿಸ್ತರಿಸಿಕೊಳ್ಳುತ್ತೀರಿ, ಸಿಂಹದಿಂದ ವೃಶ್ಚಿಕದವರಿಗೆ 4 ರಾಶಿಯವರ ಫಲಾಫಲಗಳು ಹೀಗಿವೆ
ಕುಂಭ ರಾಶಿಯಲ್ಲಿ ಶನಿ ಮತ್ತು ಬುಧನ ಸಂಯೋಗವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಯವರಿಗೆ ಶುಭಫಲಗಳಿವೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಏನೆಲ್ಲಾ ಲಾಭಗಳಿವೆ ನೋಡಿ.

ಇಂದು (ಫೆಬ್ರವರಿ 11, ಮಂಗಳವಾರ ಬುಧ ಗ್ರಹವು ಕುಂಭರಾಶಿಯನ್ನು ಪ್ರವೇಶಿಸಿ, ಇದೇ ತಿಂಗಳ 27ರವರೆಗು ಶನಿಗ್ರಹದೊಂದಿಗೆ ಸಂಚರಿಸುತ್ತಾನೆ. ಶನಿ ಮತ್ತು ಬುಧ ಗ್ರಹಗಳು ಪರಸ್ಪರ ಮಿತ್ರರಾಗುತ್ತಾರೆ. ಶನಿಯು ಮೂಲ ತ್ರಿಕೋಣದಲ್ಲಿದ್ದರೆ, ಬುಧನಿಗೆ ಕುಂಭವು ಮಿತ್ರ ಕ್ಷೇತ್ರವಾಗುತ್ತದೆ. ಇದರಿಂದ ಪ್ರತಿಯೊಂದು ರಾಶಿಗಳಿಗೆ ವಿಭಿನ್ನವಾದ ಫಲಗಳು ದೊರೆಯುತ್ತವೆ. ಬಹುತೇಕ ಶುಭಫಲಗಳು ದೊರೆಯುತ್ತವೆ. ಕುಂಭ ರಾಶಿಯಲ್ಲಿ ಶನಿ ಮತ್ತು ಬುಧನ ಸಂಯೋಗವು ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಇರುವ ಪ್ರಯೋಜನಗಳನ್ನು ತಿಳಿಯೋಣ.
ಸಿಂಹ ರಾಶಿ
ಬಂಧು ಬಳಗದವರ ಜೊತೆ ಉತ್ತಮ ಆತ್ಮೀಯತೆ ಮೂಡುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಎಲ್ಲರ ಸಹಾಯ ಸಹಕಾರ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ ಕಂಡು ಬರುತ್ತದೆ. ಸಣ್ಣ ಪ್ರಮಾಣದ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ಅಧಿಕವಾದ ಆತ್ಮವಿಶ್ವಾಸವಿರುತ್ತದೆ. ಸುಲಭವಾಗಿ ಬೇರೆಯವರ ಸಲಹೆ ಸೂಚನೆಯನ್ನು ಒಪ್ಪುವುದಿಲ್ಲ. ತಂದೆಯವರಿಗೆ ವಂಶದ ಆದಾಯದಲ್ಲಿನ ಪಾಲು ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳು ಕ್ಷೇಮಕರ. ಸಮಾಜ ಸೇವೆ ಮಾಡುವ ಆಶಯ ನಿಮ್ಮಲ್ಲಿ ಇರುತ್ತದೆ. ಯಾವುದಾದರೂ ಒಂದು ವಿಚಾರಗಳಿಗೆ ಯೋಚನೆ ಇರಲಿದೆ. ಒಳ್ಳೆಯ ಮಾತಿನಿಂದ ಬೇರೆಯವರ ಬೇಸರವನ್ನು ದೂರ ಮಾಡುವಿರಿ.
ಸಿಂಹ ರಾಸಿಯವರು ಸ್ವಂತ ಉದ್ದಿಮೆ ಇದ್ದಲ್ಲಿ ಹಣದ ತೊಂದರೆ ಕಾಣುವುದಿಲ್ಲ. ಸಾಹಸದ ಸ್ಪರ್ಧಿಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸುವಿರಿ. ನಿಮ್ಮ ನೇರವಾದ ನಡೆನುಡಿಯಿಂದ ವಿರೋಧಿಗಳು ಹೆಚ್ಚುತ್ತಾರೆ. ದಾಂಪತ್ಯ ಜೀವನದಲ್ಲಿ ಶಾಂತಿ ನೆಮ್ಮದಿ ಕಂಡು ಬರುತ್ತದೆ. ಸೋದರ ನಡುವೆ ಎದುರಾಗುವ ವಾದ ವಿವಾದಗಳು ಕ್ಷಣಿಕವಾಗುತ್ತವೆ. ಗೃಹಿಣಿಯರು ತಮ್ಮಒಳ್ಳೆಯ ಮನಸ್ಸಿನಿಂದ ಎಲ್ಲರನ್ನು ಗೆಲ್ಲುತ್ತಾರೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.
ಕನ್ಯಾ ರಾಶಿ
ತಂದೆಯೊಂದಿಗೆ ಅಥವಾ ಕುಟುಂಬದ ಹಿರಿಯರ ಜೊತೆ ಇದ್ದ ಮನಸ್ತಾಪವು ದೂರವಾಗುವುದು. ಕುಟುಂಬದ ಗೌರವವನ್ನು ಕಾಪಾಡಲು ಶ್ರಮಿಸುವಿರಿ. ಅಧಿಕಾರಿಗಳಿಗೆ ಉನ್ನತ ಹುದ್ದೆ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ರೀತಿಯ ಅಡಚಣೆಗಳು ಇರುವುದಿಲ್ಲ. ಮನಸ್ಸಿಗೆ ಸರಿ ಎನಿಸುವ ಕೆಲಸ ಕಾರ್ಯಗಳನ್ನು ಮಾತ್ರ ಆಯ್ಕೆ ಮಾಡುವಿರಿ. ಸ್ವಂತ ಉದ್ದಿಮೆಯನ್ನು ವಿಸ್ತರಿಸುವಿರಿ. ದಂಪತಿ ನಡುವೆ ಬೇಸರದ ಸಂಗತಿ ನಡೆಯಲಿದೆ. ಮನಸ್ಸಿನಲ್ಲಿ ಒಂದು ರೀತಿಯ ಚಿಂತೆ ಮನೆ ಮಾಡಿರುತ್ತದೆ. ನಿಮ್ಮ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುವುದಿಲ್ಲ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮವನ್ನು ಆಶ್ರಯಿಸುವಿರಿ. ಬುದ್ಧಿವಂತಿಕೆಯಿಂದ ಎದುರಾಗುವ ಆಪತ್ತಿನಿಂದ ಪಾರಾಗುವಿರಿ.
ಸಮಾಜದಲ್ಲಿನ ಸಂಘ ಸಂಸ್ಥೆಗಳ ಒಡೆತನ ಲಭಿಸುತ್ತದೆ. ನಿಮ್ಮ ಮನಸ್ಸಿನ ಆಸೆ ಆಕಾಂಕ್ಷೆಗಳು ನೆರವೇರಲಿವೆ. ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವಿರಿ. ಸಣ್ಣಪುಟ್ಟ ವಿಚಾರವಾದರೂ ಗಂಭೀರತೆಯಿಂದ ಯೋಚಿಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರೆ. ಸೋದರರ ಜೊತೆಯಲ್ಲಿ ವಾದ ವಿವಾದಗಳಿರುತ್ತವೆ. ನಿಮ್ಮಲ್ಲಿರುವ ಕ್ಷಮಾ ಗುಣದಿಂದ ನೀವು ಇರುವ ಕಡೆ ಶಾಂತಿ ನೆಮ್ಮದಿ ನೆಲೆಸುತ್ತದೆ. ಮಕ್ಕಳ ವಿಚಾರವಾಗಿ ಆತ್ಮೀಯರ ಜೊತೆ ಮನಸ್ತಾಪ ಉಂಟಾಗಬಹುದು. ದೂರದ ಸ್ಥಳಕ್ಕೆ ಮನೆ ಮಂದಿಯ ಜೊತೆಗೂಡಿ ಪ್ರವಾಸಕ್ಕೆ ತೆರಳುವಿರಿ.
ತುಲಾ ರಾಶಿ
ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ. ಆತ್ಮೀಯರ ಸಹಾಯ ಸಹಕಾರ ದೊರೆಯಲಿದೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಬುದ್ಧಿವಂತಿಕೆಯಿಂದ ಸಮಯವನ್ನು ಆಧರಿಸಿ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ಹುದ್ದೆ ದೊರೆಯುತ್ತದೆ. ನವ ವಿವಾಹಿತರಿಗೆ ಸಂತಾನ ಲಾಭವಿದೆ. ಮಾತಿನಲ್ಲಿ ಎಲ್ಲರ ಮನಸ್ಸನ್ನು ಗೆಲ್ಲಬಲ್ಲಿರಿ. ಮನಸ್ಸಿನ ಯೋಜನೆಗಳನ್ನು ಸುಲಭವಾಗಿ ಕಾರ್ಯರೂಪಕ್ಕೆ ತರುವಿರಿ. ವಿದ್ಯಾರ್ಥಿಗಳು ತಡವಾಗಿ ಉನ್ನತ ಮಟ್ಟವನ್ನು ತಲುಪುತ್ತಾರೆ. ಆತ್ಮವಿಶ್ವಾಸ ಜೀವನವನ್ನು ಸುಗಮವಾಗಿ ನಡೆಸುತ್ತದೆ. ತಾಯಿಯವರಿಂದ ಹಣಕಾಸಿನ ನೆರವು ದೊರೆಯಲಿದೆ.
ಮಹಿಳಾ ಉದ್ಯಮಿಗಳಿಗೆ ವಿಶೇಷ ನೆರವು ದೊರೆಯಲಿದೆ. ಕಡಿಮೆ ಆದಾಯವಿದ್ದರೂ ಹಣವನ್ನು ಉಳಿಸುವಿರಿ. ಮಕ್ಕಳ ಕೆಲಸ ಕಾರ್ಯಗಳಲ್ಲಿ ನೆರವಾಗುವಿರಿ. ಮನೆಗೆ ಸಂಬಂಧಿಸಿದ ಮುಖ್ಯ ಕೆಲಸ ಅಪೂರ್ಣಗೊಳ್ಳುವ ಸಾಧ್ಯತೆ ಇದೆ. ಉತ್ತಮ ಪ್ರಯತ್ನದಿಂದಾಗಿ ಹಣಕಾಸಿನ ವಿಚಾರದಲ್ಲಿ ಪ್ರಗತಿ ಸಾಧಿಸುವಿರಿ. ಆರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ. ತಲೆ ನೋವಿನಂತಹ ಸಮಸ್ಯೆಗಳು ನಿಮ್ಮನ್ನು ಕಾಡಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶ ದೊರೆಯುತ್ತದೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ.
ವೃಶ್ಚಿಕ ರಾಶಿ
ನಿಮಗೆ ಅನುಕೂಲವೆನಿಸುವ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುವಿರಿ. ಧೈರ್ಯ ಸಾಹಸದ ಗುಣ ಎಲ್ಲರ ಗಮನ ಸೆಳೆಯುತ್ತದೆ. ಕುಟುಂಬದ ಹಿರಿಯರಿಂದ ಮುಖ್ಯವಾಗಿ ತಂದೆಯಿಂದ ನೆರವು ದೊರೆಯಲಿದೆ. ಕುಟುಂಬದಲ್ಲಿ ನಡೆಯುವ ಮಂಗಳ ಕಾರ್ಯದ ಜವಾಬ್ದಾರಿ ನಿಮ್ಮದಾಗಲಿದೆ. ಸೋದರ ಸೋದರಿಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರಲಿದೆ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯಲಿದೆ. ಸುಲಭವಾಗಿ ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವುದಿಲ್ಲ. ಆತ್ಮೀಯರಿಗೆ ಹಣಕಾಸಿನ ಸಹಾಯ ಮಾಡುವಿರಿ. ಉತ್ತಮ ಬುದ್ಧಿಶಕ್ತಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ಮನೆಕೊಳ್ಳುವ ಅಥವಾ ಕಟ್ಟಿಸುವ ಆಸೆ ಸಾಕಾರಗೊಳ್ಳಲಿದೆ. ವಿಶ್ರಾಂತಿ ಇಲ್ಲದೆ ದುಡಿಯಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು. ಗೃಹಿಣಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಗೃಹಿಣಿಯರು ಕುಟುಂಬದ ನೆರವಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಆರಂಭಿಸುತ್ತಾರೆ. ಹಿರಿಯರ ಜೊತೆಯಲ್ಲಿ ತೀರ್ಥ ಯಾತ್ರೆಗೆ ತೆರಳುವಿರಿ. ನಂಬಿದವರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ನಂಬಿಕೆ ಇರುವುದಿಲ್ಲ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಸಾಕು ಪ್ರಾಣಿಗಳಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ.
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832
