ದಿನ ಭವಿಷ್ಯ ಜುಲೈ 15; ಕಟಕ ರಾಶಿಯವರು ಸಾಲದ ವ್ಯವಹಾರದಲ್ಲಿ ಎಚ್ಚರ, ಮಿಥುನ ರಾಶಿಯವರ ಆದಾಯ ವೃದ್ಧಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಿನ ಭವಿಷ್ಯ ಜುಲೈ 15; ಕಟಕ ರಾಶಿಯವರು ಸಾಲದ ವ್ಯವಹಾರದಲ್ಲಿ ಎಚ್ಚರ, ಮಿಥುನ ರಾಶಿಯವರ ಆದಾಯ ವೃದ್ಧಿ

ದಿನ ಭವಿಷ್ಯ ಜುಲೈ 15; ಕಟಕ ರಾಶಿಯವರು ಸಾಲದ ವ್ಯವಹಾರದಲ್ಲಿ ಎಚ್ಚರ, ಮಿಥುನ ರಾಶಿಯವರ ಆದಾಯ ವೃದ್ಧಿ

Daily Horoscope Today July 15; ಪ್ರತಿ ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಅಂದಹಾಗೆ, ಜುಲೈ 15 ರ ದಿನ ಭವಿಷ್ಯ ಪ್ರಕಾರ, ಕೆಲವರಿಗೆ ಆರೋಗ್ಯ ಸಮಸ್ಯೆ, ಹಣಕಾಸಿನ ಬಿಕ್ಕಟ್ಟು ಇದ್ದರೂ, ಶುಭಫಲವಿದೆ. ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ ಹೀಗಿದೆ. (ಬರಹ- ಎಚ್‌. ಸತೀಶ್, ಜ್ಯೋತಿಷಿ).

ದಿನ ಭವಿಷ್ಯ ಜುಲೈ 15; ಕಟಕ ರಾಶಿಯವರು ಸಾಲದ ವ್ಯವಹಾರದಲ್ಲಿ ಎಚ್ಚರ, ಮಿಥುನ ರಾಶಿಯವರ ಆದಾಯ ವೃದ್ಧಿ, ಮೇಷ, ವೃಷಭ ರಾಶಿ ಭವಿಷ್ಯ
ದಿನ ಭವಿಷ್ಯ ಜುಲೈ 15; ಕಟಕ ರಾಶಿಯವರು ಸಾಲದ ವ್ಯವಹಾರದಲ್ಲಿ ಎಚ್ಚರ, ಮಿಥುನ ರಾಶಿಯವರ ಆದಾಯ ವೃದ್ಧಿ, ಮೇಷ, ವೃಷಭ ರಾಶಿ ಭವಿಷ್ಯ

Daily Horoscope Today July 15; ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (15th July 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯನ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲಪಕ್ಷ, ಸೋಮವಾರ

ತಿಥಿ : ನವಮಿ ಹ. 03.32 ರವರೆಗು ಇರುತ್ತದೆ. ಆನಂತರ ದಶಮಿ ಆರಂಭವಾಗುತ್ತದೆ.

ನಕ್ಷತ್ರ : ಸ್ವಾತಿ ನಕ್ಷತ್ರವು ರಾ. 009.53 ರವರೆಗು ಇದ್ದು ಆನಂತರ ವಿಶಾಖ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ ಬೆ.06.00

ಸೂರ್ಯಾಸ್ತ ಸ.06.49

ರಾಹುಕಾಲ : ಬೆ. 07.40 ರಿಂದ ಬೆ. 09.16

ದಿನ ಭವಿಷ್ಯ ಜುಲೈ 15; ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ರಾಶಿ ಭವಿಷ್ಯ

ಮೇಷ ರಾಶಿ; ನಿಮ್ಮಲ್ಲಿರುವ ಆತ್ಮಶಕ್ತಿಯ ಕಾರಣ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಹಣಕಾಸಿನ ವಿಚಾರದಲ್ಲಿನ ಆತುರದ ನಿರ್ಧಾರದಿಂದ ಕಸಿವಿಸಿಯ ವಾತಾವರಣ ಉಂಟಾಗುತ್ತದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಮನೆ ಮಾಡಿರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಉಂಟಾಗದು. ವಿದ್ಯಾರ್ಥಿಗಳು ವಿಶ್ರಾಂತಿಗೂ ಮನ ನೀಡದೆ ಕಲಿಕೆಯಲ್ಲಿ ಕಠಿಣವಾದ ಅಧ್ಯಯನ ಮಾಡುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭಗಳಿಸುವಿರಿ. ಗಂಟಲ ಬೇನೆಯಿಂದ ಬಳಲುವ ಸಾಧ್ಯತೆಗಳಿವೆ. ತಂದೆಯವರ ಕೆಲಸ ಕಾರ್ಯಗಳು ನಿಮ್ಮನ್ನು ಅವಲಂಭಿಸಿರುತ್ತದೆ. ಗೃಹಿಣಿಯರು ಉಳಿಸಿದ ಹಣ ನಿಮ್ಮ ಕೈಸೇರುತ್ತದೆ. ಆತ್ಮೀಯರ ಕಾರ್ಯಕ್ರಮಕ್ಕಾಗಿ ದೂರದ ಸ್ಥಳಕ್ಕೆ ಸಂಗಾತಿಯ ಜೊತೆ ತೆರಳುವಿರಿ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ 7

ಅದೃಷ್ಟದ ದಿಕ್ಕು : ನೈಋತ್ಯ

ಅದೃಷ್ಟದ ಬಣ್ಣ : ಹಸಿರು ಬಣ್ಣ

ವೃಷಭ ರಾಶಿ: ಮನರಂಜನೆಗಾಗಿ ವಿನಿಯೋಗಿಸುವಿರಿ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಮನೆಯನ್ನು ನವೀಕರಿಸುವ ಕೆಲಸ ಆರಂಭಿಸುವಿರಿ. ಉದ್ಯೋಗದಲ್ಲಿನ ಅಡಚಣೆಗಳನ್ನು ಬುದ್ದಿವಂತಿಕೆಯಿಂದ ಪರಿಹರಿಸಿಕೊಳ್ಳುವಿರಿ. ಸ್ನೇಹಿತನಿಂದ ಹಣಕಾಸಿನ ಕೊರತೆ ಕಡಿಮೆ ಆಗಲಿದೆ. ವಿದ್ಯಾರ್ಥಿಗಳು ಸೋಲಿಗೆ ಎದೆಗುಂದದೆ ತಮ್ಮ ಗುರಿ ತಲುಪುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ವರಮಾನ ಇರುವುದಿಲ್ಲ. ಅನುಕೂಲ ಇರುವ ವೇಳೆ ಕೆಲವರಿಗಾದರೂ ಸಹಾಯ ಮಾಡುವ ಆಸೆ ಇರುತ್ತದೆ. ಹಣಕಾಸಿನ ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಮನೆಯಲ್ಲಿರುವ ವಯೋವೃದ್ಧರ ಆರೋಗ್ಯದ ಬಗ್ಗೆ ಎಚ್ಚರಕೆ ಇರಲಿ. ಕಾನೂನಿನ ಸಮಸ್ಯೆ ಎದುರಾಗಬಹುದು.

ಪರಿಹಾರ : ದಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಮಿಥುನ ರಾಶಿ: ನಿಮ್ಮ ಸಂತೋಷದ ಕ್ಷಣಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವಿರಿ. ಕೈಸಾಲವಾಗಿ ಪಡೆದ ಹಣವನ್ನು ಮರುಪಾವತಿ ಮಾಡಲಾಗುವುದಿಲ್ಲ. ಸಣ್ಣ ಪುಟ್ಟ ವಿಚಾರಗಳಿಗೂ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಸಂತಸದ ವಾತಾವರಣವನ್ನು ಅರಸಿ ಕಿರುಪ್ರವಾಸ ಕೈಗೊಳ್ಳುವಿರಿ. ಮನದಲ್ಲಿ ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗಲಾರದು. ನಿಮ್ಮದಲ್ಲದ ವಿಚಾರಗಳಿಂದ ದೂರವಿರಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ವಿಶೇಷ ಫಲಿತಾಂಶಗಳು ಲಭ್ಯವಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆದಾಯ ಹೆಚ್ಚಲಿದೆ. ನೀವು ಮಾಡಿದ ಕೆಲಸಗಳ ಪ್ರತಿಫಲವು ಬೇರೆಯವರ ಪಾಲಾಗುತ್ತದೆ. ಧಾರ್ಮಿಕ ಕೇಂದ್ರಕ್ಕೆ ಬೇಟಿ ನೀಡುವಿರಿ.

ಪರಿಹಾರ : ದಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಕಟಕ ರಾಶಿ: ಜೀವನದಲ್ಲಿ ಗೆಲ್ಲಲೇ ಬೇಕಾದ ಅವಶ್ಯಕತೆ ನಿಮಗಿರುತ್ತದೆ. ಆತ್ಮವಿಶ್ವಾಸದಿಂದಲೇ ದಿನದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಆತುರದ ನಿರ್ಧಾರಗಳು ಸೋಲಿಗೆ ಕಾರಣವಾಗುತ್ತದೆ. ಉದ್ಯೋಗದಲ್ಲಿನ ಅಡಚಣೆಗಳು ದೂರವಾಗಲಿವೆ. ಮಕ್ಕಳ ವಿಚಾರದಲ್ಲಿ ತೆಗೆದುಕೊಳ್ಳುವ ತೀರ್ಮಾನ ಸರಿದಾರಿಯಲ್ಲಿ ಇರಲಿ. ನೂತನ ಅವಕಾಶ ದೊರೆಯುವ ಕಾರಣ ಉದ್ಯೋಗ ಬದಲಾಯಿಸುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಗಂಭೀರದ ವಾತಾವರಣ ನೆಲೆಸಿರುತ್ತದೆ. ಮಾನಸಿಕ ಒತ್ತಡದಲ್ಲಿಯೂ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನ ಇರುತ್ತದೆ. ಪಾಲುಗಾರಿಕೆಯ ವ್ಯವಹಾರದಲ್ಲಿ ಹಿನ್ನೆಡೆ ಲಭಿಸುತ್ತದೆ. ಸಾಲದ ವ್ಯವಹಾರದಲ್ಲಿ ಎಚ್ಚರವಿರಲಿ.

ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಬಿಸಿ. .

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.