ವೃಶ್ಚಿಕ ರಾಶಿ ಭವಿಷ್ಯ ಆಗಸ್ಟ್ 19: ಕೆಲವರಿಗೆ ಇಂದು ಗಂಭೀರ ಕೌಂಟುಂಬಿಕ ಸಮಸ್ಯೆ ಉದ್ಭವಿಸಲಿದೆ, ಗಂಟಲು ನೋವು ಉಸಿರಾಟದ ಸಮಸ್ಯೆ ಕಾಡಬಹುದು
Scorpio Daily Horoscope 19 August 2024: ರಾಶಿಚಕ್ರದಲ್ಲಿ ಇದು 8ನೇ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ವೃಶ್ಚಿಕ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ವೃಶ್ಚಿಕ. ಇಂದಿನ ತುಲಾ ರಾಶಿಯವರ ದಿನ ಭವಿಷ್ಯ ಹೇಗಿದೆ ನೋಡೋಣ.
ವೃಶ್ಚಿಕ ರಾಶಿ ಭವಿಷ್ಯ ಆಗಸ್ಟ್ 19: ಇಂದು ಪ್ರಣಯ ಜೀವನದಲ್ಲಿ ಹೊಸ ಬದಲಾವಣೆಗಳಾಗಲಿವೆ. ಶಿಸ್ತು ಮತ್ತು ಬದ್ಧತೆಯು ವೃತ್ತಿಪರ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಪ್ರತಿಯೊಂದು ಕಾರ್ಯದಲ್ಲೂ ನೀವು ಅಪಾರ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ವೃಶ್ಚಿಕ ರಾಶಿಯ ವಿವರವಾದ ಜಾತಕವನ್ನು ತಿಳಿಯೋಣ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ವೃಶ್ಚಿಕ ರಾಶಿಯ ಪ್ರೇಮ ಭವಿಷ್ಯ (Scorpio love relation)
ನಿಮ್ಮ ಸಂಗಾತಿಯ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ನಿರೀಕ್ಷಿಸಬೇಡಿ. ಪರಸ್ಪರ ಬೆಂಬಲಿಸಿ. ಹಿಂದಿನ ವಿಚಾರಗಳಿಗೆ ಆದ್ಯತೆ ನೀಡಬೇಡಿ. ಇಂದು ಕೆಲವರ ಪ್ರೀತಿ ಮದುವೆಯ ಹಂತ ತಲುಪಬಹುದು. ಪೋಷಕರು ನಿಮ್ಮ ಸಂಬಂಧಕ್ಕೆ ಒಪ್ಪಿಗೆ ನೀಡಲಿದ್ದಾರೆ. ವೃಶ್ಚಿಕ ರಾಶಿಯ ಒಂಟಿ ಜನರು ತಮ್ಮ ಭಾವನೆಗಳನ್ನು ತಮ್ಮ ಪ್ರೀತಿಯೊಂದಿಗೆ ಹಂಚಿಕೊಳ್ಳಬಹುದು, ಇಂದು ನೀವು ಸಕಾರಾತ್ಮಕ ಉತ್ತರವನ್ನು ಪಡೆಯುತ್ತೀರಿ. ವಿವಾಹಿತ ಸ್ತ್ರೀಯರು ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು.
ವೃಶ್ಚಿಕ ವೃತ್ತಿ ಭವಿಷ್ಯ (Scorpio Professional Horoscope)
ವೃತ್ತಿ ಜೀವನದಲ್ಲಿ ಕಚೇರಿ ರಾಜಕೀಯದಿಂದ ದೂರವಿರಿ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಇಂದು ನಿಮ್ಮ ಕೆಲಸದಲ್ಲಿ ಕೂಡಾ ಕೆಲವು ಸಮಸ್ಯೆಗಳಿರಬಹುದು. ಹಿರಿಯ ಅಧಿಕಾರಿಗಳು ನಿಮ್ಮ ಅಭಿಪ್ರಾಯವನ್ನು ಬೆಂಬಲಿಸದಿರಬಹುದು. ಉನ್ನತ ಹುದ್ದೆಯಲ್ಲಿರುವವರು ಸ್ವಲ್ಪ ತಾಳ್ಮೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಕಿರಿಯರ ಅಭಿಪ್ರಾಯವನ್ನು ಸಹ ಪರಿಗಣಿಸಿ. ಉದ್ಯೋಗ ಸಂದರ್ಶನಕ್ಕೆ ಹೋಗಲು ಮಧ್ಯಾಹ್ನ ಅತ್ಯುತ್ತಮ ಸಮಯ. ಕೆಲವರು ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗಿ ನೆಲೆಸುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿಯ ಹಣಕಾಸು ಭವಿಷ್ಯ (Scorpio money horoscope)
ಇಂದು ಹಳೆಯ ಹೂಡಿಕೆಗಳಿಂದ ದೊಡ್ಡ ಆರ್ಥಿಕ ಲಾಭವಿದೆ. ಹೊಸ ಆಸ್ತಿಯನ್ನು ಖರೀದಿಸುವುದು ಸಾಧ್ಯ ಅಥವಾ ನೀವು ಆಸ್ತಿಯನ್ನು ಮಾರಾಟ ಮಾಡಬಹುದು. ಸ್ನೇಹಿತರು ಅಥವಾ ಒಡಹುಟ್ಟಿದವರೊಂದಿಗೆ ಹಣದ ವಿಷಯದಲ್ಲಿ ಸಮಸ್ಯೆಗಳಿರುತ್ತವೆ. ಆಸ್ತಿ ವಿಚಾರದಲ್ಲಿ ಸಹೋದರ ಸಹೋದರಿಯರೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಇದು ವೈಯಕ್ತಿಕ ಜೀವನದಲ್ಲಿ ಗೊಂದಲವನ್ನು ಹೆಚ್ಚಿಸುತ್ತದೆ. ಇಂದು ನೀವು ಷೇರು ಮಾರುಕಟ್ಟೆ, ವ್ಯಾಪಾರ, ವ್ಯವಹಾರದಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು. ನೀವು ಹೊಸ ವಾಹನವನ್ನು ಖರೀದಿಸಲು ಸಹ ನಿರ್ಧರಿಸಬಹುದು.
ವೃಶ್ಚಿಕ ರಾಶಿಯ ಆರೋಗ್ಯ ಜಾತಕ (Scorpio Health Horoscope)
ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಿ. ಹೃದಯ ಸಂಬಂಧಿ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು. ಕೆಲವು ವೃಶ್ಚಿಕ ರಾಶಿಯ ಜನರು ಉಸಿರಾಟದ ತೊಂದರೆ ಅನುಭವಿಸಬಹುದು ಅಥವಾ ಚರ್ಮದ ಅಲರ್ಜಿಯ ಸಮಸ್ಯೆಗಳನ್ನು ಹೊಂದಿರಬಹುದು. ವೈರಲ್ ಜ್ವರ, ಗಂಟಲು ನೋವು ಮತ್ತು ಜೀರ್ಣಕಾರಿ ಸಮಸ್ಯೆಗಳು ಕಾಡಬಹುದು. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಇದು ನಿಮ್ಮನ್ನು ಆರೋಗ್ಯಕರ ಮತ್ತು ಶಕ್ತಿಯುತವಾಗಿರಿಸುತ್ತದೆ.
ವೃಶ್ಚಿಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ವೃಶ್ಚಿಕ ರಾಶಿಯ ಅಧಿಪತಿ: ಮಂಗಳ, ಶುಭ ದಿನಾಂಕಗಳು: 1, 2, 3, 4, 7, 9, ವೃಶ್ಚಿಕ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ, ವೃಶ್ಚಿಕ ರಾಶಿಯವರಿಗೆ ಶುಭ ವರ್ಣ: ಹಳದಿ, ಕೆಂಪು, ಕಿತ್ತಳೆ ಮತ್ತು ಕೆನೆಬಣ್ಣ, ವೃಶ್ಚಿಕ ರಾಶಿಯವರಿಗೆ ಅಶುಭ ವರ್ಣ: ಹಳದಿ ಮಿಶ್ರಿತ ಹಸಿರು, ವೃಶ್ಚಿಕ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ವೃಶ್ಚಿಕ ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15 ರಿಂದ ಅಕ್ಟೋಬರ್ 14, ವೃಶ್ಚಿಕ ರಾಶಿಯವರಿಗೆ ಶುಭ ಹರಳು: ಮಾಣಿಕ್ಯ, ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ವೃಶ್ಚಿಕ ರಾಶಿಯವರಿಗೆ ಶುಭ ರಾಶಿ: ಧನಸ್ಸು, ಮೀನ, ಕಟಕ ಮತ್ತು ಸಿಂಹ, ವೃಶ್ಚಿಕ ರಾಶಿಯವರಿಗೆ ಅಶುಭ ರಾಶಿ: ಮಕರ, ಮೇಷ, ವೃಷಭ ಮತ್ತು ತುಲಾ.
ವೃಶ್ಚಿಕ ರಾಶಿಯವರು ಶುಭ ಫಲ ಪಡೆಯಲು ಸರಳ ಪರಿಹಾರಗಳು
1) ಹನುಮಾನ ಚಾಲೀಸಾ: ಪ್ರತಿದಿನ ಹನುಮಾನ್ ಚಾಲಿಸಾ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೈಹಿಡಿದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.
2) ಈ ದಾನಗಳಿಂದ ಶುಭಫಲ: ಉದ್ದಿನಬೇಳೆ ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.
3) ದೇವಾಲಯ, ಗುರುಪೂಜೆ: ಶ್ರೀ ಶನೇಶ್ವರನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಕುಟುಂಬದಲ್ಲಿ ಧನಾತ್ಮಕ ಪ್ರಗತಿ ದೊರೆಯುತ್ತದೆ. ಶ್ರೀ ಗುರುಪೂಜೆ ಮಾಡುವುದರಿಂದ ಭೂ ವಿವಾದಗಳು ದೂರವಾಗಲಿದೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು, ಕೇಸರಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.