ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಒಂದು ವರ್ಷದ ನಂತರ ಸಿಂಹ ರಾಶಿಗೆ ಸೂರ್ಯನ ಪ್ರವೇಶ; ರವಿಯ ಆಶೀರ್ವಾದದಿಂದ ಈ 3 ರಾಶಿಯವರಿಗೆ ಸಕಲ ಇಷ್ಟಾರ್ಥ ಸಿದ್ಧಿ

ಒಂದು ವರ್ಷದ ನಂತರ ಸಿಂಹ ರಾಶಿಗೆ ಸೂರ್ಯನ ಪ್ರವೇಶ; ರವಿಯ ಆಶೀರ್ವಾದದಿಂದ ಈ 3 ರಾಶಿಯವರಿಗೆ ಸಕಲ ಇಷ್ಟಾರ್ಥ ಸಿದ್ಧಿ

Sun Transit: ಸೂರ್ಯನು ಶೀಘ್ರದಲ್ಲೇ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು ಅದೇ ರಾಶಿಯಲ್ಲಿ 1 ತಿಂಗಳ ಕಾಲ ನೆಲೆಸಿರುತ್ತಾನೆ. ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸಿದ ತಕ್ಷಣ ಕೆಲವು ರಾಶಿಯವರಿಗೆ ಅದೃಷ್ಟದ ಹೊಳೆಯನ್ನೇ ಹರಿಸಲಿದ್ದಾನೆ. (ಬರಹ: ಅರ್ಚನಾ ವಿ ಭಟ್)

ಒಂದು ವರ್ಷದ ನಂತರ ಸಿಂಹ ರಾಶಿಗೆ ಸೂರ್ಯನ ಪ್ರವೇಶ; ರವಿಯ ಆಶೀರ್ವಾದದಿಂದ ಈ 3 ರಾಶಿಯವರಿಗೆ ಸಕಲ ಇಷ್ಟಾರ್ಥ ಸಿದ್ಧಿ
ಒಂದು ವರ್ಷದ ನಂತರ ಸಿಂಹ ರಾಶಿಗೆ ಸೂರ್ಯನ ಪ್ರವೇಶ; ರವಿಯ ಆಶೀರ್ವಾದದಿಂದ ಈ 3 ರಾಶಿಯವರಿಗೆ ಸಕಲ ಇಷ್ಟಾರ್ಥ ಸಿದ್ಧಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಮಣ ಎಂದು ಕರೆಯಲಾಗುತ್ತದೆ. ಗ್ರಹಗಳ ರಾಜನಾದ ಸೂರ್ಯನ ಸಂಕ್ರಮಣವು ಬಹಳಷ್ಟು ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಸೂರ್ಯನು ತನ್ನದೇ ಸಿಂಹ ರಾಶಿಯನ್ನು 365 ದಿನಗಳ ನಂತರ ಪ್ರವೇಶಿಸಲಿದ್ದಾನೆ. ಸಿಂಹ ರಾಶಿಯು ಸೂರ್ಯನಿಂದ ಆಳಲ್ಪಡುತ್ತದೆ. ಗ್ರಹಗಳ ಅಧಿಪತಿಯಾದ ಸೂರ್ಯ ತನ್ನದೇ ಆದ ರಾಶಿಯಲ್ಲಿ ಸಾಗುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ಆಗಸ್ಟ್ ತಿಂಗಳಿನ 16ನೇ ತಾರೀಖು ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನ ಶುಭ ಪ್ರಭಾವದಿಂದ ಕೆಲವರಿಗೆ ಬಡ್ತಿ, ಗೌರವ ದೊರೆಯುತ್ತದೆ. ಒಂದು ವರ್ಷದ ನಂತರ ಸೂರ್ಯನು ತನ್ನದೇ ರಾಶಿಯಾದ ಸಿಂಹ ರಾಶಿಯಲ್ಲಿ ಸಂಚರಿಸುವುದರ ಮೂಲಕ ಯಾವ ರಾಶಿಗಳಿಗೆ ಅದೃಷ್ಟವನ್ನು ಹೊತ್ತು ತರಲಿದ್ದಾನೆ ನೋಡೋಣ.

ಮಿಥುನ ರಾಶಿ

ಸೂರ್ಯನ ಸಂಕ್ರಮಣವು ಮಿಥುನ ರಾಶಿಯವರಿಗೆ ಶುಭ ತರಲಿದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಎದುರಿಸುತ್ತಿದ್ದ ಸಮಸ್ಯೆ ಕ್ರಮೇಣ ಮಾಯವಾಗುತ್ತವೆ. ನಿಮ್ಮ ಪ್ರತಿಭೆಯಿಂದ ನೀವು ಎಲ್ಲಾ ತೊಂದರೆಗಳನ್ನು ಸುಲಭವಾಗಿ ಜಯಿಸುತ್ತೀರಿ. ಸೂರ್ಯನ ಸಂಕ್ರಮಣದಿಂದ ವಿದ್ಯಾರ್ಥಿಗಳು ಒಳ್ಳೆಯ ದಿನಗಳನ್ನು ಕಾಣಬಹುದು. ನೀವು ಕೆಲವು ಒಳ್ಳೆಯ ಸುದ್ದಿಗಳನ್ನೂ ಸಹ ಪಡೆಯಬಹುದು.

ವೃಷಭ ರಾಶಿ

ಸಿಂಹ ರಾಶಿಗೆ ಸೂರ್ಯನ ಪ್ರವೇಶವು ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಪರಿಗಣಿಸಲಾಗಿದೆ. ಕಚೇರಿಯಲ್ಲಿ ನಿಮಗಿದ್ದ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಗೌರವವೂ ಸಿಗಲಿದೆ. ನಿಮ್ಮ ತಂದೆ, ಗುರುಗಳಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ಧಾರ್ಮಿಕ ಕೆಲಸಗಳನ್ನು ಮಾಡಲಿದ್ದೀರಿ. ಅದೇ ಸಮಯದಲ್ಲಿ, ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿಯೇ ಸೂರ್ಯನು ಸಂಚರಿಸುವುದರಿಂದ ಆ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮಗೆ ಈ ತಿಂಗಳು ಎಲ್ಲವೂ ಅನುಕೂಲಕರವಾಗಿರುತ್ತದೆ. ನಿಮ್ಮ ಗಮನವೆಲ್ಲವೂ ನಿಮ್ಮ ಕೆಲಸದ ಮೇಲಿರುತ್ತದೆ. ನಿಮ್ಮ ಕೆಲಸಕ್ಕಾಗಿ ನೀವು ಮೆಚ್ಚುಗೆಯನ್ನು ಸಹ ಪಡೆಯುತ್ತೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದು ಉತ್ತಮ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.‌

ಬರಹ: ಅರ್ಚನಾ ವಿ ಭಟ್

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.