ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬ್ರೇಕ್‌ಅಪ್‌ಗೆ ಸಿಲುಕಿ ನೋವು ಅನುಭವಿಸುವ ರಾಶಿಗಳಿವು; ನಿಮ್ಮದು ಸೂಕ್ಷ್ಮ ಮನಸ್ಸು ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ

ಬ್ರೇಕ್‌ಅಪ್‌ಗೆ ಸಿಲುಕಿ ನೋವು ಅನುಭವಿಸುವ ರಾಶಿಗಳಿವು; ನಿಮ್ಮದು ಸೂಕ್ಷ್ಮ ಮನಸ್ಸು ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ

ಯಾರಿಗೇ ಆದರೂ ಬ್ರೇಕ್‌ಅಪ್‌ ಬಹಳಷ್ಟು ನೋವು ನೀಡುತ್ತದೆ. ಅದರಲ್ಲೂ ಕೆಲವು ರಾಶಿಯವರಿಗೆ ಈ ಅನುಭವ ಪದೇ ಪದೇ ಆಗುತ್ತಿರುತ್ತದೆ. ಇದಕ್ಕೆ ಕಾರಣ ಅವರ ಜನ್ಮ ರಾಶಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. (ಬರಹ: ಅರ್ಚನಾ ವಿ ಭಟ್‌)

ಬ್ರೇಕ್‌ಅಪ್‌ಗೆ ಸಿಲುಕಿ ನೋವು ಅನುಭವಿಸುವ ರಾಶಿಗಳಿವು; ನಿಮ್ಮದು ಸೂಕ್ಷ್ಮ ಮನಸ್ಸು ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ
ಬ್ರೇಕ್‌ಅಪ್‌ಗೆ ಸಿಲುಕಿ ನೋವು ಅನುಭವಿಸುವ ರಾಶಿಗಳಿವು; ನಿಮ್ಮದು ಸೂಕ್ಷ್ಮ ಮನಸ್ಸು ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ (PC: Unsplash)

ಕೆಲವರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಎಲ್ಲಾ ವಿಷಯಗಳಿಗೂ ಬಹಳಷ್ಟು ನೊಂದುಕೊಳ್ಳುತ್ತಾರೆ. ಅದರಲ್ಲೂ ಪ್ರೀತಿ–ಪ್ರೇಮದ ವಿಷಯದಲ್ಲಿ ಹೆಚ್ಚು ಆಘಾತಗಳನ್ನು ಅನುಭವಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರ ಜೀವನದಲ್ಲಿ ಇತರರಿಗಿಂತ ಹೆಚ್ಚು ಬ್ರೇಕ್‌ಅಪ್‌ಗಳಾಗಿರುತ್ತವೆ. ಅದರಿಂದ ಬಹಳಷ್ಟು ದುಃಖ ಪಡುತ್ತಾರೆ. ಛಿದ್ರಗೊಂಡ ತಮ್ಮ ಹೃದಯವನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಿಮಗೂ ಇದೇ ರೀತಿಯ ಅನುಭವಾಗಿದ್ದರೆ ನಿಮ್ಮ ರಾಶಿಯೂ ಸಹ ಈ ರಾಶಿಗಳಲ್ಲಿ ಒಂದಾಗಿರಬಹುದು. ಹೆಚ್ಚು ಬ್ರೇಕ್‌ಅಪ್‌ ಸಿಲುಕಿ ನೋವನ್ನು ಅನುಭವಿಸುವ ರಾಶಿಗಳು ಯಾವವು? ಇಲ್ಲಿದೆ ಓದಿ.

ಮೇಷ ರಾಶಿ

ಈ ರಾಶಿಯವರು ಬಹಳ ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ. ವೈಯಕ್ತಿಕವಾಗಿ ಎಲ್ಲವನ್ನೂ ಚೆನ್ನಾಗಿ ತಿಳಿಯುವ ಮೊದಲೇ ಅವರ ಮನಸೋತಿರುತ್ತಾರೆ. ತಮ್ಮದು ಆದರ್ಶ ಜೋಡಿ ಅಂದುಕೊಳ್ಳುತ್ತಾರೆ. ಆದರೆ ಅದು ನಿಜವಲ್ಲ ಎಂದು ತಿಳಿದಾಗ ಅವರ ಪ್ರೀತಿ ಮುರಿದುಬೀಳುತ್ತದೆ. ಹಾಗಾಗಿ ಈ ರಾಶಿಯವರು ಹೆಚ್ಚು ಆಘಾತಕ್ಕೆ ಒಳಗಾಗುತ್ತಾರೆ. ಇವರ ಭಾವನೆ ಸಾಕಷ್ಟು ಆಳವಾಗಿರುವಾಗ ಸುಲಭವಾಗಿ ಅದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ.

ಕಟಕ ರಾಶಿ

ಈ ರಾಶಿಯವರು ಬಹಳ ಸೂಕ್ಷ್ಮ ಮನಸಿನವರು. ಆಳವಾಗಿ ಪ್ರೀತಿಸುವ ಇವರು ಆಗಾಗ ಬಹಳ ನೋವನ್ನು ಅನುಭವಿಸುತ್ತಾರೆ. ಅತಿಯಾಗಿ ಪ್ರೀತಿಸುವ ಮತ್ತು ಕಾಳಜಿ ಮನೋಭಾವದ ಇವರು ತಮ್ಮ ಸಂಗಾತಿಗಳಿಂದ ಅದನ್ನೇ ನಿರೀಕ್ಷಿಸುತ್ತಾರೆ. ಹಾಗೆ ಆಗದೆ ಇದ್ದಾಗ ಇವರು ಆಘಾತಕ್ಕೆ ಒಳಗಾಗುತ್ತಾರೆ ಮತ್ತು ತೀವ್ರ ನೋವು ಅನುಭವಿಸುತ್ತಾರೆ. ಇವರು ಸಂಬಂಧದಲ್ಲಿ ಹೆಚ್ಚು ನಂಬಿಕೆ ಇರಿಸಿಕೊಂಡಿರುತ್ತಾರೆ. ಇವರ ಭಾವನೆಗಳಿಗೆ ಬೆಲೆ ಸಿಗದಿದ್ದಾಗ ಸೂಕ್ಷ್ಮ ಹೃದಯಿಗಳಾದ ಈ ರಾಶಿಯವರು ತೀವ್ರ ನೋವು ಅನುಭವಿಸುತ್ತಾರೆ.

ತುಲಾ ರಾಶಿ

ಈ ರಾಶಿಯವರು ಸಾಮರಸ್ಯ ಮತ್ತು ಸಮತೋಲನವನ್ನು ಬಯಸುವವರು. ಇವರು ತಮ್ಮ ಸಂಬಂಧದಲ್ಲೂ ಅದನ್ನೇ ಬಯಸುತ್ತಾರೆ. ತಮ್ಮ ಸಂಗಾತಿಯಿಂದಲೂ ಅದನ್ನೇ ನೀರೀಕ್ಷಿಸುತ್ತಾರೆ. ಆದರೆ ಅವರು ಅಂದುಕೊಂಡರೆ ಆಗದಿದ್ದಾಗ ನೋವು ಅನುಭವಿಸುತ್ತಾರೆ. ಮೌನಕ್ಕೆ ಜಾರುವುದರಿಂದ ಸಮಸ್ಯೆಗಳು ಬಗೆಹರಿಯದೇ ಮತ್ತಷ್ಟು ನೋವು ಅನುಭವಿಸುತ್ತಾರೆ. ಅಂತಿಮವಾಗಿ ದುಃಖಕ್ಕೂ ಕಾರಣವಾಗಬಹುದು. ಹಾಗಾಗಿ ತುಲಾ ರಾಶಿಯವರು ಪ್ರೀತಿಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿಯಬೇಕು.

ವೃಶ್ಚಿಕ ರಾಶಿ

ಈ ರಾಶಿಯವರು ಭಾವಜೀವಿಗಳು ಮತ್ತು ಅಷ್ಟೇ ಸೂಕ್ಷ್ಮ ಮನಸಿನವರು. ಇವರು ಬಹಳ ಆಳವಾಗಿ ಪ್ರೀತಿಸುವ ಗುಣದವರು. ಸೂಕ್ಷ್ಮ ಮನಸಿನ ಇವರು ಪ್ರೀತಿಯ ವಿಷಯದಲ್ಲಿ ಆಗಾಗ ತೀವ್ರ ಆಘಾತಕ್ಕೆ ಒಳಪಡುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯೊಂದಿಗೆ ನಿಷ್ಠಾವಂತರಾಗಿರುತ್ತಾರೆ. ಅದನ್ನು ಅವರಿಂದಲೂ ಬಯಸುತ್ತಾರೆ. ಅವರ ವಿಶ್ವಾಸಕ್ಕೆ ಧಕ್ಕೆಯಾದಾಗ ಹೆಚ್ಚಿನ ನೋವು ಅನುಭವಿಸುತ್ತಾರೆ. ಸಂಗಾತಿಯಿಂದ ಬೇರ್ಪಟ್ಟಾಗ ಹೆಚ್ಚು ದುಃಖ ಪಡುತ್ತಾರೆ.

ಮೀನ ರಾಶಿ

ನೆರಳು ಗ್ರಹವಾದ ರಾಹುವಿನಿಂದ ಮೀನ ರಾಶಿಯು ಆಳಲ್ಪಡುತ್ತದೆ. ಇದು ಕನಸು ಕಾಣುವ ಮತ್ತು ರೊಮ್ಯಾಂಟಿಕ್‌ ಗುಣಗಳಿಗೆ ಹೆಸರುವಾಸಿಯಾಗಿದೆ. ಈ ರಾಶಿಯವರು ಯಾರನ್ನೇ ಆದರೂ ಬಹಳ ಆಳವಾಗಿ ಪ್ರೀತಿಸುವ ಗುಣ ಹೊಂದಿರುತ್ತಾರೆ. ಹಾಗಾಗಿ ಇವರ ಕನಸು ಕಾಣುತ್ತಾ ಅದರಂತೆ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ವಾಸ್ತವದಲ್ಲಿ ಆ ಕನಸು ನನಸಾಗದೇ ಇದ್ದಾಗ ಅವರ ಮನಸ್ಸಿಗೆ ಬಹಳಷ್ಟು ಆಘಾತವಾಗುತ್ತದೆ. ಮೀನ ರಾಶಿಯವರು ತಮ್ಮ ಪ್ರೇಮಿಗಳ ಮೇಲೆ ಹೆಚ್ಚು ಒಲವು ತೋರಿಸುತ್ತಾರೆ. ಇಬ್ಬರ ನಡುವೆ ಅಸಮತೋಲನವುಂಟಾದಾಗ ತೀವ್ರವಾಗಿ ನೋವು ಅನುಭವಿಸುತ್ತಾರೆ. ಹಾಗಾಗಿ ಈ ರಾಶಿಯವರು ಪ್ರೀತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಭಾವನಾತ್ಮಕವಾಗಿ ಯೋಚಿಸುವುದರ ಜೊತೆಗೆ ಪ್ರಾಕ್ಟಿಕಲ್‌ ಆಗಿಯೂ ಯೋಚಿಸುವುದನ್ನು ಕಲಿಯಬೇಕಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಬರಹ: ಅರ್ಚನಾ ವಿ ಭಟ್‌)

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.