ಜೀವನದಲ್ಲಿ ಅತಿ ಹೆಚ್ಚು ಕಷ್ಟಗಳನ್ನು ಎದುರಿಸಲಿರುವ 5 ರಾಶಿಯವರು; ಇವರಿಗೆ ಯಾಕೆ ಇಷ್ಟೊಂದು ಏರಿಳಿತಗಳಿವೆ
ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಶನಿ, ರಾಹು, ಕೇತು ಹಾಗೂ ಚಂದ್ರನ ಸ್ಥಾನವು ಜೀವನದ ಸವಾಲುಗಳನ್ನು ತೀವ್ರಗೊಳಿಸುತ್ತದೆ. ಸೂರ್ಯನು ಕೂಡ ಪರಿಣಾಮಗಳನ್ನು ಬೀರುತ್ತಾನೆ. ಈ 5 ರಾಶಿಯವರಿಗೆ ಅತಿ ಹೆಚ್ಚು ಕಷ್ಟಗಳಿವೆ.

ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನ ಬದಲಾವಣೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ನಿರ್ದಿಷ್ಟ ಸಮಯದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುತ್ತಲೇ ಇರುತ್ತದೆ. ಕೆಲವೊಂದು ರಾಶಿಯವರಿಗೆ ಗ್ರಹಗಳ ಸಂಕ್ರಮಣವು ಅದೃಷ್ಟವನ್ನು ತಂದರೆ ಇನ್ನೂ ಕೆಲವೊಂದು ರಾಶಿಯವರಿಗೆ ಸವಾಲಿನಿಂದ ಕೂಡಿರುತ್ತದೆ. ಅಂದರೆ ಸಾಕಷ್ಟು ಏರಿಳಿತಗಳನ್ನು ಕಾಣುತ್ತಾರೆ. ಜೀವನವು ಎಲ್ಲರಿಗೂ ಸವಾಲುಗಳಿಂದ ಕೂಡಿರುತ್ತದೆ. ಆದರೆ ಕೆಲವು ರಾಶಿಯವರಿಗೆ ಮಾತ್ರ ಕರ್ಮದ ಮಾದರಿಗಳು, ವ್ಯಕ್ತಿತ್ವದ ಲಕ್ಷಣಗಳು ಹಾಗೂ ಗ್ರಹಗಳ ಸ್ಥಾನಗಳಿಂದಾಗಿ ಹೆಚ್ಚು ಕಷ್ಟಪಡುವ ಸಾಧ್ಯತೆಯನ್ನು ಹೊಂದಿರುತ್ತವೆ. ಅಂತಹ ರಾಶಿಯವರ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಶನಿ, ರಾಹು, ಕೇತು ಹಾಗೂ ಚಂದ್ರನ ಸ್ಥಾನವು ಜೀವನದ ಸವಾಲುಗಳನ್ನು ತೀವ್ರಗೊಳಿಸುತ್ತದೆ. ಸೂರ್ಯನು ಕೂಡ ಪರಿಣಾಮಗಳನ್ನು ಬೀರುತ್ತಾನೆ. ಯಾವ ರಾಶಿಯವರು ಅತಿ ಹೆಚ್ಚು ಕಷ್ಟಗಳನ್ನು ಎದುರಿಸುತ್ತಾರೆ ಎಂಬುದುನ್ನ ತಿಳಿಯೋಣ.
ವೃಶ್ಚಿಕ ರಾಶಿ: ಪುನರ್ಜನ್ಮಕ್ಕೆ ಸಂಬಂಧಿಸಿದ ರಾಶಿಯಾಗಿ ವೃಶ್ಚಿಕ ರಾಶಿಯು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ರಾಶಿಯವರು ಸಾಮಾನ್ಯ ಜೀವನದಲ್ಲಿ ಸಾಕಷ್ಟು ಏರಿಳಿತಗಳಿಗೆ ಒಳಗಾಗುತ್ತಾರೆ. ಭಾವನಾತ್ಮಕ ದ್ರೋಹ, ಆರೋಗ್ಯ ಸಮಸ್ಯೆಗಳು ಅಥವಾ ಆರ್ಥಿಕ ಕುಸಿತದಿಂದಾಗಿ ಸಾಕಷ್ಟು ನೋವನ್ನು ಅನುಭವಿಸುತ್ತಾರೆ. ಇವರಿಗೆ ದುಃಖ ಹೊಸದೇನಲ್ಲ. ಆದರೆ ಒಂದಲ್ಲ ಒಂದು ದಿನ ಫಿನಿಕ್ಸ್ ಪಕ್ಷೆಯಿಂದ ಮೇಲೇರುತ್ತಾರೆ. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಾರೆ. ಆ ದಿನಕ್ಕಾಗಿ ತಾಳ್ಮೆಯಿಂದ ಕಾಯುತ್ತಾರೆ.
ಮಕರ ರಾಶಿ: ಈ ರಾಶಿಯನ್ನು ಕರ್ಮ ಮತ್ತು ಶಿಸ್ತಿನ ಗ್ರಹವೆಂದು ಕರೆಯಲಾಗುತ್ತದೆ. ಶನಿಯಿಂದ ನಿಯಂತ್ರಿಸಲ್ಪಡುವ ಮಕರ ರಾಶಿಯವರು ನಿಧಾನ ಹಾಗೂ ಸ್ಥಿರವಾದ ಬೆಳವಣಿಗೆಯನ್ನು ಅನುಭವಿಸುತ್ತಾರೆ. ಆಗಾಗ ಭಾರಿ ಒತ್ತಡವನ್ನು ಅನುಭವಿಸುತ್ತಾರೆ. ಕಠಿಣ ಸವಾಲುಗಳೇ ಇವರ ಮುಂದಿರುತ್ತವೆ. ಆರಂಭಿಕ ಜವಾಬ್ದಾರಿಗಳು ದೊಡ್ಡ ಸವಾಲುಗಳಾಗಿ ಪರಿಣಮಿಸುತ್ತವೆ. ಜೀವನದಲ್ಲಿನ ಹೋರಾಟಗಳು ಅತ್ಯಂತ ಕೆಟ್ಟ ಸ್ಥಿತಿಗೆ ತಳ್ಳುತ್ತದೆ. ಅಂತಿಮವಾಗಿ ಜಯಗಳಿಸುತ್ತೀರಿ. ಸಾಧನೆ ಮಾಡಿದ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುತ್ತೀರಿ.
ಕಟಕ ರಾಶಿ: ಭಾವನಾತ್ಮಕವಾಗಿ ಅರ್ಥಗರ್ಭಿತ ಹಾಗೂ ಆಳವಾಗಿ ಆಯೋಚಿಸುವಂತಹ ರಾಶಿ ಇದು. ನೀವು ತುಂಬಾ ಪ್ರೀತಿಸುವಂತಹ ಜನರಿಂದಲೇ ನೋವು ಅನುಭವಿಸುತ್ತೀರಿ, ಅವರಿದಂಲೇ ನಿಮಗೆ ದೊಡ್ಡ ಪೆಟ್ಟುಗಳಾಗುತ್ತವೆ. ನಿಮ್ಮಲ್ಲಿನ ಸಹಾಯದ ಗುಣ ಕೆಲವೊಮ್ಮೆ ಕೈ ಹಿಡಿಯುವುದಿಲ್ಲ. ನೀವು ಎಷ್ಟೇ ಒಳ್ಳೆಯದು ಮಾಡಿದರೂ ನಿಮಗೆ ಕೆಟ್ಟ ಫಲಿತಾಂಶಗಳೇ ಬರುತ್ತವೆ. ಯಾರಿಗೆ ಏನೇ ನೀಡಿದರೂ ಅದು ಶಾಪವಾಗಿ ವಾಪಸ್ ಬರುತ್ತದೆ. ಸಾಕಷ್ಟು ಪ್ರಕ್ಷುಬ್ಧತೆಯನ್ನು ಎದುರಿಸುತ್ತೀರಿ.
ಮೀನ ರಾಶಿ: ಈ ರಾಶಿಯವರು ಸ್ವಾಭಾವಿಕವಾಗಿ ಸಹಾನುಭೂತಿಯುಳ್ಳವರು ಮತ್ತು ಸ್ವಪ್ನಶೀಲರು ಆಗಿರುತ್ತಾರೆ. ಆದರೆ ಇವರಿಗೆ ಸುತ್ತ ಮುತ್ತಲಿನ ಜನರು ಕೆಟ್ಟದನ್ನೇ ಬಯಸುತ್ತಾರೆ. ಇದರಿಂದ ಸಾಮಾನ್ಯವಾಗಿ ದುಃಖ ಹೆಚ್ಚಾಗುತ್ತದೆ. ನೋವು ಅನುಭವಿಸುತ್ತೀರಿ. ನಿಮ್ಮ ಹೋರಾಟಗಳು ಭಾವನಾತ್ಮಕ ಗೊಂದಲ, ದ್ರೋಹ ಅಥವಾ ತಪ್ಪಾಗಿ ಅರ್ಥೈಸಲಾಗುತ್ತದೆ. ಕನಸುಗಳು ಮತ್ತು ವಾಸ್ತವದ ನಡುವೆ ಕಳೆದುಹೋಗುವ ಅಧ್ಯಾತ್ಮಿಕ ಶಾಂತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ.
ಕನ್ಯಾ ರಾಶಿ: ನೀವು ಪರಿಪೂರ್ಣರಾಗಲು ತಮ್ಮ ಮೇಲೆ ಅಪಾರವಾದ ಒತ್ತಡ ಹೇರಿಕೊಳ್ಳುತ್ತೀರಿ. ಸ್ವಯಂ ಮಾನದಂಡಗಳು ಆಂತಕ ಹಾಗೂ ಅಸಮರ್ಪಕತೆಯ ಭಾವನೆಗಳಿಗೆ ಕಾರಣವಾಗಬಹುದು. ಇತರರಿಗೆ ಸೇವೆ ಸಲ್ಲಿಸುವ ಅಗತ್ಯವು ಇರುತ್ತದೆ. ನೀವು ಸ್ವಂತ ಯೋಗ ಕ್ಷೇಮವನ್ನು ನಿರ್ಲಕ್ಷಿಸುತ್ತೀರಿ. ಬಾಹ್ಯ ಶಾಂತತೆಯ ಹೊರತಾಗಿಯೂ, ಆಂತರಿಕವಾಗಿ ತುಂಬಾ ಕಠಿಣವಾಗಿ ತಮ್ಮನ್ನು ತಾವೇ ಟೀಕಿಸಿಕೊಳ್ಳುತ್ತೀರಿ. ಮಾತನಾಡದರೆ ಮೌನವಾಗಿ ಮನದೊಳಗೆ ನೋವಿನ ಹೋರಾಟವನ್ನು ಮಾಡುತ್ತೀರಿ.