ಕುಂಭ ರಾಶಿಯಲ್ಲಿ ಶನಿ, ಬುಧ ಸಂಯೋಗ: ಕುಟುಂಬದಲ್ಲಿ ನೆಮ್ಮದಿ ಇರುತ್ತೆ, ಧನುದಿಂದ ಮೀನದವರಿಗೆ 4 ರಾಶಿಯವರ ಶುಭ ಫಲಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭ ರಾಶಿಯಲ್ಲಿ ಶನಿ, ಬುಧ ಸಂಯೋಗ: ಕುಟುಂಬದಲ್ಲಿ ನೆಮ್ಮದಿ ಇರುತ್ತೆ, ಧನುದಿಂದ ಮೀನದವರಿಗೆ 4 ರಾಶಿಯವರ ಶುಭ ಫಲಗಳಿವು

ಕುಂಭ ರಾಶಿಯಲ್ಲಿ ಶನಿ, ಬುಧ ಸಂಯೋಗ: ಕುಟುಂಬದಲ್ಲಿ ನೆಮ್ಮದಿ ಇರುತ್ತೆ, ಧನುದಿಂದ ಮೀನದವರಿಗೆ 4 ರಾಶಿಯವರ ಶುಭ ಫಲಗಳಿವು

ಕುಂಭ ರಾಶಿಯಲ್ಲಿ ಶನಿ ಮತ್ತು ಬುಧನ ಸಂಯೋಗವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಯವರಿಗೆ ಶುಭಫಲಗಳಿವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿಯೋಣ.

ಕುಂಭ ರಾಶಿಯಲ್ಲಿ ಶನಿ, ಬುಧ ಸಂಯೋಗದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯೋಣ.
ಕುಂಭ ರಾಶಿಯಲ್ಲಿ ಶನಿ, ಬುಧ ಸಂಯೋಗದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯೋಣ.

ಇಂದು (ಫೆಬ್ರವರಿ 11, ಮಂಗಳವಾರ ಬುಧ ಗ್ರಹವು ಕುಂಭರಾಶಿಯನ್ನು ಪ್ರವೇಶಿಸಿ, ಇದೇ ತಿಂಗಳ 27ರವರೆಗು ಶನಿಗ್ರಹದೊಂದಿಗೆ ಸಂಚರಿಸುತ್ತಾನೆ. ಶನಿ ಮತ್ತು ಬುಧ ಗ್ರಹಗಳು ಪರಸ್ಪರ ಮಿತ್ರರಾಗುತ್ತಾರೆ. ಶನಿಯು ಮೂಲ ತ್ರಿಕೋಣದಲ್ಲಿದ್ದರೆ, ಬುಧನಿಗೆ ಕುಂಭವು ಮಿತ್ರ ಕ್ಷೇತ್ರವಾಗುತ್ತದೆ. ಇದರಿಂದ ಪ್ರತಿಯೊಂದು ರಾಶಿಗಳಿಗೆ ವಿಭಿನ್ನವಾದ ಫಲಗಳು ದೊರೆಯುತ್ತವೆ. ಬಹುತೇಕ ಶುಭಫಲಗಳು ದೊರೆಯುತ್ತವೆ. ಕುಂಭ ರಾಶಿಯಲ್ಲಿ ಶನಿ ಮತ್ತು ಬುಧನ ಸಂಯೋಗವು ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಇರುವ ಪ್ರಯೋಜನಗಳನ್ನು ತಿಳಿಯೋಣ.

ಧನು ರಾಶಿ

ಹಿರಿಯರ ಮಾತಿನಲ್ಲಿ ನಂಬಿಕೆ ಇರುತ್ತದೆ. ತಂದೆ ತಾಯಿಯ ಜೊತೆ ವಿಶೇಷವಾದಂತಹ ಬಾಂಧವ್ಯ ಇರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಿಗೆ ಕುಟುಂಬದವರ ಸಹಕಾರ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಐಷಾರಾಮಿ ವಸ್ತ್ರಗಳಿಗೆ ಹಣ ಖರ್ಚು ಮಾಡುವಿರಿ. ಇರುವ ಮನೆಗೆ ಹೊಸ ರೂಪ ನೀಡಲು ಪ್ರಯತ್ನಿಸುವಿರಿ. ನಿಮ್ಮ ಬಾಳ ಸಂಗಾತಿಗೆ ಉದ್ಯೋಗ ದೊರೆಯಲಿದೆ. ಉತ್ತಮ ಆದಾಯ ವಿರುತ್ತದೆ. ಸ್ಟಾಕ್ ಮತ್ತು ಷೇರಿನ ವ್ಯಾಪಾರದಲ್ಲಿ ಮಧ್ಯಮ ಗತಿಯ ಲಾಭ ದೊರೆಯುತ್ತದೆ. ಯಾರೊಬ್ಬರ ಅವಕಾಶವನ್ನು ಬಳಸಿಕೊಳ್ಳುವುದಿಲ್ಲ.

ಪರೋಪಕಾರದ ಗುಣವಿರುತ್ತದೆ. ಕಷ್ಟವೆನಿಸಿದರು ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ತಾಯಿಯವರ ಮನಸ್ಸಿನಲ್ಲಿ ಚಿಂತೆಯೊಂದು ಮನೆ ಮಾಡಿರುತ್ತದೆ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಇರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳು ಪಾಲ್ಗೊಳ್ಳುವಿರಿ. ನಿಮ್ಮ ಮನದಾಸೆಯನ್ನು ಯಾರಿಗೂ ಹೇಳುವುದಿಲ್ಲ. ಕಲಾವಿದರಿಗೆ ಉನ್ನತ ಗೌರವ ದೊರೆಯಲಿದೆ. ವಿದ್ಯಾರ್ಥಿಗಳು ಶಿಕ್ಷಕರ ನೆರವನ್ನು ಗಳಿಸುತ್ತಾರೆ. ಸಮಾಜಸೇವೆ ಮಾಡುವಲ್ಲಿ ನಿರತರಾಗುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಪಾಲುಗಾರಿಕೆ ವ್ಯವಹಾರದಲ್ಲಿ ವಾದ ವಿವಾದವಿರುತ್ತದೆ. ವಿದೇಶ ಪ್ರಯಾಣ ಯೋಗವಿದೆ.

ಮಕರ ರಾಶಿ

ನಿಮ್ಮ ಮಾತಿಗೆ ಸಮಾಜದಲ್ಲಿ ವಿಶೇಷ ಗೌರವ ಲಭಿಸುತ್ತದೆ. ವಿದ್ಯಾರ್ಥಿಗಳು ನಿರೀಕ್ಷಿಸಿದ ಯಶಸ್ಸನ್ನು ಗಳಿಸುತ್ತಾರೆ. ಮಕ್ಕಳ ಯಶಸ್ಸು ಹೊಸ ನಿರೀಕ್ಷೆಗೆ ಕಾರಣವಾಗುತ್ತದೆ. ಆತಂಕದ ಪರಿಸ್ಥಿತಿಯಲ್ಲಿ ಬುದ್ಧಿವಂತಿಕೆಯ ನಿರ್ಧಾರವನ್ನು ತೆಗೆದುಕೊಳ್ಳಬಲ್ಲಿರಿ. ಸಂತಾನ ಲಾಭವಿದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡು ಬರಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಅವಕಾಶ ದೊರೆಯುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ. ವಯೋವೃದ್ದರಿಗೆ ನರನಿಶ್ಯಕ್ತಿ ಇರುತ್ತದೆ. ನಿಧಾನಗತಿಯಲ್ಲಿ ಹಣಕಾಸಿನ ಪ್ರಗತಿ ಕಂಡುಬರುತ್ತದೆ. ಹಿರಿಯ ಸೋದರಿಯ ಜೀವನದಲ್ಲಿ ಹೊಸ ನಿರೀಕ್ಷೆ ಇರಲಿದೆ.

ಆಡಿದ ಮಾತಿಗೆ ಕೊಟ್ಟ ಭಾಷೆಗೆ ಬದ್ದರಾಗುವಿರಿ. ನಿಮ್ಮ ನಿರೀಕ್ಷೆಗಳು ಕೈಗೂಡಲಿವೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಕುಟುಂಬದಲ್ಲಿನ ಭೂವಿವಾದವು ಪರಿಹಾರಗೊಳ್ಳಲಿವೆ. ಅತಿಯಾದ ಆತುರವು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಶಾಂತಿ ಸಹನೆಯ ಬುದ್ದಿಯನ್ನು ರೂಡಿಸಿಕೊಳ್ಳಿರಿ. ಆತ್ಮೀಯರಿಗೆ ಸಹಾಯ ಮಾಡುವಿರಿ. ಬೇರೆಯವರ ಅವಕಾಶವು ನಿಮ್ಮ ಪಾಲಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ. ವಾಸಸ್ಥಳ ಬದಲಿಸುವಿರಿ.

ಕುಂಭ ರಾಶಿ

ಹಣಕಾಸಿನ ವಿಚಾರದಲ್ಲಿ ಗೃಹಿಣಿಯರು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಣವನ್ನು ಉಳಿಸುವಲ್ಲಿ ಸಫಲರಾಗುವಿರಿ. ವ್ಯಾಪಾರದಲ್ಲಿನ ಸ್ಪರ್ಧೆ ಜಯಗಳಿಸುವಿರಿ. ನಿಮ್ಮ ಮನಸ್ಸಿನ ವಿಚಾರವನ್ನು ಯಾರಿಗೂ ತಿಳಿಸುವುದಿಲ್ಲ. ಗೋಪ್ಯವಾಗಿ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಆತುರ ತೋರದೆ ಸಹನೆಯಿಂದ ಕೆಲಸ ನಿರ್ವಹಿಸುವಿರಿ. ಕುಟುಂಬದ ಹೆಚ್ಚಿನ ಜವಾಬ್ದಾರಿಯು ನಿಮ್ಮದಾಗುತ್ತದೆ. ವಿದ್ಯಾಭ್ಯಾಸದಲ್ಲಿ ವಿಶೇಷ ಸಾಧನೆ ಮಾಡುವಿರಿ. ಬುದ್ಧಿವಂತಿಕೆಯ ನಿರ್ಧಾರಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತವೆ. ನಿಮ್ಮ ಮಾತಿನಲ್ಲಿ ದ್ವಂದ್ವ ಇರುತ್ತದೆ.

ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಬೇರೆಯವರಿಗೆ ಅಸಾಧ್ಯವೆನಿಸುವ ಕೆಲಸವನ್ನು ಸುಲಭವಾಗಿ ಪೂರೈಸುವಿರಿ. ಕುಟುಂಬದಲ್ಲಿ ಉತ್ತಮ ಅನ್ಯೋನ್ಯತೆ ಇರಲಿದೆ. ಧೈರ್ಯ ಸಾಹಸದ ಬುದ್ದಿ ತೋರುವಿರಿ. ಬಿಡುವಿಲ್ಲದ ದುಡಿಮೆ ಇರುತ್ತದೆ. ಶಾಸ್ತ್ರಾಧಾರಿತ ವಿಧ್ಯೆಯಲ್ಲಿ ಆಸಕ್ತಿ ಮೂಡಲಿದೆ. ಮಕ್ಕಳ ಮನಸ್ಸಿಗೆ ಸಂತೋಷವೆನಿಸುವ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಠದ ಗುಣವು ದೊಡ್ಡ ಅವಕಾಶವನ್ನು ಮರೆಮಾಚುತ್ತದೆ. ಭೂವಿವಾದವೊಂದು ನಿಮ್ಮಿಂದ ಪರಿಹಾರಗೊಳ್ಳಲಿದೆ.

ಮೀನ ರಾಶಿ

ಬಿಡುವಿಲ್ಲದ ಕೆಲಸಗಳ ನಡುವೆ ಸ್ವಂತ ಕೆಲಸವನ್ನು ಮರೆಯುವಿರಿ. ಕುಟುಂಬದ ಹಿರಿಯರ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ವಾಹನದಿಂದ ತೊಂದರೆ ಉಂಟಾಗಬಹುದು. ಉದ್ಯೋಗದಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಫಲಿತಾಂಶ ದೊರೆಯುತ್ತದೆ. ಅನಾವಶ್ಯಕ ಓಡಾಟಗಳಿರುತ್ತವೆ. ಉತ್ತಮ ಆದಾಯ ಇದ್ದರೂ ಹಣವನ್ನು ಉಳಿಸಲು ವಿಫಲರಾಗುವಿರಿ. ಕೆಲವು ಬಾರಿ ಮನಸ್ಸಿಗೆ ಒಲ್ಲದ ಕೆಲಸಗಳನ್ನು ಮಾಡಬೇಕಾಗಬಹುದು. ಬಿಡುವಿಲ್ಲದ ಕೆಲಸದ ಕಾರಣ ದೈಹಿಕ ದೌರ್ಬಲ್ಯತೆ ನಿಮ್ಮನ್ನು ಕಾಡುತ್ತದೆ. ತಂದೆ ಅಥವ ಹಿರಿಯ ಸೋದರನ ಜೊತೆಯಲ್ಲಿ ಮನಸ್ತಾಪ ಇರುತ್ತದೆ. ಶಾಂತಿ ಸಂಧಾನದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ದಂಪತಿಗಳ ನಡುವೆ ಉತ್ತಮ ಒಡನಾಟ ಇರುತ್ತದೆ. ಕಣ್ಣಿನ ತೊಂದರೆ ಇರುತ್ತದೆ. ಕಾಲುಗಳಲ್ಲಿ ಸೋಂಕು ಉಂಟಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚನ ಗಮನವಹಿಸುವುದು ಮುಖ್ಯ. ದಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಿರಿ.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

ಮೊಬೈಲ್:‌ 8546865832

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.