Today ​Horoscope: ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ, ಭಾನುವಾರದ ದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ?-horoscope today 4th august 2024 sunday astrological prediction of all zodiac signs dina bhavishya in kannada prs ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Today ​Horoscope: ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ, ಭಾನುವಾರದ ದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ?

Today ​Horoscope: ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ, ಭಾನುವಾರದ ದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ?

Horoscope Today for 4th August: ಆಗಸ್ಟ್ 4ರ ಭಾನುವಾರವಾದ ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಆರ್ಥಿಕವಾಗಿ ಸದೃಢರಾಗಲಿದ್ದಾರೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಇಂದಿನ 12 ರಾಶಿಗಳ ಫಲಾಫಲ ಹೇಗಿದೆ ನೋಡಿ.

ಇಂದಿನ ದಿನ ಭವಿಷ್ಯ
ಇಂದಿನ ದಿನ ಭವಿಷ್ಯ

ಮೇಷ ರಾಶಿ

ದೈಹಿಕ ಚಟುವಟಿಕೆಯೊಂದಿಗೆ ನಿಮ್ಮ ಆಹಾರ ಕ್ರಮ ನಿಯಂತ್ರಿಸಿದರೆ, ನಿಮ್ಮ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಆರ್ಥಿಕವಾಗಿ ಸದೃಢರಾಗಲಿದ್ದೀರಿ. ವೃತ್ತಿಪರ ಕ್ಷೇತ್ರದಲ್ಲಿ ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ನೀವು ಎಲ್ಲವನ್ನೂ ಪ್ರಶಂಸನೀಯವಾಗಿ ನಿಭಾಯಿಸುವಿರಿ. ಆಸ್ತಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಆದಾಯ ಪಡೆಯಲಿದ್ದೀರಿ.

ವೃಷಭ ರಾಶಿ

ನೀವು ಆರ್ಥಿಕವಾಗಿ ಪ್ರಗತಿ ಹೊಂದುವಿರಿ. ನಿಮ್ಮ ಕಠಿಣ ಪರಿಶ್ರಮ, ಶಿಸ್ತು ಮತ್ತು ಬದ್ಧತೆಯು ವೃತ್ತಿಪರ ಜೀವನವು ಅತ್ಯುತ್ತಮ ಹಾದಿಯಲ್ಲಿ ಸಾಗಲಿದೆ. ಪ್ರೀತಿಯಲ್ಲಿ ಬಿದ್ದವರಿಗೆ ಖುಷಿ ಸುದ್ದಿ ಸಿಗಲಿದೆ. ಈ ರಾಶಿಯವರು ಚಿನ್ನ ಖರೀದಿಸಲು ಇದೇ ಉತ್ತಮ ಅವಕಾಶ ಎಂದರೂ ತಪ್ಪಾಗಲ್ಲ. ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಯಾಣ ಬೆಳೆಸುವುದು ಅತಿ ಮುಖ್ಯವಾಗಿದೆ.

ಮಿಥುನ ರಾಶಿ

ಇಂದು (ಆಗಸ್ಟ್ 4) ನಿಮಗೆ ಹೊಸ ಅವಕಾಶಗಳು ನಿಮ್ಮ ಬಾಗಿಲು ತಟ್ಟಬಹುದು. ಯಾವುದೇ ಕೆಲಸದಲ್ಲಿ ಮೊದಲ ಹೆಜ್ಜೆಯಲ್ಲೇ ಯಶಸ್ಸು ಕಾಣಲಿದ್ದೀರಿ. ಅಲ್ಲದೆ, ನೀವಂದುಕೊಂಡಂದು ನೆರೆವೇರುವ ಸಾಧ್ಯತೆ ಇದೆ. ಪ್ರವಾಸ ಕೈಗೊಳ್ಳಲು ಇದು ಸುಸಂದರ್ಭ. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಹೊಸದಾಗಿ ವ್ಯಾಯಾಮ ಆರಂಭಿಸಲು ಮತ್ತು ಆರೋಗ್ಯದ ಪ್ರಯೋಜನ ಪಡೆಯಲು ಈ ರಾಶಿಯವರಿಗೆ ಉತ್ತಮ ಅವಕಾಶವಾಗಿದೆ.

ಕರ್ಕಾಟಕ ರಾಶಿ

ಈ ರಾಶಿಯವರು ಯಾವುದೇ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಯೋಚಿಸಬೇಕು. ಮುಂದೆ ಅಪಾರ ಎದುರಾದರೂ ಅಚ್ಚರಿ ಇಲ್ಲ. ನೀವು ಫಿಟ್​ ಮತ್ತು ಶಕ್ತಿಯುತವಾಗಿರಲು ಬಯಸಿದರೆ ವ್ಯಾಯಾಮ ಆರಂಭಿಸುವುದು ಉತ್ತಮ. ನೀವು ಯಾವುದೇ ಯೋಜನೆ ಅಥವಾ ಒಪ್ಪಂದದಿಂದ ಉತ್ತಮ ಲಾಭ ಪಡೆಯಲಿದ್ದೀರಿ. ಆದರೆ ಈ ರಾಶಿಯ ಪ್ರೇಮಿಗಳು ಪ್ರೀತಿಯ ವಿಷಯಗಳಲ್ಲಿ ಸ್ವಲ್ಪ ದೂರ ಉಳಿಯಿರಿ.

ಸಿಂಹ ರಾಶಿ

ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವು ಅತ್ಯುತ್ತಮ ಆದಾಯ ತಂದುಕೊಡುತ್ತದೆ. ಫಿಟ್ನೆಸ್ ವಿಷಯಕ್ಕೆ ಸಂಬಂಧಿಸಿ ನೀವು ಯೋಗ ಮಾಡಿದರೆ ಬೊಜ್ಜು ಮತ್ತು ಒತ್ತಡ ಕಡಿಮೆ ಆಗುತ್ತದೆ. ನೀವು ಪ್ರಮುಖ ವ್ಯಕ್ತಿಯಿಂದ ಆಮಂತ್ರಣ ಸ್ವೀಕರಿಸಲಿದ್ದೀರಿ. ನಿಮ್ಮ ಪ್ರಯಾಣವು ಸುಖಕರವಾಗಿರುತ್ತದೆ. ನಿಮ್ಮ ಉತ್ತಮ ಆರ್ಥಿಕ ಸ್ಥಿತಿಯು ಆಸ್ತಿ ಖರೀದಿಸುವ ಬಗ್ಗೆ ಯೋಚಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ.

ಕನ್ಯಾ ರಾಶಿ

ಹಣ ಗಳಿಸುವವರಿಗೆ ಇದು ಉತ್ತಮ ದಿನ ಎಂದು ನಿರೀಕ್ಷಿಸಲಾಗಿದೆ. ವೃತ್ತಿಪರ ವಿಷಯದಲ್ಲಿ ಪ್ರತಿದಿನ ಅದೇ ಕೆಲಸ ಮಾಡುವುದು ನಿಮಗೆ ನೀರಸವೆಂದು ತೋರುತ್ತದೆ. ಆದರೆ ನೀವು ಅದರಲ್ಲೇ ಮುಂದುವರೆಯಬೇಕು. ಇಂದು ಕುಟುಂಬದೊಂದಿಗೆ ಅತ್ಯುತ್ತಮ ಕ್ಷಣಗಳನ್ನು ಕಳೆಯಿರಿ. ವಿದೇಶ ಪ್ರಯಾಣದ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿ ಯಶಸ್ವಿಯಾಗಬಹುದು.

ತುಲಾ ರಾಶಿ

ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳು ಕಾಡಬಹುದು. ಆರೋಗ್ಯ ವೃದ್ಧಿಸಿಕೊಳ್ಳಲು ದೈಹಿಕ ಚಟುವಟಿಕೆ ಹೆಚ್ಚಿಸುವುದು ಅಗತ್ಯ. ವೃತ್ತಿಪರ ವಿಷಯದಲ್ಲಿ ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ನೀವು ಗಮನಹರಿಸಬೇಕು. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಮನೆ ಅಥವಾ ಫ್ಲಾಟ್ ಖರೀದಿಸುವ ನಿರೀಕ್ಷೆಗಳು ಉಜ್ವಲವಾಗಿ ಕಾಣುತ್ತಿವೆ. ನಿಮ್ಮ ಕೆಲಸವೇ ನಿಮ್ಮನ್ನು ಬೆಳಕಿಗೆ ತರುವಂತೆ ಮಾಡುತ್ತದೆ.

ವೃಶ್ಚಿಕ ರಾಶಿ

ಸಂಪತ್ತು ವೃದ್ಧಿಸುವ ಯೋಜನೆಗಳು ನಿಮ್ಮ ಕೈ ಹಿಡಿಯಲಿವೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಸ್ಥಿರವಾಗಿರುತ್ತದೆ. ನೀವು ಆರೋಗ್ಯ ಸುಧಾರಿಸಲು ವ್ಯಾಯಾಮ ಆರಂಭಿಸುವುದು ಉತ್ತಮ ಕೆಲಸದ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಪ್ರಾಮಾಣಿಕತೆ ಮತ್ತು ಸಮರ್ಪಣೆಗೆ ಶೀಘ್ರದಲ್ಲೇ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಕೆಲವರು ಮನೆಯನ್ನು ನವೀಕರಿಸಲು ಮುಂದಾಗಬಹುದು.

ಧನು ರಾಶಿ

ಈ ರಾಶಿವರು ನಾಳೆ (ಆಗಸ್ಟ್ 4) ಉತ್ತಮ ಗಳಿಕೆ ಮಾಡುವ ಸಾಧ್ಯತೆ ಇದೆ. ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಕೌಟುಂಬಿಕವಾಗಿ ನೀವು ಶುಭ ಸುದ್ದಿ ಕೇಳಲಿದ್ದೀರಿ. ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ನೀವು ಹಳೆಯ ಸಂಬಂಧಿಕರನ್ನು ಭೇಟಿ ಮಾಡಬಹುದು. ಆಸ್ತಿ ಖರೀದಿಸಲು ಯೋಜಿಸುವವರಿಗೆ ಉತ್ತಮ ಸಮಯ. ನಿಮ್ಮ ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗಿ. ಇದು ನಿಮ್ಮೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಮಕರ ರಾಶಿ

ನೀವು ಆರ್ಥಿಕವಾಗಿ ಸ್ಥಿರತೆ ಕಾಪಾಡಿಕೊಳ್ಳುತ್ತೀರಿ. ಮಾನಸಿಕ ಒತ್ತಡದಿಂದ ಮುಕ್ತರಾಗಲು ಧ್ಯಾನ ಅಥವಾ ಯೋಗದ ಸಹಾಯ ಪಡೆಯಿರಿ. ವೃತ್ತಿಪರ ಕ್ಷೇತ್ರದಲ್ಲಿ ಛಾಪು ಮೂಡಿಸಲು ನಿಮಗೆ ವಿಶೇಷ ಅವಕಾಶ ಸಿಗಲಿದೆ. ಕುಟುಂಬದ ಬೆಂಬಲವು ನಿಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ. ಪ್ರಕೃತಿಯ ಸೊಬಗು ಸವಿಯಿರಿ. ಇದು ಒತ್ತಡ ನಿವಾರಣೆ ಮಾಡುತ್ತದೆ. ನಿಮ್ಮಲ್ಲಿ ಕೆಲವರು ಆಸ್ತಿಯನ್ನು ಖರೀದಿಸಲು ನಿರ್ಧಾರ ತೆಗೆದುಕೊಳ್ಳಬಹುದು. ನಿಮ್ಮ ಜೀವನದಲ್ಲಿ ನಾಳೆ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ.

ಕುಂಭ ರಾಶಿ

ಈ ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಆದಾಯ ಪಡೆಯುವ ಸಾಧ್ಯತೆ ಇದೆ. ಆರೋಗ್ಯಕರ ಆಹಾರಗಳನ್ನು ಸೇವಿಸಿ ಫಿಟ್ನೆಸ್‌ನತ್ತ ಹೆಜ್ಜೆ ಇಡಿ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಉಪಕ್ರಮ ತೆಗೆದುಕೊಂಡರೂ, ಶೀಘ್ರದಲ್ಲೇ ಸಕಾರಾತ್ಮಕ ಫಲಿತಾಂಶ ಪಡೆಯುತ್ತೀರಿ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ನಿಮ್ಮ ಸಂಗಾತಿಯೊಂದಿಗೆ ಲಾಂಗ್ ಡ್ರೈವ್‌ಗೆ ಹೋಗಲು ನೀವು ಯೋಜನೆ ರೂಪಿಸಬಹುದು.

ಮೀನ ರಾಶಿ

ಯಾವುದೇ ವಿಚಾರದಲ್ಲಿ ಬಹುದಿನಗಳಿಂದ ಕಾಯುತ್ತಿದ್ದ ಅವಕಾಶ ಶೀಘ್ರದಲ್ಲೇ ನಿಮಗೆ ಸಿಗಲಿದೆ. ಕೊನೆಯ ಕ್ಷಣದಲ್ಲಿ ನಿಮಗೆ ನಿಯೋಜಿಸಲಾದ ಕೆಲಸಗಳು ಸರಿಯಾಗಿ ಪೂರ್ಣಗೊಳ್ಳುತ್ತವೆ. ದಿನನಿತ್ಯದ ಕೆಲಸಗಳಿಂದ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿ ಧನಾತ್ಮಕ ಫಲಿತಾಂಶ ಕೊಡುವ ಸಾಧ್ಯತೆ ಇದೆ. ಯಾವುದೇ ಸವಾಲು ಸ್ವೀಕರಿಸಲು ಕುಟುಂಬದಿಂದ ಬೆಂಬಲ ಮತ್ತು ಪ್ರೋತ್ಸಾಹ ಸಿಗಲಿದೆ. ಸಂಗಾತಿ ಹುಡುಕುತ್ತಿರುವ ಜನರಿಗೆ ಕನಸು ನನಸಾಗುವ ಸಾಧ್ಯತೆಯಿದೆ. ದೀರ್ಘ ಪ್ರಯಾಣದಲ್ಲಿ ಸ್ನೇಹಿತರೊಂದಿಗೆ ಮೋಜು ಮಾಡುವ ಅವಕಾಶ ಸಿಗಲಿದೆ. ಕೆಲವರಿಗೆ ಆಸ್ತಿ ಮಾರಾಟದಿಂದ ಲಾಭವಾಗುವ ಸಾಧ್ಯತೆ ಇದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.