ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನದಲ್ಲಿ ಸೂರ್ಯ ಸಂಕ್ರಮಣದಿಂದ 30 ದಿನಗಳವರೆಗೆ ಸೂರ್ಯ ಗೋಚರ; ಯಾವ ರಾಶಿಯವರಿಗೆ ಲಾಭ, ಯಾರಿಗೆ ಸಮಸ್ಯೆ?

ಮಿಥುನದಲ್ಲಿ ಸೂರ್ಯ ಸಂಕ್ರಮಣದಿಂದ 30 ದಿನಗಳವರೆಗೆ ಸೂರ್ಯ ಗೋಚರ; ಯಾವ ರಾಶಿಯವರಿಗೆ ಲಾಭ, ಯಾರಿಗೆ ಸಮಸ್ಯೆ?

ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯ ಪ್ರವೇಶಿಸಿದ್ದಾನೆ. ಇದರಿಂದ 30 ದಿನಗಳ ವರೆಗೆ ಸೂರ್ಯ ಗೋಚರ ಉಂಟಾಗಲಿದೆ. ಇದರಿಂದ 3 ರಾಶಿಯವರಿಗೆ ಲಾಭವಿದೆ. ಯಾವ ರಾಶಿಯವರಿಗೆ ಸಮಸ್ಯೆಗಳಿವೆ ಅನ್ನೋದನ್ನು ತಿಳಿಯೋಣ.

ಮಿಥುನದಲ್ಲಿ ಸೂರ್ಯ ಸಂಕ್ರಮಣದಿಂದ 30 ದಿನಗಳವರೆಗೆ ಸೂರ್ಯ ಗೋಚರ; ಯಾವ ರಾಶಿಯವರಿಗೆ ಲಾಭ, ಯಾರಿಗೆ ಸಮಸ್ಯೆ
ಮಿಥುನದಲ್ಲಿ ಸೂರ್ಯ ಸಂಕ್ರಮಣದಿಂದ 30 ದಿನಗಳವರೆಗೆ ಸೂರ್ಯ ಗೋಚರ; ಯಾವ ರಾಶಿಯವರಿಗೆ ಲಾಭ, ಯಾರಿಗೆ ಸಮಸ್ಯೆ

ಸೂರ್ಯ ದೇವರು ಎಲ್ಲಾ ಗ್ರಹಗಳ ರಾಜ. ಪ್ರತಿ ತಿಂಗಳು ತನ್ನ ಚಲನೆಯನ್ನು ಹಿಮ್ಮುಖಗೊಳಿಸುತ್ತಾನೆ. ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಮಣ ಎಂದು ಕರೆಯಲಾಗುತ್ತೆ. ಇಂದು (ಜೂನ್ 15, ಶನಿವಾರ) ಸೂರ್ಯನು ಮಿಥುನ ರಾಶಿ ಪ್ರವೇಶಿಸಿದ್ದಾನೆ (Sun Transit in Gemini). ಇದರಿಂದ ಸೂರ್ಯ ಗೋಚರ ಉಂಟಾಗಲಿದೆ. ಮುಂದಿನ 1 ತಿಂಗಳ ಇದೇ ರಾಶಿಯಲ್ಲಿ ಇರಲಿದ್ದಾನೆ. ಜುಲೈ 16ಕ್ಕೆ ಕಟಕ ರಾಶಿಗೆ ಹೋಗಲಿದ್ದಾನೆ. ಮಿಥುನದಲ್ಲಿ ಸೂರ್ಯ ಸಂಕ್ರಮಣದಿಂದ ಹಲವು ರಾಶಿಯವರಿಗೆ ಲಾಭಗಳಿವೆ. ಅದರಲ್ಲೂ ಪ್ರಮುಖವಾಗಿ 3 ರಾಶಿಯವರ ಅದೃಷ್ಟ ಬದಲಾಗಿದೆ. ಇದರ ಜೊತೆ ಜೊತೆಗೆ ಕೆಲವು ರಾಶಿಗಳಿಗೆ ಸಮಸ್ಯೆಗಳೂ ಇರಲಿವೆ. ಯಾವ ರಾಶಿಯವರಿಗೆ ಲಾಭ ಮತ್ತು ಯಾವ ರಾಶಿಯವರಿಗೆ ನಷ್ಟ ಎಂಬುದರ ಮಾಹಿತಿ ಇಲ್ಲಿದೆ.

ಮೇಷ ರಾಶಿ

ಮೇಷ ರಾಶಿಯವರಿಗೆ ಸೂರ್ಯ ಸಂಕ್ರಮಣ ಸಾಕಷ್ಟು ಮಂಗಳಕರವಾಗಿದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳು ದೂರವಾಗಲಿವೆ. ನಿಮ್ಮ ಪ್ರತಿಭೆಯಿಂದ ಎಲ್ಲಾ ತೊಂದರೆಗಳನ್ನು ಸುಲಭವಾಗಿ ಜಯಿಸುತ್ತೀರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ ಎಂದು ಪರಿಗಣಿಸಲಾಗಿದೆ. ನೀವು ಕೆಲ ಸಹಿ ಸುದ್ದಿಗಳನ್ನು ಕೇಳುವ ಎಲ್ಲಾ ಸಾಧ್ಯತೆಗಳು ಇವೆ.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರ ಈ ರಾಶಿಯವರಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಗೌರವವನ್ನು ಪಡೆಯುತ್ತೀರಿ. ನಿಮ್ಮ ತಂದೆ ಮತ್ತು ಗುರುಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡಬೇಕಾಗುತ್ತದೆ.

ಸಿಂಹ ರಾಶಿ

ಸೂರ್ಯ ಸಂಕ್ರಮಣವು ಸಿಂಹ ರಾಶಿಯವರಿಗೆ ಹಲವು ರೀತಿಯಲ್ಲಿ ಪ್ರಯೋಚನಕಾರಿಯಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಂಪೂರ್ಣ ಗಮನ ಕೆಲಸದ ಮೇಲೆ ಇರಲಿದೆ. ನೀವು ಮಾಡುವ ಕೆಲಸಕ್ಕೆ ಪ್ರಶಂಸೆಗಳು ವ್ಯಕ್ತವಾಗುತ್ತವೆ. ಕೋರ್ಟ್‌ನಲ್ಲಿರುವ ಪ್ರಕರಣಗಳಲ್ಲಿ ಜಯ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯುತ್ತೀರಿ. ಖುಷಿ ಹೆಚ್ಚಾಗಲಿದೆ.

ಸೂರ್ಯ ಸಂಕ್ರಮಣದಿಂದ ಯಾವ ರಾಶಿಯವರಿಗೆ ಸಮಸ್ಯೆ

ಮಿಥುನ ರಾಶಿಯಲ್ಲಿ ಸೂರ್ಯದೇವನ ಸಂಕ್ರಮಣದಿಂದ ಕಟಕ, ವೃಶ್ಟಿಕ ಹಾಗೂ ಮೀನ ರಾಶಿಯವರಿಗೆ ಮಂಗಳಕರವಲ್ಲ ಎಂದು ಪರಿಗಣಿಸಲಾಗಿದೆ. ಇವರು ಜೀವನದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ವೃತ್ತಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾಗ್ವಾದಗಳನ್ನು ಎದುರಿಸಬೇಕಾದ ಸನ್ನಿವೇಶಗಳು ಉಂಟಾಗಬಹುದು. ಕೆಲಸವನ್ನು ಪೂರ್ಣಗೊಳಿಸಲು ಅಡೆತಡೆಗಳು ಇರಲಿವೆ. ಆರೋಗ್ಯದ ಕಡೆ ಗಮನ ಕೊಡಬೇಕಾಗುತ್ತದೆ.

(ಗಮನಿಸಿ: ಜನಪ್ರಿಯ ನಂಬಿಕೆಗಳು ಮತ್ತು ಶಾಸ್ತ್ರದ ಆಧಾರದ ಮೇಲೆ ಈ ಬರಹವನ್ನು ಪ್ರಕಟಿಸಲಾಗಿದೆ. ಈ ಬರಹವು ಓದುಗರಿಗೆ ಮಾಹಿತಿ ನೀಡುವ ಉದ್ದೇಶವನ್ನು ಮಾತ್ರ ಹೊಂದಿದೆ. ಅನುಸರಿಸುವ ಮೊದಲು ವಿಷಯತಜ್ಞರ ಸಲಹೆ ಪಡೆಯುವುದು ಒಳ್ಳೆಯದು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.