ಶನಿ ಹಿಮ್ಮುಖ ಚಲನೆ; 139 ದಿನ ಈ 4 ರಾಶಿಯವರಿಗೆ ಹಿಂದೆಂದೂ ಕಾಣದ ಲಾಭಗಳು -Saturn Retrograde
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿ ಹಿಮ್ಮುಖ ಚಲನೆ; 139 ದಿನ ಈ 4 ರಾಶಿಯವರಿಗೆ ಹಿಂದೆಂದೂ ಕಾಣದ ಲಾಭಗಳು -Saturn Retrograde

ಶನಿ ಹಿಮ್ಮುಖ ಚಲನೆ; 139 ದಿನ ಈ 4 ರಾಶಿಯವರಿಗೆ ಹಿಂದೆಂದೂ ಕಾಣದ ಲಾಭಗಳು -Saturn Retrograde

Saturn Retrograde: ಕೆಲವೇ ದಿನಗಳಲ್ಲಿ ಶನಿ ಹಿನ್ನಡೆಯ ಹಂತವನ್ನು ಪ್ರವೇಶಿಸುತ್ತಾನೆ. ಇದರ ಪ್ರಭಾವದಿಂದಾಗಿ ನಾಲ್ಕು ರಾಶಿಯವರಿಗೆ 139 ದಿನಗಳವರೆಗೆ ಅನಿಯಮಿತ ಲಾಭಗಳಿವೆ. ಆ 4 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಶನಿ ಹಿಮ್ಮುಖ ಚಲನೆ; 139 ದಿನ ಈ 4 ರಾಶಿಯವರಿಗೆ ಹಿಂದೆಂದೂ ಕಾಣದ ಲಾಭಗಳಿವೆ.
ಶನಿ ಹಿಮ್ಮುಖ ಚಲನೆ; 139 ದಿನ ಈ 4 ರಾಶಿಯವರಿಗೆ ಹಿಂದೆಂದೂ ಕಾಣದ ಲಾಭಗಳಿವೆ.

Saturn Retrograde: ವೈದಿಕ ಜ್ಯೋತಿಷ್ಯದಲ್ಲಿ ಶನಿಯು ಬಹಳ ಮುಖ್ಯವಾದ ಗ್ರಹವಾಗಿದೆ. ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಅದಕ್ಕಾಗಿಯೇ ಶನಿಯು ಒಂದು ರಾಶಿಯ ಮೂಲಕ ಪ್ರಯಾಣಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಪ್ರಸ್ತುತ ಕುಂಭ ರಾಶಿಯಲ್ಲಿರುವ ಶನಿಯು ಜೂನ್ 29 ರಿಂದ ಹಿಮ್ಮುಖವಾಗಿ ಚಲಿಸಲಿದ್ದಾನೆ.

ಹೀಗೆ 2024ರ ನವೆಂಬರ್ 15ರವರೆಗೆ ಇರುತ್ತದೆ. ಶನಿಯ ಹಿಮ್ಮುಖ ಹಂತದ ಪರಿಣಾಮವು ಕೆಲವು ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಖ್ಯಾತಿ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಶನಿಯ ಹಿಮ್ಮುಖ ಚಾಲನೆಯಿಂದ 4 ರಾಶಿಯವರಿಗೆ 139 ದಿನಗಳವರೆಗೆ ಅತ್ಯುತ್ತಮ ಪ್ರಯೋಜನಗಳು ಇರಲಿವೆ. ಯಾವೆಲ್ಲಾ ರಾಶಿಯವರಿಗೆ ಲಾಭಗಳಿವೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ

ಶನಿ ಹಿಮ್ಮುಖ ಚಲನೆಯಿಂದ ನಿಮ್ಮ ವೃತ್ತಿಗೆ ಬಹಳಷ್ಟು ಪ್ರಯೋಜವನ್ನು ನೀಡುತ್ತದೆ. ಈ ರಾಶಿಯವರು ಸಂತೋಷದಿಂದ ಇರುತ್ತಾರೆ. ವಿದೇಶದಿಂದ ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಕೆಲಸದಲ್ಲಿ ನಿಮ್ಮ ಪ್ರಯತ್ನಗಳು ಗುರುತಿಸಲ್ಪಡುತ್ತವೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಗೆ ಸಂಬಂಧಿಸಿದ ಪ್ರವಾಸಗಳನ್ನು ಮಾಡಬೇಕಾಗುತ್ತದೆ. ವ್ಯಾಪಾರ ಪಾಲುದಾರರ ಸಹಾಯದಿಂದ ಸ್ವಂತ ವ್ಯವಹಾರವನ್ನು ನಡೆಸುವ ಜನರು ಈಗ ಲಾಭವನ್ನು ಪಡೆಯುತ್ತಾರೆ. ನಿಮ್ಮ ಮುಂದೆ ಸ್ಪರ್ಧಿಗಳು ಚಿಕ್ಕದಾಗುತ್ತಾರೆ. ಸಂಗಾತಿಯೊಂದಿಗೆ ಪ್ರೀತಿಯಿಂದ ಇರುತ್ತೀರಿ. ಶನಿಯ ಹಿಮ್ಮುಖವಾಗಿದ್ದಾಗ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ವಿಥುನ ರಾಶಿ

ಶನಿ ವಕ್ರೀ ಚಲನೆಯಿಂದ ಮಿಥುನ ರಾಶಿಯವರಿಗೆ ಲಾಭದಾಯಕವಾಗಿದೆ. ನೀವು ಹೊಸ ಮೂಲಗಳಿಂದ ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತೀರಿ. ಏಕಾಗ್ರತೆಯಿಂದ ಕೆಲಸ ಮಾಡುತ್ತೀರಿ. ಉತ್ತಮ ಭವಿಷ್ಯವನ್ನು ಸೃಷ್ಟಿಸಿಕೊಳ್ಳುತ್ತೀರಿ. ವಿದೇಶಿ ಪ್ರವಾಸವನ್ನು ಮಾಡುತ್ತೀರಿ. ವೃತ್ತಿಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೀರಿ. ವೇದತ ಹೆಚ್ಚಳ ಮತ್ತು ಬಡ್ತಿ ಪಡೆಯುವ ಸಾಧ್ಯತೆ ಇದೆ. ಜೀವನದಲ್ಲಿ ಪ್ರಗತಿ ಇರಲಿದೆ. ಸ್ವಂತ ಕಂಪನಿಯನ್ನು ನಡೆಸುವವರು ಆದಾಯವನ್ನು ಹೆಚ್ಚಿಸಲು ಎಲ್ಲವನ್ನೂ ಅತ್ಯಂತ ಕಾಳಜಿಯಿಂದ ಮಾಡುತ್ತಾರೆ. ಇದು ಹಣಕಾಸಿನ ವಿಷಯದಲ್ಲಿ ಬಹಳಷ್ಟು ಉಳಿಕೆಗೆ ನೆರವಾಗುತ್ತೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಪಾಲುದಾರರೊಂದಿಗೆ ಸಂಬಂಧವನ್ನು ಬಲಪಡಿಸುತ್ತದೆ. ಪಾಲುದಾರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಇದು ನಿಮ್ಮ ಸಂಬಂಧವನ್ನು ಮಧುರವಾಗಿಸುತ್ತದೆ. ಆರೋಗ್ಯವಾಗಿರುತ್ತೀರಿ. ಗಂಭೀರ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡಿರುವವರಿಗೆ ಅದೃಷ್ಟ ಒಲಿದು ಬರಲಿದೆ. ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ.

ಕುಂಭ ರಾಶಿ

ಶನಿ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುವುದರಿಂದ ಈ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಲಾಭಗಳಿವೆ. ವ್ಯಾಪಾರಕ್ಕಾಗಿ ದೂರ ಹೋಗುವ ಸಾಧ್ಯತೆ ಇದೆ. ನಿಮ್ಮನ್ನು ಕೆಲಸದ ಸ್ಥಳದಲ್ಲಿ ತಂಡದ ನಾಯಕರೆಂದು ಕರೆಯುತ್ತಾರೆ. ತಮ್ಮದೇ ಕಂಪನಿ ನಡೆಸುವವರಿಗೆ ಷೇರು ಮಾರುಕಟ್ಟೆ ಮೂಲಕ ಹಣ ಸಂಪಾದಿಸಲು ಇದು ಅತ್ಯುತ್ತಮ ಸಮಯವಾಗಿದೆ. ಪೂರ್ವಜರ ಆಸ್ತಿಯಿಂದ ಆದಾಯವ ಹೆಚ್ಚಾಗುವ ಸಾಧ್ಯತೆ ಇದೆ. ಬೇರೆಡೆ ಸಿಕ್ಕಿಹಾಕಿಕೊಂಡಿದ್ದ ಹಣವನ್ನು ಮರಳಿ ಪಡೆಯಲು ನಿಮಗೆ ಅವಕಾಶವಿದೆ. ನಿಮ್ಮ ಸಂಗಾತಿಯೊಂದಿಗೆ ತೃಪ್ತರಾಗಿರುತ್ತೀರಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.