ದಿನ ಭವಿಷ್ಯ: ಅತಿಯಾದ ಖರ್ಚು ಕಡಿಮೆ ಮಾಡಲು ಪ್ಲಾನ್ ಮಾಡುತ್ತೀರಿ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಿನ ಭವಿಷ್ಯ: ಅತಿಯಾದ ಖರ್ಚು ಕಡಿಮೆ ಮಾಡಲು ಪ್ಲಾನ್ ಮಾಡುತ್ತೀರಿ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತೆ

ದಿನ ಭವಿಷ್ಯ: ಅತಿಯಾದ ಖರ್ಚು ಕಡಿಮೆ ಮಾಡಲು ಪ್ಲಾನ್ ಮಾಡುತ್ತೀರಿ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತೆ

ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷದಿಂದ ಮೀನ ರಾಶಿಯವರಿಗೆ ಇಂದು ಏನು ಫಲ? ಜನವರಿ 7ರ ಮಂಗಳವಾರದ ದಿನಭವಿಷ್ಯ ಇಲ್ಲಿದೆ.

ಜನವರಿ 7ರ ಮಂಗಳವಾರ ಮೇಷದಿಂದ ಮೀನದವರಿಗೆ ದ್ವಾದಶ ರಾಶಿಗಳ ದಿನ ಭವಿಷ್ಯ
ಜನವರಿ 7ರ ಮಂಗಳವಾರ ಮೇಷದಿಂದ ಮೀನದವರಿಗೆ ದ್ವಾದಶ ರಾಶಿಗಳ ದಿನ ಭವಿಷ್ಯ

ಜನವರಿ 7ರ ದಿನ ಭವಿಷ್ಯ: ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯಿಂದ ಜಾತಕವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಮಂಗಳವಾರ ಹನುಮಂತನನ್ನು ಪೂಜಿಸುವ ಪದ್ಧತಿ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಹನುಮನನ್ನು ಪೂಜಿಸುವುದರಿಂದ ರೋಗಗಳು ಮತ್ತು ನೋವುಗಳು ನಿವಾರಣೆಯಾಗುತ್ತವೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 2025ರ ಜನವರಿ 7 ರಂದು ದಿನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವಾಗಲಿದೆ, ಆದರೆ ಕೆಲವು ರಾಶಿಚಕ್ರ ಚಿಹ್ನೆಗಳು ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಯಾವ ರಾಶಿಚಕ್ರ ಚಿಹ್ನೆಗಳಿಗೆ ಲಾಭವಾಗಲಿದೆ ಮತ್ತು ಯಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯೋಣ. ಮೇಷದಿಂದ ಮೀನ ರಾಶಿಯವರಿಗೆ ಈ ದಿನ ಹೇಗಿರುತ್ತದೆ ಎಂಬುದನ್ನು ದಿನ ಭವಿಷ್ಯದಲ್ಲಿ ತಿಳಿಯೋಣ.

ಮೇಷ ರಾಶಿ

ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಕೆಲಸದ ಕಾರಣದಿಂದಾಗಿ, ಬದ್ಧತೆಯ ಜನರಿಗೆ ಕುಟುಂಬದವರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಒತ್ತಡವನ್ನು ಕಡಿಮೆ ಮಾಡಲು ನಿಮ್ಮ ನೆಚ್ಚಿನ ಚಟುವಟಿಕೆಗೆ ಸಮಯ ನೀಡಿ. ಖರ್ಚುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

ವೃಷಭ ರಾಶಿ

ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಕೊಡಿ. ಹಣದೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ನೀವು ವಾದದಲ್ಲಿ ಸಿಲುಕುವ ಹೆಚ್ಚಿನ ಅವಕಾಶವಿದೆ. ಉದ್ಯೋಗದಲ್ಲಿನ ಒತ್ತಡವು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ತಾಳ್ಮೆಯಿಂದಿರಿ. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಪ್ರಯತ್ನಿಸುತ್ತೀರಿ.

ಮಿಥುನ ರಾಶಿ

ನಾಲಿಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಏಕೆಂದರೆ ಅದು ನಿಮ್ಮ ಸಂಗಾತಿಯನ್ನು ನೋಯಿಸಬಹುದು. ಸ್ವಲ್ಪ ಸಮಯ ಹೊರಗಡೆ ಹೋಗಲು ಯೋಜಿಸುತ್ತಿದ್ದರೆ, ಉತ್ತಮ ಅವಕಾಶವಾಗಿದೆ. ಹಸಿರು ತರಕಾರಿಗಳಿಂದ ಕೂಡಿದ ಆರೋಗ್ಯ ಒಳ್ಳೆಯದು. ಸ್ನೇಹಿತರ ನೆರವಿನಿಂದ ಸಾಲವನ್ನು ತೀರಿಸುತ್ತೀರಿ.

ಕಟಕ ರಾಶಿ

ನಿಮ್ಮ ಮತ್ತು ಸಂಗಾತಿಯ ನಡುವೆ ನಡೆಯುತ್ತಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೀರಿ. ಸ್ವಲ್ಪ ಉತ್ಸಾಹವನ್ನು ಅನುಭವಿಸಲು ಬಯಸಿದರೆ ಸ್ನೇಹಿತರೊಂದಿಗೆ ವಿಶ್ರಾಂತಿ ಕ್ಷಣಗಳನ್ನು ಕಳೆಯಿರಿ. ಖರ್ಚುಗಳನ್ನು ಕಡಿಮೆ ಮಾಡಿ. ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಬೇಕು.

ಸಿಂಹ ರಾಶಿ

ತಾಯಿಯೊಂದಿಗೆ ಸ್ವಲ್ಪ ಸಮಯ ಕಳೆಯಿರಿ ಮತ್ತು ಅವರ ಆರೋಗ್ಯದ ಬಗ್ಗೆಯೂ ಗಮನ ಹರಿಸಿ. ಕೆಲವು ಅವಿವಾಹಿತರು ತಮ್ಮ ಮದುವೆಯ ಸಂಬಂಧ ಮನೆಯಲ್ಲಿ ಹಿರಿಯರೊಂದಿಗೆ ಚರ್ಚೆ ಮಾಡುತ್ತಾರೆ. ಸಂಗಾತಿ ವಿಶಿಷ್ಟ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಬಹುದು.

ಕನ್ಯಾ ರಾಶಿ

ಪ್ರಾಮಾಣಿಕರಾಗಿರಲು ಪ್ರಯತ್ನಿಸುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ. ಉದ್ಯೋಗ ಸ್ಥಳದಲ್ಲಿ ತಂಡದ ಸಭೆಗಳಲ್ಲಿ ಕೋಪವನ್ನು ನಿಯಂತ್ರಿಸುತ್ತೀರಿ. ಹಣವು ನಿಮ್ಮ ಪರವಾಗಿರುತ್ತದೆ. ಸಾಲವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ.

ತುಲಾ ರಾಶಿ

ಕಚೇರಿಯಲ್ಲಿ ಅಸೂಯೆ ಭಾವನೆಯನ್ನು ತಪ್ಪಿಸಿ. ಯಾವುದೇ ರೀತಿಯ ಜಗಳಕ್ಕೆ ಇಳಿಯಬಾರದು. ಸಂಗಾತಿಯೊಂದಿಗೆ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಿ. ಕೆಟ್ಟ ಮನಸ್ಥಿತಿಯ ಹಿಂದಿನ ನಿಜವಾದ ಕಾರಣವನ್ನು ಮೆಲುಕು ಹಾಕುತ್ತೀರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ

ಅವಿವಾಹಿತರು ಸಂಗಾತಿಯನ್ನು ಹುಡುಕುವ ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಾರೆ. ಅದಷ್ಟು ಎಂಬಂತೆ ಸಂಬಂಗಳೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸುತ್ತೀರಿ. ಈಗಾಗಲೇ ಕಲಿತಿರುವ ಪಾಠ ಪ್ರಯೋಜನಕ್ಕೆ ಬರುತ್ತದೆ. ಸಂತೋಷದ ದಿನವಾಗಿರುತ್ತದೆ.

ಧನು ರಾಶಿ

ಸಂಗಾತಿ ನಿಮ್ಮ ಪ್ರೀತಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಖರ್ಚುಗಳನ್ನು ಕಡಿಮೆ ಮಾಡಲು ಈ ದಿನ ಯೋಜನೆಗಳನ್ನು ರೂಪಿಸುತ್ತೀರಿ. ತಂದೆಯ ಆರೋಗ್ಯದ ಬಗ್ಗೆಯೂ ಗಮನ ಕೊಡಿ. ಕೆಲಸಗಳು ನಿಧಾನವಾಗಿ ಸಾಗುತ್ತವೆ. ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಜಗಳವನ್ನು ತಪ್ಪಿಸಬೇಕು.

ಮಕರ ರಾಶಿ

ದೀರ್ಘಕಾಲದಿಂದ ಅವಿವಾಹಿತರಾಗಿರುವವರಿಗೆ ಶುಭ ಸುದ್ದಿ ಇದೆ. ನೀವು ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಸಂಗಾತಿಯು ಉತ್ತಮವಾಗಿ ಸಂಪಾದಿಸುವುದನ್ನು ನೋಡಿ ತುಂಬಾ ಖುಷಿ ಪಡುತ್ತೀರಿ. ಹೊಂದಾಣಿಕೆ ಕೊರತೆ ಇರುವುದಿಲ್ಲ. ಸ್ವಂತ ಮನೆ ಖರೀದಿಯ ಬಗ್ಗೆ ಯೋಚನೆ ಮಾಡುತ್ತೀರಿ.

ಕುಂಭ ರಾಶಿ

ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತೀರಿ. ಈ ದಿನವನ್ನು ಆನಂದಿಸುತ್ತೀರಿ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಬದ್ಧತೆಯುಳ್ಳವರು ಕುಟುಂಬದ ಕೆಲವು ಜವಾಬ್ದಾರಿಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಒತ್ತಡಕ್ಕೆ ಒಳಗಾಗಬೇಡಿ. ಎಲ್ಲಾವನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೀರಿ.

ಮೀನ ರಾಶಿ

ಅವಿವಾಹಿತರು ಡೇಟಿಂಗ್ ಗೆ ಹೋಗಬಹುದು. ಕೌಶಲ್ಯಗಳನ್ನು ತೋರಿಸುವ ಯಾವುದೇ ಅವಕಾಶವನ್ನು ಕಳೆಯಲು ಬಿಡಬೇಡಿ. ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡಿ. ಅತಿಯಾದ ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ. ತಾಯಿಯೊಂದಿಗೆ ಸ್ವಲ್ಪ ಸಮಯ ಕಳೆಯಿರಿ.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.