ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಇಂದು ಹಿರಿಯರ ಆಸ್ತಿಯಲ್ಲಿನ ಸಿಂಹಪಾಲು ಈ ರಾಶಿಯವರದ್ದಾಗುತ್ತದೆ; ಗುರುವಾರದ ನಿಮ್ಮ ರಾಶಿಭವಿಷ್ಯ ಹೀಗಿದೆ

Horoscope Today: ಇಂದು ಹಿರಿಯರ ಆಸ್ತಿಯಲ್ಲಿನ ಸಿಂಹಪಾಲು ಈ ರಾಶಿಯವರದ್ದಾಗುತ್ತದೆ; ಗುರುವಾರದ ನಿಮ್ಮ ರಾಶಿಭವಿಷ್ಯ ಹೀಗಿದೆ

ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಇಂದು ವಿವಿಧ ರಾಶಿಯವರಿಗೆ ಸಾಕಷ್ಟು ಸಕಾರಾತ್ಮಕ ಅಂಶಗಳಿದ್ದು, ಅವರ ಪಾಲಿಗೆ ಶುಭ ದಿನವಾಗಲಿದೆ. ಈ ಜಗತ್ತಿನ ನಿಯಮದಂತೆ ಎಲ್ಲರಿಗೂ ಒಳಿತೇ ದೊರಕಿದರೆ ಕೆಡಕಿಗೆ ಏನರ್ಥ. ಕೆಲವು ರಾಶಿಯವರಿಗೆ ಇಂದು ಕೆಟ್ಟ ಸುದ್ದಿಯೂ ಎದುರಾಗಬಹುದು. ಬನ್ನಿ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳೋಣ.

25 ಮೇ 2023 ಗುರುವಾರದ ರಾಶಿಫಲ
25 ಮೇ 2023 ಗುರುವಾರದ ರಾಶಿಫಲ

ಇಂದಿನ ಪಂಚಾಂಗ

ಶ್ರೀ ಶೋಭಕೃತ್​ ನಾಮ ಸಂವತ್ಸರ

ಉತ್ತರಾಯಣ

ಗ್ರೀಷ್ಮ ಋತು

ಜ್ಯೇಷ್ಠ ಮಾಸ

ಶುಕ್ಲ ಪಕ್ಷ

ಗುರುವಾರ

ತಿಥಿ : ಷಷ್ಥಿ ರಾ.02.52 ರವರೆಗೆ ಆನಂತರ ಸಪ್ತಮಿ ಆರಂಭವಾಗುತ್ತದೆ.

ನಕ್ಷತ್ರ : ಪುಷ್ಯ ನಕ್ಷತ್ರವು ಮ.04.08 ರವರೆಗೆ ಇದ್ದು ಆನಂತರ ಆಶೇಷ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ ಬೆ.05.52

ಸೂರ್ಯಾಸ್ತ ಸ.6.40

ರಾಹುಕಾಲ : ಮ.01.56 ರಿಂದ ಮ.03.32

ರಾಶಿ ಫಲಗಳು

ಮೇಷ

ಮನದಲ್ಲಿ ಆತಂಕದ ಭಾವನೆ ಇರುತ್ತದೆ. ಮನಸ್ಸಿಟ್ಟು ಮಾಡುವ ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ. ಗಣಿತ ಅಥವಾ ವಾಣಿಜ್ಯಶಾಸ್ತ್ರಕ್ಕೆ ಸಂಬಂಧಿಸಿದ ಸಂಸ್ಥೆಯನ್ನು ಆರಂಭಿಸುವಿರಿ. ನೂತನ ಆವಿಷ್ಕಾರದ ಗುಣವುಳ್ಳ ವಿಜ್ಞಾನಿಗಳಿಗೆ ಒಳ್ಳೆಯ ಅವಕಾಶ ದೊರೆಯಲಿದೆ. ಚತುರತೆಯಿಂದ ಸಂಬರ್ಧಾನುಸಾರವಾಗಿ ವರ್ತಿಸುವಿರಿ. ತಾಯಿಯವರ ಬುದ್ಧಿವಂತಿಕೆಯಿಂದ ವಿವಾದವೊಂದರಿಂದ ಪಾರಾಗುವಿರಿ. ಅನುಮಾನದ ಗುಣಬೇಡ. ಸೋದರರಿಗೆ ಹಣದ ಕೊರತೆ ಇರುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ. ವಿದ್ಯಾರ್ಥಿಗಳಿಗೆ ಶುಭವಿದೆ.

ವೃಷಭ

ಆತ್ಮೀಯರೊಬ್ಬರಿಂದ ಬೇಸರದ ಮಾತುಗಳನ್ನು ಆಲಿಸಬೇಕು. ಹಠದ ಗುಣದ ಕಾರಣ ಕೈಹಿಡಿದ ಕೆಲಸಗಳಲ್ಲಿ ಯಶಸ್ಸು ಗಳಿಸುವಿರಿ. ಭೂವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸೋದರಿಯೊಬ್ಬರು ನಿಮ್ಮ ಆಶ್ರಯ ಬಯಸಿ ಬರಬಹುದು. ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ವ್ಯಾಪಾರದಲ್ಲಿ ಆದಾಯವಿರುತ್ತದೆ. ವಿವಾಹ ಯೋಗವಿದೆ. ಉದ್ಯೋಗದಲ್ಲಿ ಸ್ಥಿರತೆ ಕಂಡುಬರುತ್ತದೆ. ವಿದ್ಯಾರ್ಥಿಗಳು ನಿರೀಕ್ಷಿತ ಫಲಗಳನ್ನು ಪಡೆಯುತ್ತಾರೆ. ಯಾರೊಬ್ಬರನ್ನೂ ಸುಲಭವಾಗಿ ನಂಬದ ನೀವು ಸ್ವತಂತ್ರವಾಗಿ ಹಣಕಾಸಿನ ವ್ಯವಹಾರವನ್ನು ಆರಂಭಿಸುವಿರಿ. ಕುಟುಂಬದ ಪುಟ್ಟಮಗುವಿಗೆ ಕುಡಿಯಲು ಹಾಲು ನೀಡಿದ ನಂತರ ದಿನದ ಕೆಲಸ ಆರಂಭಿಸಿ.

ಮಿಥುನ

ಯಂತ್ರೋಪಕರಣಗಳ ಸರಬರಾಜಿನ ಉದ್ಯೋಗದಲ್ಲಿ ಉತ್ತಮ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ದ್ರವ ಆಹಾರ ತಯಾರಿಕಾ ಕೇಂದ್ರವನ್ನು ಆರಂಭಿಸುವ ಸೂಚನೆಗಳಿವೆ. ಬೇರೆಯವರಿಗೆ ಬೇಸರ ಬರುವಂತೆ ಮಾತನಾಡುವಿರಿ. ಒಮ್ಮೆಲೆ ಬಗೆ ಬಗೆಯ ಉದ್ಯೋಗವನ್ನು ಮಾಡಬಲ್ಲಿರಿ. ಆದಾಯದಲ್ಲಿ ಸ್ಥಿರತೆ ಇರದು. ವಿದ್ಯಾರ್ಥಿಗಳು ದೊಡ್ಡ ಹಿಮ್ಮೆಗೆ ಪಾತ್ರರಾಗುತ್ತಾರೆ. ಹಣಕಾಸಿನ ವಿಚಾರದಲ್ಲಿ ಸಾಕ್ಷೀದಾರರಾಗದಿರಿ. ವಿವಾಹಯೋಗವಿದೆ. ಹಿರಿಯರ ಆಸ್ತಿಯಲ್ಲಿನ ಸಿಂಹಪಾಲು ನಿಮ್ಮದಾಗುತ್ತದೆ. ಚಿನ್ನಾಭರಣಗಳ ತಯಾರಿಕೆ ಮತ್ತು ಮಾರಟದಲ್ಲಿ ಲಾಭವೆದೆ. ಧಾರ್ಮಿಕ ಕೇಂದ್ರಕ್ಕೆ ಪೂಜಾಸಾಮಗ್ರಿಗಳನ್ನು ನೀಡಿ ಕೆಲಸ ಕಾರ್ಯಗಳನ್ನು ಆರಂಭಿಸಿ.

ಕಟಕ

ಸಮಯವನ್ನು ಗೌರವಿಸುವಿರಿ. ನಿಮ್ಮ ಜವಾಬ್ದಾರಿಯನ್ನು ಚೊಕ್ಕವಾಗಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಉನ್ನತಿ ಇರುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಅವಶ್ಯಕತೆ ಇದ್ದಲ್ಲಿ ಉದ್ಯೋಗವನ್ನು ಬದಲಾಯಿಸಬಹುದು. ಕೃಷಿಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆಗಳು ತೋರುತ್ತವೆ. ಕೃಷಿಗೊಬ್ಬರದ ವ್ಯಾಪಾರದಲ್ಲಿ ಲಾಭವಿರುತ್ತದೆ. ಹಣ್ಣಿನ ಬೆಳೆಯಿಂದ ಆದಾಯ ಇರುತ್ತದೆ. ಬೇಸರ ಕಳೆಯಲು ಪ್ರವಾಸಕ್ಕೆ ಹೋಗುವಿರಿ. ವಿವಾಹದ ಮಾತುಕತೆ ನಡೆಯುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಹೈನುವ್ಯಾಪರವನ್ನು ಮಾಡುವಿರಿ. ಷೇರಿನ ವ್ಯವಹಾರದಲ್ಲಿ ಲಾಭವಿದೆ. ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳ ಶುಭ ಹಾರೈಕೆಗಳೊಂದಿಗೆ ಕೆಲಸ ಆರಂಭಿಸಿ.

ಸಿಂಹ

ಊಹಾಲೋಚನೆ ಚೆನ್ನಾಗಿರುತ್ತದೆ. ಪ್ರಸಕ್ತ ಸನ್ನಿವೇಶವನ್ನು ಅವಲಂಭಿಸದೆ ಭವಿಷ್ಯದ ಬಗ್ಗೆ ಯೋಚಿಸುವಿರಿ. ನಿತ್ಯಜೀವನದಲ್ಲಿ ಆತ್ಮೀಯರೊಬ್ಬರ ವಿರೋಧವನ್ನು ಎದುರಿಸಬೇಕಾಗುತ್ತದೆ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಉತ್ತಮ ಆದಾಯ ಇರುತ್ತದೆ. ತಂದೆಯ ಒಡೆತನದ ಭೂಮಿಯ ವಿವಾದಕ್ಕೆ ಕಾನೂನು ಪ್ರಕಾರ ಅಂತ್ಯವನ್ನು ಹಾಕುವಿರಿ. ದೊಡ್ಡ ವ್ಯಾಣಿಜ್ಯ ಸಂಕೀರ್ಣದ ಆಡಳಿತದ ಜವಾಬ್ದಾರಿ ದೊರೆಯುತ್ತದೆ. ಜನಸೇವೆಯಲ್ಲಿ ದಿನವನ್ನು ಕಳೆಯುವಿರಿ. ಬಿಳಿ ಟೋಪಿ ಧರಿಸಿ ದೈನಂದಿನ ಕೆಲಸವನ್ನು ಆರಂಭಿಸುವುದು ಒಳ್ಳೆಯದು.

ಕನ್ಯಾ

ಹೊಸ ಮನೆಯನ್ನು ಕೊಳ್ಳುವ ಆಸೆ ಸಾಕಾರಗೊಳ್ಳುತ್ತದೆ. ಸಾರಿಗೆ ಸಂಚಾರದಿಂದ ಜೀವನ ಸಾಗುತ್ತದೆ. ವ್ಯಾಪಾರಕ್ಕಾಗಿ ಹೊಸ ವಾಹನ ಕೊಳ್ಳುವಿರಿ. ಸಮಾಜದ ಗಣ್ಯವ್ಯಕ್ತಿಯೊಬ್ಬರ ಸಹಾಯ ದೊರೆತು ಕಷ್ಟದ ಪರಿಹಾರವಾಗುತ್ತದೆ. ವಿಧ್ಯುತ್ ಉಪಕರಣಗಳ ದುರಸ್ಥಿಯಿಂದ ಹಣಗಳಿಸುವಿರಿ. ಕುಟುಂಬದ ಹಿರಿಯರೊಬ್ಬ ಉದ್ಯೋಗ ಬದಲಿಸಿ ಪರಸ್ಥಳದಲ್ಲಿ ಹಣವನ್ನು ಗಳಿಸುತ್ತಾರೆ. ಅಗೋಚರ ಶಕ್ತಿಯ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಸ್ವಂತ ವ್ಯಾಪಾರದಲ್ಲಿ ಲಾಭವಿರುತ್ತದೆ. ಮಕ್ಕಳಿಗೆ ಅನುಕೂಲವಾಗುವಂತಹ ಬೋಧನಾಕೇಂದ್ರವನ್ನು ಆರಂಭಿಸುವಿರಿ. ಮನೆಯಲ್ಲಿನ ಪೂಜಾಸ್ಥಳವನ್ನು ಶುಚಿಗೊಳಿಸಿ ದಿನದ ಕೆಲಸ ಆರಂಭಿಸಿ.

ತುಲಾ

ಅಗತ್ಯವಿದ್ದವರಿಗೆ ಕಾನೂನು ಪಾಠ ಹೇಳುವ ಕೆಲಸ ಮಾಡುವಿರಿ. ಬಾಳಸಂಗಾತಿಯಿಂದ ಹಣದ ಸಹಾಯ ದೊರೆಯುತ್ತದೆ. ವೈದ್ಯರಿಗೆ ಸಮಾನವಾದ ಉದ್ಯೋಗ ದೊರೆಯುತ್ತದೆ. ದೇಶ ವಿದೇಶಗಳನ್ನು ಸುತ್ತುವ ಅವಕಾಶ ದೊರೆಯುತ್ತದೆ. ಸಂಗೀತ ಭರತನಾಟ್ಯದ ತರಬೇತಿಗಾರರಿಗೆ ಆದಾಯದ ಜೊತೆಯಲ್ಲಿ ಜನಪ್ರಿಯತೆಯೂ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಕುಟುಂಬದ ವ್ಯಾಜ್ಯಗಳನ್ನು ತೀರ್ಮಾನಿಸುವ ಸಲುವಾಗಿ ಸಂದಾನ ಕೇಂದ್ರವನ್ನು ಆರಂಭಿಸುವಿರಿ. ಮಾಹಿತಿ ತಂತ್ರಜ್ಞಾನದ ವ್ಯಾಪಾರದಲ್ಲಿ ಹೇರಳ ಲಾಭವಿರುತ್ತದೆ. ಸೋದರಿಯ ಮಕ್ಕಳಿಗೆ ಸಹಾಯ ಮಾಡಿದ ನಂತರ ದಿನದ ಕೆಲಸ ಆರಂಭಿಸಿ.

ವೃಶ್ಚಿಕ

ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಯಾರ ಮಾತನ್ನೂ ಕೇಳುವುದಿಲ್ಲ. ನೇರವಾದ ನಡೆ ನುಡಿಯಿಂದ ಎಲ್ಲರ ಬೇಸರಕ್ಕೆ ಕಾರಣರಾಗುವಿರಿ. ನಿರಾಸೆ ಎದುರಾದಾಗ ಕೋಪಗೊಳ್ಳುವಿರಿ. ತಂದೆಯವರ ಪ್ರಭಾವಕ್ಕೆ ಒಳಗಾಗಿ ಮನೆಯ ಜವಾಬ್ದಾರಿಯನ್ನು ಹೆಗಲೇರಿಸಿಕೊಳ್ಳುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಪಾಲುಗಾರಿಕೆಯ ವ್ಯಾಪಾರದ ಹಕ್ಕನ್ನು ಕಾನೂನುರೀತ್ಯ ಪಡೆಯುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ದೇಹಾಲಸ್ಯ ಉಂಟಾಗುತ್ತದೆ. ವ್ಯವಸಾಯ ಮಾಡಲು ಇಷ್ಟಪಡುವಿರಿ. ನೀರಾವರಿ ಭೂಮಿಯನ್ನು ಕೊಳ್ಳುವ ಅವಕಾಶ ದೊರೆಯುತ್ತದೆ. ಒಣಗಿಹೋದ ಗಿಡಗಳನ್ನು ತೆಗೆದು ಶುಚಿ ಮಾಡಿದ ನಂತರ ದಿನದ ಕೆಲಸ ಆರಂಭಿಸಿ.

ಧನಸ್ಸು

ಉದ್ಯೋಗದಲ್ಲಿ ಅನುಕೂಲಕರ ಬೆಳವಣಿಗಗಳು ಉಂಟಾಗಲಿವೆ. ಅಧಿಕಾರದ ಜೊತೆಯಲ್ಲಿ ಜವಾಬ್ದಾರಿಯು ಹೆಚ್ಚುತ್ತದೆ. ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ಅಜೀರ್ಣದ ತೊಂದರೆ ಸದಾ ಕಾಡಲಿದೆ. ವಿಶೇಷವಾದ ಬುದ್ಧಿ ಇರುತ್ತದೆ. ಕುಟುಂಬದಲ್ಲಿ ನಡೆಯಬೇಕಿದ್ದ ವಿವಾಹಕಾರ್ಯವೊಂದು ಮುಂದೂಡಲ್ಪಡುತ್ತದೆ. ಸ್ವತಂತ್ರವಾಗಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಆದಾಯಕ್ಕೆ ತಕ್ಕಂತಹ ಖರ್ಚು ವೆಚ್ಚಗಳು ಇರುತ್ತವೆ. ಎಲ್ಲಾರನ್ನೂ ಗೌರವದಿಂದ ಕಾಣುವಿರಿ. ಹುಟ್ಟೂರಿನಲ್ಲಿ ಮನೆ ಕೊಳ್ಳುವಿರಿ. ತಂದೆಯವರ ವ್ಯಾಪಾರವನ್ನು ಮುಂದುವರೆಸಿ ಜಯಶೀಲರಾಗುವಿರಿ. ಪಂಚಲೋಹದ ಉಂಗುರವನ್ನು ಬಲಗೈಯಲ್ಲಿ ಧರಿಸಿದಲ್ಲಿ ಶುಭ ಫಲಗಳು ದೊರೆಯುತ್ತವೆ.

ಮಕರ

ಕಷ್ಟ ಪಟ್ಟು ಕೆಲಸ ಮಾಡುವಲ್ಲಿ ಎಲ್ಲರಿಗೂ ಮಾದರಿಯಾಗುವಿರಿ. ವೇಳೆಗೆ ಸರಿಯಾಗಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ಆಧುನಿಕ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಅರಿವಿರುತ್ತದೆ. ಖ್ಯಾತ ಯಂತ್ರೋಪಕರಣದ ತಯಾರಿಕಾ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಆದಾಯದ ಕೊರತೆ ನೀಗಲು ಯಂತ್ರೋಪಕರಣಗಳ ದುರಸ್ತಿಯ ವ್ಯಾಪಾರ ಆರಂಭಿಸುವಿರಿ. ವಿದ್ಯಾರ್ಥಿಗಳಿಗೆ ಶುಭಸುದ್ಧಿಯೊಂದು ದೊರೆಯಲಿದೆ. ಹೊಸ ಅನ್ವೇಷಣೆಗಳ ಬಗ್ಗಿ ಅಧ್ಯಯನ ಮಾಡಲು ವಿದೇಶಕ್ಕೆ ತೆರಳುವಿರಿ. ಸ್ನಾನಾನಂತರ ತುಳಸಿ ಎಲೆಗಳನ್ನು ತಿಂದು ನೀರು ಕುಡಿದ ನಂತರ ದಿನದ ಕೆಲಸ ಆರಂಭಿಸಿ.

ಕುಂಭ

ಬರಿ ಮಾತಿನಿಂದಲೇ ಕೆಲಸ ಸಾಧಿಸಬಲ್ಲಿರಿ. ನೀರಿಗೆ ಸಂಬಂಧಿಸಿದ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಹಿರಿಯ ಅಧಿಕರಿಗಳ ಅನುಕಂಪವನ್ನು ಪಡೆಯುವಿರಿ. ಹಣದ ವ್ಯಾಮೋಹ ಇರದು. ವಿದ್ಯಾರ್ಥಿಗಳು ಮೌನವಾಗಿ ಎಲ್ಲವನ್ನೂ ಸಾಧಿಸಬಲ್ಲರು. ಸ್ವಂತ ವ್ಯಾಪಾರ ವಹಿವಾಟನ್ನು ಆರಂಬಿಸುವುದಿಲ್ಲ. ಸೋದರರ ವ್ಯಾಪಾರದಲ್ಲಿ ಸಹಭಾಗಿತ್ವ ಪಡೆಯುವಿರಿ. ಕಷ್ಟವಿಲ್ಲದ ಸಂಪಾದನೆಯ ದಾರಿಯನ್ನು ಹುಡುಕುವಿರಿ. ಹಣದ ವಿವಾದವೊಂದು ಎದುರಾಗಲಿದೆ. ಆಹಾರ ಪದಾರ್ಥಗಳ್ಳು ಮನೆ ಮನೆಗೆ ಸರಬರಾಜು ಮಾಡುವ ಉಪಕಸುಬನ್ನು ಆರಂಭಿಸುವಿರಿ. ದಿನಬಳಕೆಯ ವಾಹನವನ್ನು ಸುಚಿಗೊಳಿಸಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ಮೀನ

ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಮಾತನಾಡಿಸುವಿರಿ. ಆದರೆ ಯಾರೊಬ್ಬರ ಸಲಹೆಯನ್ನೂ ಪಾಲಿಸುವುದಿಲ್ಲ. ಉದ್ಯೋಗವನ್ನು ಬದಲಿಸುವಿರಿ. ಬೇರೊಬ್ಬರ ಅಧೀನದಲ್ಲಿ ಕೆಲಸ ಮಾಡಲಿಚ್ಚಿಸದೆ ಸ್ವತಂತ್ರವಾಗಿ ಕೆಲಸ ನಿರ್ವಹಿಸುವಿರಿ. ಶುದ್ಧಿಗೊಳಿಸಿದ ನೀರಿನ ಏಜೆನ್ಸಿ ಕೊಳ್ಳುವಿರಿ. ವಿದ್ಯಾರ್ಥಿಗಳು ನೂತನ ಸಾಧನೆ ಮಾಡಲಿದ್ದಾರೆ. ವಂಶಾಧಾರಿತ ವ್ಯಾಪಾರದಲ್ಲಿ ಒತ್ತಾಯಪೂರ್ವಕವಾಗಿ ಪಾಲ್ಗೊಳ್ಳುವಿರಿ. ತಂದೆಯಿಂದ ಬರಬೇಕಿರುವ ಆಸ್ತಿಯ ಪಾಲಿನಲ್ಲಿ ವಿವಾದವೊಂದನ್ನು ಎದುರಿಸುವಿರಿ. ಕಾರ್ಯಕುಶಲತೆಯ ಬಗ್ಗೆ ಯಾರಿಗೂ ತಿಳಿಸದಿರಿ. ಗುರುಪೀಠದ ಸಂಪೂರ್ಣ ಜವಾಬ್ವಾರಿಯನ್ನು ಹೊರುವಿರಿ. ನೀರಿರುವ ಪ್ರದೇಶಕ್ಕೆ ಪ್ರವಾಸ ಹೋಗುವಿರಿ. ಪಾರಿವಾಳಕ್ಕೆ ಆಹಾರ ನೀಡಿರಿ.

ಎಚ್.ಸತೀಶ್

ಜ್ಯೋತಿಷಿ, ಬೆಂಗಳೂರು

ಮೊ: 8546865832

ವಿಭಾಗ