ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗುರು ಸಂಚಾರದಿಂದ ಶುಭ ಯೋಗ; ಆದಾಯ ಹೆಚ್ಚಳ, ವ್ಯಾಪಾರದಲ್ಲಿ ಲಾಭ, ಸಿಂಹ ಸೇರಿ 3 ರಾಶಿಯವರಿಗೆ ಭಾರಿ ಲಾಭ

ಗುರು ಸಂಚಾರದಿಂದ ಶುಭ ಯೋಗ; ಆದಾಯ ಹೆಚ್ಚಳ, ವ್ಯಾಪಾರದಲ್ಲಿ ಲಾಭ, ಸಿಂಹ ಸೇರಿ 3 ರಾಶಿಯವರಿಗೆ ಭಾರಿ ಲಾಭ

Guru Transit 2025: ಗುರು 2025ಕ್ಕೆ 3 ರಾಶಿಗಳಲ್ಲಿ ಸಂಚರಿಸಲಿದ್ದಾನೆ. ಗುರುವಿನ ರಾಶಿ ಬದಲಾವಣೆಯಿಂದ ಶುಭ ಯೋಗವು ರೂಪಗೊಳ್ಳುತ್ತದೆ. ಇದರಿಂದಾಗಿ ಕೆಲವು ರಾಶಿಯವರ ಜೀವನ ಶೈಲಿ ಧನಾತ್ಮಕವಾಗಿ ಬದಲಾಗುತ್ತದೆ. ಯಾವ ರಾಶಿಯವರಿಗೆ ಹೆಚ್ಚಿನ ಲಾಭವಿದೆ ಅನ್ನೋದನ್ನ ತಿಳಿಯೋಣ.

ಗುರು ಸಂಚಾರದಿಂದ ಶುಭ ಯೋಗ; ಆದಾಯ ಹೆಚ್ಚಳ, ವ್ಯಾಪಾರದಲ್ಲಿ ಲಾಭ, ಸಿಂಹ ಸೇರಿ 3 ರಾಶಿಯವರಿಗೆ ಭಾರಿ ಲಾಭ
ಗುರು ಸಂಚಾರದಿಂದ ಶುಭ ಯೋಗ; ಆದಾಯ ಹೆಚ್ಚಳ, ವ್ಯಾಪಾರದಲ್ಲಿ ಲಾಭ, ಸಿಂಹ ಸೇರಿ 3 ರಾಶಿಯವರಿಗೆ ಭಾರಿ ಲಾಭ

ಜ್ಯೋತಿಷ್ಯದಲ್ಲಿ ಗುರುವನ್ನು ಸಂಪತ್ತು, ಐಶ್ವರ್ಯ ಮತ್ತು ಭವ್ಯತೆಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಗುರುವಿನ ಶುಭ ಸ್ಥಾನವು ವ್ಯಕ್ತಿಯನ್ನು ಎತ್ತರದಿಂದ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತದೆ. ಪ್ರಸ್ತುತ ಗುರುವು ವೃಷಭ ರಾಶಿಯಲ್ಲಿ ಸಂಚಾರ (Guru Transit Kumbha) ಮಾಡುತ್ತಿದ್ದು, 2025 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ವೃಷಭ ರಾಶಿಯಲ್ಲಿ ಇರುವುದರಿಂದ ಕುಬೇರ ರಾಜಯೋಗದ ಮಂಗಳಕರ ಸಂಯೋಜನೆ ರೂಪುಗೊಳ್ಳುತ್ತಿದೆ. ಗುರುಗ್ರಹದ ಪ್ರಭಾವದಿಂದಾಗಿ, ಕೆಲವು ರಾಶಿಯವರಿಗೆ ಮುಂಬರುವ ವರ್ಷಗಳಲ್ಲಿ ಭಾರಿ ಲಾಭಗಳಿವೆ.

2025 ರಲ್ಲಿ ಗುರು ಸಂಚಾರ ಯಾವಾಗ ನಡೆಯುತ್ತೆ?

ದ್ರಿಕ್ ಪಂಚಾಂಗ ಪರ್ಕಾರ, 2025ರ ಮೇ 14 ರ ರಾತ್ರಿ 11.20ಕ್ಕೆ ಗುರು ಮಿಥುನ ರಾಶಿಯಲ್ಲಿ ಸಾಗುತ್ತಾನೆ. ಇದಾದ ನಂತರ ಅಕ್ಟೋಬರ್ 18 ರ ರಾತ್ರಿ 9.39ಕ್ಕೆ ಕಟಕ ರಾಶಿಗೆ ಪ್ರವೇಶಿಸುತ್ತಾನೆ. ವರ್ಷದ ಕೊನೆಯಲ್ಲಿ ಅಂದರೆ 2025ರ ಸೆಪ್ಟೆಂಬರ್ 5 ರಂದು ಮಧ್ಯಾಹ್ನ 3.38 ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ರೀತಿಯಾಗಿ ಗುರು ಗ್ರಹವು 2025ರಲ್ಲಿ ಮೂರು ರಾಶಿಗಳಲ್ಲಿ ಸಂಚರಿಸುತ್ತಾನೆ. ಈ ಸಂಕ್ರಮಣ ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ.

ಮೇಷ ರಾಶಿ: ಗುರುವಿನ ಸಂಚಾರದಿಂದಾಗಿ ಮೇಷ ರಾಶಿಯವರಿಗೆ ತುಂಬಾ ಶುಭವಾಗಲಿದೆ. ಗುರುಗ್ರಹದ ಪ್ರಭಾವದಿಂದ ಮಾನಸಿಕ ಶಾಂತಿ ಮತ್ತು ಕೌಟುಂಬಿಕ ಸಂತೋಷವನ್ನು ಅನುಭವಿಸುತ್ತೀರಿ. ಸಾಂಸಾರಿಕ ಸೌಕರ್ಯ ಮತ್ತು ಸಂಪತ್ತು ವೃದ್ಧಿಯಾಗಲಿದೆ. ವ್ಯಾಪಾರವನ್ನು ವಿಸ್ತರಿಸಿಕೊಳ್ಳುತ್ತೀರಿ. ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಭೂಮಿ, ಕಟ್ಟಡ ಹಾಗೂ ವಾಹನ ಖರೀದಿಸುವ ಸಾಧ್ಯತೆ ಇದೆ.

ಕಟಕ ರಾಶಿ: ಗುರುಗ್ರಹದಿಂದ ಕಟಕ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಅವದಿಯಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸುತ್ತೀರಿ. ಹೊಸ ಒಪ್ಪಂದವು ಉದ್ಯಮಿಗಳಿಗೆ ಪ್ರಯೋಜನಕಾರಿಯಾಗಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಸಾಧ್ಯವಾಗುತ್ತದೆ. ಆರ್ಥಿಕ ಪ್ರಗತಿ ಕಾಣುವ ಬಹಳಷ್ಟು ಅವಕಾಶಗಳು ಇವೆ.

ಸಿಂಹ ರಾಶಿ: ಗುರುವಿನ ಸ್ಥಾನ ಬದಲಾವಣೆ ಸಿಂಹ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಗುರುವಿನ ಪ್ರಭಾವದಿಂದ ಮನೆಯಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯಬಹದು. ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳಿವೆ. ಕೆಲವರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ವ್ಯಾಪಾರಸ್ಥರಿಗೆ ಈ ಸಮಯ ತುಂಬಾ ಅನುಕೂಲಕರವಾಗಿರುತ್ತದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ. ಹೆಚ್ಚಿನ ಹಣವನ್ನು ಕಾಣಲಿದ್ದೀರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)