ಕನ್ನಡ ಸುದ್ದಿ  /  Astrology  /  Horoscope Today Astrological Prediction For February 6th 2023

Horoscope Today for February 6 2023: ಮೀನ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಬೇಕು! ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

Horoscope Today for February 6, 2023: ಫೆ.6 ರಂದು ಅಂದರೆ ಇಂದು ಮೇಷ, ಸಿಂಹ, ಕನ್ಯಾ, ತುಲಾ ಮತ್ತು ಇತರ ರಾಶಿಚಕ್ರಗಳ ದಿನಭವಿಷ್ಯ ವಿವರ ಇಲ್ಲಿದೆ. ಆಯಾ ರಾಶಿಚಕ್ರಗಳು ವ್ಯಕ್ತಿಗಳ ವ್ಯಕ್ತಿತ್ವವನ್ನು ಬಿಂಬಿಸುವಂಥದ್ದು. ದಿನಚರಿ ಆರಂಭಿಸುವ ಮೊದಲು ನಿತ್ಯಭವಿಷ್ಯ (Astrological prediction for February 6 2023) ಗಮನದಲ್ಲಿರಲಿ.

ಇಂದಿನ ನಿಮ್ಮ ಭವಿಷ್ಯ ತಿಳಿಯಿರಿ
ಇಂದಿನ ನಿಮ್ಮ ಭವಿಷ್ಯ ತಿಳಿಯಿರಿ

ಸೂರ್ಯೋದಯ - ಬೆಳಗ್ಗೆ 6:45 (ಬೆಂಗಳೂರು ಸಮಯ)

ಸೂರ್ಯಾಸ್ತ - ಸಂಜೆ 6:22

ತಿಥಿ - ಪ್ರತಿಪದ (ಫೆ.7ರ ಬೆಳಗ್ಗೆ 2:18ರ ತನಕ)

ನಕ್ಷತ್ರ - ಅಶ್ಲೇಷ (ಮಧ್ಯಾಹ್ನ 3:03ರ ತನಕ)

ಮೇಷ ರಾಶಿ (ARIES) (ಮಾರ್ಚ್‌ 21- ಏಪ್ರಿಲ್ 20)

ಮೇಷ ರಾಶಿಯವರಿಗೆ ಇಂದು ಮಾಧ್ಯಮದಿಂದ ಕೂಡಿದ ಫಲಿತಾಂಶಗಳು ಇವೆ. ಹೆಚ್ಚಿನ ಒತ್ತಡದಲ್ಲಿ ಇರುತ್ತೀರಿ. ಕೆಲಸ ಮತ್ತು ಮಾತಿನ ವಿಷಯಗಳಲ್ಲಿ ಕಿರಿಕಿರಿ ಉಂಟಾಗುತ್ತದೆ. ಜಗಳಗಳಿಂದ ದೂರವಿರಬೇಕು. ಆತುರದ ನಿರ್ಧಾರಗಳು ತೊಂದರೆಗೆ ಕಾರಣವಾಗುತ್ತವೆ. ಚಿಂತನಶೀಲ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ತರುತ್ತವೆ. ಖರ್ಚು ಅಧಿಕವಾಗಲಿದೆ. ಉದ್ಯೋಗಿಗಳಿಗೆ ಸಕಾರಾತ್ಮಕ ಫಲಿತಾಂಶಗಳಿದ್ದರೂ, ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಉದ್ಯಮಿಗಳಿಗೆ ಅನುಕೂಲಕರ ಫಲಿತಾಂಶಗಳಿವೆ. ಮಹಿಳೆಯರು ಕೌಟುಂಬಿಕ ವಿಚಾರದಲ್ಲಿ ಕಾಳಜಿ ವಹಿಸಬೇಕು.

ವೃಷಭ ರಾಶಿ (TAURUS) (ಏಪ್ರಿಲ್‌ 21- ಮೇ 20)

ವೃಷಭ ರಾಶಿಯವರಿಗೆ ಇಂದು ಸಾಧಾರಣ ಫಲಿತಾಂಶಗಳಿವೆ. ಆರೋಗ್ಯ ವಿಷಯಗಳಲ್ಲಿ ಕಾಳಜಿ ವಹಿಸಬೇಕು. ಹಠಾತ್ ನಿರ್ಧಾರಗಳಿಂದ ದೂರವಿರಬೇಕು. ಟುಂಬ ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಮತ್ತು ವಿವಾದಗಳ ಸೂಚನೆಗಳಿವೆ. ವಿವಾದಗಳನ್ನು ತಪ್ಪಿಸಬೇಕು. ಒತ್ತಡ ಮತ್ತು ನೋವುಗಳು ಅಧಿಕವಾಗಿರುತ್ತವೆ. ಆರ್ಥಿಕ ಲಾಭವಾಗುತ್ತದೆ. ಉದ್ಯೋಗಿಗಳಿಗೆ ಲಾಭದಾಯಕವಾಗಿರುತ್ತದೆ. ಉದ್ಯಮಿಗಳಿಗೆ ಇಂದು ಅನುಕೂಲಕರವಾಗಿದೆ. ಮಹಿಳೆಯರಿಗೆ ಮಾನಸಿಕ ಯಾತನೆ ಮತ್ತು ಆರೋಗ್ಯ ಸಮಸ್ಯೆಗಳು ಅಧಿಕವಾಗಿರುತ್ತದೆ.

ಮಿಥುನ ರಾಶಿ (GEMINI) (ಮೇ 21- ಜೂನ್‌ 21)

ಮಿಥುನ ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಫಲಿತಾಂಶಗಳು ಇವೆ. ಕುಟುಂಬದಲ್ಲಿ ವಿವಾದಗಳು ಮತ್ತು ಅನಾರೋಗ್ಯ ಸಮಸ್ಯೆಗೆ ಕಾರಣವಾಗಲಿದೆ. ವೆಚ್ಚವನ್ನು ನಿಯಂತ್ರಿಸಲು ಸಲಹೆ. ವೃತ್ತಿಪರ ಉದ್ಯೋಗಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಾಕಷ್ಟು ಮಾನಸಿಕ ಚಿಂತೆಗಳು ಮತ್ತು ನೋವುಗಳು ಉಂಟಾಗುತ್ತವೆ. ಉದ್ಯಮಿಗಳಿಗೆ ಅನುಕೂಲಕರ ಫಲಿತಾಂಶಗಳು ದೊರೆಯುತ್ತವೆ. ಸಮಸ್ಯೆಗಳು ಮತ್ತು ಒತ್ತಡಗಳನ್ನು ಕೌಶಲ್ಯದಿಂದ ಜಯಿಸಲಾಗುವುದು.

ಕರ್ಕಾಟಕ ರಾಶಿ (CANCER) (ಜೂನ್‌ 22- ಜುಲೈ 22)

ಕರ್ಕಾಟಕ ರಾಶಿಯವರಿಗೆ ಇಂದು ಕೆಟ್ಟ ಫಲಿತಾಂಶಗಳು ಹೆಚ್ಚು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಮಯ. ಕೌಟುಂಬಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೊಸ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸುತ್ತೀರಿ. ಕೌಟುಂಬಿಕ ವಿಷಯಗಳು, ನ್ಯಾಯಾಲಯದ ವ್ಯವಹಾರಗಳು ಮತ್ತು ಆರೋಗ್ಯ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಉದ್ಯೋಗಿಗಳಿಗೆ ಅನುಕೂಲಕರ ಫಲಿತಾಂಶಗಳು ಉಂಟಾಗುತ್ತವೆ. ಮಹಿಳೆಯರು ಆರೋಗ್ಯ ವಿಚಾರಗಳಲ್ಲಿ ಕಾಳಜಿ ವಹಿಸಬೇಕು.

ಸಿಂಹ ರಾಶಿ (LEO) (ಜುಲೈ 23 - ಆಗಸ್ಟ್‌ 23)

ಸಿಂಹ ರಾಶಿಯವರು ಇಂದು ಮಧ್ಯಮದಿಂದ ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಅಷ್ಟಮ ಗುರುವಿನ ಪ್ರಭಾವದಿಂದ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಭಾಗ್ಯದಲ್ಲಿ ರಾಹು ಮತ್ತು ಅಷ್ಟಮದಲ್ಲಿ ಗುರುವಿನ ಪ್ರಭಾವ ಇರುವುದರಿಂದ ಸಿಂಹ ರಾಶಿಯವರು ಆರೋಗ್ಯ ಮತ್ತು ಕೌಟುಂಬಿಕ ವಿಚಾರಗಳ ಬಗ್ಗೆ ಕಾಳಜಿ ವಹಿಸಬೇಕು. ಕೌಟುಂಬಿಕ ವ್ಯವಹಾರಗಳನ್ನು ನಿಭಾಯಿಸುವುದು ಒಳ್ಳೆಯದು. ಇಂದಿನ ಉದ್ಯೋಗ ವ್ಯವಹಾರಗಳು ಹೆಚ್ಚು ಧನಾತ್ಮಕ ಫಲಿತಾಂಶಗಳನ್ನು ಕಾಣುತ್ತಿವೆ. ವಿದ್ಯಾರ್ಥಿಗಳಿಗೆ ಶುಭ ವಾರ. ಮಹಿಳೆಯರಿಗೆ ಅನುಕೂಲಕರವಾಗಿದೆ.

ಕನ್ಯಾರಾಶಿ (VIRGO) (ಆಗಸ್ಟ್‌ 24- ಸೆಪ್ಟೆಂಬರ್‌ 23)

ಕನ್ಯಾ ರಾಶಿಯವರಿಗೆ ಇಂದು ಅನುಕೂಲಕರವಾಗಿದೆ. ಇವತ್ತು ಮಾಡುವ ಪ್ರತಿಯೊಂದು ಕೆಲಸವೂ ಅನುಕೂಲಕರವಾಗಿರುತ್ತದೆ. ಆರ್ಥಿಕ ಲಾಭ ಮತ್ತು ಕುಟುಂಬ ಸೌಕರ್ಯ ಇರುತ್ತದೆ. ಸಮಾಜದಲ್ಲಿ ಕೀರ್ತಿ ಇರುತ್ತದೆ. ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸುತ್ತೀರಿ. ನೀವು ನಿಮ್ಮ ಎಲ್ಲಾ ಯೋಜಿತ ಕೆಲಸಗಳನ್ನು ಯೋಜಿಸಿದಂತೆ ಪೂರ್ಣಗೊಳಿಸುತ್ತೀರಿ. ಹಣದ ವಿಷಯಗಳು ಅನುಕೂಲಕರವಾಗಿವೆ. ನೀವು ಮಾಡುವ ಎಲ್ಲದರಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ. ಆರೋಗ್ಯ ಮತ್ತು ಕೌಟುಂಬಿಕ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.

ತುಲಾ ರಾಶಿ (LIBRA) (ಸೆಪ್ಟೆಂಬರ್‌ 24- ಅಕ್ಟೋಬರ್‌ 23)

ತುಲಾ ರಾಶಿಯವರಿಗೆ ಇಂದು ಮಧ್ಯಮದಿಂದ ಅನುಕೂಲಕರ ಫಲಿತಾಂಶಗಳಿವೆ. ತಮ್ಮ ಕೆಲಸದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಶತ್ರುಗಳಿಂದ ಬಳಲುತ್ತೀರಿ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಯೋಜಿತ ಕಾರ್ಯಗಳನ್ನು ಯೋಜಿಸಿದಂತೆ ಪೂರ್ಣಗೊಳಿಸುತ್ತೀರಿ. ಕಿರಿಕಿರಿ ಮತ್ತು ಒತ್ತಡವನ್ನು ಉಂಟುಮಾಡುತ್ತದೆ. ವ್ಯಾಪಾರಿಗಳು ಸಾಧಾರಣ ಫಲಿತಾಂಶಗಳನ್ನು ಪಡೆಯುತ್ತಾರೆ. ಮಹಿಳೆಯರಿಗೆ ಕುಟುಂಬದಲ್ಲಿ ನೆಮ್ಮದಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ವೃಶ್ಚಿಕ ರಾಶಿ(SCORPIO) (ಅಕ್ಟೋಬರ್‌ 24 - ನವೆಂಬರ್‌ 22)

ವೃಶ್ಚಿಕ ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಫಲಿತಾಂಶಗಳು ಇವೆ. ಕೌಟುಂಬಿಕ ಸಮಸ್ಯೆ ಹಾಗೂ ಕೆಲಸದ ಒತ್ತಡ ಅಧಿಕವಾಗಲಿದೆ. ವೃಶ್ಚಿಕ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಿವಾದಗಳನ್ನು ತಪ್ಪಿಸುವುದು ಸೂಕ್ತ. ಆರ್ಥಿಕ ಲಾಭ ಇದೆ. ಉದ್ಯೋಗಿಗಳು ಕೆಲಸದಲ್ಲಿ ಒತ್ತಡದಲ್ಲಿದ್ದರೂ, ಯೋಜಿಸಿದ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ವ್ಯಾಪಾರಿಗಳಿಗೆ ಸಾಧಾರಣ ಫಲಿತಾಂಶವಿದೆ.

ಧನು ರಾಶಿ (SAGITTARIUS) (ನವೆಂಬರ್‌ 23- ಡಿಸೆಂಬರ್‌ 21)

ಧನು ರಾಶಿಯವರಿಗೆ ಇಂದು ಅನುಕೂಲಕರವಾಗಿದೆ. ಪ್ರಯಾಣಕ್ಕೆ ಸೂಕ್ತ ದಿನವಾಗಿದೆ. ವ್ಯಾಪಾರಸ್ಥರಿಗೆ ಲಾಭ ಮತ್ತು ಉದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಅನುಕೂಲಕರ ದಿನ. ಧನಲಾಭವು ನೆಮ್ಮದಿಯ ಸಂಕೇತವಾಗಿದೆ.

ಮಕರ ರಾಶಿ (CAPRICORN) (ಡಿಸೆಂಬರ್‌ 22- ಜನವರಿ 21)

ಮಕರ ರಾಶಿಯವರಿಗೆ ಇಂದು ಅನುಕೂಲಕರವಾಗಿಲ್ಲ. ಆರೋಗ್ಯ ಸಮಸ್ಯೆಗಳು ಅಧಿಕವಾಗಿದ್ದು ಮಾನಸಿಕ ಒತ್ತಡ ಅಧಿಕವಾಗಿರುತ್ತದೆ. ಖರ್ಚುಗಳು ಹೆಚ್ಚಾಗುತ್ತವೆ. ಜಗಳಗಳಿಂದ ದೂರವಿರಬೇಕು. ಖರ್ಚನ್ನು ನಿಯಂತ್ರಿಸುವ ಅಗತ್ಯವಿದೆ. ಆರೋಗ್ಯದ ವಿಷಯಗಳ ಬಗ್ಗೆ ಕಾಳಜಿ ವಹಿಸಿ. ರಾಜಕೀಯ ಒತ್ತಡ ಹೆಚ್ಚಿದೆ. ಕೆಲ ವಿಚಾರಗಳು ಕಿರಿಕಿರಿ ಉಂಟುಮಾಡುತ್ತವೆ. ಶತ್ರುಗಳನ್ನು ಅಕ್ಕಪಕ್ಕದಲ್ಲಿ ನಿಭಾಯಿಸುವುದು ಉತ್ತಮ.

ಕುಂಭ ರಾಶಿ (AQUARIUS) (ಜನವರಿ 22 - ಫೆಬ್ರವರಿ 19)

ಕುಂಭ ರಾಶಿಯವರಿಗೆ ಇಂದು ಕೆಟ್ಟ ಫಲಿತಾಂಶಗಳೇ ಹೆಚ್ಚು. ಪ್ರಭಾವದಿಂದ ಆರ್ಥಿಕ ಸಮಸ್ಯೆಗಳು, ಮಾನಸಿಕ ಒತ್ತಡಗಳು ಮತ್ತು ನೋವುಗಳು ಹೆಚ್ಚಾಗುತ್ತವೆ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಹಣಕಾಸಿನ ಸಮಸ್ಯೆಗಳ ಸೂಚನೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಹಲವು ಸಮಸ್ಯೆಗಳಿವೆ. ಉದ್ಯಮಿಗಳು ಸಾಲವನ್ನು ಪಡೆಯುತ್ತಾರೆ. ಕುಟುಂಬ ವ್ಯವಹಾರಗಳಲ್ಲಿ ಸಾಧಾರಣ ಫಲಿತಾಂಶ ಕಾಣುವಿರಿ. ಆರ್ಥಿಕ ಸಮಸ್ಯೆಗಳಿದ್ದರೂ ಹೇಗೋ ಮುಂದೆ ಸಾಗುತ್ತೀರಿ. ವಿದ್ಯಾರ್ಥಿಗಳು ಈ ದಿನ ಸರಾಸರಿ ಫಲಿತಾಂಶಗಳನ್ನು ಹೊಂದಿದ್ದಾರೆ.

ಮೀನ ರಾಶಿ (PISCES) (ಫೆಬ್ರವರಿ 20 - ಮಾರ್ಚ್‌ 20)

ಮೀನ ರಾಶಿಯವರಿಗೆ ಇಂದು ಅನುಕೂಲಕರವಾಗಿಲ್ಲ. ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಬೇಕು.ಮೀನ ರಾಶಿಯ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಸಾಧಾರಣ ಫಲಿತಾಂಶಗಳನ್ನು ಪಡೆಯುತ್ತಾರೆ. ರಾಜಕೀಯ ಒತ್ತಡಗಳು ಹೆಚ್ಚಾಗುತ್ತವೆ. ಆರೋಗ್ಯ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು.

ವಿಭಾಗ