Zodiac Signs: ಜೀವನದ ಪ್ರತಿ ಕ್ಷಣವನ್ನು ಖುಷಿಯಾಗಿ ಕಳೆಯುವವರ ರಾಶಿಗಳಿವು; ಇದರಲ್ಲಿ ನೀವು ಇದ್ದೀರಾ?
Zodiac Signs: ಕೆಲವು ರಾಶಿಯವರು ಜೀವನದ ಪ್ರತಿ ಕ್ಷಣವನ್ನು ಆನಂದಿಸುತ್ತಾರೆ. ಅವರು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಚಿಂತೆ ಮಾಡುವುದಿಲ್ಲ. ಅಂತಹ ರಾಶಿಯವರು ಯಾರೆಂದು ಇಲ್ಲಿ ತಿಳಿಯೋಣ.

Zodiac Signs: ಸಂತೋಷ ಹಾಗೂ ನೆಮ್ಮದಿಯಿಂದ ಬಾಳಬೇಕೆಂಬುದು ಎಲ್ಲರ ಆಸೆಯಾಗಿರುತ್ತದೆ. ಆದರೆ ಅನೇಕರು ತಮ್ಮ ಭವಿಷ್ಯದ ಬಗ್ಗೆ ಹೆದರುತ್ತಾರೆ. ಅಷ್ಟೇ ಅಲ್ಲ ಪ್ರಸ್ತುತ ಸಂತೋಷವನ್ನು ನಿರ್ಲಕ್ಷಿಸುತ್ತಾರೆ. ಆದರೆ ಜೀವನದ ಪ್ರತಿ ಕ್ಷಣವನ್ನು ಆನಂದಿಸುವವರು ಬಹಳ ಕಡಿಮೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯ ಜನರು ಜೀವಿನದ ಪ್ರತಿ ಕ್ಷಣವನ್ನು ಆನಂದಿಸುತ್ತಾರೆ. ಪ್ರತಿಯೊಂದು ಅನುಭವದಲ್ಲೂ ಸಂತೋಷ ಮತ್ತು ಉತ್ಸಾಹವನ್ನು ಕಾಣುತ್ತಾರೆ. ಯಾವ ರಾಶಿಯವರು ಜೀವನದಲ್ಲಿ ತೀವ್ರ ಆಸಕ್ತಿ ಮತ್ತು ಉತ್ಸಾಹವನ್ನು ತೋರಿಸುತ್ತಾರೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಒಬ್ಬ ಮನುಷ್ಯನಿಗೆ ಇರುವುದು ಒಂದೇ ಜೀವನ. ಕೆಲವು ರಾಶಿಯವರು ನೆಮ್ಮದಿಯಿಂದ ಬದುಕಬೇಕೆಂದು ಭಾವಿಸುತ್ತಾರೆ. ಅವರು ಜೀವನದ ಪ್ರತಿ ಕ್ಷಣವನ್ನು ಗೌರಿವಿಸುತ್ತಾರೆ. ಅವರು ಅನುಭವಿಸುವುದಕ್ಕಿಂತ ಜೀವನವನ್ನು ಆನಂದಿಸುವುದು ಉತ್ತಮ ಎಂದು ಭಾವಿಸಿರುತ್ತಾರೆ. ಹಾಗಾದರರೆ ಜೀವನದ ಪ್ರತಿ ಕ್ಷಣವನ್ನು ಆನಂದಿಸುವ ರಾಶಿಯವರು ಯಾರೆಂದು ನೋಡೋಣ.
ಮೇಷ ರಾಶಿ
ಮೇಷ ರಾಶಿ ಧೈರ್ಯ ಮತ್ತು ಉತ್ಸಾಹಕ್ಕೆ ಹೆಸರುವಾಸಿಯಾಗಿದೆ. ಈ ರಾಶಿಯವರು ಆಕ್ರಮಣಕಾರಿಯಾಗಿದ್ದು, ಯಾವಾಗಲೂ ಹೊಸ ಸಾಹಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಪ್ರತಿ ಕ್ಷಣವನ್ನು ಉತ್ಸಾಹದಿಂದ ಕಳೆಯುತ್ತಾರೆ. ಇವರ ನಿರ್ಭೀತ ಸ್ವಭಾವ ಮತ್ತು ಆತ್ಮವು ಇವರನ್ನು ಪೂರ್ಣವಾಗಿ ಬದುಕುವ ಸಾಹಸಿಗಳನ್ನಾಗಿ ಮಾಡುತ್ತದೆ. ವರ್ತಮಾನದ ರೋಮಾಂಚನದಲ್ಲಿ ಆನಂದಿಸುತ್ತಾರೆ. ಇವರರು ಜೀವನವನ್ನು ಆನಂದಿಸಲು ಹೆಚ್ಚಾಗಿ ಇಷ್ಟಪಡುತ್ತಾರೆ. ಇರುವಷ್ಟು ದಿನ ಖುಷಿಯಾಗಿರಬೇಕೆಂಬ ಲೆಕ್ಕಾಚಾರದಲ್ಲಿ ಬದುಕುತ್ತಾರೆ.
ಸಿಂಹ ರಾಶಿ
ಆತ್ಮವಿಶ್ವಾಸ, ಆಕರ್ಷಕ ಸ್ಮೈಲ್, ಉತ್ಸಾಹಭರಿತ ಸಂತೋಷದಿಂದ ಸಿಂಹ ರಾಶಿಯವರು ಯಾವಾಗಲೂ ಹಸನ್ಮುಖಿಗಳಾಗಿ ಕಾಣುತ್ತಾರೆ. ಇವರು ಸ್ವಭಾವತಃ ನಾಯಕರು. ಸಿಂಹ ರಾಶಿಯವರು ಜೀವನವನ್ನು ಆನಂದಿಸಲು ಇಷ್ಟಪಡುತ್ತಾರೆ. ಪ್ರಸ್ತುತ ಕ್ಷಣದಲ್ಲಿ ಜೀವಿಸುವುದಿಂದ ಉಂಟಾಗುವ ಉತ್ಸಾಹವನ್ನು ಆನಂದಿಸುತ್ತಾರೆ. ಏಕೆಂದರೆ ಭೂತಕಾಲ ಮರಳಿ ಬರುವುದಿಲ್ಲ ಎಂದು ಈ ರಾಶಿಯವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಪಾರ್ಟಿ ಇರಲಿ, ಯಾವುದೇ ತಯಾರಿ ಇಲ್ಲದೆ ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗುವುದಿರಲಿ ಪ್ರತಿಯೊಂದು ಕ್ಷಣವನ್ನು ಮರೆಯಲಾರದಂತೆ ಎಂಜಾಯ್ ಮಾಡುತ್ತಾರೆ.
ಧನು ರಾಶಿ
ಧನು ರಾಶಿಯವರು ಯಾವಾಗಲೂ ಹೆಸ ಅನುಭವಗಳು ಮತ್ತು ಸಾಹಸಗಳನ್ನು ಹುಡುಕುವ ಸಾಹಸಮಯ ಜನರು. ಅವರು ತಮ್ಮ ಅಪರಿಮಿತ ಕುತೂಹಲ ಮತ್ತು ಸಾಹಸ ಮನೋಭಾವದಿಂದ ಸಂತೋಷಪಡುತ್ತಾರೆ. ಈ ಸ್ವತಂತ್ರ ಮನೋಭಾವದ ಜನರು ವರ್ತಮಾನದಲ್ಲಿ ವಾಸಿಸುತ್ತಾರೆ. ಹೊಸ ಸ್ಥಗಳನ್ನು ಅನ್ವೇಷಿಸುತ್ತಿರಲಿ ಅಥವಾ ಪೂರ್ಣಸಿದ್ಧತೆಯಿಲ್ಲದ ಪ್ರವಾಸವನ್ನು ಕೈಗೊಳ್ಳಿ, ಧನು ರಾಶಿಯವರು ಹೊಸ ಅನುಭವಗಳ ರೋಮಾಂಚನವನ್ನು ಆನಂದಿಸುತ್ತಾರೆ. ತೆರೆದ ಮನಸ್ಸಿನಿಂದ ಪ್ರತಿಕ್ಷಣವನ್ನು ಸ್ವೀಕರಿಸುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಭಾವನೆಗಳೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುತ್ತಾರೆ. ಸುತ್ತಮುತ್ತಲಿನ ಪ್ರಪಂಚ, ಪ್ರಸ್ತುತ ಕ್ಷಣದ ಸೌಂದರ್ಯವನ್ನು ಆನಂದಿಸುತ್ತಾರೆ. ಈ ರಾಶಿಯವರು ತಮ್ಮ ಕನಸಿನಲ್ಲೂ ಸಂತೋಷವಾಗಿರುತ್ತಾರೆ. ಫ್ಯಾಂಟಿಸಿ ಮತ್ತು ಸೃಜನಶೀಲತೆಯ ಜಗತ್ತನ್ನು ಆನಂದಿಸುತ್ತಾರೆ. ತಮ್ಮ ಸಹಜ ಹಾಗೂ ಸಹಾನುಭೂತಿಯ ಸ್ವಭಾವದ ಪರಿಣಾಮ ಜೀವನದಲ್ಲಿ ಸಂತೋಷದಿಂದ ಬದುಕುತ್ತಾರೆ. ಮೀನ ರಾಶಿಯವರು ಸಣ್ಣ ವಿಷಯಗಳಲ್ಲೂ ಸಂತೋಷವನ್ನು ಕಾಣುತ್ತಾರೆ ಎನ್ನೋದು ಮತ್ತೊಂದು ವಿಶೇಷ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ