ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಿಂಹ ರಾಶಿಗೆ ಬುಧ ಗ್ರಹದ ಪ್ರವೇಶ; ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಕೆಲಸದಲ್ಲೂ ಒಲಿಯಲಿದೆ ಯಶಸ್ಸು

ಸಿಂಹ ರಾಶಿಗೆ ಬುಧ ಗ್ರಹದ ಪ್ರವೇಶ; ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಕೆಲಸದಲ್ಲೂ ಒಲಿಯಲಿದೆ ಯಶಸ್ಸು

Budha Gochar: ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಜುಲೈ 19ರಂದು ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಬುಧ ಗ್ರಹದ ಗೋಚರವು ಕೆಲವು ರಾಶಿಯವರ ಜೀವನದಲ್ಲಿ ಗೋಲ್ಡನ್‌ ಟೈಮ್‌ ಆಗಲಿದೆ. ವ್ಯಾಪಾರ, ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ಸಿಂಹ ರಾಶಿಯಲ್ಲಿ ಬುಧ ಗೋಚರದಿಂದ ಯಾವ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಓದಿ.

ಸಿಂಹ ರಾಶಿಗೆ ಬುಧ ಗ್ರಹದ ಪ್ರವೇಶ; ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಕೆಲಸದಲ್ಲೂ ಒಲಿಯಲಿದೆ ಯಶಸ್ಸು
ಸಿಂಹ ರಾಶಿಗೆ ಬುಧ ಗ್ರಹದ ಪ್ರವೇಶ; ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಕೆಲಸದಲ್ಲೂ ಒಲಿಯಲಿದೆ ಯಶಸ್ಸು

ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯುತ್ತಾರೆ. ಬುಧ ದೇವನು ಬುದ್ಧಿ, ತರ್ಕ, ಸಂವಹನ, ಗಣಿತ, ಚತುರತೆ ಮತ್ತು ಗೆಳೆತನ ಮುಂತಾದವುಗಳಿಗೆ ಕಾರಣವಾದ ಗ್ರಹ ಎಂದು ಹೇಳಲಾಗುತ್ತದೆ. ಬುಧ ಗ್ರಹಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಬುಧ ಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿಯಾಗಿದ್ದಾನೆ. ಬುಧನ ಶುಭ ದೃಷ್ಠಿಯಿಂದ ವ್ಯಕ್ತಿಯ ಜೀವನದಲ್ಲಿ ಶುಭ ಫಲಗಳು ದೊರೆಯುತ್ತವೆ. ಬುಧನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಿದಾಗ ಮೇಷ ರಾಶಿಯಿಂದ ಕನ್ಯಾ ರಾಶಿಯವರೆಗೆ ಅದರ ಪರಿಣಾಮವನ್ನು ಕಾಣಬಹುದಾಗಿದೆ. ಜುಲೈ 19ರಂದು ಬುಧನು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ.

ಸಿಂಹ ರಾಶಿಯಲ್ಲಿ ಬುಧನ ಗೋಚರವು ವೃಷಭ, ಕನ್ಯಾ ಸೇರಿದಂತೆ ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಬುಧನು ಸಿಂಹ ರಾಶಿಗೆ ಸಂಚರಿಸುವುದರಿಂದ ಯಾವ ರಾಶಿಗಳ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ ನೋಡೋಣ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಕೌಟುಂಬಿಕ ಜೀವನವು ಬಹಳ ಸುಖಮಯವಾಗಿರುತ್ತದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆರ್ಥಿಕ ಲಾಭ ಗಳಿಸುತ್ತೀರಿ. ನೀವು ಕೆಲಸ ಮಾಡುವ ಕಚೇರಿಯಲ್ಲಿ ನಿಮ್ಮ ಮೂಲಕ ಮಾಡಿದ ಕೆಲಸಗಳು ಹೆಚ್ಚು ಪ್ರಶಂಸೆಯನ್ನು ಪಡೆದುಕೊಳ್ಳಲಿದೆ.

ಸಿಂಹ ರಾಶಿ

ಬುಧನು ಸಿಂಹ ರಾಶಿಗೆ ಪ್ರವೇಶಿಸುವುದರಿಂದ ಆ ರಾಶಿಯವರ ಮೇಲೆ ಉತ್ತಮ ಫಲಗಳನ್ನೇ ನೀಡಲಿದ್ದಾನೆ. ಈ ಸಮಯದಲ್ಲಿ ಅದೃಷ್ಟ ನಿಮ್ಮ ಪಾಲಿಗೆ ಇರುತ್ತದೆ. ಸಹೋದರ–ಸಹೋದರಿಯರ ಬೆಂಬಲವೂ ನಿಮಗೆ ಸಿಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಬಹಳ ಉತ್ತಮವಾದ ಸಮಯವಾಗಿದೆ. ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ಮನೆ ಅಥವಾ ವಾಹನ ಖರೀದಿಸಬಹುದು.

ಕನ್ಯಾ ರಾಶಿ

ಬುಧ ಸಂಚಾರವು ಕನ್ಯಾ ರಾಶಿಯವರಿಗೆ ದೊಡ್ಡ ವರವಾಗಲಿದೆ. ಎಲ್ಲಾ ಕಡೆಯಿಂದಲೂ ಲಾಭ ಗಳಿಸುತ್ತೀರಿ. ನಿಮಗೆ ಕುಟುಂಬ ಸದಸ್ಯರ ಬೆಂಬಲವು ಸಿಗಲಿದೆ. ಈ ಸಮಯವು ಉದ್ಯೋಗ ಮತ್ತು ವ್ಯವಹಾರಕ್ಕೆ ಅನುಕೂಲಕರವಾದ ಸಮಯವಾಗಲಿದೆ. ಆರ್ಥಿಕವಾಗಿ ನೀವು ಸದೃಢರಾಗಿರುತ್ತೀರಿ.

ಧನು ರಾಶಿ

ಸಿಂಹ ರಾಶಿಯಲ್ಲಿ ಬುಧ ಗೋಚರವು ಧನು ರಾಶಿಯವರ ಜೀವನದಲ್ಲಿ ಒಳ್ಳೆಯ ಪರಿಣಾಮವನ್ನು ತರಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಧನ ಲಾಭವಿರುವುದರಿಂದ ಆರ್ಥಿಕವಾಗಿ ನೀವು ಬಲಗೊಳ್ಳುತ್ತೀರಿ. ಹಣ ವಹಿವಾಟು ಮಾಡಲು ಇದು ಅನುಕೂಲಕರ ಸಮಯವಾಗಿದೆ. ಹೂಡಿಕೆಗಳಿಂದ ಲಾಭವನ್ನು ಪಡೆಯುತ್ತೀರಿ. ನಿಮ್ಮ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)