ಕನ್ನಡ ಸುದ್ದಿ  /  Astrology  /  Horoscope Today Astrological Prediction For March 11th 2023

Horoscope Today: ಮೀನ ರಾಶಿಯವರು ಕೋರ್ಟ್ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು; ಇವತ್ತಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ

Horoscope Today for March 11, 2023: ಮಾ.11 ರಂದು ಅಂದರೆ ಇಂದು ಮೇಷ, ಸಿಂಹ, ಕನ್ಯಾ, ತುಲಾ ಮತ್ತು ಇತರ ರಾಶಿಚಕ್ರಗಳ ದಿನಭವಿಷ್ಯ ವಿವರ ಇಲ್ಲಿದೆ. ಆಯಾ ರಾಶಿಚಕ್ರಗಳು ವ್ಯಕ್ತಿಗಳ ವ್ಯಕ್ತಿತ್ವವನ್ನು ಬಿಂಬಿಸುವಂಥದ್ದು. ದಿನಚರಿ ಆರಂಭಿಸುವ ಮೊದಲು ನಿತ್ಯಭವಿಷ್ಯ (Astrological prediction for March 11 2023) ಗಮನದಲ್ಲಿರಲಿ.

ಇಂದಿನ ರಾಶಿ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಭವಿಷ್ಯ ತಿಳಿಯಿರಿ

ಸೂರ್ಯೋದಯ - ಬೆಳಗ್ಗೆ 6:30 (ಬೆಂಗಳೂರು ಸಮಯ)

ಸೂರ್ಯಾಸ್ತ - ಸಂಜೆ 6:30

ತಿಥಿ - ಚತುರ್ಥಿ (ರಾತ್ರಿ 10:05ರ ತನಕ)

ನಕ್ಷತ್ರ - ಚಿತ್ರ (ಬೆಳಗ್ಗೆ 7:11ರ ವರೆಗೆ)

ಮೇಷ ರಾಶಿ (ARIES) (ಮಾರ್ಚ್‌ 21- ಏಪ್ರಿಲ್ 20)

ಮೇಷ ರಾಶಿಯವರಿಗೆ ಇಂದು ಸಾಧಾರಣ ಫಲಿತಾಂಶಗಳಿವೆ. ಆರ್ಥಿಕ ಲಾಭ ಮತ್ತು ಮಂಗಳಕರ ಫಲಿತಾಂಶಗಳಿವೆ. ಜಗಳಗಳಿಂದ ದೂರವಿರಬೇಕು. ಆತುರದ ನಿರ್ಧಾರಗಳು ತೊಂದರೆಗೆ ಕಾರಣವಾಗುತ್ತವೆ. ಹೊಸ ವಸ್ತುಗಳನ್ನು ಖರೀದಿಸಲು ಹಣವನ್ನು ಖರ್ಚು ಮಾಡಲಿದ್ದೀರಿ. ಉದ್ಯೋಗಿಗಳಿಗೆ ಸಕಾರಾತ್ಮಕ ಫಲಿತಾಂಶಗಳಿದ್ದರೂ, ಕೆಲಸದ ಒತ್ತಡ ಹೆಚ್ಚಾಗುತ್ತದೆ. ಉದ್ಯಮಿಗಳಿಗೆ ಅನುಕೂಲಕರ ಫಲಿತಾಂಶಗಳಿವೆ. ವೆಚ್ಚವನ್ನು ಕಡಿಮೆ ಮಾಡಿ.

ವೃಷಭ ರಾಶಿ (TAURUS) (ಏಪ್ರಿಲ್‌ 21- ಮೇ 20)

ವೃಷಭ ರಾಶಿಯವರು ಇಂದು ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಒತ್ತಡಕ್ಕೆ ಒಳಗಾಗುತ್ತಾರೆ. ವೃತ್ತಿ ಮತ್ತು ವ್ಯವಹಾರಗಳು ಅನುಕೂಲಕರವಾಗಿವೆ. ಆರ್ಥಿಕ ಲಾಭ, ಕುಟುಂಬ ಸೌಕರ್ಯ ಖ್ಯಾತಿಯನ್ನು ತರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಉದ್ಯೋಗಿಗಳು, ಉದ್ಯಮಿಗಳಿಗೆ ಅನುಕೂಲವಾಗಲಿದೆ. ಮಹಿಳೆಯರಿಗೆ ಒತ್ತಡ ಹೆಚ್ಚಾಗಿರುತ್ತದೆ.

ಮಿಥುನ ರಾಶಿ (ಮೇ 21-ಜೂನ್ 21)

ಮಿಥುನ ರಾಶಿಯವರಿಗೆ ಇಂದು ಅನುಕೂಲಕರವಾಗಿದೆ. ಆರ್ಥಿಕ ಲಾಭ ಮತ್ತು ಕೌಟುಂಬಿಕ ಸೌಕರ್ಯವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಒತ್ತಡಗಳು ಕಡಿಮೆ. ಕೆಲಸಗಳಲ್ಲಿ ಲಾಭ ಕೂಡಿಬರಲಿದೆ. ಸಮಸ್ಯೆಗಳು ಮತ್ತು ಒತ್ತಡಗಳನ್ನು ಕೌಶಲ್ಯದಿಂದ ಜಯಿಸುತ್ತೀರಿ.

ಕರ್ಕಾಟಕ ರಾಶಿ (ಜೂನ್ 22-ಜುಲೈ 22)

ಕರ್ಕಾಟಕ ರಾಶಿಯವರಿಗೆ ಇಂದು ಸರಾಸರಿ ಫಲಿತಾಂಶಗಳು ಹೆಚ್ಚಿವೆ. ಆರೋಗ್ಯ ಮತ್ತು ಕುಟುಂಬ ವ್ಯವಹಾರಗಳಲ್ಲಿ ಕಾಳಜಿ ವಹಿಸಬೇಕು. ರಾಜಕೀಯ ಒತ್ತಡಗಳು ಹೆಚ್ಚಿವೆ. ಅನಾರೋಗ್ಯದ ಲಕ್ಷಣಗಳಿವೆ. ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿವಾರಿಸುತ್ತೀರಿ. ಉದ್ಯೋಗಿಗಳಿಗೆ ಮತ್ತು ಉದ್ಯಮಿಗಳಿಗೆ ಅನುಕೂಲಕರವಾಗಿದೆ. ಮಹಿಳೆಯರು ಆರೋಗ್ಯ ವಿಚಾರಗಳಲ್ಲಿ ಕಾಳಜಿ ವಹಿಸಬೇಕಿದೆ. ವಿದ್ಯಾರ್ಥಿಗಳು ಕಷ್ಟಪಡುವ ಸಮಯ. ವ್ಯಾಪಾರಿಗಳಿಗೆ ಮಧ್ಯಮದಿಂದ ಕೂಡಿದ ಫಲಿತಾಂಶಗಳಿವೆ.

ಸಿಂಹ ರಾಶಿ (ಜುಲೈ 23-ಆಗಸ್ಟ್ 23)

ಸಿಂಹ ರಾಶಿಯವರು ಇಂದು ಮಧ್ಯಮದಿಂದ ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ಕಿರಿಕಿರಿ, ಸಮಸ್ಯೆಗಳು ಮತ್ತು ಮಾನಸಿಕ ಒತ್ತಡಗಳು ಉಂಟಾಗುತ್ತವೆ. ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಕೌಟುಂಬಿಕ ವಿಷಯಗಳಲ್ಲಿ ಹಾಗೂ ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಜಗಳಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಉದ್ಯೋಗಿಗಳಿಗೆ ಅನುಕೂಲಕರ ಫಲಿತಾಂಶಗಳಿವೆ. ವ್ಯಾಪಾರಿಗಳಿಗೆ ಮಧ್ಯಮ ಫಲಿತಾಂಶಗಳಿವೆ. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರವಾಗಿದೆ.

ಕನ್ಯಾರಾಶಿ ರಾಶಿ (ಆಗಸ್ಟ್ 24-ಸೆಪ್ಟೆಂಬರ್ 23)

ಕನ್ಯಾ ರಾಶಿಯವರಿಗೆ ಇಂದು ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಿದೆ. ಸಮಾಜದಲ್ಲಿ ಕೀರ್ತಿ, ಶತ್ರುಗಳ ಮೇಲೆ ಜಯ ಸಿಗಲಿದೆ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಕಾಣುವಿರಿ. ಮಾನಸಿಕ ನೆಮ್ಮದಿ ದೊರೆಯುತ್ತದೆ. ದೈಹಿಕ ಶ್ರಮ ಮತ್ತು ಒತ್ತಡ ಅಧಿಕವಾಗಿರುತ್ತದೆ. ಎಲ್ಲಾ ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಪ್ರಯಾಣ ಲಾಭದಾಯಕವಾಗಿರುತ್ತದೆ. ವ್ಯಾಪಾರಸ್ಥರಿಗೆ ಮಧ್ಯಮ ಫಲಿತಾಂಶವಿದೆ.

ತುಲಾ ರಾಶಿ (ಸೆಪ್ಟೆಂಬರ್ 24-ಅಕ್ಟೋಬರ್ 23)

ತುಲಾ ರಾಶಿಯವರು ಇಂದು ಮಧ್ಯಮದಿಂದ ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ತಮ್ಮ ಕೆಲಸದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಶತ್ರುಗಳು ಮತ್ತು ಆರೋಗ್ಯ ಸಮಸ್ಯೆ ಎದುರಿಸಲಿದ್ದೀರಿ. ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಕಿರಿಕಿರಿ ಮತ್ತು ಒತ್ತಡ ಇರಲಿದೆ. ವ್ಯಾಪಾರಿಗಳು ಸಾಧಾರಣ ಫಲಿತಾಂಶಗಳನ್ನು ಹೊಂದಿದ್ದಾರೆ. ಮಹಿಳೆಯರಿಗೆ ಕುಟುಂಬದಲ್ಲಿ ನೆಮ್ಮದಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ವೃಶ್ಚಿಕ ರಾಶಿ (ಅಕ್ಟೋಬರ್ 24-ನವೆಂಬರ್ 22)

ವೃಶ್ಚಿಕ ರಾಶಿಯವರಿಗೆ ಇಂದು ಅನುಕೂಲಕರವಾಗಿದೆ. ಕೌಟುಂಬಿಕ ಸಮಸ್ಯೆ ಹಾಗೂ ಕೆಲಸದ ಒತ್ತಡ ಅಧಿಕವಾಗಲಿದೆ. ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿವಾರಿಸುತ್ತೀರಿ. ಕೌಟುಂಬಿಕ ನೆಮ್ಮದಿ ಇರುತ್ತದೆ. ಪ್ರಯಾಣಕ್ಕೆ ಈದಿನ ಸೂಕ್ತವಾಗಿದೆ. ದೈಹಿಕ ಚಟುವಟಿಕೆ ಹೆಚ್ಚು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಿವಾದಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಉದ್ಯೋಗಿಗಳು ಒತ್ತಡದಲ್ಲಿದ್ದರೂ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ವ್ಯಾಪಾರಿಗಳಿಗೆ ಸಾಧಾರಣ ಫಲಿತಾಂಶವಿದೆ.

ಧನು ರಾಶಿ (ನವೆಂಬರ್ 23-ಡಿಸೆಂಬರ್ 21)

ಧನು ರಾಶಿಯವರಿಗೆ ಇಂದು ಅನುಕೂಲಕರವಾಗಿದೆ. ಹಣಕಾಸಿನ ಸಮಸ್ಯೆಗಳಿಂದ ಹೊರಬರುವಿರಿ. ಕುಟುಂಬ ಸೌಕರ್ಯ ಮತ್ತು ಲಾಭ ದೊರೆಯಲಿದೆ. ಪ್ರಯಾಣಕ್ಕೆ ಸೂಕ್ತವಾದ ದಿನವಾಗಿದೆ. ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಅನುಕೂಲಕರ ವಾರ. ಉದ್ಯಮಿಗಳಿಗೆ ಅನುಕೂಲಕರ ಸಮಯ. ಧನು ರಾಶಿಯವರಿಗೆ ದೈನಂದಿನ ಆರ್ಥಿಕ ಲಾಭ ಇದೆ.

ಮಕರ ರಾಶಿ (ಡಿಸೆಂಬರ್ 22-ಜನವರಿ 21)

ಮಕರ ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಫಲಿತಾಂಶವಿದೆ. ದೈಹಿಕ ಕೆಲಸ ಮತ್ತು ಖರ್ಚುಗಳು ಹೆಚ್ಚಾಗುತ್ತವೆ. ಮಾನಸಿಕ ಒತ್ತಡ ಹೆಚ್ಚುತ್ತದೆ. ಜಗಳ ಮತ್ತು ವಿವಾದಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಸಂಬಂಧಿಕರು ಮತ್ತು ಸಹೋದರರೊಂದಿಗೆ ಭಿನ್ನಾಭಿಪ್ರಾಯ ಸಾಧ್ಯತೆ ಇದೆ. ಆರೋಗ್ಯ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು. ರಾಜಕೀಯ ಒತ್ತಡಗಳು ಹೆಚ್ಚಿವೆ. ಉದ್ಯೋಗಿಗಳಿಗೆ ಸರಾಸರಿ ಫಲಿತಾಂಶ. ವ್ಯಾಪಾರಸ್ಥರಿಗೆ ಹಣಕಾಸಿನ ತೊಂದರೆ ಇರುತ್ತದೆ. ಹಣಕಾಸಿನ ಸಮಸ್ಯೆಗಳು ಅಧಿಕವಾಗಿರುತ್ತದೆ.

ಕುಂಭ ರಾಶಿ (ಜನವರಿ 22-ಫೆಬ್ರವರಿ 19)

ಕುಂಭ ರಾಶಿಯವರು ಇಂದು ಸಾಧಾರಣ ಫಲಿತಾಂಶಗಳನ್ನು ಹೊಂದಿರುತ್ತಾರೆ. ಮಾನಸಿಕ ಒತ್ತಡ, ನೋವು, ಸಮಸ್ಯೆಗಳು ಅಧಿಕ. ಕೆಲಸದಲ್ಲಿ ವಿಳಂಬ. ಕೌಟುಂಬಿಕ ವ್ಯವಹಾರಗಳಲ್ಲಿ ಗೊಂದಲ ಉಂಟಾಗುತ್ತದೆ. ಬುದ್ಧಿವಂತಿಕೆಯಿಂದ ಆರ್ಥಿಕ ಸಮಸ್ಯೆಗಳಿಂದ ಹೊರಬರುತ್ತೀರಿ. ಮಾಡಿದ ಕೆಲಸಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಕೆಲವು ದಿನಗಳಿಂದ ತಮ್ಮನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಂದ ಹೊರಬರಲು ಮಾಡುವ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಮೀನ ರಾಶಿ (ಫೆಬ್ರವರಿ 20-ಮಾರ್ಚ್ 20)

ಮೀನ ರಾಶಿಯವರಿಗೆ ಇಂದು ಕೆಟ್ಟ ಫಲಿತಾಂಶಗಳು ಅಧಿಕ. ಆರೋಗ್ಯ ಸಮಸ್ಯೆ, ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ವೆಚ್ಚವನ್ನು ನಿಯಂತ್ರಿಸಬೇಕಿದೆ. ನ್ಯಾಯಾಲಯದ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು. ಉದ್ಯೋಗಿಗಳಿಗೆ ಕೆಲಸದಲ್ಲಿ ಸಮಸ್ಯೆಗಳಿರುತ್ತವೆ. ರಾಜಕೀಯ ಒತ್ತಡಗಳು ಹೆಚ್ಚಾಗುತ್ತವೆ. ಉದ್ಯಮಿಗಳು, ವಿದ್ಯಾರ್ಥಿಗಳಿಗೆ ಕಠಿಣ ಸಮಯವಾಗಿದೆ.

ವಿಭಾಗ