ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ; ನವೆಂಬರ್ 15 ರವರೆಗೆ ಸಿಂಹ, ಕನ್ಯಾ ಸೇರಿ 5 ರಾಶಿಯವರಿಗೆ ಸಮಸ್ಯೆ

ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ; ನವೆಂಬರ್ 15 ರವರೆಗೆ ಸಿಂಹ, ಕನ್ಯಾ ಸೇರಿ 5 ರಾಶಿಯವರಿಗೆ ಸಮಸ್ಯೆ

Saturn Retrograde: ನವೆಂಬರ್ 15 ರವರೆಗೆ ಶನಿ ಹಿಮ್ಮುಖ ಚಲನೆಯಲ್ಲಿ ಇದ್ದಾನೆ. ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆಯಿಂದಾಗಿ ಅನೇಕ ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಯಾವ ರಾಶಿಯರಿಗೆ ನಕಾರಾತ್ಮಕ ಪರಿಣಾಮಗಳಿವೆ ಅನ್ನೋದನ್ನ ತಿಳಿಯೋಣ.

ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ; ನವೆಂಬರ್ 15 ರವರೆಗೆ ಸಿಂಹ, ಕನ್ಯಾ ಸೇರಿ 5 ರಾಶಿಯವರಿಗೆ ಸಮಸ್ಯೆ
ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆ; ನವೆಂಬರ್ 15 ರವರೆಗೆ ಸಿಂಹ, ಕನ್ಯಾ ಸೇರಿ 5 ರಾಶಿಯವರಿಗೆ ಸಮಸ್ಯೆ

Saturn Retrograde 2024: ಜೂನ್ 29 ರಂದು ಶನಿ ಹಿಮ್ಮುಖವಾಗಿ ಚಲಿಸುತ್ತಾನೆ. 2024ರ ನವೆಂಬರ್ 15 ರವರೆಗೆ ಶನಿ ಇದೇ ಸ್ಥಿತಿಯಲ್ಲಿ ಸಾಗುತ್ತಾನೆ. ಶನಿ ಒಂದು ರಾಶಿಯನ್ನು ಬದಲಾಯಿಸಲು ಸುಮಾರು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯು ಪ್ರಸ್ತುತ ತನ್ನ ಮೂಲ ತ್ರಿಕೋನ ರಾಶಿ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. 2025ರ ಮಾರ್ಚ್ ವರೆಗೆ ಶನಿ ಇದೇ ರಾಶಿಯಲ್ಲಿ ಇರುತ್ತಾನೆ. ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆಯಿಂದ ಯಾವೆಲ್ಲಾ ರಾಶಿಯವರು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮೇಷ ರಾಶಿ: ಶನಿ ಹಿಮ್ಮುಖ ಚಲನೆಯಿಂದಾಗಿ ಮೇಷ ರಾಶಿಯವರು ಹಣಕಾಸಿನ ವಿಚಾರದಲ್ಲಿ ಕೆಲವು ಪ್ರಮುಖ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ವೃತ್ತಿ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಉದ್ಯಮಿಗಳಿಗೆ ಸ್ವಲ್ಪ ಕಷ್ಟದ ಸಮಸಯವಾಗಿದೆ. ಹಣಕಾಸಿನ ಬಗ್ಗೆ ಪ್ಲಾನ್ ಮಾಡಿಕೊಳ್ಳಿಬೇಕು, ಇಲ್ಲದಿದ್ದರೆ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದ ಇರಬೇಕು.

ಸಿಂಹ ರಾಶಿ: ಈ ರಾಶಿಯವರಿಗೆ ಶನಿ ಹಿಮ್ಮುಖ ಚಲನೆ ನಕಾರಾತ್ಮಕ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ಆರ್ಥಿಕವಾಗಿ ತೊಂದರೆಗೆ ಸಿಲುಕುವ ಸಾಧ್ಯತೆಗಳಿವೆ. ಉದ್ಯೋಗದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಸಂಬಂಧಗಳಲ್ಲಿ ಏರಿಳಿತಗಳಿರಬಹುದು.

ಕನ್ಯಾ ರಾಶಿ: ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆಯಿಂದಾಗಿ ಕನ್ಯಾ ರಾಶಿಯವರಿಗೆ ನಕಾರಾತ್ಮಕ ಫಲಿತಾಂಶಗಳಿವೆ. ಆರ್ಥಿಕ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ ನೀನು ಕಾನೂನು ತೊಂದರೆಗೆ ಸಿಲುಕಬಹುದು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ. ಆರ್ಥಿಕ ಬಜೆಟ್ ಹದಗೆಡಬಹುದು. ನಿಮ್ಮ ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದಿಲ್ಲ.

ಕಟಕ ರಾಶಿ: ಶನಿ ಹಿಮ್ಮುಖ ಚಲನೆ ಕಟಕ ರಾಶಿಯರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಈ ಸಮಯವು ನಿಮಗೆ ಆರ್ಥಿಕವಾಗಿ ಮತ್ತು ಕೌಟುಂಬಿಕವಾಗಿ ತೊಂದರೆಯಾಗಬಹುದು. ಈ ಅವಧಿಯಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮೀನ ರಾಶಿ: ಶನಿಯ ಹಿಮ್ಮುಖ ಹಂತವು ಮೀನ ರಾಶಿಯವರಿಗೆ ಪ್ರಯೋಜನಕಾರಿಯಾಗುವುದಿಲ್ಲ. ಕೆಲಸದ ಸ್ಥಳದಲ್ಲಿ ನೀವು ಹೆಚ್ಚಿನ ಕೆಲಸದ ಹೊರೆಯನ್ನು ಅನುಭವಿಸುತ್ತೀರಿ. ಹಣಕಾಸಿನ ವಿಚಾರದಲ್ಲಿ ಲಾಭ ಮತ್ತು ನಷ್ಟ ಎರಡನ್ನು ಅನುಭವಿಸುತ್ತೀರಿ. ವಿಶೇಷವಾಗಿ ಮೀನ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಬೇಕು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.