ವೃಶ್ಚಿಕ ಸೇರಿ ಈ 5 ರಾಶಿಯವರಿಗೆ ಕೆಟ್ಟ ಕಣ್ಣು ದೃಷ್ಟಿ ಬೀಳುತ್ತೆ; ಎಷ್ಟು ಎಚ್ಚರಿಕೆಯಿಂದ ಇದ್ದರೆ ಅಷ್ಟು ಒಳ್ಳೆಯದು
ಕೆಟ್ಟ ದೃಷ್ಟಿಗೆ ಗುರಿಯಾಗುವ ರಾಶಿಗಳು: ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ದುಷ್ಟ ಕಣ್ಣುಗಳಿಗೆ ಬೇಗನೆ ಬೀಳುತ್ತಾರೆ. ಇಂಥ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಅಗತ್ಯವಿರುತ್ತದೆ. ಕೆಟ್ಟ ದೃಷ್ಟಿ ತಾಗುವ ಮುನ್ನವೇ ಎಚ್ಚರ ವಹಿಸಬೇಕು. ಯಾವ ರಾಶಿಯವರಿಗೆ ಬೇಗ ದುಷ್ಟರ ದೃಷ್ಟಿ ಬೀಳುತ್ತದೆ ಎಂಬುದನ್ನು ತಿಳಿಯಿರಿ.
ಕೆಟ್ಟ ದೃಷ್ಟಿಗೆ ಗುರಿಯಾಗುವ ರಾಶಿಗಳು: ಸಾಮಾನ್ಯವಾಗಿ ಮನೆಗಳಲ್ಲಿ ಯಾರಿಗಾದರೂ ಹೊಟ್ಟೆನೋವು, ಊಟ ಸೇರದಿರುವುದು, ಓದಲು ಆಸಕ್ತಿ ಇಲ್ಲದಿರುವುದು, ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂಬುದು ಸೇರಿದಂತೆ ಸಮಸ್ಯೆಗಳನ್ನು ಗಮನಿಸಿದಾಗ ಮನೆಯಲ್ಲಿನ ಹಿರಿಯರು, ನಿನಗೆ ಯಾರದ್ದೂ ದೃಷ್ಟಿ ಬಿದ್ದಿರಬೇಕು ಎಂದು ಹೇಳುವುದನ್ನು ಕೇಳಿರುತ್ತೇವೆ. ಕೆಟ್ಟ ಕಣ್ಣು ಅಥವಾ ಕೆಟ್ಟ ದೃಷ್ಟಿ ಬೀಳುದೆಂದರೆ ನಮ್ಮನ್ನು ನೋಡಿ ಅಸೂಯೆ ಪಡುವವರ, ಕೆಟ್ಟ ಉದ್ದೇಶದಿಂದ ತೊಂದರೆ ಕೊಡುವವರು, ಹೊಟ್ಟೆಕಿಚ್ಚು ಪಡುವವರ ಕಣ್ಣಿಗೆ ಬೀಳುವುದು ಎಂದರ್ಥ. ಇದು ಜಗತ್ತಿನಾದ್ಯಂತ ಅಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಗುರುತಿಸುವ ಒಂದು ಭಾಗವಾಗಿದೆ. ಜ್ಯೋತಿಷ್ಯದಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳು ಆಕರ್ಷಿತರಾಗುತ್ತವೆ ಮತ್ತು ಬೇಗನೆ ಇತರರ ಕಣ್ಣಿಗೆ ಬೀಳುತ್ತವೆ. ಅಂತಹ ಜನರು ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇವರು ತುಂಬಾ ಬೇಗ ಕೆಟ್ಟ ಕಣ್ಣುಗಳಿಗೆ ಗುರಿಯಾಗುತ್ತಾರೆ. ಯಾವ ರಾಶಿಯವರಿಗೆ ದುಷ್ಟ ಕಣ್ಣಿಗೆ ಬೀಳುತ್ತಾರೆ ಎಂಬುದನ್ನು ತಿಳಿಯೋಣ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತುಂಬಾ ಬೇಗ ಆಕರ್ಷಿಸುತ್ತಾರೆ. ಆದರೆ ಅಷ್ಟೇ ವೇಗವಾಗಿ ದುಷ್ಟ ದೃಷ್ಟಿಗೆ ಗುರಿಯಾಗುತ್ತಾರೆ. ಬೇರೆಯವರು ಅಸೂಯೆ ಮಾಡುವ ರೀತಿಯಲ್ಲಿ ಇವರ ಸ್ವಭಾವ ಇರುತ್ತದೆ. ಹೀಗಾಗಿಯೇ ನಕಾರಾತ್ಮಕ ಶಕ್ತಿಯನ್ನು ಗ್ರಹಿಸಲು ಸುಲಭಗೊಳಿಸುತ್ತದೆ. ಕೆಟ್ಟ ದೃಷ್ಟಿಗೆ ಬಲಿಯಾಗುವುದನ್ನು ತಪ್ಪಿಸಲು ಕೆಲವು ಪರಿಹಾರಗಳನ್ನು ಅನುಸರಿಸುವುದು ಉತ್ತಮ.
ಸಿಂಹ ರಾಶಿ
ಈ ರಾಶಿಯವರು ಅಷ್ಟೇ ಸುಲಭವಾಗಿ ಕೆಟ್ಟ ದೃಷ್ಟಿಗೆ ಬೀಳುತ್ತಾರೆ. ಈ ರಾಶಿಯವರಿಗೆ ನಂಬಿಕೆ ಹೆಚ್ಚಿರುತ್ತದೆ. ಸಿಂಹ ರಾಶಿಯವರಲ್ಲಿ ಇರುವ ಪ್ರೀತಿಯಿಂದಾಗಿ ಬೇರೆಯರು ಅಸೂಯೆಪಡುತ್ತಾರೆ. ಅಲ್ಲದೆ, ನಕಾರಾತ್ಮಕ ಶಕ್ತಿಗಳನ್ನು ಎದುರಿಸುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ದಯೆಯನ್ನು ಹೊಂದಿರುವವರಾಗಿರುತ್ತಾರೆ. ಆಗಾಗೆ ತಮ್ಮ ಸುತ್ತಲಿನವರ ಭಾವನೆಗಳನ್ನು ಗ್ರಹಿಸುತ್ತಾರೆ. ಈ ಸಂಪರ್ಕವು ಕೆಟ್ಟ ಕಣ್ಣಿಗೆ ಕಾರಣವಾಗುತ್ತದೆ. ನಿಮ್ಮ ಕೌಶಲಗಳು ಇತರರನ್ನು ಅಸೂಯೆಪಡುವಂತೆ ಮಾಡುತ್ತವೆ. ಧ್ಯಾನದ ಜೊತೆಗೆ ಕೆಲವು ಕ್ರಮಗಳು ಕೆಟ್ಟ ದೃಷ್ಟಿಯನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ಕೂಡ ಸುಲಭವಾಗಿ ಕೆಟ್ಟ ದೃಷ್ಟಿಗೆ ಬಲಿಯಾಗುತ್ತಾರೆ. ಮೋಡಿ, ಸೊಬಗು ಹಾಗೂ ಸಾಮರಸ್ಯದ ಸಂಬಂಧಗಳಿಗಾಗಿ ಇತರು ನಿಮ್ಮನ್ನು ನೋಡಿ ಹೆಚ್ಚು ಅಸೂಯೆಪಡುತ್ತಾರೆ. ಬೇರೆಯವರ ಈ ನಕಾರಾತ್ಮಕ ಶಕ್ತಿಯನ್ನು ಗ್ರಹಿಸಿದಾಗ ತೊಂದರೆಗಳನ್ನು ಎದುರಿಸುತ್ತಾರೆ.
ಕಟಕ ರಾಶಿ
ಕಟಕ ರಾಶಿಯವರು ಭಾವನಾತ್ಮಕವಾಗಿರುತ್ತಾರೆ. ತಮ್ಮನ್ನು ಪ್ರೀತಿಸುವವರಿಗೆ ತುಂಬಾ ಹತ್ತಿರವಾಗಿರುತ್ತಾರೆ. ಇದನ್ನು ನೋಡುವ ಕೆಲವರಲ್ಲಿ ಅಸೂಯೆ ಉಂಟುಮಾಡುತ್ತದೆ ಮತ್ತು ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ಇದಕ್ಕೆ ಪರಿಹಾರವಾಗಿ ಮನೆಯ ಮುಖ್ಯ ದ್ವಾರದ ಬಳಿ ಉಪ್ಪು ಹಾಕುವುದು ಅಥವಾ ಸ್ಫಟಿಕವನ್ನು ಇರಿಸುವ ಮೂಲಕ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.