RajaYoga: 2024ರ ಹೊಸ ವರ್ಷದಲ್ಲಿ ಶಶ, ರುಚಕ, ಮಾಲವ್ಯ ರಾಜಯೋಗ; ಈ 5 ರಾಶಿಯವರಿಗೆ ಭಾರಿ ಅದೃಷ್ಟ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rajayoga: 2024ರ ಹೊಸ ವರ್ಷದಲ್ಲಿ ಶಶ, ರುಚಕ, ಮಾಲವ್ಯ ರಾಜಯೋಗ; ಈ 5 ರಾಶಿಯವರಿಗೆ ಭಾರಿ ಅದೃಷ್ಟ

RajaYoga: 2024ರ ಹೊಸ ವರ್ಷದಲ್ಲಿ ಶಶ, ರುಚಕ, ಮಾಲವ್ಯ ರಾಜಯೋಗ; ಈ 5 ರಾಶಿಯವರಿಗೆ ಭಾರಿ ಅದೃಷ್ಟ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2024 ರಲ್ಲಿ ರಾಜಯೋಗ ರಚನೆಯಾಗುತ್ತಿರುವುದು ಮಂಗಳಕರವಾಗಿದೆ. ಇದರಿಂದ ಈ ವರ್ಷದಲ್ಲಿ 5 ರಾಶಿಯರಿಗೆ ಹೆಚ್ಚಿನ ಲಾಭಗಳಿವೆ.

2024 ರಲ್ಲಿ ರಚನೆಯಾಗುವ ರಾಜಯೋಗದಿಂದ 5 ರಾಶಿಯವರು ಭಾರಿ ಲಾಭಗಳನ್ನು ಪಡೆಯಲಿದ್ದಾರೆ.
2024 ರಲ್ಲಿ ರಚನೆಯಾಗುವ ರಾಜಯೋಗದಿಂದ 5 ರಾಶಿಯವರು ಭಾರಿ ಲಾಭಗಳನ್ನು ಪಡೆಯಲಿದ್ದಾರೆ.

ಬೆಂಗಳೂರು: 2024 ರಲ್ಲಿ ರಾಜಯೋಗ (RajaYoga 2024) ರಚನೆಯಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದು ಮನುಷ್ಯ ಮತ್ತು ಭೂಮಿಯ ಮೇಲೆ ಪರಿಹಾರ ಬೀರುತ್ತದೆ. ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟವಾಗಿ ರಾಶಿಗಳನ್ನು ಬದಲಾಯಿಸುತ್ತವೆ. ಇದರಿಂದ ಶುಭ, ಅಶುಭ ಫಲಿತಾಂಶಗಳು ಹಾಗೂ ರಾಜಯೋಗ ಕಂಡುಬರುತ್ತದೆ. ಗುರು ಗ್ರಹವನ್ನು ಜ್ಞಾನ, ಬುದ್ಧಿವಂತಿಕೆ, ಆಧ್ಯಾತ್ಮಿಕ, ಶಿಕ್ಷಣ, ಸಂಪತ್ತು ಹಾಗೂ ಧರ್ಮದ ಸಂಕೇತ ಎಂದು ಪರಿಗಣಿಸಲಾಗುತ್ತದೆ.

ಗುರು ಧನು ರಾಶಿ ಮತ್ತು ಮೀನ ರಾಶಿಗೆ ಅಧಿಪತಿಯಾಗಿದ್ದಾನೆ. 2023ರ ಡಿಸೆಂಬರ್‌ನಲ್ಲಿ ಶಶ, ರುಚಕ, ಮಾಲವ್ಯ ರಾಜಯೋಗಗಳು ರಚನೆಯಾಗಿವೆ. ಡಿಸೆಂಬರ್ 31 ರಂದು ಗುರು ನೇರವಾಗಿ ಸಂಚರಿಸುವುದರಿಂದ ಎರಡು ಶುಭ ರಾಜಯೋಗಗಳು ರೂಪುಗೊಳ್ಳಲಿವೆ. 2024ರ ಮೇ 1 ರಂದು ಮಧ್ಯಾಹ್ನ ಗುರು ಮೇಷ ರಾಶಿಯಿಂದ ಹೊರ ಹೋಗಿ ವೃಷಭ ರಾಶಿಯಲ್ಲಿ ಸಾಗುತ್ತದೆ. 2023ರ ಮೇ 3 ರ ರಾತ್ರಿ ಗುರು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ.

ಗುರುವಿನ ನೇರ ಸಂಚಾರದಿಂದ ಗಜಲಕ್ಷ್ಮಿ ರಾಜಯೋಗ ಮತ್ತು ಕೇಂದ್ರ ತ್ರಿಕೋನ ರಾಜಯೋಗ ರಚನೆಯಾಗುತ್ತದೆ. ಗಜಲಕ್ಷ್ಮಿ ರಾಜಯೋಗದ ಪ್ರಭಾವದಿಂದ ಸಂತೋಷ, ಶಾಂತಿ, ಸಮೃದ್ಧಿ ತರಲಿದೆ. ಯಾವ ರಾಶಿಯಲ್ಲಿ ಗಜಲಕ್ಷ್ಮಿ ಯೋಗ ಉಂಟಾಗುತ್ತದೆಯೋ ಆ ರಾಶಿಯಲ್ಲಿ ಶನಿದೇವನ ಸಾಡೇಸಾತಿ ಕೊನೆಗೊಂಡು ಸುಖ, ಸಂತೋಷ, ಸಂಪತ್ತು ವೃದ್ಧಿಯಾಗುತ್ತದೆ. ಮೂರನೇ ಕೇಂದ್ರ ಮನೆಯ 3, 4, 7 ಮತ್ತು 10ನೇ ಕೇಂದ್ರ ಮನೆಯ 1, 5 ಮತ್ತು 9 ಮನೆಗಳು ಪರಸ್ಪರ ಸಂಯೋಗವಾದಾಗ ಕೇಂದ್ರ ತ್ರಿಕೋನ ರಾಜಯೋಗವು ಅತ್ಯಂತ ಮಂಗಳಕರವಾಗಿರುತ್ತದೆ.

ಕೇಂದ್ರ ತ್ರಿಕೋನ ರಾಜಯೋಗ ರಚನೆಯಾದ ಅವಧಿಯಲ್ಲಿ ಕೆಲ ರಾಶಿಯವರಿಗೆ ಲಾಭಗಳು ಇರುತ್ತವೆ. ಹಣ ಹೂಡಿಕೆ, ಆರೋಗ್ಯ ಪ್ರಯೋಗನಗಳು, ಉದ್ಯೋಗದಲ್ಲಿ ಬಡ್ತಿ ಸೇರಿದಂತೆ ಹಲವು ಪ್ರಯೋಜನಗಳನ್ನು ಕಾಣುತ್ತಾರೆ. ವಿಶೇಷವಾಗಿ ಈ ಕೆಳಿನ 4 ರಾಶಿಯವರಿಗೆ ಭಾರಿ ಧನ ಲಾಭ ಇರುತ್ತದೆ.

ಮೇಷ ರಾಶಿ (Aries)

ಡಿಸೆಂಬರ್‌ನಲ್ಲಿ 5 ರಾಜಯೋಗಗಳ ನಿರ್ಮಾಮದಿಂದಾಗಿ ಮೇಷ ರಾಶಿಯವರಿಗೆ ಮಂಗಳಕರವಾಗಿದೆ. 2024ರಲ್ಲಿ ನಿಮ್ಮ ವೃತ್ತಿ ಮತ್ತು ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳನ್ನು ಪಡೆಯುತ್ತೀರಿ. ಗುರುವಿನ ಅನುಗ್ರಹದಿಂದ ವೈವಾಹಿಕ ಜೀವನ ಸಂತೋಷದಿಂದ ಇರುತ್ತದೆ. ನಿಮ್ಮ ಮಕ್ಕಳ ಕೆಲ ಮತ್ತು ಜೀವನಕ್ಕೆ ಸಂಬಂಧಪಟ್ಟಂತೆ ಒಳ್ಳೆ ಸುದ್ದಿಯನ್ನ ಕೇಳುತ್ತೀರಿ. ಪೂರ್ವಿಕರ ಆಸ್ತಿ ಸಿಗಲಿದೆ. ನೀವೇನಾದರೂ ಹೊಸ ಕೆಲಸವನ್ನು ಆರಂಭಿಸಬೇಕು ಅಂತ ಪ್ಲಾನ್ ಮಾಡಿದ್ದರೆ ತುಂಬಾ ಒಳ್ಳೆ ಸಮಯವಾಗಿದೆ.

ಕರ್ಕಾಟಕ ರಾಶಿ (Cancer)

ಗಜಲಕ್ಷ್ಮಿ ರಾಜಯೋಗದಿಂದಾಗಿ ಕರ್ಕಾಟಕ ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳಿವೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿರುತ್ತದೆ. ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ಹೂಡಿಕೆಯಿಂದ ಲಾಭ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ, ವರ್ಗಾವಣೆಯಂತಹ ಪ್ರಯೋಜನಗಳು ನಿಮ್ಮದಾಗಬಹುದು. ಕೇಂದ್ರ ತ್ರಿಕೋನ ರಾಜ್ಯಯೋಗ ರಚನೆಯಿಂದ ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸು ಕಾಣಲಿದ್ದೀರಿ. ಹೊಸ ಉದ್ಯೋಗವನ್ನು ಪಡೆಯುತ್ತೀರಿ. ತಂದೆಯ ಬೆಂಬಲ ಸಿಗಲಿದೆ.

ಸಿಂಹ ರಾಶಿ (Leo)

ಗಜಲಕ್ಷ್ಮಿ ರಾಜಯೋಗದಿಂದ ಸಿಂಹ ರಾಶಿಯವರಿಗೆ ಸಾಕಷ್ಟು ಲಾಭಗಳಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮಕ್ಕಳಿಂದ ಒಳ್ಳೆ ಸುದ್ದಿ ಕೇಳುತ್ತೀರಿ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕೆಲಸಗಳು ಶೀಘ್ರವೇ ಪೂರ್ಣಗೊಳ್ಳಲಿವೆ. ನಿಮ್ಮ ಕೆಲಸದಲ್ಲಿ ಗೌರವ ಹೆಚ್ಚಾಗುತ್ತದೆ.

ಧನು ರಾಶಿ (Sagittarius)

ಗಜಲಕ್ಷ್ಮಿ ರಾಜಯೋಗ ರಚನೆ ಧನು ರಾಶಿಯವರಿಗೆ ಪ್ರಯೋನಗಳನ್ನು ತರಲಿದೆ. ನಿಮ್ಮ ಮಕ್ಕಳ ಮದುವೆ ಅಥವಾ ಅದಕ್ಕೆ ಸಂಬಂಧಿಸಿದ ಸಿಹಿ ಸುದ್ದಿಯನ್ನು ಕೇಳುತ್ತೀರಿ. ವಾಹನ, ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಮಾಲವ್ಯ ಮತ್ತು ರುಚಕ ರಾಜಯೋಗದಿಂದ ಶುಕ್ರ ಮತ್ತು ಮಂಗಳದ ಅನುಗ್ರಹ ನಿಮಗೆ ಸಿಗಲಿದೆ. ಉದ್ಯೋಗ ಅವಕಾಶಗಳು ದೊರೆಯುತ್ತವೆ. ಶನಿ ಮತ್ತು ಶುಕ್ರರ ನವಪಂಚಮ ಯೋಗ ಕೂಡ ಆಗುತ್ತಿದ್ದು, ಗುರು ಮತ್ತು ಶುಕ್ರರ ಸಮಾಸಪ್ತಕ ಯೋಗವೂ ರಚನೆಯಾಗುತ್ತಿದೆ. ಈ ಸಮಯದಲ್ಲಿ ಧನು ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸು, ಉತ್ತಮ ಆರ್ಥಿಕ ಲಾಭಗಳಿವೆ. ನಿಮ್ಮ ಸಂಗಾತಿಯೊಂದಿಗೆ ಸಂಬಂಧಗಳು ಉತ್ತಮವಾಗಿರುತ್ತವೆ.

ಮಕರ ರಾಶಿ (Capricorn)

ರಾಜಯೋಗಗಳಿಂದ ಮಕರ ರಾಶಿಯವರಿಗೆ ವೃತ್ತಿ ಮತ್ತು ಹಣದ ವಿಷಯದಲ್ಲಿ ಶುಭ ಫಲಗಳಿವೆ. ನಿಮ್ಮ ಸಂಪತ್ತು ಹೆಚ್ಚಾಗಲಿದೆ. ವ್ಯಾಪರದಲ್ಲಿ ಪ್ರಗತಿ ಸಾಧಿಸುತ್ತೀರಿ. ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳಿವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.