ಈ ಬೆರಳಿಗೆ ಚಿನ್ನದ ಉಂಗುರ ಧರಿಸಲೇಬೇಡಿ, ತಪ್ಪಿದಲ್ಲಿ ನಿಮ್ಮ ಜೀವನದಲ್ಲಿ ಶನಿದೇವನ ಪ್ರಭಾವ ಹೆಚ್ಚಿದಂತೆ, ಯಾವ ಬೆರಳಿಗೆ ಉಂಗುರ ಧರಿಸಬೇಕು?
ಬೆರಳಿಗೆ ಚಿನ್ನದ ಉಂಗುರ ಧರಿಸಿದರೆ ಬಹಳ ಒಳ್ಳೆಯದು. ಜಾತಕದಲ್ಲಿ ಗುರುವಿನ ಬಲ ಹೆಚ್ಚಿದಂತೆ. ಆದರೆ ನೀವು ಯಾವ ಬೆರಳಿಗೆ ಉಂಗುರ ಹಾಕಬೇಕು ಎಂಬುದನ್ನು ಗಮನದಲ್ಲಿಡಬೇಕು. ಏಕೆಂದರೆ ಮಧ್ಯದ ಬೆರಳಿಗೆ ಉಂಗುರ ಹಾಕಿದರೆ ಅದು ನಿಮ್ಮ ಜೀವನದಲ್ಲಿ ಶನಿಯ ಪ್ರಭಾವವನ್ನು ಹೆಚ್ಚಿಸಿದಂತೆ ಆಗುತ್ತದೆ.
ಚಿನ್ನ ಎಂದರೆ ಯಾರಿಗೇ ತಾನೇ ಇಷ್ಟವಿಲ್ಲ? ನಮ್ಮ ಬಳಿ ಒಂದಾದರೂ ಚಿನ್ನದ ಆಭರಣ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕಡೆ ಪಕ್ಷ ನಮ್ಮ ಕೈಯಲ್ಲಿ ಚಿನ್ನದ ಉಂಗುರವಾದರೂ ಇರಬೇಕು ಎಂದು ಕೆಲವರು ಇಷ್ಟಪಡುತ್ತಾರೆ. ವಜ್ರ, ಮುತ್ತು, ಹವಳದಂತಹ ಉಂಗುರಗಳನ್ನು ಧರಿಸುವ ಮೊದಲು, ಅವುಗಳನ್ನು ಧರಿಸಬಹುದೇ ಎಂದು ಜ್ಯೋತಿಷಿಯನ್ನು ಕೇಳುತ್ತಾರೆ. ಆದರೆ ಚಿನ್ನವನ್ನು ಎಲ್ಲರೂ ಧರಿಸುತ್ತಾರೆ. ಅದಕ್ಕೆ ಯಾವುದೇ ನೀತಿ ನಿಯಮಗಳಿಲ್ಲ.
ಚಿನ್ನದ ಉಂಗುರ ಹಾಕಿಕೊಳ್ಳುವ ಖುಷಿಯಲ್ಲಿ ಕೆಲವರು ಯಾವ ಬೆರಳಿಗೆ ಉಂಗುರು ಹಾಕಬೇಕು ಎನ್ನುವುದನ್ನು ಮರೆಯುತ್ತಾರೆ. ಆದರೆ ನೀವು ಉಂಗುರ ಹಾಕಿಕೊಳ್ಳುವ ಬೆರಳಿಗೂ ನಿಮ್ಮ ಜೀವನಕ್ಕೂ ಸಂಬಂಧ ಇದೆ ಎಂದರೆ ನಂಬುತ್ತೀರಾ?? ಚಿನ್ನದ ಉಂಗುರವು ನಿಮ್ಮ ಜೀವನದಲ್ಲಿ ಶಕ್ತಿಯ ಹರಿವಿನ ಮೇಲೆ ಪ್ರಭಾವ ಬೀರುತ್ತದೆ. ಇದು ಕೆಲವೇ ಜನರಿಗಷ್ಟೇ ತಿಳಿದಿದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಚಿನ್ನದ ಉಂಗುರವನ್ನು ಧರಿಸುವ ಮೊದಲು ಯಾವ ಬೆರಳಿಗೆ ಧರಿಸಬೇಕು ಎಂಬುದನ್ನು ತಿಳಿದಿರಬೇಕು.
ಈ ಬೆರಳಿಗೆ ಚಿನ್ನದ ಉಂಗುರವನ್ನು ಹಾಕಬೇಡಿ
ಶನಿಯು ನಮ್ಮ ಜೀವನದಲ್ಲಿ ಶಿಸ್ತು, ರಚನೆ, ಕರ್ಮದ ಅಧಿಪತಿ. ಶನಿಗೆ ಶಕ್ತಿಯೂ ಮುಖ್ಯ. ಚಿನ್ನವು ಸೂರ್ಯನೊಂದಿಗೆ ಸಂಬಂಧ ಹೊಂದಿದೆ. ಇದು ಶಕ್ತಿ, ಸಂಪತ್ತು, ಯಶಸ್ಸನ್ನು ಪ್ರತಿನಿಧಿಸುತ್ತದೆ. ಸೂರ್ಯನು ಶಾಖ, ಶಕ್ತಿ ಮತ್ತು ಉತ್ಸಾಹದ ಸಂಕೇತವಾಗಿದೆ. ನಮ್ಮಲ್ಲಿರುವ ಐದು ಬೆರಳುಗಳಲ್ಲಿ, ಮಧ್ಯದ ಬೆರಳು ಶನಿಯೊಂದಿಗೆ ಸಂಬಂಧಿಸಿದೆ . ನೀವು ನಿಮ್ಮ ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಿದಾಗ, ಶನಿಯ ಶಕ್ತಿಯು ಹೆಚ್ಚಾಗುತ್ತದೆ. ಚಿನ್ನದಿಂದ ಉಂಟಾಗುವ ಸೂರ್ಯನ ಶಕ್ತಿ ಮತ್ತು ಮಧ್ಯದ ಬೆರಳಿನಲ್ಲಿ ಶನಿ ಶಕ್ತಿ ಒಟ್ಟಿಗೆ ಸಂಘರ್ಷದ ವಾತಾವರಣ ಉಂಟಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬಾರದು.
ಚಿನ್ನದ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು?
ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದು ನಿಮ್ಮ ಜೀವನದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಜವಾಬ್ದಾರಿಗಳನ್ನು ಪೂರೈಸಬೇಕು. ನೀವು ಸಂಘರ್ಷದ ಜೀವನದಲ್ಲಿ ಸಿಲುಕಿಕೊಳ್ಳುತ್ತೀರಿ. ನಿಮ್ಮ ಹಣಕಾಸಿನ ಬೆಳವಣಿಗೆಯೂ ನಿಧಾನವಾಗುತ್ತದೆ. ಆದ್ದರಿಂದ ಮಧ್ಯದ ಬೆರಳಿನ ಬದಲಿಗೆ ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬೇಕು. ಚಿನ್ನವು ಗುರುಗ್ರಹದೊಂದಿಗೆ ಸಹ ಸಂಬಂಧಿಸಿದೆ. ಆದ್ದರಿಂದ ಹಾಗಾಗಿ ಚಿನ್ನದ ಉಂಗುರವನ್ನು ಧರಿಸಿದ ನಂತರ ಮದ್ಯ ಅಥವಾ ಮಾಂಸಾಹಾರ ಸೇವಿಸಬಾರದು. ನೀವು ನಾನ್ ವೆಜ್ ತಿನ್ನಬೇಕಾದರೆ ಉಂಗುರ ತೆಗೆದು ತಿನ್ನಬೇಕು.
ಚಿನ್ನದ ಉಂಗುರ ಧರಿಸುವುದರಿಂದ ಅನೇಕ ಉಪಯೋಗಗಳಿವೆ. ಇವು ನಿಮ್ಮಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುತ್ತವೆ. ಸೂರ್ಯನ ಶಕ್ತಿಯನ್ನು ದೇಹಕ್ಕೆ ಪ್ರವಹಿಸುತ್ತದೆ ಚಿನ್ನದ ಉಂಗುರ ಧರಿಸುವುದರಿಂದ ಜೀವನದಲ್ಲಿ ಹೊಸ ಅವಕಾಶಗಳು ಬರುತ್ತವೆ. ಆರ್ಥಿಕ ಬೆಳವಣಿಗೆ ಇರುತ್ತದೆ. ಇದು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಜಾತಕದಲ್ಲಿ ಗುರು ದೌರ್ಬಲ್ಯವಿರುವವರು ಚಿನ್ನದ ಉಂಗುರವನ್ನು ಧರಿಸುವುದರಿಂದ ಬಲಶಾಲಿಯಾಗಬಹುದು. ನಿಮ್ಮಲ್ಲಿ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುವ ಗುಣವೂ ಚಿನ್ನಕ್ಕಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.