Horoscope Today: ಅನವಶ್ಯಕ ಖರ್ಚುವೆಚ್ಚ, ಸಂಬಂಧ ತೊರೆದು ಹೋದ ಒಬ್ಬರು ನಿಮ್ಮ ಸ್ನೇಹ ಬಯಸಿ ಬರುವರು; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ
ಮಾರ್ಚ್ 1, ಶುಕ್ರವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (1 March 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (1 March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಶುಕ್ರವಾರ
ತಿಥಿ : ಷಷ್ಠಿ ರಾ.02.59 ರವರೆಗು ಇದ್ದು ಆನಂತರ ಸಪ್ತಮಿ ಆರಂಭವಾಗುತ್ತದೆ.
ನಕ್ಷತ್ರ : ಸ್ವಾತಿ ನಕ್ಷತ್ರವು ಬೆ.09.02 ರವರೆಗೆ ಇರುತ್ತದೆ. ಆನಂತರ ವಿಶಾಖ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.36
ಸೂರ್ಯಾಸ್ತ: ಸ.06.27
ರಾಹುಕಾಲ : ಬೆ.10.30 ರಿಂದ ಮ.12.00
ರಾಶಿ ಫಲಗಳು
ಧನಸ್ಸು
ಅಪರೂಪಕ್ಕೆ ಆಗಮಿಸಿದ ನೆಂಟರಿಂದ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಸ್ನೇಹಿತರ ಸಹಾಯದಿಂದ ಉದ್ಯೋಗವನ್ನು ಬದಲಿಸಬಹುದು. ಆತ್ಮೀಯರ ಜೊತೆ ಉದ್ದಿಮೆಯನ್ನು ಆರಂಭಿಸಲು ಒಡಂಬಳಿಕೆ ಮಾಡಿಕೊಳ್ಳುವಿರಿ. ಉತ್ತಮ ಆರೋಗ್ಯ ಮರಳುತ್ತದೆ. ಒಳ್ಳೆಯ ಕೆಲಸವನ್ನು ಮಾಡಲು ಮಕ್ಕಳಿಗೆ ಉತ್ತೇಜನ ನೀಡುವಿರಿ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ವಿದ್ಯಾರ್ಥಿಗಳು ಹೆಚ್ಚಿನ ನಿರೀಕ್ಷೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗುತ್ತಾರೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಬಹುದು. ಅನವಶ್ಯಕ ಖರ್ಚು ವೆಚ್ಚಗಳು ಮಾನಸಿಕ ಒತ್ತಡಕ್ಕೆ ದಾರಿಯಾಗಲಿವೆ. ಯೋಜಿತ ಪ್ರವಾಸವು ರದ್ದಾಗಲಿದೆ. ತೆಗೆದುಕೊಂಡ ತೀರ್ಮಾನವೊಂದನ್ನು ಬದಲಿಸಿ ತೊಂದರೆಗೆ ಒಳಗಾಗುವಿರಿ. ಆತ್ಮೀಯರಿಂದ ಹಣದ ಸಹಾಯ ದೊರೆಯಲಿದೆ. ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ.
ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ಮಕರ
ನಿಮ್ಮ ಕೆಲಸ ಕಾರ್ಯಗಳು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಲಿದೆ. ಉದ್ಯೋಗದಲ್ಲಿ ಅನವಶ್ಯಕ ಗೊಂದಲಗಳು ಎದುರಾಗಲಿವೆ. ಬೇಸರದಿಂದ ಉದ್ಯೋಗ ಬದಲಿಸುವ ನಿರ್ಧಾರ ಮಾಡಬೇಕು. ಅನಾವಶ್ಯಕವಾದ ಚಿಂತೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಲಿವೆ. ವ್ಯಾಪಾರ ವ್ಯವಹಾರಗಳು ಉತ್ತಮ ವರಮಾನ ನೀಡಲಿದೆ. ಹಣಕಾಸಿನ ತೊಂದರೆ ಕಾಣುವುದಿಲ್ಲ. ಸಂಗಾತಿ ಜೊತೆ ಇರುವ ಅನುಬಂಧ ಉತ್ತಮಗೊಳ್ಳುತ್ತದೆ. ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಭೂವಿವಾದ ಖಿನ್ನತೆಯನ್ನು ಹೆಚ್ಚಿಸುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಅನವಶ್ಯಕವಾಗಿ ಬದಲಿಸದಿರಿ. ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ದೊರೆಯಲಿದೆ
ಪರಿಹಾರ : ತಲೆಗೆ ಹಾಲನ್ನಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಕುಂಭ
ಕುಟುಂಬದ ಪ್ರಮುಖ ವಿಚಾರಗಳಲ್ಲಿ ನಿರಾಸೆ ಉಂಟಾಗಲಿದೆ. ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳಿ. ಹಿಂದಿನ ದಿನಗಳ ಸಮಸ್ಯೆ ಪರಿಹಾರವಾಗಲಿದೆ. ಉತ್ತಮ ಆರೋಗ್ಯ ಗಳಿಸಲು ಪ್ರಕೃತಿಯನ್ನು ಅವಲಂಬಿಸುವಿರಿ. ಕುಟುಂಬದ ಒಮ್ಮತದ ತೀರ್ಮಾನದ ಪ್ರಯೋಜನ ನಿಮಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಉದ್ಯೋಗದಲ್ಲಿ ಅನಿಶ್ಚಿತ ವಾತಾವರಣ ಉಂಟಾಗಲಿದೆ. ಸಂಯಮದಿಂದ ಯಶಸ್ಸನ್ನು ಗಳಿಸುವಿರಿ. ವ್ಯಾಪಾರ ವ್ಯವಹಾರಗಳು ಕಡಿಮೆ ಮಟ್ಟದ ಆದಾಯ ಗಳಿಸುತ್ತದೆ. ಆತ್ಮೀಯರೂ ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ವೈವಾಹಿಕ ಜೀವನದಲ್ಲಿ ಸಂತಸದ ವಾತಾವರಣ ಇರಲಿದೆ. ಬಂಧುಭಾಂದವರ ಆಗಮನದಿಂದ ಖರ್ಚು ವೆಚ್ಚಗಳು ಹೆಚ್ಚಲಿವೆ.
ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಬೂದು ಬಣ್ಣ
ಮೀನ
ಸ್ನೇಹಿತರ ಜೊತೆಯಲ್ಲಿ ಹಣಕಾಸಿನ ವಿವಾದವು ಎದುರಾಗಲಿದೆ. ಕುಟುಂಬದಲ್ಲಿನ ಒಗ್ಗಟ್ಟು ಬಹುಕಾಲ ಉಳಿಯಲಿದೆ. ಎಲ್ಲರೊಂದಿಗೆ ಚರ್ಚಿಸಿ ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಮಾತನ್ನು ಪ್ರತಿಯೊಬ್ಬರು ಗೌರವಿಸುತ್ತಾರೆ. ಕೌಟುಂಬಿಕ ವಿವಾದವು ಬಗೆಹರಿಯಲಿದೆ. ಅವಿವಾಹಿತರಿಗೆ ವಿವಾಹವಾಗಲಿದೆ. ಕಷ್ಟಪಟ್ಟು ದುಡಿದ ಹಣವನ್ನುಒಳ್ಳೆಯ ಕೆಲಸಗಳಿಗೆ ಬಳಸುವಿರಿ. ದಂಪತಿಗಳ ನಡುವೆ ಅನವಶ್ಯಕ ವಾದ ವಿವಾದಗಳು ಎದುರಾಗಲಿವೆ. ಸಂಬಂಧ ತೊರೆದು ಹೋದ ಒಬ್ಬರು ಮತ್ತೊಮ್ಮೆ ಸ್ನೇಹ ಬಯಸಿ ಬರಲಿದ್ದಾರೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಕಷ್ಟಪಟ್ಟು ಮುಂದುವರೆಯುತ್ತಾರೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಕಂದು ಬಣ್ಣ
----------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ