ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಬ್ಯೂಟಿ ಪ್ರಾಡಕ್ಟ್‌ಗಳ ಮಾರಾಟದಲ್ಲಿ ಈ ರಾಶಿಯವರಿಗೆ ಅಧಿಕ ಲಾಭವಿದೆ; ಶನೈಶ್ಚರನ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

Horoscope Today: ಬ್ಯೂಟಿ ಪ್ರಾಡಕ್ಟ್‌ಗಳ ಮಾರಾಟದಲ್ಲಿ ಈ ರಾಶಿಯವರಿಗೆ ಅಧಿಕ ಲಾಭವಿದೆ; ಶನೈಶ್ಚರನ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ.

3 ಜೂನ್‌ 2023ರ ರಾಶಿಫಲ
3 ಜೂನ್‌ 2023ರ ರಾಶಿಫಲ

ಇಂದಿನ ಪಂಚಾಂಗ: ಶೋಭಕೃತ ನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲ ಪಕ್ಷ-ಶನಿವಾರ

ತಿಥಿ: ಚತುರ್ದಶಿ ಬೆಳಗ್ಗೆ10.04 ವರೆಗೆ, ನಂತರ ಹುಣ್ಣಿಮೆ ಆರಂಭವಾಗುತ್ತದೆ.

ನಕ್ಷತ್ರ: ಅನುರಾಧ ನಕ್ಷತ್ರ ರಾತ್ರಿ 04.58 ವರೆಗೆ ಇದ್ದು ನಂತರ ಜ್ಯೇಷ್ಠ ನಕ್ಷತ್ರ ಆರಂಭವಾಗುತ್ತವೆ.

ಸೂರ್ಯೋದಯ: ಬೆಳಗ್ಗೆ 05:39 - ಸೂರ್ಯಾಸ್ತ: ಸಂಜೆ 06:57

ರಾಹುಕಾಲ: ಮಧ್ಯಾಹ್ನ 12:18 ರಿಂದ 01:58 ವರೆಗೆ

ಮೇಷ

ಆಧುನಿಕ ವೈದ್ಯ ಪದ್ಧತಿಗೆ ಪರ್ಯಾಯವಾಗಿ ನಿಮಗೊಂದು ವೈದ್ಯ ವಿದ್ಯೆ ಒಲಿಯುತ್ತದೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಸೋದರನ ಕಷ್ಟ ನಷ್ಟಗಳಿಗೆ ಸಹಾಯ ಮಾಡುವಿರಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಬಾರದು. ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ . ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಭೂವಿವಾದ ಇರುತ್ತದೆ. ಸಂಗಾತಿಯ ಸಹಾಯದಿಂದ ಹೊಸ ವ್ಯಾಪಾರ ಆರಂಭಿಸುವಿರಿ. ಲೋಹದ ವ್ಯಾಪಾರದಲ್ಲಿ ಲಾಭವಿರುತ್ತದೆ. ಆಂತರಿಕ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ.

ಹಳದಿ ವಸ್ತುಗಳನ್ನು ದಾನ ನೀಡಿ ದಿನದ ಕೆಲಸವನ್ನು ಆರಂಭಿಸಿ.

ವೃಷಭ

ಉದ್ಯೋಗದ ಆರಂಭದಲ್ಲಿ ಆತಂಕದ ಪರಿಸ್ಥಿತಿಯನ್ನು ಎದುರಿಸುವಿರಿ. ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಹಣಕಾಸಿನ ವಾಣಿಜ್ಯ ಸಂಸ್ಥೆಯನ್ನು ಆರಂಭಿಸುವಿರಿ. ಭಯದ ಮನಸ್ಸಿರುವ ಕಾರಣ ಹಣಕಾಸಿನ ವ್ಯವಹಾರವನ್ನು ಮಾಡುವುದಿಲ್ಲ. ಬುದ್ಧಿವಂತಿಕೆಯೇ ನಿಜವಾದ ಬಂಡವಾಳವಾಗಿರುತ್ತದೆ. ಸಮಾಜಸೇವೆ ಮಾಡುವ ಇಚ್ಚೆ ಇರುತ್ತದೆ. ಆಗಬೇಕಾದ ವಿವಾಹಕ್ಕೆ ತಡೆ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಗಮನ ಇರಲಿ. ಕುಟುಂಬದ ಹಣಕಾಸಿನ ವಿವಾದಕ್ಕೆ ಪರಿಹಾರವೊಂದನ್ನು ನೀಡುವಿರಿ. ಪೂಜಾ ಸಾಮಾಗ್ರಿಗಳ ಮಾರಾಟದಲ್ಲಿ ಲಾಭವಿರುತ್ತದೆ.

ಧಾರ್ಮಿಕ ಕೇಂದ್ರಕ್ಕೆ ಹಾಲು,ಮೊಸರು ನೀಡಿ ದಿನದ ಕೆಲಸವನ್ನುಆರಂಭಿಸಿ.

ಮಿಥುನ

ದುಡುಕಿನ ಗುಣ ಇರದು. ಯಾವುದೇ ವಿಚಾರವಾದರೂ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ಉದ್ಯೋಗದಲ್ಲಿ ಅಡ್ಡಿ ಆತಂಕಗಳು ಇರುವುದಿಲ್ಲ. ಔಷಧಿಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಎಳನೀರು ಮತ್ತು ಇನ್ನಿತರ ಹಣ್ಣಿನ ರಸದ ಮಾರಾಟದಲ್ಲಿ ಹೆಚ್ಚಿನ ಆದಾಯ ಇರುತ್ತದೆ. ಅತಿಯಾದ ಆಸೆ ಆಕಾಂಕ್ಷೆಗಳು ನೆಮ್ಮದಿ ಇಲ್ಲದಂತೆ ಮಾಡುತ್ತದೆ. ಬೇಸರದಿಂದ ಹೊರ ಬರಲು ಪರಸ್ಥಳದಲ್ಲಿ ಕೆಲ ದಿನ ನೆಲಸುವಿರಿ. ಹೊಸ ವಾಹನವನ್ನು ಕೊಳ್ಳುವಿರಿ. ಬೇರೆಯವರ ಅಧೀನದಲ್ಲಿ ವ್ಯಾಪಾರ ವ್ಯವಹಾರವನ್ನು ಮಾಡದಿರಿ.

ಬೆಳ್ಳಿ ಸರದಲ್ಲಿ ತಾಮ್ರದ ನಾಣ್ಯವನ್ನು ಧರಿಸಿದಲ್ಲಿ ಶುಭಫಲಗಳು ದೊರೆಯುತ್ತವೆ.

ಕಟಕ

ಕೆಲಸ ಕಾರ್ಯಗಳನ್ನು ಸರಿಯಾಗಿ ಅವಲೋಕಿಸಿ ಮುಂದುವರೆಯಿರಿ. ಪ್ರತಿ ಸಮಸ್ಯೆಗೂ ಪರಿಹಾರವನ್ನು ಕಂಡು ಕಾಣವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಹಿರಿಯ ಅಧಿಕಾರಿಗಳ ಸಹಾಯವಿರುತ್ತದೆ. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಸಂಸ್ಥೆಯನ್ನು ಆರಂಭಿಸುವಿರಿ. ಸಂಚಾರ ಸಂಬಂಧಿತ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಬಿದ್ದು ತಲೆಗೆ ಪೆಟ್ಟಾಗಬಹುದು. ತಾತ ಜೀವನದಲ್ಲಿ ವೈರಾಗ್ಯ ಭಾವನೆ ಮೂಡುತ್ತದೆ. ಹೊಸ ಭೂಮಿ ಅಥವಾ ಮನೆ ಕೊಳ್ಳುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸುವಿರಿ.

ಬಂಗಾರದ ಉಂಗುರ ಬಲಗೈಯಲ್ಲಿ ಇರಲಿ.

ಸಿಂಹ

ನೇರವಾದ ನಡೆನುಡಿ ಇರುತ್ತದೆ. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಲೆಕ್ಕಾಚಾರದ ಬುದ್ಧಿ ಇರುತ್ತದೆ. ಕಾನೂನು ಪಾಲಕರಿಗೆ ಸಂತಸದ ಸುದ್ಧಿಯೊಂದು ಬರಲಿದೆ. ಉದ್ಯೋಗ ಸುಗಮವಾಗಿ ಸಾಗಲಿದೆ. ವಿದ್ಯಾರ್ಥಿಗಳು ಮನರಂಜನೆಯನ್ನು ಕಡಿಮೆ ಮಾಡಬೇಕು. ಸ್ವಗೃಹ ಲಾಭವಿದೆ. ಬರವಣಿಗೆಯಲ್ಲಿ ವಿಶೇಷವಾದ ಸ್ಥಾನ ಮಾನ ಲಭಿಸುತ್ತದೆ. ಪುರಾತನ ಶಾಸ್ತ್ರ ಸಂಪ್ರದಾಯಗಳಲ್ಲಿ ನಂಬಿಕೆ ಇರುತ್ತದೆ. ಕುಟುಂಬದಲ್ಲಿ ಮಂಗಳಕಾರ್ಯ ನೆರವೇರಲಿದೆ. ಪಾಲುಗಾರಿಕೆಯಲ್ಲಿ ಸ್ಟಾಕ್ ಷೇರಿನ ಸಲಹಾ ಕೇಂದ್ರವನ್ನು ಆರಂಭಿಸುವಿರಿ. ಮುಂಗೋಪದ ಕಾರಣ ಎಲ್ಲರೂ ನಿಮ್ಮಿಂದ ದೂರ ಉಳಿಯಲು ಪ್ರಯತ್ನಿಸುತ್ತಾರೆ.

ಬಿಳಿ ಬಣ್ಣದಿಂದ ಲಾಭವಿದೆ.

ಕನ್ಯಾ

ಬುದ್ಧಿವಂತರು, ಸಹೃದಯರು ಆದರೆ ಯಾವುದೇ ವಿಷಯವಾದರೂ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾರಿರಿ. ಅತಿಯಾದ ಮಾತಿನಿಂದ ವಿವಾದವನ್ನು ಎದುರಿಸಬೇಕಾದೀತು. ಸಂಗಾತಿಯ ಸಹಾಯ ಸಹಕಾರ ಸದಾ ಇರುತ್ತದೆ. ಉದ್ಯೋಗದಲ್ಲಿ ತೊಂದರೆ ಇರುವುದಿಲ್ಲ. ಹಾಗೆಯೇ ಸಂತೃಪ್ತಿಯೂ ಸಿಗದು. ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಬಲ್ಲರು. ಗೃಹಬಳಕೆಯ ವೈಭವಯುತ ವಸ್ತುಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಕೃಷಿ ಭೂಮಿಯ ಪರಭಾರೆಯಲ್ಲಿ ಲಾಭವಿರುತ್ತದೆ. ಭೂವ್ಯವಹಾರದಲ್ಲಿ ವಿಶೇಷ ಲಾಭವಿರುತ್ತದೆ. ಜನಸೇವೆಯಿಂದ ಸಮಾಜದ ಉನ್ನತ ಸ್ಥಾನ ದೊರೆಯುತ್ತದೆ. ಬಡಮಕ್ಕಳಿಗೆ ಪುಸ್ತಕ ಸಾಮಗ್ರಿಯನ್ನು ನೀಡುವ ಮೂಲಕ ದಿನದ ಕೆಲಸ ಆರಂಭಿಸಿ.

ತುಲಾ

ಕುಟುಂಬದ ಒಳಿತಿಗೆ ವಿಶ್ರಾಂತಿ ಇಲ್ಲದೆ ದುಡಿಯುವಿರಿ. ಸರಸ್ವತಿ ನಿಮಗೆ ಒಲಿಯಲಿದ್ದಾಳೆ. ಶಾಲಾ ಕಾಲೇಜನ್ನು ಆರಂಭಿಸುವ ಯೋಜನೆ ಆರಂಭಿಸುವಿರಿ. ಹಣಕಾಸಿನ ವಾಣಿಜ್ಯ ಸಂಸ್ಥೆಯ ಉದ್ಯೋಗದಲ್ಲಿ ಶುಭವಿದೆ. ಕೆಲಸದ ನಡುವೆ ವಿಶ್ರಾಂತಿ ಪಡೆಯಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉನ್ನತ ಮಟ್ಟ ತಲುಪುವರು. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಬೇಸಾಯದಲ್ಲಿ ಆಸಕ್ತಿಇದ್ದು ಕೃಷಿ ಭೂಮಿಯನ್ನು ಕೊಳ್ಳುವಿರಿ. ಸಮಾಜದಲ್ಲಿ ಗೌರವದ ಸ್ಥಾನ ಮಾನ ದೊರೆಯುತ್ತದೆ. ವಿದೇಶ ಪ್ರವಾಸ ಯೋಗವಿದೆ.

ಕಿರಿಯ ಸೋದರನಿಗೆ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿ.

ವೃಶ್ಚಿಕ

ಕೋಪ ಕಡಿಮೆ ಮಾಡಿಕೊಳ್ಳಿ. ಉದ್ಯೋಗದಲ್ಲಿ ಕಹಿ ಘಟನೆಯೊಂದು ನಡೆಯುತ್ತದೆ. ತಂದೆಯವರ ಉದ್ಯಮದಲ್ಲಿ ಸಹಾಯ ಮಾಡುವ ನಿರ್ಧಾರಕ್ಕೆ ಬರುವಿರಿ. ಆತ್ಮೀಯ ಸ್ನೇಹಿತರೊಬ್ಬರು ಹಣದ ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳು ಕೊಂಚ ಹೆಚ್ಚಿನ ಪ್ರಯತ್ನದಿಂದ ಗುರಿ ತಲುಪುವರು. ಬಾಳ ಸಂಗಾತಿಯ ಪಾಲುಗಾರಿಕೆಯಲ್ಲಿ ವ್ಯಾಪಾರವೊಂದನ್ನು ಆರಂಭಿಸಿ ಅಲ್ಪ ಮಟ್ಟಿನ ಯಶಸ್ಸು ಗಳಿಲಿದ್ದೀರಿ. ಪ್ರೀತಿ ವಿಶ್ವಾಸದಿಂದ ಜನರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿ. ಭೂವ್ಯವಹಾರದಲ್ಲಿ ಹಿನ್ನೆಡೆ ಇರುತ್ತದೆ.

ಚಿಕ್ಕ ಮಕ್ಕಳಿಗೆ ಕುಡಿಯಲು ಹಾಲು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಧನಸ್ಸು

ಕುಟುಂಬದವರ ಬೆಂಬಲದಿಂದ ನಿಮ್ಮೆಲ್ಲಾ ಕೆಲಸ ಸಲೀಸಾಗಲಿದೆ. ಮನೆಯನ್ನು ಕೊಳ್ಳುವ ಮಾರುವ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ. ಉದ್ಯೋಗದಲ್ಲಿ ತೊಂದರೆ ಇಲ್ಲ. ಮಹಿಳೆಯರು ಬಳಸುವ ಸುಗಂಧ ದ್ರವ್ಯ ಮತ್ತು ಪ್ರಸಾದನ ವ್ಯಾಪಾರದಲ್ಲಿ ಲಾಭವಿದೆ. ಪಾಲುಗಾರಿಕೆಯ ವ್ಯಾಪಾರವೊಂದನ್ನು ಅರ್ಧಕ್ಕೆ ನಿಲ್ಲಿಸುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ಹಣದ ಅವಶ್ಯಕತೆ ಇರುತ್ತದೆ. ಕೋಪ ಬಂದಷ್ಟೇ ಬೇಗ ಮರೆಯಾಗುತ್ತದೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು ಉಂಟಾಗಲಿವೆ.

ನಿಮ್ಮ ತಂದೆ ಅಥವಾ ಮನೆಯಲ್ಲಿ ವಯೋವೃದ್ಧರಿಗೆ(ಪುರುಷ೦ ರವೆಯಿಂದ ಮಾಡಿದ ಸಿಹಿನೀಡಿ ದಿನದ ಕೆಲಸ ಆರಂಭಿಸಿ.

ಮಕರ

ದುಡಿಮೆಯನ್ನು ಗೌರವಿಸುವಿರಿ. ಯಾವುದೇ ಕೆಲಸವನ್ನು ಸುಲಲಿತವಾಗಿ ಮಾಡಬಲ್ಲಿರಿ. ವೃತ್ತಿ ಜೀವನದಲ್ಲಿ ಉತ್ತಮ ಫಲಗಳು ದೊರೆಯುತ್ತವೆ. ಅಧಿಕಾರಿಗಳ ಪ್ರಶಂಸೆ ದೊರೆಯುತ್ತದೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮುಂದಿರುತ್ತಾರೆ. ಬೆಳ್ಳಿ ಮತ್ತು ಚಿನ್ನಾಭರಣಗಳ ತಯಾರಿಕೆ ಮತ್ತು ಮಾರಾಟದಲ್ಲಿ ಲಾಭ ಗಳಿಸುವಿರಿ. ಸ್ವಂತ ಮನೆಯನ್ನು ಕೊಳ್ಳುವಿರಿ. ಸಂಸಾರದಲ್ಲಿನ ವಿವಾದವೊಂದು ದೂರಾಗಲಿದೆ. ಸಂತಾನ ಲಾಭವಿದೆ. ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಸಾಲದ ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು.

ಶ್ರಮಿಕ ವರ್ಗಕ್ಕೆ ಆಹಾರ ವ್ಯವಸ್ಥೆ ಮಾಡಿದ ನಂತರ ದಿನದ ಕೆಲಸವನ್ನು ಆರಂಭಿಸಿ

ಕುಂಭ

ಸಹನೆಯಿಂದ ಕಷ್ಟ ನಷ್ಟಗಳನ್ನು ಎದುರಿಸುವಿರಿ. ಗಣ್ಯ ವ್ಯಕ್ತಿಗಳ ಸಹವಾಸ ಇರುತ್ತದೆ. ವೈಭವಯುತ ಆಭರಣಗಳಿಗೆ ಹಣ ಖರ್ಚು ಮಾಡುವಿರಿ. ವಿಶೇಷವಾದ ವಿದ್ಯೆಯೊಂದನ್ನು ಕಲಿಯುವಿರಿ. ಮನೆಯ ಸಂಪೂರ್ಣ ಜವಾಬ್ದಾರಿ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಉನ್ನತಿ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಮಹತ್ತರ ಅವಕಾಶ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಶುಭವಿದೆ. ವಸ್ತ್ರ ವಿನ್ಯಾಸಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಕರಿದ ತಿಂಡಿಗಳ ಮಳಿಗೆಯಿಂದ ಲಾಭವಿದೆ.

ಧಾರ್ಮಿಕ ಕೇಂದ್ರಕ್ಕೆ ಉಪ್ಪು ಮತ್ತು ಬೆಲ್ಲ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಮೀನ

ಕುಟುಂಬದಲ್ಲಿನ ಸಮಸ್ಯೆಯೊಂದನ್ನು ಬಗೆಹರಿಸುವಿರಿ. ದುಡುಕುತನದ ಮಾತು ನೆಮ್ಮದಿಯನ್ನು ಕಡಿಮೆ ಮಾಡುತ್ತದೆ. ಉದ್ಯೋಗದಲ್ಲಿ ಸಂತಸದ ಕ್ಷಣಗಳು ಇರುತ್ತವೆ. ಕಟ್ಟಡದ ಸಾಮಗ್ರಿಗಳ ಸರಬರಾಜಿನ ವಹಿವಾಟಿನಲ್ಲಿ ಲಾಭವಿರುತ್ತದೆ. ವೈದ್ಯಕೀಯ ಉಪಕರಣಗಳ ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ. ಹಣದ ತೊಂದರೆ ಇರುವುದಿಲ್ಲ. ಮಕ್ಕಳಿಗೆ ಬೃಹತ್ ವಿದ್ಯಾಸಂಸ್ಥೆಯೊಂದರಲ್ಲಿ ಉದ್ಯೋಗ ಲಭಿಸುತ್ತದೆ. ಹಾಡುಗಾರರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭ್ಯವಾಗುತ್ತದೆ. ಭೂವ್ಯವಹಾರದಲ್ಲಿ ಹಣದ ಪಾಲು ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ವಯೋವೃದ್ಧರಿಗೆ ಆಹಾರದ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.