ದಿನ ಭವಿಷ್ಯ: ವೃಶ್ಚಿಕ ರಾಶಿಯವರ ಪ್ರೇಮ ಸಂಬಂಧದಲ್ಲಿ ಪ್ರೀತಿ ಹೆಚ್ಚುತ್ತದೆ, ಕುಂಭ ರಾಶಿಯವರು ಅನಗತ್ಯ ವಿವಾದಗಳಿಂದ ದೂರವಿದ್ದರೆ ಉತ್ತಮ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಿನ ಭವಿಷ್ಯ: ವೃಶ್ಚಿಕ ರಾಶಿಯವರ ಪ್ರೇಮ ಸಂಬಂಧದಲ್ಲಿ ಪ್ರೀತಿ ಹೆಚ್ಚುತ್ತದೆ, ಕುಂಭ ರಾಶಿಯವರು ಅನಗತ್ಯ ವಿವಾದಗಳಿಂದ ದೂರವಿದ್ದರೆ ಉತ್ತಮ

ದಿನ ಭವಿಷ್ಯ: ವೃಶ್ಚಿಕ ರಾಶಿಯವರ ಪ್ರೇಮ ಸಂಬಂಧದಲ್ಲಿ ಪ್ರೀತಿ ಹೆಚ್ಚುತ್ತದೆ, ಕುಂಭ ರಾಶಿಯವರು ಅನಗತ್ಯ ವಿವಾದಗಳಿಂದ ದೂರವಿದ್ದರೆ ಉತ್ತಮ

Daily Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಮೇಷದಿಂದ ಮೀನ ರಾಶಿಯವರಿಗೆ ಇಂದು ಏನು ಫಲ? 28 ಜನವರಿ 2025ರ, ಮಂಗಳವಾರದ ದಿನ ಭವಿಷ್ಯ ಇಲ್ಲಿದೆ.

 28 ಜನವರಿ 2025ರ, ಮಂಗಳವಾರದ ದಿನ ಭವಿಷ್ಯ
28 ಜನವರಿ 2025ರ, ಮಂಗಳವಾರದ ದಿನ ಭವಿಷ್ಯ

ಜನವರಿ 28ರ ದಿನ ಭವಿಷ್ಯ: ಜಾತಕವನ್ನು ಗ್ರಹಗಳು ಮತ್ತು ನಕ್ಷತ್ರ ಚಲನೆಯಿಂದ ನಿರ್ಣಯಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಆಳುವ ಗ್ರಹವನ್ನು ಹೊಂದಿದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 28 ಜನವರಿ 2025ರ ಮಂಗಳವಾರದ ದಿನ ಭವಿಷ್ಯವನ್ನು ತಿಳಿಯೋಣ.ಈ ದಿನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿದೆ, ಆದರೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸಾಮಾನ್ಯ ಫಲಿತಾಂಶಗಳನ್ನು ತರುತ್ತದೆ. ಇಂದಿನ ದಿನ ಭವಿಷ್ಯ ಹೀಗಿದೆ.

ಮೇಷ ರಾಶಿ

ಕಚೇರಿಯಲ್ಲಿ ವಿರೋಧಿಗಳಿಂದ ಸಮಸ್ಯೆ ಆಗಲಿದೆ. ವಾದಗಳನ್ನು ತಪ್ಪಿಸಿ. ಕೋಪವನ್ನು ನಿಯಂತ್ರಿಸಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಪ್ರೇಮ ಜೀವನದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಸಮೃದ್ಧಿ ಇರುತ್ತದೆ. ಹೊಸ ಸಕಾರಾತ್ಮಕ ಬದಲಾವಣೆಗಳಿಗೆ ಸಿದ್ಧರಾಗಿರಿ.

ವೃಷಭ ರಾಶಿ

ಪ್ರೇಮ ಜೀವನದಲ್ಲಿ ಹೊಸ ಬದಲಾವಣೆ ಉಂಟಾಗುತ್ತವೆ. ಒಂಟಿ ಜನರು ಆಕರ್ಷಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ಇದರಿಂದ ನೀವು ಖುಷಿಯಾಗುವಿರಿ. ಆಶ್ಚರ್ಯಗಳಿಗೆ ಸಿದ್ಧರಾಗಿರಿ. ಜೀವನದಲ್ಲಿ ಸಂತೋಷದ ದಿನಗಳು ಬರಲಿದೆ. ಕೆಲಸದ ಕಾರಣದಿಂದಾಗಿ ಹೆಚ್ಚು ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಿ.

ಮಿಥುನ ರಾಶಿ

ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಲಿದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಮನಸ್ಸು ಶಾಂತವಾಗಿ ಉಳಿಯುತ್ತದೆ. ನಿಮ್ಮ ಪ್ರೀತಿಪಾತ್ರರೊಡನೆ ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ಇದರಿಂದ ನಿಮ್ಮ ಸಂಬಂಧವೂ ಗಟ್ಟಿಯಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣ ಅನುಕೂಲಕರವಾಗಿರುತ್ತದೆ. ಹಣಕಾಸಿಗೆ ಸಂಬಂಧಿಸಿದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ.

ಕಟಕ ರಾಶಿ

ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ಜೀವನದಲ್ಲಿ ಬರುವ ಸವಾಲುಗಳನ್ನು ಜಯಿಸಲು ಸಾಧ್ಯವಾಗುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಿರಿ. ಇದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಲಿದ್ದೀರಿ.

ಸಿಂಹ ರಾಶಿ

ಸ್ನೇಹಿತರು ಅಥವಾ ಒಡಹುಟ್ಟಿದವರ ಜೊತೆ ನಡೆಯುತ್ತಿರುವ ಹಣಕಾಸಿನ ವಿವಾದ ಕೊನೆಗೊಳ್ಳುತ್ತದೆ. ನೀವು ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ವೃತ್ತಿ ಸಂಬಂಧಿತ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳಿ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಕೋಪವನ್ನು ನಿಯಂತ್ರಿಸಿ. ನಿಮ್ಮ ಸಂಗಾತಿಯ ಭಾವನೆಗಳನ್ನು ನೋಯಿಸಬೇಡಿ. ಅವರು ಖುಷಿಯಾಗಿರುವಂತೆ ನೋಡಿಕೊಳ್ಳಿ.

ಕನ್ಯಾ ರಾಶಿ

ಸಂಬಂಧಗಳಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ಪ್ರೇಮ ಜೀವನದಲ್ಲಿ ರೋಚಕ ತಿರುವುಗಳಿರುತ್ತವೆ. ಇಬ್ಬರೂ ಒಟ್ಟಿಗೆ ಕುಳಿತು ಸಂಬಂಧದ ಸಮಸ್ಯೆಗಳನ್ನು ಪರಿಹರಿಸಿ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಒಂಟಿ ಜನರು, ಇಷ್ಟಪಟ್ಟವರೊಂದಿಗೆಕೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸರಿಯಾದ ಸಮಯ.

ತುಲಾ ರಾಶಿ

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಉದ್ಯೋಗದಲ್ಲಿರುವ ಜನರು ಬಡ್ತಿ ಅಥವಾ ಸಂಬಳ ಹೆಚ್ಚಳ ಪಡೆಯಬಹುದು. ನಿಮ್ಮ ವೃತ್ತಿ ಜೀವನದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

ವೃಶ್ಚಿಕ ರಾಶಿ

ಪ್ರೇಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ.

ಧನಸ್ಸು ರಾಶಿ

ಕುಟುಂಬ ಅಥವಾ ಸ್ನೇಹಿತರೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ ಇರುತ್ತದೆ. ನೀವು ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯುತ್ತೀರಿ. ಗ್ರಾಹಕರು ಅತೃಪ್ತರಾಗಿದ್ದರೆ, ಕೆಲವು ಕೆಲಸವನ್ನು ಮತ್ತೆ ಮಾಡಬೇಕಾಗಬಹುದು. ಒತ್ತಡವನ್ನು ತಪ್ಪಿಸಿ, ನಿಮ್ಮ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ.

ಮಕರ ರಾಶಿ

ಭಾವನೆಗಳಲ್ಲಿ ಏರುಪೇರು ಉಂಟಾಗುವ ಸಾಧ್ಯತೆ. ಸ್ವಯಂ ಕಾಳಜಿಗೆ ಆದ್ಯತೆ ನೀಡಿ. ಆಯಾಸವನ್ನು ತಪ್ಪಿಸಲು ವಿಶ್ರಾಂತಿ ತೆಗೆದುಕೊಳ್ಳಿ. ಸಂತೋಷದಿಂದ ಸಮಯ ಕಳೆಯಿರಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಹೊಸ ಬದಲಾವಣೆಗಳಿಗೆ ಸಿದ್ಧರಾಗಿರಿ. ಸವಾಲುಗಳಿಂದ ಒತ್ತಡವನ್ನು ತೆಗೆದುಕೊಳ್ಳುವ ಬದಲು, ಸಮಸ್ಯೆಗೆ ಪರಿಹಾರಗಳನ್ನು ಹುಡುಕುವತ್ತ ಗಮನಹರಿಸಿ.

ಕುಂಭ ರಾಶಿ

ನಿಮ್ಮ ಕೆಲಸದ ಮೇಲೆ ಗಮನ ಹರಿಸಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಹೊಸ ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರಿ. ಇದು ವೃತ್ತಿಜೀವನದ ಪ್ರಗತಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಸುಖವಾದ ಜೀವನ ನಡೆಸುವಿರಿ.

ಮೀನ ರಾಶಿ

ಅಧಿಕ ಖರ್ಚು ಇರುತ್ತದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನೀವು ಮನಸ್ಸಿನಲ್ಲಿ ಚಂಚಲತೆಯನ್ನು ಅನುಭವಿಸಬಹುದು. ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ನಿಮ್ಮ ದೈನಂದಿನ ದಿನಚರಿಯಿಂದ ವಿರಾಮ ತೆಗೆದುಕೊಳ್ಳಿ. ಯಾವುದರ ಬಗ್ಗೆಯೂ ಹೆಚ್ಚು ಯೋಚಿಸಬೇಡಿ. ನಿಮ್ಮೊಂದಿಗೆ ಸಮಯ ಕಳೆಯಿರಿ ಮತ್ತು ನಿಮ್ಮ ಮನಸ್ಸಿನಲ್ಲಿರುವ ವಿಷಯಗಳ ಬಗ್ಗೆ ಸ್ಪಷ್ಟವಾಗಿರಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.