ಮಿಥುನ ರಾಶಿಯಲ್ಲಿ ಸೂರ್ಯ ಸಂಚಾರ: ಸಾಲ ವ್ಯವಹಾರದಿಂದ ದೂರ ಉಳಿಯುತ್ತೀರಿ; ಧನು, ಮಕರ, ಕುಂಭ, ಮೀನ ರಾಶಿಯವರ ಅದೃಷ್ಟದ ಫಲಗಳಿವು
ಜೂನ್ 15 ರಿಂದ ಮಿಥುನ ರಾಶಿಗೆ ಸೂರ್ಯನ ಪ್ರವೇಶವಾಗಲಿದೆ. ಇದು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಶುಭಫಲಗಳು ಹೀಗಿವೆ.

ರವಿಯು 2025ರ ಜೂನ್ 15 ರ ಭಾನುವಾರದಿಂದ ಜುಲೈ 16 ರ ಬುಧವಾರದವರೆಗು ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ. ಸೂರ್ಯನ ಈ ಸಂಚಾರದಿಂದ ದಾಂಪತ್ಯ ಜೀವನದ ಬಗ್ಗೆ ತಿಳಿಯಬಹುದು. ಪಾಲುಗಾರಿಕೆಯ ವ್ಯಾಪಾರ, ಸ್ಟಾಕ್ ಮತ್ತು ಷೇರಿನ ವ್ಯವಹಾರದ ಬಗ್ಗೆಯೂ ಇದರಿಂದ ತಿಳಿಯಬಹುದು. ಇದೇ ರಾಶಿಯಲ್ಲಿ ಗುರುವು ಸಂಚರಿಸುವ ಕಾರಣ ತಂದೆ ಮತ್ತು ಮಕ್ಕಳ ನಡುವಿನ ಸಂಬಂಧವನ್ನು ತಿಳಿಯಬಹುದು. ಗುರು ಹಿರಿಯರನ್ನು ಭೇಟಿಮಾಡುವ ಸಾಧ್ಯಾಸಾಧ್ಯತೆಯನ್ನು ಸೂಚಿಸುತ್ತದೆ. ನಮ್ಮ ಬುದ್ಧಿವಂತಿಕೆಯ ಪ್ರಯೋಜನ ಈ ತಿಂಗಳಲ್ಲಿ ಬಹುಮುಖ್ಯವಾಗುತ್ತದೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಸೂರ್ಯ ಸಂಚಾರದಿಂದ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯಿರಿ.
ಧನು ರಾಶಿ
ಪ್ರತಿಯೊಂದು ವಿಚಾರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ತೀರ್ಮಾನಗಳನ್ನು ಕಾರ್ಯರೂಪಕ್ಕೆ ತರಲು ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ. ಉದ್ಯೋಗದಲ್ಲಿ ಉನ್ನತೆ ಇರುತ್ತದೆ. ನಿಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ. ಕೋಪವು ಬೇಗನೆ ಬಂದರೂ ಬಹುಕಾಲ ಉಳಿಯುವುದಿಲ್ಲ. ಸಾಮಾನ್ಯವಾಗಿ ನಿಮಗೆ ಅಜೀರ್ಣದ ತೊಂದರೆ ಇರುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆತ್ಮೀಯರಿಗೆ ಹಣದ ಸಹಾಯ ಮಾಡಬೇಕಾಗುತ್ತದೆ. ವಿದ್ಯೆಗೂ ಮೀರಿದ ಬುದ್ದಿವಂತಿಕೆ ಇರುತ್ತದೆ. ಏಕ ಕಾಲದಲ್ಲಿ ಒಂದಕ್ಕಿಂತಲೂ ಹೆಚ್ಚಿನ ಕೆಲಸವನ್ನು ಮಾಡಬಲ್ಲಿರಿ. ನಿಮಗೆ ಲಾಭ ತರುವ ಕೆಲಸವನ್ನು ಮಾತ್ರ ಆಯ್ಕೆ ಮಾಡುವಿರಿ. ಬಂಧು ಬಳಗದವರಿಂದ ದೂರ ಉಳಿಯಲು ಬಯಸುವಿರಿ. ಉದ್ಯೋಗ ಬದಲಾಯಿಸುವ ಸಾಧ್ಯತೆಗಳು ಇವೆ. ತಂದೆ ಅಥವಾ ಕುಟುಂಬದ ಹಿರಿಯರ ಹಣ ಅಥವಾ ಆಸ್ತಿಯಲ್ಲಿ ನಿಮಗೆ ಪಾಲು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ದುರಾಸೆ ಇರುವುದಿಲ್ಲ. ಅಲ್ಪತೃಪ್ತಿಗಳಾಗಿರುತ್ತೀರಿ.
ಮಕರ ರಾಶಿ
ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೋರುವಿರಿ. ಆದರೆ ಮನೆಯ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಕುಟುಂಬದ ಸದಸ್ಯರ ಪ್ರೀತಿ ನಿಮಗೆ ದೊರೆಯುತ್ತದೆ. ಸಮಾಜದಲ್ಲಿನ ಗೌರವ ಘನತೆಯು ಹೆಚ್ಚುತ್ತದೆ. ಉದ್ಯೋಗದಲ್ಲಿ ಉನ್ನತ ಮಟ್ಟ ದೊರೆಯುತ್ತದೆ. ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವ ಯೋಗವಿದೆ. ಮಕ್ಕಳೊಂದಿಗೆ ಪ್ರೀತಿ ಮಮತೆಯಿಂದ ಹೆಚ್ಚಿನ ವೇಳೆಯನ್ನು ಕಳೆಯುವಿರಿ. ಬಂಧು ಬಳಗದವರ ಬಗ್ಗೆ ಒಳ್ಳೆಯ ಮನೋಭಾವನೆ ಇರುವುದಿಲ್ಲ. ಏಕಾಂಗಿತನವನ್ನು ಇಷ್ಟಪಡುವಿರಿ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬರಲಿದೆ. ದುಡುಕಿನಿಂದ ಮಾತನಾಡುವ ಕಾರಣ ಆತ್ಮೀಯರು ಸಹ ನಿಮ್ಮಿಂದ ದೂರ ಉಳಿಯುವರು. ದಂಪತಿ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ತೆರಳುವಿರಿ. ಅಲ್ಪ ಆದಾಯ ಇದ್ದರೂ ಹಣ ಉಳಿಸಲು ಸಫಲರಾಗುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಅವಿರತ ಪ್ರಯತ್ನದಿಂದ ನಿಮಗೆ ಇಷ್ಟವೆನಿಸುವ ಒಡವೆಯನ್ನು ಕೊಳ್ಳುವಿರಿ. ಕಲಾವಿದರಿಗೆ ಅಪರೂಪದ ಅವಕಾಶಗಳು ದೊರೆಯುತ್ತವೆ.
ಕುಂಭ ರಾಶಿ
ನಿಮ್ಮ ಮನಸ್ಸನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತಪ್ಪು ನಿರ್ಧಾರದಿಂದ ಕುಟುಂಬದಲ್ಲಿ ಮನಸ್ತಾಪ ಉಂಟಾಗುತ್ತದೆ. ಸಮಯದ ಅಭಾವದ ಕಾರಣ ಆದಾಯದ ಮೂಲವೊಂದು ಕೈತಪ್ಪುತ್ತದೆ. ಸೋದರನ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಮನಸ್ಸಿದ್ದರೂ ಸೋದರನಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಕೈ ಕಾಲುಗಳಲ್ಲಿ ನೋವಿನ ಅನುಭವವಿರುತ್ತದೆ. ದಂಪತಿ ನಡುವೆ ಉತ್ತಮ ಪ್ರೀತಿ ವಿಶ್ವಾಸ ಇರುತ್ತದೆ. ವಿದ್ಯಾಥಿಗಳಿಗೆ ಉದ್ಯೋಗ ಗಳಿಸಲು ವಿಶೇಷವಾದ ಅವಕಾಶ ದೊರೆಯುತ್ತದೆ. ಅನಾವಶ್ಯಕವಾದ ಖರ್ಚು ವೆಚ್ಚಗಳು ಇರಲಿವೆ. ಉದ್ಯೋಗದಲ್ಲಿ ಬೇಸರದ ವಾತಾವರಣ ಇರುತ್ತದೆ. ನಿಮಗೆ ದೊರೆಯಬೇಕಿದ್ದ ಉನ್ನತ ಹುದ್ದೆ ಬೇರೆಯವರ ಪಾಲಾಗುವ ಸಾಧ್ಯತೆಗಳಿವೆ. ಸಂಗೀತ ನಾಟ್ಯದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಆಸಕ್ತಿ ಮೂಡುತ್ತದೆ. ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಿರಿ. ಸೋದರಿಗೆ ಆರೋಗ್ಯದ ಸಮಸ್ಯೆ ಇರುತ್ತದೆ. ಹಠದ ಸ್ವಭಾವ ಇರುತ್ತದೆ. ಮನೆತನದ ಆಸ್ತಿಯ ತಗಾದೆಯು ಹೆಚ್ಚುತ್ತದೆ.
ಮೀನ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಮನದಲ್ಲಿ ಆತಂಕವಿರುತ್ತದೆ. ಮಕ್ಕಳ ಬಗ್ಗೆ ಯೋಚನೆ ಇರುತ್ತದೆ. ಹೆಣ್ಣುಮಕ್ಕಳ ಜೀವನದಲ್ಲಿ ನೆಮ್ಮದಿಯ ಕೊರತೆ ಕಂಡುಬರುತ್ತದೆ. ಮಕ್ಕಳ ಬಗ್ಗೆ ನಿಮಗೆ ಇದ್ದ ನಿರೀಕ್ಷೆಯು ದೂರವಾಗುತ್ತದೆ. ಪತಿ ಪತ್ನಿಯರ ನಡುವೆ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ. ಮನೆತನಕ್ಕೆ ಸಂಭದಿಸಿದ ಆಸ್ತಿಯ ವಿಚಾರವು ನ್ಯಾಯಾಲಯದ ಮೆಟ್ಟಿಲು ತಲುಪುತ್ತದೆ. ಕೈಕಾಲುಗಳಲ್ಲಿ ಶಕ್ತಿಯು ಕಡಿಮೆ ಆಗುತ್ತದೆ. ಉದ್ಯೋಗಸ್ದರಿಗೆ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಆದಾಯಕ್ಕೆ ತಕ್ಕಂತಹ ಖರ್ಚು ವೆಚ್ಚಗಳು ಇರುತ್ತವೆ. ಮಾತಿನಲ್ಲಿ ಎಲ್ಲರ ಮನಸ್ಸನ್ನು ಗೆದ್ದು ಕಾರ್ಯ ಸಾಧಿಸಿಕೊಳ್ಳುವಿರಿ. ನೀರಿಗೆ ಸಂಬಂಧಿಸಿದ ತೊಂದರೆ ಎದುರಾಗುತ್ತದೆ. ಸಾಲದ ವ್ಯವಹಾರದಿಂದ ದೂರ ಉಳಿಯುವಿರಿ. ಗುಟ್ಟಾಗಿ ಹಣವನ್ನು ಉಳಿಸುವಿರಿ. ಹಳ್ಳಿಯ ಜೀವನ ಇಷ್ಟವಾಗುವ ಕಾರಣ ಕೃಷಿಭೂಮಿಯನ್ನು ಕೊಳ್ಳುವಿರಿ. ಬಂಧು ಬಳಗದವರಿಂದ ದೂರ ಉಳಿಯುವಿರಿ. ಸೋದರನ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತ್ಗದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).