ಸುಲಭ ಪರಿಹಾರದಿಂದ 6 ರಾಶಿಗಳಿಗೆ ಶುಭ; ವಯೋವೃದ್ಧರಿಗೆ ರವೆಯಿಂದ ಮಾಡಿದ ಸಿಹಿ ತಿಂಡಿ ನೀಡಿದರೆ ಆದಾಯದಲ್ಲಿ ಪ್ರಗತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸುಲಭ ಪರಿಹಾರದಿಂದ 6 ರಾಶಿಗಳಿಗೆ ಶುಭ; ವಯೋವೃದ್ಧರಿಗೆ ರವೆಯಿಂದ ಮಾಡಿದ ಸಿಹಿ ತಿಂಡಿ ನೀಡಿದರೆ ಆದಾಯದಲ್ಲಿ ಪ್ರಗತಿ

ಸುಲಭ ಪರಿಹಾರದಿಂದ 6 ರಾಶಿಗಳಿಗೆ ಶುಭ; ವಯೋವೃದ್ಧರಿಗೆ ರವೆಯಿಂದ ಮಾಡಿದ ಸಿಹಿ ತಿಂಡಿ ನೀಡಿದರೆ ಆದಾಯದಲ್ಲಿ ಪ್ರಗತಿ

ಕೆಲವೊಂದು ಸುಲಭ ಪರಿಹಾರಗಳಿಂದ ಮೇಷ, ಕಟಕ, ಸಿಂಹ, ವೃಶ್ಚಿಕ, ಧನಸ್ಸು ಮತ್ತು ಮೀನ ರಾಶಿಯವರು ಕಷ್ಟ ನಷ್ಟಗಳಿಂದ ದೂರವಾಗಬಹುದು. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. (ವರದಿ- ಸತೀಶ್)

ಸುಲಭ ಪರಿಹಾರದಿಂದ 6 ರಾಶಿಗಳಿಗೆ ಶುಭ; ವಯೋವೃದ್ಧರಿಗೆ ರವೆಯಿಂದ ಮಾಡಿದ ಸಿಹಿ ತಿಂಡಿ ನೀಡಿದರೆ ಆದಾಯದಲ್ಲಿ ಪ್ರಗತಿ
ಸುಲಭ ಪರಿಹಾರದಿಂದ 6 ರಾಶಿಗಳಿಗೆ ಶುಭ; ವಯೋವೃದ್ಧರಿಗೆ ರವೆಯಿಂದ ಮಾಡಿದ ಸಿಹಿ ತಿಂಡಿ ನೀಡಿದರೆ ಆದಾಯದಲ್ಲಿ ಪ್ರಗತಿ

ಮೇಷ ರಾಶಿ

ಮೇಷ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಅನಾವಶ್ಯಕವಾದ ಖರ್ಚು ವೆಚ್ಚಗಳು ಆತ್ಮಸ್ಥೈರ್ಯ ಕಡಿಮೆ ಮಾಡುತ್ತದೆ. ಆತುರದಿಂದ ತೆಗೆದುಕೊಳ್ಳುವ ತೀರ್ಮಾನಗಳು ಎಲ್ಲರಲ್ಲಿಯೂ ತಪ್ಪು ಅಭಿಪ್ರಾಯ ಮೂಡಿಸುತ್ತದೆ. ಮಾತಿನ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುವುದಿಲ್ಲ. ಆದಾಯದಲ್ಲಿ ಸ್ಥಿರತೆ ಕಂಡು ಬರುವುದಿಲ್ಲ. ಆದರೆ ಚಿನ್ನದ ಮುಂಭಾಗದ ಬಲಭಾಗದಲ್ಲಿ ಗಣಪತಿಯ ವಿಗ್ರಹ ಅಥವಾ ಭಾವಚಿತ್ರ ಇರಿಸಬೇಕು. ಇದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ. ಪೂಜಾ ಗೃಹದಲ್ಲಿ ಗುರುವಾರದಂದು ತುಪ್ಪದ ದೀಪ ಹಚ್ಚಿವ ಮೂಲಕ ಅನಿರೀಕ್ಷಿತ ಖರ್ಚು ವೆಚ್ಚಗಳಿಂದ ದೂರ ಉಳಿಯಬಹುದು. ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು. ವಿದ್ಯಾರ್ಥಿಗಳು ಕ್ರಮೇಣವಾಗಿ ಕಲಿಕೆಯಲ್ಲಿ ಉನ್ನತಮಟ್ಟ ತಲುಪಲಿದ್ದಾರೆ.

ಕಟಕ ರಾಶಿ

ನೆರೆಹೊರೆಯ ಪುಟ್ಟ ಮಕ್ಕಳಿಗೆ ಕುಡಿಯಲು ಹಾಲನ್ನು ನೀಡುವ ಮೂಲಕ ಉತ್ತಮ ಆರೋಗ್ಯವನ್ನು ಗಳಿಸಬಹುದು. ವಾಯುದೋಷವು ನಿಮ್ಮನ್ನು ಕಾಡಬಹುದು. ಕುಟುಂಬದಲ್ಲಿ ಇರುವ ಅವ್ಯವಸ್ಥೆಯು ಸರಿ ಹೊಂದಲು ದೃಷ್ಟಿದೋಷ ಇರುವವರಿಗೆ ಸಹಾಯ ಮಾಡಿ. ಕತ್ತಿನಲ್ಲಿ ತಾಮ್ರದ ನಾಣ್ಯ ಧರಿಸುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಗಣಪತಿ ದೇವಾಲಯಕ್ಕೆ ಗರಿಕೆ ನೀಡುವ ಮೂಲಕ ನಿಮ್ಮ ಪ್ರಯತ್ನಗಳಿಗೆ ಆತ್ಮೀಯರಿಂದ ಸಹಾಯವನ್ನು ಪಡೆಯಬಹುದು. ವಯೋವೃದ್ಧರಿಗೆ ರವೆಯಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿದರೆ ಆದಾಯದಲ್ಲಿ ಪ್ರಗತಿ ಕಂಡು ಬರುತ್ತದೆ. ಸಹನೆಯಿಂದ ಮತ್ತು ಬುದ್ಧಿವಂತಿಕೆಯಿಂದ ವರ್ತಿಸಿದಷ್ಟು ಒಳ್ಳೆಯದು.

ಸಿಂಹ ರಾಶಿ

ಕುಟುಂಬದ ಕೆಲಸ ಕಾರ್ಯಗಳು ಸರಿಯಾದ ಮಾರ್ಗದಲ್ಲಿ ನಡೆಯುವುದಿಲ್ಲ. ಕುಟುಂಬದಲ್ಲಿ ಪರಸ್ಪರ ಒಮ್ಮತ ಕಂಡು ಬರುವುದಿಲ್ಲ. ಸಣ್ಣಪುಟ್ಟ ಖರ್ಚು ವೆಚ್ಚಗಳು ಸದಾ ಇರುತ್ತದೆ. ಆದರೆ ಬೇರೆಯವರ ಮನೆಯ ಸಾಕು ಪ್ರಾಣಿಗಳಿಗೆ ಆಹಾರ ನೀಡಿದರೆ ಮೇಲಿನ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಆಂಜನೇಯನ ಪೂಜೆಯಿಂದ ಸೋದರರ ಅಥವಾ ಸೋದರಿಯರ ನಡುವೆ ಇರುವ ಮನಸ್ತಾಪವು ದೂರವಾಗುತ್ತದೆ. ನಿಮ್ಮ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವ ಜನರು ಸುತ್ತ ಮುತ್ತಲು ಇರುತ್ತಾರೆ. ಆದ್ದರಿಂದ ಮುಖ್ಯವಾಗಿ ಹಣಕಾಸಿನ ವಿಚಾರವನ್ನು ರಹಸ್ಯವನ್ನಾಗಿ ಇಡುವುದು ಒಳ್ಳೆಯದು. ನಿಮ್ಮ ಯೋಜನೆಗಳನ್ನು ಏಕಾಂಗಿಯಾಗಿ ನಿರ್ವಹಿಸಲು ಪ್ರಯತ್ನಿಸಿ.

ವೃಶ್ಚಿಕ ರಾಶಿ

ನಿಮ್ಮ ಪ್ರತಿಯೊಂದು ಜವಾಬ್ದಾರಿಗಳನ್ನು ಆತ್ಮೀಯರ ಸಹಾಯದಿಂದ ಪೂರೈಸುವಿರಿ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತವೆ. ಕಷ್ಟದಲ್ಲಿದಲ್ಲಿ ಇರುವ ಜನರಿಗೆ ಸಹಾಯ ಮಾಡಿದರೆ ಕುಟುಂಬದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಉಂಟಾಗುತ್ತದೆ. ಬೆಳ್ಳಿ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದರೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವು ಹೆಚ್ಚಿರುತ್ತದೆ. ಆದಾಯದಲ್ಲಿ ಏರಿಳಿತ ಕಂಡುಬರುತ್ತದೆ. ಮನೆಯ ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿ ಇಟ್ಟಲ್ಲಿ ಖರ್ಚು ವೆಚ್ಚಗಳು ಕಡಿಮೆ ಆಗುತ್ತವೆ. ಆರೋಗ್ಯದ ತೊಂದರೆ ದೂರವಾಗುತ್ತದೆ. ತಾವಾಗಿಯೇ ಸಹಾಯ ಮಾಡಲು ಬರುವರನ್ನು ಪ್ರೀತಿ ವಿಶ್ವಾಸದಿಂದ ನೋಡಿರಿ. ಮುಂಗೋಪದ ಗುಣವು ವಿವಾದವನ್ನು ಉಂಟುಮಾಡಬಹುದು.

ಧನಸ್ಸು ರಾಶಿ

ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಗೆ ತಕ್ಕಂತಹ ಅವಕಾಶವು ದೊರೆಯುವುದಿಲ್ಲ. ಇದರಿಂದಾಗಿ ಮಾನಸಿಕ ಒತ್ತಡ ಹೆಚ್ಚುತ್ತದೆ. ಧಾರ್ಮಿಕ ಕೇಂದ್ರಕ್ಕೆ ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣದ ನೆಲ ಹಾಸು ನೀಡುವುದರಿಂದ ಉದ್ಯೋಗದಲ್ಲಿನ ಸಮಸ್ಯೆಯು ದೂರವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕಪ್ಪು ನಾಯಿಗೆ ಆಹಾರ ನೀಡುವುದರಿಂದ ಕುಟುಂಬದಲ್ಲಿ ಸಹಕಾರದ ಮನೋಭಾವನೆ ಇರುತ್ತದೆ. ಇದರಿಂದಾಗಿ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನ ಬದಲಿಸದೆ ಇರುವುದು ಒಳ್ಳೆಯದು.

ಮೀನ ರಾಶಿ

ಯಾವುದೇ ವಿಚಾರದಲ್ಲಿ ದಿಟ್ಟತನದ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ. ನಿಮ್ಮ ಮನಸ್ಸಿನಲ್ಲಿ ಭಯವಿರುತ್ತದೆ. ದೊರೆವ ಉತ್ತಮ ಅವಕಾಶಗಳನ್ನು ಆಯ್ಕೆ ಮಾಡುವಲ್ಲಿ ವಿಫಲರಾಗುವಿರಿ. ಕತ್ತಿನಲ್ಲಿ ಬೆಳ್ಳಿಯ ಡಾಲರ್ ಧರಿಸಿದಲ್ಲಿ ಆತ್ಮೀಯರ ಸಹಾಯ ಸಹಕಾರ ದೊರೆಯುತ್ತದೆ. ಆತ್ಮವಿಶ್ವಾಸವು ಹೆಚ್ಚುವುದಲ್ಲದೆ ಅವಕಾಶಗಳನ್ನು ಬಳಸಿಕೊಳ್ಳುವಿರಿ. ಅನಾವಶ್ಯಕ ಖರ್ಚುವೆಚ್ಚಗಳು ಕಂಡುಬರುತ್ತವೆ. ಆದರೆ ನೀವು ಬಳಸುವ ವಾಹನವನ್ನು ಶುಚಿಯಾಗಿ ಇಟ್ಟುಕೊಂಡಲ್ಲಿ ಶುಭ ಫಲಗಳು ದೊರೆಯುತ್ತವೆ. ಮನೆಗೆ ಆಗಮಿಸುವ ಬಂಧು ಬಳಗದವರಿಗೆ ನಿಂಬೆಹಣ್ಣಿನಿಂದ ಮಾಡುವ ಆಹಾರವನ್ನು ನೀಡಿದರೆ ಹಣಕಾಸಿನ ಸಹಾಯವು ದೊರೆಯುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.