ದಿನ ಭವಿಷ್ಯ: ವೃಶ್ಚಿಕ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ಸಿಗುತ್ತೆ, ತುಲಾ ರಾಶಿಯವರು ಶುಭ ಸುದ್ದಿ ಕೇಳಲಿದ್ದೀರಿ
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷದಿಂದ ಮೀನ ರಾಶಿಯವರಿಗೆ ಇಂದು ಏನು ಫಲ? ಡಿಸೆಂಬರ್ 9ರ ಸೋಮವಾರ ದಿನಭವಿಷ್ಯ ಇಲ್ಲಿದೆ.
ಡಿಸೆಂಬರ್ 9ರ ದಿನ ಭವಿಷ್ಯ: ಗ್ರಹಗಳು ಮತ್ತು ನಕ್ಷತ್ರ ಚಲನೆಯಿಂದ ಜಾತಕವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಡಿಸೆಂಬರ್ 9 ಸೋಮವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯೋಣ. ಸೋಮವಾರದಂದು ಶಿವನನ್ನು ಪೂಜಿಸುವ ಪದ್ಧತಿ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವನ ಆರಾಧನೆಯು ಜೀವನದ ದುಃಖಗಳನ್ನು ತೆಗೆದುಹಾಕುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಡಿಸೆಂಬರ್ 9 ರ ದಿನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವಾಗಲಿದೆ, ಆದರೆ ಕೆಲವು ರಾಶಿಚಕ್ರ ಚಿಹ್ನೆಗಳು ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಡಿಸೆಂಬರ್ 9 ರಂದು ಯಾವ ರಾಶಿಚಕ್ರ ಚಿಹ್ನೆಗಳಿಗೆ ಲಾಭವಾಗಲಿದೆ ಮತ್ತು ಯಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯೋಣ. ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಇಂದಿನ ದಿನ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ನೀವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಬದಲಾವಣೆಗಳು ನಿಮ್ಮನ್ನು ಕಾಡಬಹುದು, ಆದರೆ ಎಚ್ಚರಿಕೆಯಿಂದ ಮುಂದುವರಿಯುವುದು ಮತ್ತು ನಿಮ್ಮ ಕಾರ್ಯಗಳಲ್ಲಿ ವಿವೇಕಯುತವಾಗಿರುವುದು ಮುಖ್ಯ. ನಿಮ್ಮ ಮೇಲೆ ವಿಶ್ವಾಸವಿಡಿ. ಅಪಾಯಗಳ ಬಗ್ಗೆ ಸ್ಪಷ್ಟವಾಗಿರಿ. ತಾಳ್ಮೆಯನ್ನು ಕಳೆದುಕೊಳ್ಳಬೇಡಿ.
ವೃಷಭ ರಾಶಿ
ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು ಸಮಯ ತೆಗೆದುಕೊಳ್ಳಿ. ಮುಖ್ಯವಾದ ವಿಷಯಗಳ ಮೇಲೆ ಗಮನ ಹರಿಸುತ್ತೀರಿ. ಏನಾದರೂ ತುಂಬಾ ಅಪಾಯಕಾರಿ ಎಂದು ತೋರಿದರೆ, ಕೆಲಸವನ್ನು ಇತರರಿಗೆ ವಹಿಸಲು ಅಥವಾ ಸಹಾಯ ಪಡೆಯಲು ಹಿಂಜರಿಯಬೇಡಿ. ಒತ್ತಡ ಮುಕ್ತ ದಿನವಾಗಿರುತ್ತದೆ.
ಮಿಥುನ ರಾಶಿ
ಆಸಕ್ತಿಗೆ ಅನುಗುಣವಾಗಿ ಆಯ್ಕೆಗಳನ್ನು ಮಾಡುವುದರಿಂದ ತೃಪ್ತಿ ಇರುತ್ತದೆ. ನಿಮಗೆ ನಿಜವಾಗಿಯೂ ಏನು ಬೇಕು ಎಂಬುದರ ಬಗ್ಗೆ ಗಮನ ಹರಿಸುತ್ತೀರಿ. ಜೀವನದ ಹೊಸ ಅವಕಾಶಗಳೊಂದಿಗೆ ಹೋಗಲು ನೀವು ಉತ್ತಮವಾಗಿ ಸಿದ್ಧರಾಗುತ್ತೀರಿ. ಕೆಲಸ ಒತ್ತಡಗಳು ಇರುತ್ತವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಿರಿಕಿರಿಯ ವಾತಾವರಣ ಇರುತ್ತದೆ.
ಕಟಕ ರಾಶಿ
ನೀವು ಯಶಸ್ಸು ಪಡೆಯುತ್ತೀರಿ. ನಿಮ್ಮ ಆಸೆಗಳನ್ನು ಪೂರೈಸಿಕೊಂಡ ತೃಪ್ತಿ ಇರುತ್ತದೆ. ನಿಮ್ಮ ಗುರಿಗಳು ನಿಮ್ಮ ನಿಜವಾದ ಅಗತ್ಯಗಳು ಮತ್ತು ಆಸೆಗಳೊಂದಿಗೆ ಹೊಂದಿಕೆಯಾಗುತ್ತವೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಕೇಂದ್ರೀಕರಿಸುತ್ತೀರಿ. ಸಾಲ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ.
ಸಿಂಹ ರಾಶಿ
ಕೆಲವೊಮ್ಮೆ ನಾವು ಏನು ಯೋಚಿಸುತ್ತೇವೋ ಅದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ದುಃಖಪಡುವಂಥದ್ದು ಏನೂ ಇರುವುದಿಲ್ಲ. ನಿಮ್ಮ ಆದ್ಯತೆಗಳ ಮೇಲೆ ಕೇಂದ್ರೀಕರಿಸಲು ಮತ್ತು ನಿಮ್ಮ ದೀರ್ಘಕಾಲೀನ ಗುರಿಗಳಿಗೆ ಹೊಂದಿಕೆಯಾಗುವ ಆಯ್ಕೆಗಳನ್ನು ಮಾಡಲು ಸಮಯ ತೆಗೆದುಕೊಳ್ಳುತ್ತೀರಿ. ಸ್ನೇಹಿತರ ಬೆಂಬಲ ಪಡೆಯುತ್ತೀರಿ.
ಕನ್ಯಾ ರಾಶಿ
ನೀವು ಅನೇಕ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ, ಆದರೆ ಸ್ವಯಂ ಆರೈಕೆಗೆ ಆದ್ಯತೆ ನೀಡಬೇಕು. ಕೆಲವೊಂದು ಕೆಲಸಗಳಿಗೆ ಗಡಿಗಳನ್ನು ಹಾಕಿಕೊಳ್ಳುವುದು ಅತ್ಯಗತ್ಯ. ನಿಮ್ಮ ಅಗತ್ಯವಿದ್ದಾಗ ಕೆಲವರು ನಿಮ್ಮನ್ನು ಮೊದಲ ಸ್ಥಾನದಲ್ಲಿ ಕುಳಿಸಿಕೊಳ್ಳುತ್ತಾರೆ. ಸ್ವಂತ ಬುದ್ಧಿಯಿಂದ ನಿರ್ಧಾರಗಳನ್ನು ಕೈಗೊಳ್ಳಿ. ಬೇರೆಯವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.
ತುಲಾ ರಾಶಿ
ನಿಮ್ಮ ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಡುತ್ತೀರಿ. ನಿಮಗೆ ಯಾವುದು ಉತ್ತಮ ಅನಿಸುತ್ತದೆಯೋ ಅದನ್ನೇ ಮಾಡುತ್ತೀರಿ. ಕೆಲವೊಮ್ಮೆ ಇಂತಹ ನಿರ್ಧಾರಗಳು ಇತರರನ್ನು ನಿರಾಶೆಗೊಳಿಸುತ್ತದೆ. ಸಕಾರಾತ್ಮಕ ಸುದ್ದಿಗಳನ್ನು ಕೇಳುತ್ತೀರಿ. ಒಳ್ಳೆಯ ವಿಷಯಗಳು ಲಾಭವನ್ನು ತಂದುಕೊಡಲಿವೆ.
ವೃಶ್ಚಿಕ ರಾಶಿ
ಯೋಜನೆಯ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿರಿ. ಕೆಲಸದಲ್ಲಿನ ಯಶಸ್ಸು ಸಂತೋಷಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಯೋಜನೆಗಳು ಕೈಕೊಡಬಹುದು. ಸಂಜೆಯ ನಂತರ ಶುಭ ಸುದ್ದಿಯನ್ನು ಕೇಳುತ್ತೀರಿ. ದಿನದ ಮಟ್ಟಿಗೆ ಮಿಶ್ರ ಫಲಗಳಿವೆ. ಎಲ್ಲವನ್ನು ಧೈರ್ಯವಾಗಿ ಎದುರಿಸುತ್ತೀರಿ.
ಧನು ರಾಶಿ
ಒತ್ತಡದ ಕಾರಣದಿಂದ ಬದಲಾವಣೆಯನ್ನು ಬಯಸುತ್ತೀರಿ. ಕೆಲವೊಮ್ಮೆ ನಮ್ಮ ಇಚ್ಛೆಯ ಹೊರತಾಗಿಯೂ, ಜನರು ನಾವು ನಿರೀಕ್ಷಿಸಿದ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಕೋರ್ಟ್ ಪ್ರಕರಣಗಳು ನಿಮ್ಮ ಪರವಾಗಿ ಇರುತ್ತವೆ. ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಂಬಂಧಗಳ ವಿಚಾರದಲ್ಲಿ ಅವಿವಾಹಿತರು ಶುಭ ಸುದ್ದಿಯನ್ನು ಕೇಳುತ್ತಾರೆ.
ಮಕರ ರಾಶಿ
ಸಕಾರಾತ್ಮಕ ಶಕ್ತಿಯ ದಿನವಾಗಿದೆ. ವಿಶೇಷವಾಗಿ ಪ್ರೀತಿ, ಕುಟುಂಬ ಮತ್ತು ಪಾಲುದಾರಿಕೆಯ ವಿಷಯಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣುತ್ತೀರಿ. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತಾರೆ. ಡಿಸೆಂಬರ್ 9ರ ಸೋಮವಾರದ ಜಾತಕವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ಸೂಚಿಸುತ್ತಿದೆ.
ಕುಂಭ ರಾಶಿ
ನಿಮ್ಮ ಸುತ್ತ ಸಕಾರಾತ್ಮಕ ಫಲಿತಾಂಶಗಳು ಇರುತ್ತವೆ. ಮುಚ್ಚಿದ ಬಾಗಿಲು ಹೊಸ ಅವಕಾಶಗಳಿಗೆ ಕಾರಣವಾಗುತ್ತದೆ ಎಂದು ಅರ್ಥೈಸಿಕೊಳ್ಳುತ್ತೀರಿ. ಎಲ್ಲವನ್ನು ಸಕಾರಾತ್ಮಕ ಮನಸ್ಸಿನಿಂದ ನೋಡುತ್ತೀರಿ. ಅಭಿವೃದ್ಧಿಯ ಪ್ರಕ್ರಿಯೆಯನ್ನು ನಂಬಿ ಮತ್ತು ಶೀಘ್ರದಲ್ಲೇ ಮತ್ತೊಂದು ಅವಕಾಶ ನಿಮ್ಮ ಮುಂದೆ ಬರಲಿದೆ.
ಮೀನ ರಾಶಿ
ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಯಾಣವು ಕಷ್ಟಕರವೆಂದು ತೋರಬಹುದು. ಯಾವುದೇ ಸಮಸ್ಯೆಯನ್ನು ನಿವಾರಿಸಲು ನಿಮ್ಮ ಪ್ರತಿಭೆ ಮತ್ತು ಕೌಶಲ್ಯಗಳು ಸಾಕು ಎಂಬುದನ್ನುಅರ್ಥ ಮಾಡಿಕೊಳ್ಳುತ್ತೀರಿ. ನಿಮ್ಮಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬ ಭಾವನೆ ಬರುತ್ತದೆ. ಒತ್ತಡದ ಮನಸ್ಥಿತಿಯಿಂದ ಹೊರ ಬರುತ್ತೀರಿ. ಸಂತೋಷ ಇರುತ್ತದೆ.
(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ}
ವಿಭಾಗ