ಈ ರಾಶಿಯವರು ಸುಲಭವಾಗಿ ಬೇರೆಯವ ಮನಸ್ಸು ಕದಿಯುತ್ತಾರೆ; ಭಾವನಾತ್ಮಕವಾಗಿ ತುಂಬಾ ಹತ್ತಿರಾಗುವವರು ಇವರೇ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಯವರು ಸುಲಭವಾಗಿ ಬೇರೆಯವ ಮನಸ್ಸು ಕದಿಯುತ್ತಾರೆ; ಭಾವನಾತ್ಮಕವಾಗಿ ತುಂಬಾ ಹತ್ತಿರಾಗುವವರು ಇವರೇ

ಈ ರಾಶಿಯವರು ಸುಲಭವಾಗಿ ಬೇರೆಯವ ಮನಸ್ಸು ಕದಿಯುತ್ತಾರೆ; ಭಾವನಾತ್ಮಕವಾಗಿ ತುಂಬಾ ಹತ್ತಿರಾಗುವವರು ಇವರೇ

Love Horoscope: ಕೆಲವು ರಾಶಿಯವರು ಇತರರನ್ನು ಸುಲಭವಾಗಿ ಮೆಚ್ಚಿಸುತ್ತಾರೆ. ಅಷ್ಟೇ ಅಲ್ಲ ಇತರರ ಹೃದಯದಲ್ಲಿ ಬೇಗ ಸ್ಥಾನ ಪಡೆಯುತ್ತಾರೆ. ಆ ಅದೃಷ್ಟವಂತ ರಾಶಿಯವರಲ್ಲಿ ನೀವು ಇದ್ದೀರಾ ನೋಡಿ.

ಈ ರಾಶಿಯವರ ಸುಲಭವಾಗಿ ಬೇರೆಯವರ ಮನಸ್ಸು ಕದಿಯುತ್ತಾರೆ. ಅವರ ಹೃದಯದಲ್ಲಿ ಸ್ಥಾನ ಪಡೆಯುತ್ತಾರೆ.
ಈ ರಾಶಿಯವರ ಸುಲಭವಾಗಿ ಬೇರೆಯವರ ಮನಸ್ಸು ಕದಿಯುತ್ತಾರೆ. ಅವರ ಹೃದಯದಲ್ಲಿ ಸ್ಥಾನ ಪಡೆಯುತ್ತಾರೆ. (pinterest)

ರಾಶಿಚತ್ರ ಚಿಹ್ನೆಗಳ ಆಧಾರದ ಮೇಲೆ ಭವಿಷ್ಯದ ಬಗ್ಗೆ ಮಾತ್ರವಲ್ಲದೆ, ಒಬ್ಬ ವ್ಯಕ್ತಿಯು ಹೇಗೆ ವರ್ತಿಸುತ್ತಾನೆ ಎಂಬುದರ ಬಗ್ಗೆಯೂ ತಿಳಿಯಬಹುದು. ಕೆಲವೊಂದು ರಾಶಿಯವರು ಇತರರನ್ನು ಸುಲಭವಾಗಿ ಮೆಚ್ಚಿಸುತ್ತಾರೆ. ತುಂಬಾ ಬೇಗ ಬೇರೆಯವರ ಹೃದಯದಲ್ಲಿ ಸ್ಥಾನ ಪಡೆಯುತ್ತಾರೆ. ನಿಮ್ಮ ರಾಶಿಚಕ್ರ ಚಿಹ್ನೆಯೂ ಈ ಚಿಹ್ನೆಗಳ ಪಟ್ಟಿಯಲ್ಲಿದೆಯೇ ಎಂದು ನೋಡೋಣ.

1. ಮೀನ ರಾಶಿ

ಈ ರಾಶಿಯವರು ತುಂಬಾ ಭಾವನಾತ್ಮಕವಾಗಿ ಬೇಗ ಹತ್ತಿರವಾಗುತ್ತಾರೆ. ಸಹಾನುಭೂತಿ ಹಾಗೂ ಇತರರಿಗೆ ದಯೆ ತೋರಿಸುತ್ತಾರೆ. ಬೇರೆಯವರನ್ನು ಸುಲಭವಾಗಿ ಮೆಚ್ಚಿಸುವುದು ಹೇಗೆಂದು ತಿಳಿದುಕೊಂಡಿರುತ್ತಾರೆ. ಇತರರ ಹೃದಯದಲ್ಲಿ ಸುಲಭವಾಗಿ ಸ್ಥಾನ ಪಡೆಯುತ್ತಾರೆ.

2. ತುಲಾ ರಾಶಿ

ತುಲಾ ರಾಶಿಯವರು ಬೇರೆಯವರನ್ನು ಮೆಚ್ಚಿಸಲು ಸಮರ್ಥರಾಗಿದ್ದಾರೆ. ಇವರು ಮಾತನಾಡುವ ರೀತಿಯಿಂದ ಪ್ರಭಾವಿತರಾಗುತ್ತಾರೆ. ತಮ್ಮ ಸಂಬಂಧದಲ್ಲಿ ಸಮತೋಲನವನ್ನು ಹೊಂದಿರುತ್ತಾರೆ. ಇತರರೊಂದಿಗೆ ಉತ್ತಮ ಸಂಪರ್ಕ ಹೊಂದಿರುತ್ತಾರೆ. ಈ ಎಲ್ಲಾ ಕಾರಣಗಳಿಂದ ಬೇರೆಯವರಿಗೆ ತುಂಬಾ ಕನೆಕ್ಟ್ ಆಗುತ್ತಾರೆ.

3. ಸಿಂಹ ರಾಶಿ

ಸಿಂಹ ರಾಶಿಯವರು ತುಂಬಾ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಇವರಿಗೆ ಇತರರನ್ನು ಸುಲಭವಾಗಿ ಮೆಚ್ಚಿಸಲು ಸಾಧ್ಯವಾಗುತ್ತದೆ. ಬೇರೆಯವರ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗುತ್ತಾರೆ. ತುಂಬಾ ಸಂತೋಷವಾಗಿರುತ್ತಾರೆ, ಜೊತೆಗೆ ಇತರರು ಸಂತೋಷವಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಇವರ ಈ ಸ್ವಭಾವ ಎಲ್ಲರಿಗೂ ಇಷ್ಟವಾಗುತ್ತದೆ.

4. ಕಟಕ ರಾಶಿ

ಈ ರಾಶಿಯವರು ತಮ್ಮವರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇದರಿಂದ ಇತರರು ಇವರನ್ನು ಪ್ರೀತಿಸುತ್ತಾರೆ. ಭಾವನಾತ್ಮಕವಾಗಿರುತ್ತಾರೆ. ಇತರರ ಹೃದಯಗಳನ್ನು ಸುಲಭವಾಗಿ ಕದಿಯುತ್ತಾರೆ. ಪ್ರೀತಿಯ ವಿಚಾರದಲ್ಲಿ ಇವರನ್ನು ನಂಬಿಕೆಯ ವ್ಯಕ್ತಿಗಳಾಗಿರುತ್ತಾರೆ.

5. ಮಿಥುನ ರಾಶಿ

ಈ ರಾಶಿಯವರು ಇತರರೊಂದಿಗೆ ತುಂಬಾ ಮನರಂಜನೆ ನೀಡುತ್ತಾರೆ. ಇದು ಎಲ್ಲರಿಗೂ ಇಷ್ಟವಾಗುತ್ತದೆ. ಹೀಗಾಗಿ ಇವರೊಂದಿಗೆ ತುಂಬಾ ಜನರು ಸಂಪರ್ಕ ಹೊಂದುತ್ತಾರೆ. ಮಿಥುನ ರಾಶಿಯವರು ಸಮಸ್ಯೆ, ಸವಾಲುಗಳ ನಡುವೆ ಸಂತೋಷವಾಗಿರುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.