ಸಣ್ಣ ಕೆಲಸದಿಂದ ದೊಡ್ಡ ಉದ್ಯಮಿಯವರೆಗೆ; ಯಾವ ರಾಶಿಯವರ ಅದೃಷ್ಟ ಹೇಗಿದೆ? ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ಭವಿಷ್ಯ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಣ್ಣ ಕೆಲಸದಿಂದ ದೊಡ್ಡ ಉದ್ಯಮಿಯವರೆಗೆ; ಯಾವ ರಾಶಿಯವರ ಅದೃಷ್ಟ ಹೇಗಿದೆ? ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ಭವಿಷ್ಯ ಹೀಗಿದೆ

ಸಣ್ಣ ಕೆಲಸದಿಂದ ದೊಡ್ಡ ಉದ್ಯಮಿಯವರೆಗೆ; ಯಾವ ರಾಶಿಯವರ ಅದೃಷ್ಟ ಹೇಗಿದೆ? ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ಭವಿಷ್ಯ ಹೀಗಿದೆ

ಪ್ರತಿಯೊಂದು ರಾಶಿಯವರಿಗೂ ತಮ್ಮದೇ ಆದ ಲಾಭಗಳಿವೆ. ಕೆಲವರು ಸಣ್ಣ ಕೆಲಸದಿಂದ ದೊಡ್ಡ ಉದ್ಯಮಿಯಾಗುತ್ತಾರೆ, ಕನಿಷ್ಠದಿಂದ ದೊಡ್ಡ ಹೆಸರು ಮಾಡುವ ಅವಕಾಶ ಮತ್ತು ಅದೃಷ್ಟ ಕೆಲವು ರಾಶಿಯವರಿಗೆ ಇದೆ. ಆ ರಾಶಿಯವರು ಯಾರು, ಏನೆಲ್ಲಾ ಲಾಭಗಳಿವೆ ಅನ್ನೋದನ್ನ ತಿಳಿಯೋಣ.

ಸಣ್ಣ ಕೆಲಸದಿಂದ ದೊಡ್ಡ ಉದ್ಯಮಿಯವರೆಗೆ; ಯಾವ ರಾಶಿಯವರ ಅದೃಷ್ಟ ಹೇಗಿದೆ? ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ಭವಿಷ್ಯ ಹೀಗಿದೆ
ಸಣ್ಣ ಕೆಲಸದಿಂದ ದೊಡ್ಡ ಉದ್ಯಮಿಯವರೆಗೆ; ಯಾವ ರಾಶಿಯವರ ಅದೃಷ್ಟ ಹೇಗಿದೆ? ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ಭವಿಷ್ಯ ಹೀಗಿದೆ

ಜನರು ವಿವಿಧ ಕಾರಣಗಳಿಂದ ಜನಪ್ರಿಯರಾಗುತ್ತಾರೆ, ಟೀ ಮಾರುವ ವ್ಯಕ್ತಿ ಮುಂದೊಂದು ದಿನ ಐಶಾರಾಮಿ ಕಾರಿನಲ್ಲಿ ತಿರುಗಾಡುವಷ್ಟು ಶ್ರೀಮಂತನಾಗಿರುತ್ತಾರೆ. ಒಬ್ಬ ಲೈಟ್ ಬಾಯ್ ದೊಡ್ಡ ಹೀರೋ ಆಗಿರುತ್ತಾನೆ. ಆಫೀಸ್ ಬಾಯ್ ಅದೇ ಕಂಪನಿಗೆ ಮ್ಯಾನೇಜರ್ ಆಗಿ ಬರುತ್ತಾನೆ. ಹೀಗೆ ಸಣ್ಣ ಕೆಲಸ ಮಾಡುವ ವ್ಯಕ್ತಿ ಮುಂದೊಂದು ದೊಡ್ಡ ಉದ್ಯಮಿಯಾಗಿ ಬೆಳೆಯುತ್ತಾನೆ. ಇದೆಲ್ಲಾ ಕಠಿಣ ಶ್ರಮದ ಜೊತೆಗೆ ಅದೃಷ್ಟವೂ ಕೈ ಹಿಡಿದಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಭವಿಷ್ಯ ಹೇಗಿರಲಿದೆ, ಲಾಭ, ನಷ್ಟಗಳ ಬಗ್ಗೆ ಇಲ್ಲಿ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರು ಧೈರ್ಯ ಮತ್ತು ಮಹತ್ವಕಾಂಕ್ಷೆಗೆ ಹೆಸರುವಾಸಿಯಾಗಿದ್ದಾರೆ. ಹೆಚ್ಚು ದೃಢವಾಗಿ ಮತ್ತು ಯಶಸ್ವಿಯಾಗಲು ನಿರ್ಧರಿಸುತ್ತಾರೆ. ರಿಕ್ಸ್ ತೆಗೆದುಕೊಳ್ಳಲು ಉತ್ಸಕರಾಗಿರುತ್ತಾರೆ. ಯಾವುದೇ ಸನ್ನಿವೇಶದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವುದಿಲ್ಲ. ಎಂತಹ ವ್ಯಕ್ತಿಯಾಗಿದ್ದರೂ ಅವರನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಈ ರಾಶಿಯವರು ನಂಬಲಾಗದಷ್ಟು ಸ್ವತಂತ್ರರಾಗಿ ಬದುಕುತ್ತಾರೆ. ತಾವು ಹೇಗೆ ನಿಲ್ಲಬೇಕು ಎಂಬುದು ಗೊತ್ತಿರುತ್ತೆ. ಬಯಸಿದ್ದನ್ನು ಪಡೆಯುತ್ತಾರೆ. ಸೆಲೆಬ್ರಿಟಿಗಳಾಗಿ ಅತ್ಯಂತ ಜನಪ್ರಿಯತೆಯನ್ನು ಗಳಿಸುತ್ತಾರೆ.

ವೃಷಭ ರಾಶಿ

ವೃಷಭ ರಾಶಿಯವರು ಜೀವನದಲ್ಲಿ ಉತ್ತಮವಾದ ವಿಷಯಗಳಿಗೆ ಆದ್ಯತೆ ನೀಡುತ್ತಾರೆ. ಪ್ರಸಿದ್ದರಾಗುವುದೊಂದಿಗೆ ಬರುವ ಐಷಾರಾಮಿ ಜೀವನ ಶೈಲಿಗೆ ಆಕರ್ಷಿತರಾಗುತ್ತಾರೆ. ತಮ್ಮ ಸಂಪತ್ತನ್ನು ಪ್ರದರ್ಶಿಸಿಕೊಳ್ಳಲು ಆಗಾಗ ವೇದಿಕೆಗಳನ್ನು ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ ಸೋಮಾರಿಯಾಗಬಹುದು. ಹಠಮಾರಿಗಳಾಗಿರುತ್ತಾರೆ. ಕಷ್ಟಪಟ್ಟು ಕೆಲಸ ಮಾಡಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳುತ್ತಾರೆ.

ಮಿಥುನ ರಾಶಿ

ಮಿಥುನ ರಾಶಿಯವರು ಸಾಮಾನ್ಯವಾಗಿ ಬುದ್ಧಿವಂತರು. ಸ್ಪಷ್ಟವಾದ ಮಾತುಗಳಿಂದ ಬೇರೆಯವರನ್ನು ಹೇಗೆ ಆಕರ್ಷಿಸಬೇಕೆಂದು ತಿಳಿದಿದೆ. ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತೀರಿ. ಜೀವನದ ಎಲ್ಲಾ ಹಂತಗಳ ಜನರೊಂದಿಗೆ ಸುಲಭವಾಗಿ ಅರ್ಥಪೂರ್ಣ ಸಂಪರ್ಕಗಳನ್ನು ಪಡೆಯುತ್ತೀರಿ. ಕುತೂಹಲ ಮತ್ತು ಉತ್ಸಾಹ ಸುತ್ತಲಿನ ಪ್ರಪಂಚವನ್ನು ಅನ್ವೇಷಿಸಲು ಕಾರಣವಾಗುತ್ತದೆ.

ಕಟಕ ರಾಶಿ

ಕಟಕ ರಾಶಿಯಡಿ ಜನಿಸಿದವರು ತಮ್ಮ ಮನೆಯ ಸೌಕರ್ಯಗಳನ್ನು ಪ್ರೀತಿಸುತ್ತಾರೆ. ಖ್ಯಾತಿಯನ್ನು ಬೆನ್ನಟ್ಟುವುದಕ್ಕಿಂತ ಹೆಚ್ಚಾಗಿ ತಮ್ಮ ಸ್ನೇಹಿತರುು ಮತ್ತು ಕುಟುಂಬದವರೊಂದಿಗೆ ಕಾಲಕಳೆಯಲು ಬಯಸುತ್ತಾರೆ. ಕಟಕ ರಾಶಿಯವರು ಸೂಕ್ಷ್ಮ ಮತ್ತು ಸಹಾನುಭೂತಿಯ ಜನರು. ಹೃದಯಕ್ಕೆ ಹತ್ತಿರವಾದವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಭಾವನೆಗಳನ್ನು ತಮ್ಮ ಕೆಲಸದಲ್ಲಿ ವ್ಯಕ್ತಪಡಿಸಿ ಸಂತೋಷ ಪಡುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯವರು ಹೆಚ್ಚಾಗಿ ಪ್ರಸಿದ್ಧರಾಗುವ ರಾಶಿಚಕ್ರ ಚಿಹ್ನೆಯವರು. ಆತ್ಮವಿಶ್ವಾಸ, ಮಹತ್ವಾಕಾಂಕ್ಷೆಯ ಹಾಗೂ ಧೈರ್ಯಶಾಲಿಗಳಾಗಿರುತ್ತಾರೆ. ತಮ್ಮ ವರ್ಚಸ್ಸಿನ ಕಾರಣದಿಂದ ಯಾವುದೇ ಪ್ರೇಕ್ಷಕರನ್ನು ಸುಲಭವಾಗಿ ಸೆರೆಹಿಡಿಯಬಹುದು ಮತ್ತು ಯಾವುದೇ ಸಮಯದಲ್ಲೂ ಸ್ಟಾರ್ ಆಗಬಹುದು. ರಾಜಕೀಯದಿಂದ ಹೆಚ್ಚು ಪ್ರಸಿದ್ದಿಯಾಗುತ್ತೀರಿ. ಮನರಂಜನೆ ಮತ್ತು ಅದರಾಚೆಗೆ ಯಾವುದೇ ಕಾರಣಗಳಿಗಾಗಿ ಪ್ರಸಿದ್ಧರಾಗುವ ಸಾಧ್ಯತೆ ಇರುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಕಠಿಣ ಪರಿಶ್ರಮ ಮತ್ತು ಸಮಪರ್ಣೆಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ತಮ್ಮ ಗುರಿಗಳನ್ನು ಸಾಧಿಸಲು ಹೆಚ್ಚುವರಿ ಪ್ರಯತ್ನವನ್ನು ಮಾಡುತ್ತಾರೆ. ಪ್ರಸಿದ್ಧರಾಗಬೇಕೆಂಬುದು ಕನ್ಯಾ ರಾಶಿಯವರಿಗೆ ಆದ್ಯತೆಯಲ್ಲ. ಬಲವಾದ ಕೆಲಸದ ನೀತಿ ಮತ್ತು ವಿವರಗಳಿಗೆ ಕೊಡುವ ಗಮನ ಈ ರಾಶಿಯವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಜೀವನಶೈಲಿಯೊಂದಿಗೆ ಬರುವ ಶ್ರೀಮಂತಿಯನ್ನು ಪ್ರೀತಿಸುತ್ತಾರೆ.

ತುಲಾ ರಾಶಿ

ಈ ರಾಶಿಯವರು ತುಂಬಾ ಬುದ್ಧಿವಂತ ಮತ್ತು ಸೃಜನಶೀಲರಾಗಿರುತ್ತಾರೆ. ತಮ್ಮ ಆಲೋಚನೆಗಳೊಂದಿಗೆ ಜನರನ್ನು ಪ್ರೇಪಿಸಲು ನಂಬಲಾಗದಷ್ಟು ಕೌಶಲ್ಯವನ್ನು ಹೊಂದಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸುವ ಕೌಶಲ್ಯ ನಿಮ್ಮಲ್ಲಿದೆ. ಜನರೊಂದಿಗೆ ಬೇರೆಯಲು ಹೆಚ್ಚು ಇಷ್ಟಪಡುತ್ತಾರೆ. ಉನ್ನತ ಸ್ಥಾನಕ್ಕೇರಲು ಹೆಚ್ಚು ಪ್ರಯತ್ನವನ್ನು ಹಾಕುತ್ತೀರಿ. ಅನೇಕ ಕ್ಷೇತ್ರಗಳ ಬಗ್ಗೆ ಜ್ಞಾನ ಇರುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಗೌಪ್ಯತೆಗೆ ಆದ್ಯತೆ ನೀಡುತ್ತಾರೆ. ಸಾರ್ವಜನಿಕವಾಗಿ ಖ್ಯಾತಿಯು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ತಮ್ಮಲ್ಲೇ ಇಷ್ಟುಕೊಳ್ಳಲು ಇಷ್ಟಪಡುತ್ತಾರೆ. ಖಾಸಗಿಯಾಗಿ ಇರಲು ಇಷ್ಟ ಪಡುತ್ತಾರೆ. ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮವನ್ನು ಹಾಕುತ್ತಾರೆ. ಖ್ಯಾತಿಯನ್ನು ಬಯಸಿದರೆ ತಮ್ಮ ಕನಸುಗಳನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ.

ಧನಸ್ಸು ರಾಶಿ

ಜಗತ್ತನ್ನು ಅನ್ವೇಷಿಸಲು ಬಯಸುತ್ತೀರಿ. ವಿಶಿಷ್ಟವಾದ ಪ್ರಸಿದ್ಧ ಜೀವನಶೈಲಿಯನ್ನು ಇಷ್ಟಪಡುತ್ತೀರಿ. ಯಾವಾಗಲೂ ಯಾವುದಕ್ಕೂ ಸಿದ್ಧರಿರುತ್ತೀರಿ. ಹೊಸ ಅನುಭವಗಳನ್ನು ಹುಡುಕುವಲ್ಲಿ ಉತ್ಸಾಹ ತೋರುವ ಮನಸ್ಸು ನಿಮ್ಮದು. ವಿಷಯಗಳನ್ನು ಸರಳವಾಗಿ ಮತ್ತು ವಿನೋದದಿಂದ ಹೇಗೆ ಸ್ವೀಕರಿಸಬೇಕೆಂದು ಗೊತ್ತಿದೆ. ಯಾವುದೇ ರೀತಿಯ ಜೀವನವನ್ನಾದರೂ ಇಷ್ಟ ಪಡುತ್ತೀರಿ. ನಿಮ್ಮಲ್ಲಿ ಹಾಸ್ಯ ಸ್ವಭಾವ ಹಲವರನ್ನು ಆಕರ್ಷಿಸುತ್ತದೆ, ಹಲವರನ್ನು ರಂಜಿಸುತ್ತೀರಿ.

ಮಕರ ರಾಶಿ

ಇವರು ಕಠಿಣ ಪರಿಶ್ರಮವನ್ನು ಗೌರವಿಸುತ್ತಾರೆ. ಯಾವುದೇ ರೀತಿಯ ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳದ ಜನರು. ಮಕರ ರಾಶಿಯವರು ಸ್ವಭಾತಃ ಸಾಕಷ್ಟು ನಾಚಿಕೆ ಸ್ವಭಾವದರು. ದೃಢನಿಶ್ಚಯ ಮತ್ತು ಶಿಸ್ತಿನ ವ್ಯಕ್ತಿಗಳಾಗಿದ್ದು, ಪ್ರಯತ್ನವನ್ನು ಮಾಡಿದರೆ ಬಯಸಿದ್ದನ್ನು ಸಾಧಿಸಬಹುದು. ಜಗತ್ತಿಗೆ ಸಾಕಷ್ಟು ಕೊಡುಗೆಯನ್ನು ನೀಡುತ್ತೀರಿ.

ಕುಂಭ ರಾಶಿ

ಈ ರಾಶಿಯವರು ಸ್ವಂತಿಕೆ ಮತ್ತು ಅನನ್ಯತೆಗೆ ಹೆಸರುವಾಸಿಯಾಗಿದ್ದಾರೆ. ಸಣ್ಣ ಕೆಲಸ ಮಾಡುತ್ತಿರುವವರು ಮುಂದೊಂದು ದಿನ ದೊಡ್ಡ ಉದ್ಯಮಿಯಾಗುವ ಸಾಧ್ಯತೆ ಇದೆ. ಆಗಾಗೆ ಜನಸಂದಣಿಯಿಂದ ದೂರ ಇರಲು ಇಷ್ಟಪಡುತ್ತೀರಿ. ನೀವು ಟ್ರೆಂಡ್ ಸೆಟ್ ಮಾಡಲು ಹೆಚ್ಚು ಗಮನ ಕೊಡುತ್ತೀರಿ. ಪ್ರೇಕ್ಷಕರನ್ನು ಸೆರೆಹಿಡಿಯಬಲ್ಲ ಕಲೆ ನಿಮಗೆ ಕರಗತವಾಗಿದೆ. ಯಾವ ಸಂದರ್ಭದಲ್ಲೂ ಎಂತಹುದೇ ಸನ್ನಿವೇಶವನ್ನು ಎದುರಿಸುವ ಕೌಶಲ್ಯ ನಿಮ್ಮಲ್ಲಿದೆ. ಹೆಚ್ಚು ಸಕಾರಾತಾಕ್ಮವಾಗಿ ಯೋಚಿಸುತ್ತೀರಿ. ಇದು ನಿಮ್ಮನ್ನು ಉನ್ನತ ಮಟ್ಟಕ್ಕೇರಿಸುತ್ತೆ

ಮೀನ ರಾಶಿ

ಜನರೊಂದಿಗೆ ಆಗುವ ಅನುಭವವನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತೀರಿ. ಭಾವನಾತ್ಮಕ ಮಟ್ಟದಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ಸಹಾನುಭೂತಿ ಮತ್ತು ಸಂವೇದನಾಶೀಲರಾಗಿರುತ್ತೀರಿ. ಅತ್ಯುತ್ತಮ ಕಥೆಗಾರರಾಗಿರುತ್ತೀರಿ. ತಮ್ಮ ಬರವಣಿಗೆ, ಕಲೆ ಅಥವಾ ಸಂಗೀತದ ಮೂಲಕ ತಮ್ಮ ಪ್ರಕ್ಷೇಕರನ್ನು ಬಲವಾದ ಭಾವನೆಗಳನ್ನು ಹೇಗೆ ಪ್ರಯೋದಿಸಬೇಕೆಂದು ತಿಳಿದಿದೆ. ಇತರರಿಗೆ ಸಹಾಯ ಮಾಡಲು ಆಸಕ್ತಿ ತೋರಿಸುತ್ತೀರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.