Horoscope Today: ನಿಮ್ಮ ತಪ್ಪಿಗೂ ಬೇರೆಯವರನ್ನು ದೂಷಿಸುವಿರಿ, ಅನಿರೀಕ್ಷಿತ ಧನ ಲಾಭ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ
ಮಾರ್ಚ್ 1, ಶುಕ್ರವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (1 March 2024 Daily Horoscope).

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (1 March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಶುಕ್ರವಾರ
ತಿಥಿ : ಷಷ್ಠಿ ರಾ.02.59 ರವರೆಗು ಇದ್ದು ಆನಂತರ ಸಪ್ತಮಿ ಆರಂಭವಾಗುತ್ತದೆ.
ನಕ್ಷತ್ರ : ಸ್ವಾತಿ ನಕ್ಷತ್ರವು ಬೆ.09.02 ರವರೆಗೆ ಇರುತ್ತದೆ. ಆನಂತರ ವಿಶಾಖ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.36
ಸೂರ್ಯಾಸ್ತ: ಸ.06.27
ರಾಹುಕಾಲ : ಬೆ.10.30 ರಿಂದ ಮ.12.00
ರಾಶಿ ಫಲಗಳು
ಸಿಂಹ
ಆತ್ಮಸ್ಥೈರ್ಯದ ಕಾರಣ ಉತ್ತಮ ಆರೋಗ್ಯ ಗಳಿಸುವಿರಿ. ಕುಟುಂಬದಲ್ಲಿನ ಕೆಲಸ ಕಾರ್ಯಗಳು ಮುಂದೂಡಲ್ಪಡುತ್ತವೆ. ಸಣ್ಣ ಪುಟ್ಟ ವಿಚಾರಗಳಿಗೂ ಭಿನ್ನಾಭಿಪ್ರಾಯ ಉಂಟಾಗಲಿದೆ. ಉದ್ಯೋಗದಲ್ಲಿ ಹಿರಿತನವನ್ನು ಆಧರಿಸಿ ಹೆಚ್ಚಿನ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ವಿದ್ಯಾರ್ಥಿಗಳು ಹಠದ ಬುದ್ಧಿಯಿಂದ ಕಲಿಕೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ಕಮಿಷನ್ ವ್ಯವಹಾರವು ಯಾವುದೇ ತೊಡಕಿಲ್ಲದೆ ನಡೆಯಲಿದೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ನಡೆಯುವಿರಿ. ಅಪಾರ ಧೈರ್ಯವಿರುವ ಕಾರಣ ಕಷ್ಟನಷ್ಟಗಳಿಗೆ ಹೆದರುವುದಿಲ್ಲ. ಸಮಾಜದ ಗಣ್ಯ ವ್ಯಕ್ತಿಗಳ ಸಹಾಯ ನಿಮಗಿರುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಹಳದಿ ಬಣ್ಣ
ಕನ್ಯಾ
ಕುಟುಂಬದಲ್ಲಿ ನೀಡಿದ ಭರವಸೆಗಳನ್ನು ಪೂರೈಸಲು ಪ್ರಯತ್ನಿಸುವಿರಿ. ಕುಟುಂಬದಲ್ಲಿ ಹೊಸತನದ ನಿರೀಕ್ಷೆ ತುಂಬಿರುತ್ತದೆ. ಮನಸ್ಸಿಲ್ಲದೆ ಹೋದರು ಅಧಿಕಾರಿಗಳ ಆದೇಶದಂತೆ ವಿದೇಶಕ್ಕೆ ತೆರಳ ಬೇಕಾಗಬಹುದು. ಉದ್ಯೋಗ ಬದಲಿಸುವ ಸಾಧ್ಯತೆ ಇಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿಸಿದ ವರಮಾನ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಮಾಡಿದ ತಪ್ಪನ್ನು ಮನ್ನಿಸಿ ಸ್ನೇಹಿತರು ಸಹಾಯ ಮಾಡಲಿದ್ದಾರೆ. ಹೊಸ ವಸ್ತುಗಳನ್ನು ಕೊಳ್ಳಲು ಹಣವನ್ನು ಖರ್ಚು ಮಾಡುವಿರಿ. ನಿಮ್ಮ ತಪ್ಪಿಗೂ ಬೇರೆಯವರನ್ನು ದೂಷಿಸುವಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸದಿರಿ. ಉದ್ಯೋಗದಲ್ಲಿ ಮೇಲುಗೈ ಸಾಧಿಸುವಿರಿ. ಅತಿಯಾದ ಆಹಾರ ಸೇವನೆಯಿಂದ ಅನಾರೋಗ್ಯ ಸಂಭವಿಸಬಹುದು. ಬೇಸರ ಕಡೆಯಲು ಮನರಂಜನೆಯನ್ನು ಆಶ್ರಯಿಸುವಿರಿ.
ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಹಸಿರು ಬಣ್ಣ
ತುಲಾ
ನಿಮ್ಮಲ್ಲಿರುವ ಗುಣ ಧರ್ಮದಿಂದ ಎಲ್ಲರನ್ನೂ ಆಕರ್ಷಿಸುವಿರಿ. ಕುಟುಂಬದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ. ಒಟ್ಟಾರೆ ನೆಮ್ಮದಿಯ ಜೀವನ ನಡೆಸುವಿರಿ. ಉದ್ಯೋಗದಲ್ಲಿ ನಿಮ್ಮ ಅವಗಾಹನೆಗೆ ತರದೆ ಸಹೋದ್ಯೋಗಿಗಳು ಮುಖ್ಯ ನಿರ್ಧಾರ ಕೈಗೊಳ್ಳಲಿದ್ದಾರೆ. ಇದರಿಂದ ಬೇಸರವಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ದೊರೆಯುವ ಆದಾಯ ಆಶ್ಚರ್ಯವನ್ನು ಉಂಟು ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮದಲ್ಲದ ವಿಚಾರಗಳಿಂದ ದೂರವಿರುತ್ತಾರೆ. ಏಕಾಂಗಿತನದಿಂದ ಕಲಿಕೆಯಲ್ಲಿ ಶ್ರದ್ದೆ ತೋರುತ್ತಾರೆ. ಸುತ್ತಮುತ್ತಲಿನ ಜನ ನಿಮ್ಮನ್ನು ಹೊಗಳಿ ಕೆಲಸ ಸಾಧಿಸುತ್ತಾರೆ. ಪ್ರತಿಕ್ಷಣದಲ್ಲಿಯೂ ಹೊಸದನ್ನು ಕಲಿತು ಎಲ್ಲರಿಗೂ ಮಾದರಿಯಾಗುವಿರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಲಿ. ತಂದೆ ಮತ್ತು ಸೋದರ ನಡುವಿನ ಮನಸ್ತಾಪವು ಕೊನೆಯಾಗಲಿದೆ..
ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನೀಲಿ ಬಣ್ಣ
ವೃಶ್ಚಿಕ
ಬುದ್ಧಿವಂತಿಕೆಯಿಂದ ಕುಟುಂಬದ ಸಂದಿಗ್ಧ ಪರಿಸ್ಥಿತಿಯನ್ನು ದೂರ ಮಾಡುವಿರಿ. ತಂದೆಯವರ ಜವಾಬ್ದಾರಿಯೊಂದಿಗೆ ಅವರ ಸಹಾಯವು ದೊರೆಯಲಿದೆ. ಅನಿರೀಕ್ಷಿತ ಧನ ಲಾಭವು ಆದಾಯದ ಕೊರತೆಯನ್ನು ಕಡಿಮೆ ಮಾಡುತ್ತದೆ. ಉದ್ಯೋಗದಲ್ಲಿ ಕೆಲಸ ಕಾರ್ಯಗಳ ಬಗ್ಗೆ ನೀರಸ ಪ್ರತಿಕ್ರಿಯೆ ದೊರೆಯುತ್ತದೆ. ವಿದ್ಯಾರ್ಥಿಗಳು ಒತ್ತಡಕ್ಕೆ ಮಣಿಯದೆ ಮೇಲ್ಮಟ್ಟ ತಲುಪುತ್ತಾರೆ. ಜೀವನದಲ್ಲಿ ಅನೇಕ ಪರಿವರ್ತನೆಗಳು ಸಂತೋಷ ನೀಡಲಿವೆ. ಆತ್ಮೀಯರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವಿರಿ. ವಿಶೇಷ ಚೇತನ ಚೇತನರಿಗೆ ಹಣಕಾಸಿನ ಸೌಲಭ್ಯತೆ ದೊರೆಯುತ್ತದೆ. ಮಾನಸಿಕ ಒತ್ತಡ ಕೆಲಸ ಕಾರ್ಯಗಳ ಮೇಲೆ ಪ್ರಭಾವ ಬೀರುತ್ತದೆ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸದಿರಿ.
ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ನೇರಳೆ ಬಣ್ಣ
----------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ