Kannada News  /  Astrology  /  Horoscope Today: Astrological Prediction For January 27, 2023
ಮೇಷದಿಂದ ಮೀನ ರಾಶಿವರೆಗಿನ ದಿನಭವಿಷ್ಯ, ಇಂದು ಈ ರಾಶಿಯವರಿಗೆ ಮಾತ್ರ ಶುಭ ಶುಕ್ರವಾರ
ಮೇಷದಿಂದ ಮೀನ ರಾಶಿವರೆಗಿನ ದಿನಭವಿಷ್ಯ, ಇಂದು ಈ ರಾಶಿಯವರಿಗೆ ಮಾತ್ರ ಶುಭ ಶುಕ್ರವಾರ

Horoscope Today for January 26, 2023: ಮೇಷದಿಂದ ಮೀನ ರಾಶಿವರೆಗಿನ ದಿನಭವಿಷ್ಯ, ಇಂದು ಈ ರಾಶಿಯವರಿಗೆ ಮಾತ್ರ ಶುಭ ಶುಕ್ರವಾರ

27 January 2023, 6:19 ISTHT Kannada Desk
27 January 2023, 6:19 IST

Daily horoscope: ಎಲ್ಲಾ ರಾಶಿಚಕ್ರ ಚಿಹ್ನೆಗಳು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿದ್ದು, ಅದು ನಿಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ. ನೀವು ನಡೆಯುವ ದಾರಿಯಲ್ಲಿ ಏನಾಗಲಿದೆ ಎಂಬುದರ ಕುರಿತು ಮೊದಲೇ ತಿಳಿದಿರುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿದರೆ ಅದು ಸಹಾಯಕವಾಗುವುದಿಲ್ಲವೇ? ಇಂದು ನಿಮ್ಮ ಪರವಾಗಿ ರಾಶಿಚಕ್ರಗಳು ಇವೆಯೇ? ಶುಭ, ಅಶುಭ ಫಲಗಳು ಏನಿವೆ? ಎಂದು ತಿಳಿಯಲು ಮುಂದೆ ಓದಿ.

ಸೂರ್ಯೋದಯ: ಬೆಳಗ್ಗೆ 06:46

ಟ್ರೆಂಡಿಂಗ್​ ಸುದ್ದಿ

ಸೂರ್ಯಾಸ್ತ: ಸಂಜೆ 06:18

ಪಕ್ಷ: ಶುಕ್ಲ ಪಕ್ಷ

ತಿಥಿ: ಷಷ್ಠೀ (ರಾತ್ರಿ 09:10 ವರೆಗೆ)

ನಕ್ಷತ್ರ: ರೇವತಿ (ಸಂಜೆ 06:37 ವರೆಗೆ)

ಮೇಷ

ಹಿರಿಯರಿಂದ ಸಹಾಯ ದೊರಕಲಿದೆ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಬಾಂಧವ್ಯ ಸುಧಾರಿಸುವ ಸಾಧ್ಯತೆ ಇದೆ. ಕೆಲವರಿಗೆ ಹಣ ಉಡುಗೊರೆ ರೂಪದಲ್ಲಿ ದೊರಕಲಿದೆ. ಹೀಗಾಗಿ, ಶುಭ ಶುಕ್ರವಾರದ ಭಾವನೆ ಉಂಟಾಗಬಹುದು. ಪ್ರವಾಸಕ್ಕೆ ಯೋಜಿಸಿರುವ ಯೋಜನೆಗಳಲ್ಲಿ ಒಂದನ್ನು ಕಾರ್ಯರೂಪಕ್ಕೆ ತರುವಿರಿ. ನೀವು ಇತ್ತೀಚೆಗೆ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದರೆ, ಇಂದು ಲಾಭ ಬರಲಿದೆ. ವಿದ್ಯಾರ್ಥಿಗಳಿಗೆ ಸಂವಹನ ಕೌಶಲವು ಯಶಸ್ಸಿಗೆ ನೆರವು ನೀಡುತ್ತದೆ. ದೇಹದ ಆರೋಗ್ಯದ ಕುರಿತು ಕಾಳಜಿ ವಹಿಸಿ. ಅವಿವಾಹಿತರಿಗೆ ಇಂದು ಶುಭ ಸುದ್ದಿಯಿದೆ.

ವೃಷಭ

ಕೆಲಸದಲ್ಲಿ, ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಮತ್ತು ನೀಡಿರುವ ಕೆಲಸವನ್ನು ಪೂರ್ಣಗೊಳಿಸುವ ಮೂಲಕ ಆಶ್ಚರ್ಯಗೊಳಿಸುತ್ತೀರಿ. ಹೊಸ ಒಪ್ಪಂದ ಮಾಡಿಕೊಳ್ಳಬಹುದು. ಆರೋಗ್ಯ ಕಾಪಾಡಿಕೊಳ್ಳಲು ಆಕ್ರಮಣಶೀಲ ಮನೋಭಾವ ಬಿಟ್ಟುಬಿಡಿ. ಶಾಂತವಾಗಿರಿ. ಮನೆಯ ಖರ್ಚುವೆಚ್ಚಗಳನ್ನು ನಿಭಾಯಿಸುವಿರಿ. ಪ್ರವಾಸಕ್ಕೆ ಹೋಗುವ ಮೂಲಕ ಮಾನಸಿಕ ನೆಮ್ಮದಿ ದೊರಕಬಹುದು. ಆಸ್ತಿ ಮಾರಾಟಕ್ಕೆ ಇಂದು ಉತ್ತಮ ದಿನ. ಸಾಮಾಜಿಕ ಜೀವನದಲ್ಲಿ ಇಂದು ಗಮನ ಸೆಳೆಯುವಿರಿ. ಪ್ರೇಮಿಗಳು ರೋಮ್ಯಾಂಟಿಕ್‌ ಆಗಿ ಕಳೆಯುವರು.

ಮಿಥುನ

ಇಂದು ಬಿಡುವಿಲ್ಲದ ದಿನಚರಿ ನಿಮ್ಮದಾಗಿರುತ್ತದೆ. ನೀವು ಸೇವಿಸುವ ಆಹಾರದ ಕುರಿತು ನಿಗಾ ವಹಿಸಿ, ಅನಾರೋಗ್ಯಕಾರಿ ಜೀವನಶೈಲಿ ತಪ್ಪಿಸಿ. ಕುಟುಂಬ ಸದಸ್ಯರಿಂದ ಸಹಾಯ ದೊರಕಲಿದೆ. ಪೂರ್ವಸಿದ್ಧತೆಯಿಲ್ಲದೆ ಸಡನ್‌ ಪ್ರವಾಸಕ್ಕೆ ಯೋಜಿಸಲು ನೀವು ಹಿಂಜರಿಯುವುದಿಲ್ಲ. ಬ್ಯಾಂಕ್‌ ಬ್ಯಾಲೆನ್ಸ್‌ ಕೊಂಚ ಕಳವಳ ಉಂಟುಮಾಡಬಹುದು. ಹಣ ಉಳಿಸುವ ಉಪಾಯಗಳನ್ನು ಹುಡುಕಿ. ಆಸ್ತಿ ಮೇಲೆ ಹೂಡಿಕೆ ಉತ್ತಮ, ಲಾಭ ಖಚಿತ. ನೀವು ಮತ್ತು ಸ್ನೇಹಿತರು ಮೋಜಿಗಾಗಿ ಪ್ರಯತ್ನಿಸಬಹುದು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿಯಿದೆ.

ಕರ್ಕಾಟಕ

ನೀವು ನಿಮ್ಮ ಕೌಶಲಗಳನ್ನು ಉತ್ತಮಪಡಿಸಿಕೊಳ್ಳುವಿರಿ. ಕರಿಯರ್‌ ಗುರಿಗಳನ್ನು ತಲುಪಲು ಪ್ರಯತ್ನಿಸುವಿರಿ. ಹಣಕಾಸು ವಿಷಯದಲ್ಲಿ ದುರ್ಬಲರಾಗಿರುವುದು ಗಮನಕ್ಕೆ ಬರಬಹುದು. ಆದರೆ, ಯೋಚಿಸಬೇಡಿ, ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ ಮನೆಯ ಹಿರಿಯ ಸದಸ್ಯರ ಜತೆ ವಾದ ವಿವಾದ ಬೇಡ. ಪ್ರವಾಸ ಹೋಗುವ ಮೊದಲು ಇತರರ ಅಭಿಪ್ರಾಯ ಪಡೆಯಿರಿ. ದೀರ್ಘಕಾಲದ ಹೂಡಿಕೆಗಾಗಿ ಆಸ್ತಿ ಖರೀದಿಸಲು ಬಯಸುವಿರಿ. ನರೆಹೊರೆಯವರ ಜತೆ ಕಲಹವಾಗಬಹುದು. ಸರಿಯಾದ ಆಹಾರ ಸೇವಿಸುವ ಮೂಲಕ ಆರೋಗ್ಯವಂತರಾಗಲು ಪ್ರಯತ್ನಿಸುವಿರಿ. ಸಂಬಂಧಗಳಲ್ಲಿ ಸಕಾರಾತ್ಮಕತೆ ಇರಲಿ.

ಸಿಂಹ

ಹೊಸ ಗ್ರಾಹಕರಿಂದ ವ್ಯವಹಾರಸ್ಥರಿಗೆ ಲಾಭವಿದೆ. ಸಾಲ ಕೊಟ್ಟ ಹಣ ಮರಳಿ ಬರುತ್ತದೆ. ಕುಟುಂಬದ ಸಹಾಯ ದೊರಕಲಿದೆ. ಸುದೀರ್ಘ ಕೆಲಸದ ಒತ್ತಡದಿಂದಾಗಿ ಬಿಡುವು ಬಯಸುವಿರಿ. ವಿಶ್ರಾಂತಿ ತೆಗೆದುಕೊಳ್ಳಿ. ಹೊಸ ಮನೆ ಖರೀದಿಸುವಾಗ ಇನ್ನಷ್ಟು ರಿಸರ್ಚ್‌ ಅಗತ್ಯ. ವಿದ್ಯಾರ್ಥಿಗಳು ಒಂದೇ ಕೆಲಸಕ್ಕಾಗಿ ಹೆಚ್ಚು ಸಮಯ, ಶ್ರಮ ವೈಯಿಸಬಾರದು. ಇಂದು ಸಂಗಾತಿಗಳು ಸುಖಮಯ ಜೀವನ ನಡೆಸುತ್ತಾರೆ. ನಿಮ್ಮ ನಿರ್ಧಾರಗಳಿಗೆ ಸಂಗಾತಿಯ ಬೆಂಬಲವಿರುತ್ತದೆ.

ಕನ್ಯಾ

ಇಂದು ನಿಮ್ಮ ಪಾಲಿಗೆ ಶುಭ ಶುಕ್ರವಾರ. ವೃತ್ತಿ ಅಥವಾ ಶೈಕ್ಷಣಿಕ ಗುರಿಗಳನ್ನು ತಲುಪುವಿರಿ. ಆತ್ಮವಿಶ್ವಾಸ ಹೆಚ್ಚಲಿದೆ. ಅಪಾಯಕಾರಿ ಅಥವಾ ಹೊಸ ಹೂಡಿಕೆಗಳಿಗೆ ಹಣ ಹಾಕಲು ಇಂದು ಸೂಕ್ತವಾದ ದಿನವಲ್ಲ. ಕುಟುಂಬದಿಂದ ನಿಮಗೆ ಇಂದು ಒತ್ತಡವಾಗಬಹುದು. ದೂರ ಪ್ರಯಾಣ ಕೈಗೊಳ್ಳುವಿರಿ. ಆಸ್ತಿ ಹೂಡಿಕೆ ಅಪಾಯಕಾರಿ. ಆರೋಗ್ಯಕ್ಕೆ ಪೂರಕವಾದ ಆಹಾರ ಸೇವಿಸಿ. ಕರಿದ ಆಹಾರ ಆರೋಗ್ಯಕ್ಕೆ ಉತ್ತಮವಲ್ಲ. ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಪ್ರಯತ್ನಿಸಿ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ಶಿಕ್ಷಕರ ಗಮನ ಸೆಳೆಯುತ್ತಾರೆ. ಸಂಗಾತಿ ಜತೆ ಇಂದು ಸಣ್ಣಪುಟ್ಟ ಕಲಹವಾಗಬಹುದು, ಮೌನ ಬಂಗಾರ ಎನ್ನುವುದು ನೆನಪಿರಲಿ.

ತುಲಾ

ನಿಮ್ಮ ಪ್ರೀತಿಪಾತ್ರರ ಜತೆ ವೀಕೆಂಡ್‌ ಕಳೆಯಲು ಯೋಜನೆ ರೂಪಿಸುವಿರಿ. ಬಾಸ್‌ ಜತೆ ವಾದ ಬೇಡ, ಅದರಿಂದ ತೊಂದರೆಯೇ ಹೆಚ್ಚು. ಸ್ನೇಹಿತರು ಮತ್ತು ಕುಟುಂಬದ ಜತೆ ಕಾಲ ಕಳೆಯುವುದು ಖುಷಿ ಕೊಡಬಹುದು. ತಲೆ ನೋವಿನ ಕುರಿತು ಕಾಳಜಿ ಇರಲಿ, ಇಲ್ಲವಾದರೆ ಮೈಗ್ರೇನ್‌ಗೆ ಕಾರಣವಾಗಬಹುದು. ನೀವು ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದರೆ ಸರಕಾರವು ನಿಮ್ಮ ಪ್ರಾಜೆಕ್ಟ್‌ಗೆ ಅನುಮೋದನೆ ದೊರಕಬಹುದು. ಜನರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಲುಕಬಹುದು. ಸಂಗಾತಿ ಜತೆ ಪ್ರೀತಿಯನ್ನು ಪುನರ್‌ಜೀವನಗೊಳಿಸಲಕು ಪ್ರವಾಸ ಅಥವಾ ಲಾಂಗ್‌ಡ್ರೈವ್‌ಗೆ ಯೋಜನೆ ರೂಪಿಸಿ.

ವೃಶ್ಚಿಕ

ನಿಮಗೆ ಹೆಚ್ಚು ವೃತ್ತಿಪರವಾಗಿ ಬೆಳೆಯಲು ಸಹಾಯ ಮಾಡುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ. ಹೊಸ ಒಪ್ಪಂದದ ನೆರವಿನಿಂದ ಹಣ ಗಳಿಸುವಿರಿ. ಇದು ಸಾಲ ಮರುಪಾವತಿ ಮಾಡಲು ಸಹಾಯಕವಾಗಿದೆ. ಹಿರಿಯರ ಬಗ್ಗೆ ಕಾಳಜಿ ಇರಲಿ. ಭೂಮಿಯ ಮೇಲಿನ ಹೂಡಿಕೆಗೆ ಶುಭ ದಿನವಾಗಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ, ದೇಹದ ಆಕಾರ ಸರಿಯಾಗಿರಲಿ. ಸಾಮಾಜಿಕ ಜೀವನ ಒತ್ತಡದಿಂದ ಕೂಡಿರುತ್ತದೆ. ಹೊಸಬರ ಭೇಟಿಯಾಗಬಹುದು. ಕ್ರೀಡಾಪಟುಗಳು ಅಥವಾ ಕಲಾವಿದರಿಗೆ ಇಂದು ಶುಭ ಸುದ್ದಿಯಿದೆ. ಪ್ರೀತಿಯ ವಿಷಯದಲ್ಲಿ ಆತುರ ಸಲ್ಲದು.

ಧನು

ಉದ್ಯಮಿಗಳಿಗೆ ಹೊಸ ಉತ್ಪನ್ನ ಪರಿಚಯಿಸಲು ಇದು ಶುಭ ದಿನ. ವ್ಯಾಪಾರಿಗಳಿಗೆ ಇಂದು ಹೆಚ್ಚಿನ ಗ್ರಾಹಕರು ದೊರಕುತ್ತಾರೆ. ವೃತ್ತಿಪರವಾಗಿ ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು. ಶಾಂತಿಯುತವಾಗಿ ವರ್ತಿಸಿ. ಅನಿರೀಕ್ಷಿತ ಪ್ರವಾಸ ಭಾಗ್ಯವಿದೆ. ರಿಯಲ್‌ ಎಸ್ಟೇಟ್‌ ಮೇಲೆ ಹೂಡಿಕೆಗೆ ಯೋಜಿಸುವಿರಿ. ಕುಟುಂಬದ ಜತೆ ಇರುವ ಸಲುವಾಗಿ ಸ್ನೇಹಿತರ ಒಡನಾಟ ಕಡಿಮೆಯಾಗಬಹುದು. ಆರೋಗ್ಯ ಉತ್ತಮವಾಗಿರಲಿದೆ. ನಿಮ್ಮ ನೇರ ನಡೆನುಡಿಯ ಕುರಿತು ಪ್ರಶಂಸೆ ದೊರಕಬಹುದು. ವಿದ್ಯಾರ್ಥಿಗಳೇ, ಸಮಯ ವ್ಯರ್ಥ ಮಾಡಬೇಡಿ, ಎಗ್ಸಾಂ ಹತ್ತಿರದಲ್ಲಿದೆ ಎನ್ನುವುದು ನೆನಪಿರಲಿ.

ಮಕರ

ಹೂಡಿಕೆದಾರರಿಗೆ ಇಂದು ಲಾಭ ನಿಶ್ಚಿತ. ಸಂಬಂಧದದಲ್ಲಿ ತಪ್ಪು ತಿಳುವಳಿಕೆಗಳಿಂದ ತೊಂದರೆಯಾಗಲಿದೆ. ಸಹೋದ್ಯೋಗಿಗಳಿಂದ ಸಹಕಾರ ದೊರಕಲಿದೆ. ಸಹೋದರ ಅಥವಾ ಮನೆಯ ಹಿರಿಯರಿಂದ ವೃತ್ತಿಪರ ಸಲಹೆ ಪಡೆಯುವುದು ಉತ್ತಮ. ಅವಸರದ ಪ್ರಯಾಣ ಯೋಜನೆ ಬೇಡ. ಬಾಕಿ ಉಳಿದಿರುವ ಆಸ್ತಿ ವ್ಯಾಜ ಕೊನೆಗೊಳ್ಳಲಿದೆ. ಆಹಾರ ಕ್ರಮ ಬದಲಿಸಲು ಯೋಜಿಸುವಿರಿ. ಹೊರಗಿನ ಆಹಾರದಿಂದ ದೂರ ಉಳಿಯುವಿರಿ. ಅವಿವಾಹಿತರಿಗೆ ಹಲವು ಹೊಸ ಪ್ರಪೋಸಲ್‌ಗಳು ಬರಬಹುದು.

ಕುಂಭ

ಇಂದು ಉದ್ಯೋಗ ಸ್ಥಳದಲ್ಲಿ ಹಳೆಯ ಗ್ರಾಹಕರಿಂದ ಉತ್ತಮ ಕೆಲಸ ದೊರಕಬಹುದು. ಹೊಸ ಹಣಕಾಸು ವ್ಯವಹಾರದಿಂದ ನಿರೀಕ್ಷೆಗಿಂತ ಹೆಚ್ಚು ಲಾಭ ಉಂಟಾಗಬಹುದು. ಕುಟುಂಬದ ಮತ್ತು ಮನೆಯ ಹಿರಿಯರ ಜತೆ ಕಾಲಕಳೆಯುವಿರಿ. ಪ್ರವಾಸ ಯೋಜನೆಯಿಂದ ಕಿಸೆ ಖಾಲಿಯಾಗಬಹುದು. ಭೂಮಿಯ ಮೇಲೆ ಹೂಡಿಕೆಗೆ ವಿಳಂಬ ಮಾಡಬೇಡಿ. ಸ್ನೇಹಿತರಲ್ಲಿ ವೃತ್ತಿಪರ ಸಹಾಯ ಪಡೆಯುವಿರಿ. ವ್ಯಾಯಾಮದ ಮೂಲಕ ಆರೋಗ್ಯ ಉತ್ತಮಪಡಿಸಲು ಪ್ರಯತ್ನಿಸುವಿರಿ. ಸಂಗಾತಿಯ ಜತೆ ಕಾಲ ಕಳೆಯುವ ಮೂಲಕ ಎಲ್ಲಾ ಜಂಜಾಟಗಳಿಂದ ಮುಕ್ತರಾಗುವಿರಿ.

ಮೀನ

ಷೇರುಮಾರುಕಟ್ಟೆ ಮತ್ತು ರಿಯಲ್‌ ಎಸ್ಟೇಟ್‌ ಹೂಡಿಕೆಗೆ ಉತ್ತಮ ದಿನ. ಬಾಕಿ ಉಳಿದಿರುವ ಕೆಲಸ ಮುಗಿಸುವುದು ಪ್ರಮುಖ ಆದ್ಯತೆಯಾಗಲಿ. ಶಕ್ತಿಯುತವಾಗಿ ವರ್ತಿಸುವಿರಿ. ದೈಹಿಕ ಚಟುವಟಿಕೆಗಳಿಂದ ನಿಮ್ಮ ಒತ್ತಡ ಕಡಿಮೆಯಾಗಲಿದೆ. ಕುಟುಂಬದ ಸದಸ್ಯರಲ್ಲಿ ನಿಮ್ಮ ಬಗ್ಗೆ ಇರುವ ಅಸಮಾಧಾನಗಳನ್ನು ಕಂಡುಕೊಳ್ಳಿ. ಭೂಮಿ ಮಾರಾಟ ಅಥವಾ ಖರೀದಿಗೆ ಸೂಕ್ತ ದಿನ. ಕುಟುಂಬ ಅಥವಾ ಸಂಗಾತಿ ಜತೆ ಕಾಲ ಕಳೆಯಲು ಯೋಜನೆ ರೂಪಿಸುವಿರಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿಯಿದೆ. ಪ್ರಣಯ ಸಂಬಂಧಗಳು ಇಂದು ಆಹ್ಲಾದಕರವಾಗಿರಲಿದೆ.

(ಪ್ರೇಮ್ ಕುಮಾರ್ ಶರ್ಮಾ, ಮನಿಶಾ ಕೌಶಿಕ್, ಇಮೇಲ್: psharma@premastrologer.com, support@askmanisha.com)