ದಿನ ಭವಿಷ್ಯ: ವೈಯಕ್ತಿಕ ಬೆಳವಣಿಗೆಗೆ ಅವಕಾಶ ದೊರೆಯಲಿದೆ, ಪ್ರೀತಿಯಲ್ಲಿರುವವರ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ
Daily Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಮೇಷದಿಂದ ಮೀನ ರಾಶಿಯವರಿಗೆ ಇಂದು ಏನು ಫಲ? 2025ರ ಜನವರಿ 9, ಗುರುವಾರದ ದಿನಭವಿಷ್ಯ ಇಲ್ಲಿದೆ.
ಜನವರಿ 9ರ ದಿನ ಭವಿಷ್ಯ: ಜಾತಕವನ್ನು ಗ್ರಹಗಳು ಮತ್ತು ನಕ್ಷತ್ರ ಚಲನೆಯಿಂದ ನಿರ್ಣಯಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಆಳುವ ಗ್ರಹವನ್ನು ಹೊಂದಿದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 2025ರ ಜನವರಿ 9 ಗುರುವಾರದ ದಿನ ಭವಿಷ್ಯವನ್ನು ತಿಳಿಯೋಣ.ಈ ದಿನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವಾಗಲಿದೆ, ಆದರೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸಾಮಾನ್ಯ ಫಲಿತಾಂಶಗಳನ್ನು ತರುತ್ತದೆ. ಇಂದಿನ ದಿನ ಭವಿಷ್ಯ ಹೀಗಿದೆ.
ಮೇಷ ರಾಶಿ
ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದಾದ ಕೆಲವು ಪ್ರಮುಖ ಜವಾಬ್ದಾರಿಗಳಿಗೆ ಸಿದ್ಧರಾಗಿರಿ. ಪ್ರೀತಿಯಲ್ಲಿರುವವರು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಕ್ಷಣಗಳನ್ನು ಎಂಜಾಯ್ ಮಾಡಲಿದ್ದೀರಿ.
ವೃಷಭ ರಾಶಿ
ಇಂದು ಹಣಕಾಸಿಗೆ ಸಂಬಂಧಿಸಿದಂತೆ ಉತ್ತಮ ಆದಾಯ ದೊರೆಯಲಿದೆ, ವೃತ್ತಿಜೀವನದಲ್ಲಿ ಪ್ರಗತಿಗೆ ಅವಕಾಶಗಳು ದೊರೆಯುತ್ತದೆ. ಸಮಸ್ಯೆಗಳನ್ನು ಪರಿಹರಿಸುವ ಕಲೆ ನಿಮಗೆ ತಿಳಿದಿದೆ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಿದ್ದರೆ ಅದರಿಂದ ಹೊರ ಬನ್ನಿ.
ಮಿಥುನ ರಾಶಿ
ಇಂದು ಕಠಿಣ ಪರಿಶ್ರಮದಿಂದ ಸವಾಲುಗಳನ್ನು ಎದುರಿಸಿ. ಹಣಕಾಸಿನ ತೊಂದರೆ ಇರುವುದಿಲ್ಲ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ನಿಮ್ಮ ಪ್ರೀತಿಯ ಜೀವನವು ಇನ್ನಷ್ಟು ಗಟ್ಟಿಯಾಗಿರುತ್ತದೆ.
ಇದನ್ನೂ ಓದಿ: ಗಣೇಶನ ಈ ಮಂತ್ರಗಳನ್ನು ಪಠಿಸಿದರೆ ಸಮಸ್ಯೆಗಳಿಂದ ಮುಕ್ತಿ
ಕಟಕ ರಾಶಿ
ಇಂದು ನಿಮಗೆ ಶುಭ ದಿನವಾಗಿದೆ. ಪ್ರೀತಿಯ ವಿಷಯಗಳಲ್ಲಿ ರೊಮ್ಯಾಂಟಿಕ್ ಆಗಿರಲಿದ್ದೀರಿ. ಇಂದು ವೃತ್ತಿಪರ ಜೀವನದಲ್ಲಿ ಬದಲಾವಣೆಗಳಾಗಲಿವೆ, ತಜ್ಞರ ಸಲಹೆ ಪಡೆದು ಹಣಕಾಸಿನ ಹೂಡಿಕೆ ಮಾಡಿ.
ಸಿಂಹ ರಾಶಿ
ಆರೋಗ್ಯ ಸಮಸ್ಯೆ ಸುಧಾರಿಸುತ್ತದೆ, ಯಾವುದೇ ಗಂಭೀರ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ಪ್ರೀತಿಯ ಜೀವನದಲ್ಲಿ ಪರಸ್ಪರರ ನಡುವಿನ ಭಿನ್ನಾಭಿಪ್ರಾಯಗಳಿದ್ದರೆ ಮಾತನಾಡಿಕೊಂಡು ಪರಿಹಾರ ಮಾಡಿಕೊಳ್ಳಿ. ಕಚೇರಿಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಕನ್ಯಾ ರಾಶಿ
ಇಂದು ಕೆಲಸದ ಸ್ಥಳದಲ್ಲಿ ಯಾವುದೇ ಸವಾಲುಗಳು ಇರುವುದಿಲ್ಲ. ಪ್ರೀತಿ ಸಂಬಂಧಿತ ವಿಷಯಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಿರಿ.
ತುಲಾ ರಾಶಿ
ಇಂದು ತುಲಾ ರಾಶಿಯವರಿಗೆ ಧನಾತ್ಮಕ ದಿನವಾಗಿರುತ್ತದೆ. ಆರೋಗ್ಯವೂ ಚೆನ್ನಾಗಿರಲಿದೆ. ಒತ್ತಡದಿಂದ ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳದಿರಿ, ಉತ್ತಮ ಜೀವನಶೈಲಿಗೆ ಗಮನ ಕೊಡಿ.
ವೃಶ್ಚಿಕ ರಾಶಿ
ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕಚೇರಿಯಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಲು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ. ನೀವು ಇಂದು ಆರ್ಥಿಕವಾಗಿ ಸಮೃದ್ಧರಾಗುತ್ತೀರಿ. ಉದರ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಡಬಹುದು.
ಧನು ರಾಶಿ
ಇಂದು ಈ ರಾಶಿಯವರಿಗೆ ಸವಾಲುಗಳು ಮತ್ತು ಅವಕಾಶಗಳ ಮಿಶ್ರ ದಿನವಾಗಿದೆ. ದಿನವನ್ನು ಯಶಸ್ವಿಯಾಗಿ ಕಳೆದು ಖುಷಿಯಾಗಿರುವಿರಿ, ವೈಯಕ್ತಿಕ ಬೆಳವಣಿಗೆಗೆ ಅವಕಾಶ ಒದಗಿ ಬರಲಿದೆ. ನಿಮ್ಮ ಸಕಾರಾತ್ಮಕ ಮನೋಭಾವವು ಮುಖ್ಯವಾಗಿದೆ.
ಮಕರ ರಾಶಿ
ಇಂದು ಧೈರ್ಯ ಮತ್ತು ಉತ್ಸಾಹದಿಂದ ದಿನವನ್ನು ಆನಂದಿಸಿ. ಆರೋಗ್ಯಕರ ಆಹಾರವನ್ನು ಸೇವಿಸಿ. ಹೊಸ ಪ್ರೀತಿಯನ್ನು ಹುಡುಕಲು ಸಿದ್ಧರಾಗುವಿರಿ, ಸಮಸ್ಯೆಗಳನ್ನು ಸಕಾರಾತ್ಮಕ ರೀತಿಯಲ್ಲಿ ಪರಿಹರಿಸಿ.
ಕುಂಭ ರಾಶಿ
ಇಂದು ಉತ್ತಮ ವೃತ್ತಿಪರ ಅವಕಾಶಗಳು ನಿಮ್ಮ ದಿನವನ್ನು ಉತ್ತಮಗೊಳಿಸಬಹುದು. ಹಣಕಾಸಿನ ವಿಚಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ನಿಮ್ಮ ಹಣವನ್ನು ಇಂದು ಬುದ್ಧಿವಂತಿಕೆಯಿಂದ ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ. ಆರೋಗ್ಯವೂ ಚೆನ್ನಾಗಿರುತ್ತದೆ.
ಮೀನ ರಾಶಿ
ಪ್ರೀತಿಯಲ್ಲಿರುವವರು ನಿಮ್ಮ ನಡುವಿನ ವಿವಾದಗಳನ್ನು ಬಗೆಹರಿಸಲು ಸೂಕ್ತ ಪರಿಹಾರ ಕಂಡುಕೊಳ್ಳಿ. ಕಛೇರಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ. ಹಣಕಾಸಿನ ವ್ಯವಹಾರವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು. ಹೆಚ್ಚು ಒತ್ತಡ ತೆಗೆದುಕೊಳ್ಳಬೇಡಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.