ಅನಾರೋಗ್ಯ ಕಾಡಲಿದೆ, ಬಡವರ ವಿವಾಹ ಕಾರ್ಯಕ್ಕೆ ನೆರವು ನೀಡುವಿರಿ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅನಾರೋಗ್ಯ ಕಾಡಲಿದೆ, ಬಡವರ ವಿವಾಹ ಕಾರ್ಯಕ್ಕೆ ನೆರವು ನೀಡುವಿರಿ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

ಅನಾರೋಗ್ಯ ಕಾಡಲಿದೆ, ಬಡವರ ವಿವಾಹ ಕಾರ್ಯಕ್ಕೆ ನೆರವು ನೀಡುವಿರಿ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

ಜುಲೈ 10ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ).

ಅನಾರೋಗ್ಯ ಕಾಡಲಿದೆ, ಬಡವರ ವಿವಾಹ ಕಾರ್ಯಕ್ಕೆ ನೆರವು ನೀಡುವಿರಿ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ
ಅನಾರೋಗ್ಯ ಕಾಡಲಿದೆ, ಬಡವರ ವಿವಾಹ ಕಾರ್ಯಕ್ಕೆ ನೆರವು ನೀಡುವಿರಿ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (10th July 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಆಷಾಢ ಮಾಸ-ಶುಕ್ಲಪಕ್ಷ-ಬುಧವಾರ

ತಿಥಿ: ಚೌತಿ ಬೆಳಗ್ಗೆ 06.17 ರವರೆಗೂ ಇದ್ದು ನಂತರ ಪಂಚಮಿ ಆರಂಭವಾಗುತ್ತದೆ.

ನಕ್ಷತ್ರ : ಮಖೆ ನಕ್ಷತ್ರವು ಬೆಳಗ್ಗೆ 09.40 ರವರೆಗೂ ಇದ್ದು ನಂತರ ಪುಬ್ಬ ನಕ್ಷತ್ರ ಇರುತ್ತದೆ.

ಸೂರ್ಯೋದಯ: ಬೆಳಗ್ಗೆ 05.59

ಸೂರ್ಯಾಸ್ತ: ಸಂಜೆ 06.49

ರಾಹುಕಾಲ: 12.28 ರಿಂದ 02.04

ರಾಶಿಫಲ

ಸಿಂಹ

ಮನೆ ಮಂದಿಯ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಪ್ರಯೋಜನವಿಲ್ಲದ ವಿಚಾರಗಳಿಗೆ ಯೋಚನೆ ಮಾಡುವಿರಿ. ಕೆಲಸ ಕಾರ್ಯಗಳ ಬಗ್ಗೆ ತಿಳಿದುಕೊಳ್ಳದೆ ದುಡುಕಿನ ನಿರ್ಧಾರದಿಂದ ಅರಂಭಿಸಿದ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲಲಿದೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ. ತಂದೆಯ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ಅಶಕ್ತರ ವಿವಾಹಕ್ಕೆ ಸಹಾಯ ಮಾಡುವಿರಿ. ವಿದೇಶಕ್ಕೆ ತೆರಳುವ ಯೋಗವಿದೆ. ಮಿತಿ ಇಲ್ಲದ ಆಹಾರ ಸೇವಿಸುವ ಕಾರಣ ಅಜೀರ್ಣತೆ ಉಂಟಾಗುತ್ತದೆ. ಸಾಲದ ವ್ಯವಹಾರದಲ್ಲಿ ಆತ್ಮೀಯರ ಜೊತೆ ಮನಸ್ತಾಪ ಉಂಟಾಗಲಿದೆ. ಮಕ್ಕಳಿಗೆ ಅವರಿಗೆ ಇಷ್ಟವಾದ ತಿಂಡಿ ತಿನಿಸು ನೀಡುವುದಲ್ಲಿ ಸಂತಸ ಕಾಣುವಿರಿ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಕಪ್ಪು

ಕನ್ಯಾ

ಹಣಕಾಸಿನ ವಿಚಾರದಲ್ಲಿ ಆತಂಕ ಮನೆ ಮಾಡಿರುತ್ತದೆ. ಆತ್ಮೀಯರ ಮಾತನ್ನು ಅರ್ಥ ಮಾಡಿಕೊಳ್ಳದೆ ವಿವಾದ ಉಂಟುಮಾಡುವಿರಿ. ಬೇರೆಯವರ ಬಗ್ಗೆ ಮಾತನಾಡಿ ಕೆಟ್ಟವರಾಗುವ ಬದಲು ಮೌನದಿಂದ ಗೆಲುವು ಸಾಧಿಸುವಿರಿ. ಸಂಗಾತಿಯ ಸಹಕಾರದ ಮನೋಭಾವನೆ ಹೊಸ ಚೈತನ್ಯವನ್ನು ತುಂಬುತ್ತದೆ. ತಪ್ಪಾದ ಅಭ್ಯಾಸಗಳು ಅನಾರೋಗ್ಯಕ್ಕೆ ಕಾರಣವಾಗಲಿದೆ. ಹಣಕಾಸಿನ ಕೊರತೆ ಕಂಡು ಬರುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಹೊಸ ವಾಹನ ಕೊಳ್ಳುವಿರಿ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಿಸುವ ಕಾರಣ ಆತ್ಮೀಯರು ದೂರ ಉಳಿಯುತ್ತಾರೆ.

ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ ತಿಳಿ ಹಸಿರು

ತುಲಾ

ಕುಟುಂಬಕ್ಕೆ ಸಂಬಂಧಿಸಿದ ದೊಡ್ಡ ಸಮಸ್ಯೆಯೊಂದನ್ನು ಸಂಧಾನದಿಂದ ನಿವಾರಿಸುವಿರಿ. ಮನೆಮಂದಿಯ ಜೊತೆ ದೀರ್ಘಕಾಲದ ಪ್ರವಾಸಕ್ಕೆ ಯೋಜನೆ ರೂಪಿಸುವಿರಿ. ಅನಾವಶ್ಯಕವಾಗಿ ಹಣ ಖರ್ಚು ಮಾಡುವಿರಿ. ಅತಿ ಚುರುಕುತನದಿಂದ ವರ್ತಿಸುವ ನೀವು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಸಂಗಾತಿಯಲ್ಲಿ ಇಲ್ಲದ ತಪ್ಪನ್ನು ಹುಡುಕಲು ಹೋಗಿ ಕಷ್ಟಕ್ಕೆ ಸಿಲುಕಿವಿರಿ. ಮಕ್ಕಳ ಜೊತೆ ಆನಂದದಿಂದ ಸಮಯ ಕಳೆಯುವಿರಿ. ನೆರೆಹೊರೆಯ ಮಕ್ಕಳಿಗೆ ತಿಂಡಿ ತಿನಿಸು ನೀಡಿ ಅವರ ಸಂತೋಷದಲ್ಲಿ ಪಾಲ್ಗೊಳ್ಳುವಿರಿ. ಧಾರ್ಮಿಕ ಕೇಂದ್ರಕ್ಕೆ ಹಣವನ್ನು ದೇಣಿಗೆಯಾಗಿ ನೀಡುವಿರಿ. ಗಾಳಿ ಮಾತಿಗೆ ಓಗೊಡಬೇಡಿ.

ಪರಿಹಾರ : ಹಣೆಯಲ್ಲಿ ತಿಲಕ ಹಚ್ಚಿ ದಿನದ ಕೆಲಸವನ್ನು ಆರಂಭಿಸಿ

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನಸು ಗೆಂಪು

ವೃಶ್ಚಿಕ

ನಿಮಗೆ ವಿಶೇಷವಾದ ಬುದ್ಧಿವಂತಿಕೆ ಇರುತ್ತದೆ. ಆದರೆ ಅದನ್ನು ಸರಿಯಾಗಿ ಬಳಸಲು ವಿಫಲರಾಗುವಿರಿ. ನೀವು ಮಾಡುವ ತಪ್ಪಿಗೆ ಬೇರೆಯವರನ್ನು ನಿಂದಿಸುವಿರಿ. ವಿರೋಧಿಗಳ ಸ್ವಭಾವ ತಿಳಿಯಲು ವಿಫಲರಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ವಿವಾದ ಎದುರಾಗುತ್ತದೆ. ತಾಳ್ಮೆ ಇದ್ದಷ್ಟು ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗದಲ್ಲಿ ಅಡ್ಡಿ ಆತಂಕದ ಛಾಯೆ ಕಂಡು ಬರದು. ಆದರೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ದಿನ ಕಳೆದಂತೆ ಅದ್ಭುತವಾದ ಯಶಸ್ಸೊಂದು ನಿಮ್ಮದಾಗುತ್ತದೆ. ಕುಟುಂಬದವರ ಜೊತೆ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.