ಖ್ಯಾತ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರೆಯಲಿದೆ, ಹೊಸ ವಾಹನ ಕೊಳ್ಳಲಿದ್ದೀರಿ; ಧನಸ್ಸು, ಮಕರ, ಕುಂಭ, ಮೀನ ರಾಶಿಫಲ
ಜುಲೈ 10ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(10th July 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಆಷಾಢ ಮಾಸ-ಶುಕ್ಲಪಕ್ಷ-ಬುಧವಾರ
ತಿಥಿ: ಚೌತಿ ಬೆಳಗ್ಗೆ 06.17 ರವರೆಗೂ ಇದ್ದು ನಂತರ ಪಂಚಮಿ ಆರಂಭವಾಗುತ್ತದೆ.
ನಕ್ಷತ್ರ : ಮಖೆ ನಕ್ಷತ್ರವು ಬೆಳಗ್ಗೆ 09.40 ರವರೆಗೂ ಇದ್ದು ನಂತರ ಪುಬ್ಬ ನಕ್ಷತ್ರ ಇರುತ್ತದೆ.
ಸೂರ್ಯೋದಯ: ಬೆಳಗ್ಗೆ 05.59
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: 12.28 ರಿಂದ 02.04
ರಾಶಿಫಲ
ಧನಸ್ಸು
ಗೆಲ್ಲಲೇ ಬೇಕಾದ ಹಟ ಮತ್ತು ಅವಶ್ಯಕತೆ ಇರುತ್ತದೆ. ಎಷ್ಟೇ ಬುದ್ಧಿವಂತರಾದರೂ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗುವಿರಿ. ವಿದ್ಯಾರ್ಥಿಗಳ ವಿಶೇಷ ಸಾಧನೆ ಎಲ್ಲರ ಮನ ಗೆಲ್ಲುತ್ತದೆ. ಮಕ್ಕಳು ತಮ್ಮ ಆಸೆ ಆಕಾಂಕ್ಷೆಗಳ ಈಡೇರಿಕೆಗೆ ನಿಮ್ಮ ಮೇಲೆ ಒತ್ತಡ ಹೇರುತ್ತಾರೆ. ಮನೆಯ ಹೆಣ್ಣುಮಕ್ಕಳ ವಿವಾಹದ ಬಗ್ಗೆ ಮಾತುಕತೆ ನಡೆಸುವಿರಿ. ವಂಶಕ್ಕೆ ಸೇರಿದ ಹಳೆಯ ಮನೆಯಲ್ಲಿ ಸಂತೋಷಕೂಟವನ್ನು ಆಯೋಜಿಸುವಿರಿ. ಹಣದ ತೊಂದರೆ ಇಲ್ಲದ ಕಾರಣ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಹಣದ ಬಗ್ಗೆ ಅತಿಯಾದ ಆಸೆ ಇರುವುದಿಲ್ಲ. ಕಷ್ಟವಿಲ್ಲದ ಜೀವನ ನಿರ್ವಹಣೆಗಾಗಿ ಉಪವೃತ್ತಿಯನ್ನು ಆರಂಭಿಸುವಿರಿ. ವಾಹನ ಲಾಭವಿದೆ. ಹೆಣ್ಣು ಮಕ್ಕಳಿಗೆ ಉದ್ಯೋಗ ದೊರೆಯುತ್ತದೆ.
ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಬಿಳಿ
ಮಕರ
ಸಮಾಜದ ಗಣ್ಯ ವ್ಯಕ್ತಿಯೊಬ್ಬರು ನಿಮ್ಮ ಕೆಲಸಕಾರ್ಯಕ್ಕೆ ಸಹಾಯ ನೀಡುತ್ತಾರೆ. ಕೆಲಸ ಕಾರ್ಯಗಳನ್ನು ತಡವಾದರೂ ಆರಂಭಿಸಿದರೂ ಬುದ್ಧಿವಂತಿಕೆಯಿಂದ ಕಾರ್ಯ ಸಾಧಿಸುವಿರಿ. ಬಿಡುವಿಲ್ಲದ ಕೆಲಸದಿಂದ ಬೇಸರ ಉಂಟಾಗುತ್ತದೆ. ಕುಟುಂಬದ ಮತ್ತು ಅಕ್ಕಪಕ್ಕದ ಮಕ್ಕಳ ಜೊತೆಯಲ್ಲಿ ಮನರಂಜನಾ ಚಟುವಟಿಕೆಯಲ್ಲಿ ತೊಡಗುವಿರಿ. ಎಲ್ಲರ ಜೊತೆ ಧಾರ್ಮಿಕ ಸ್ಥಳಕ್ಕೆ ತೆರಳುವಿರಿ. ಜನಸೇವೆ ಮಾಡುವ ಆಶಯದಿಂದ ಸಂಘ ಸಂಸ್ಥೆಯನ್ನು ಸ್ಥಾಪಿಸುವಿರಿ. ಹಣಕಾಸಿನ ಅಗತ್ಯತೆಯನ್ನು ಅರಿತು ತಂದೆಯವರು ಹಣದ ಸಹಾಯ ಮಾಡಲಿದ್ದಾರೆ. ಖ್ಯಾತ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರೆಯುತ್ತದೆ. ಮನೆಯನ್ನು ಸ್ವಚ್ಛವಾಗಿರಿಸಲು ಸಹಾಯವಾಗುವ ಯಂತ್ರೋಪಕರಣವನ್ನು ಕೊಳ್ಳುವಿರಿ. ಇದರ ಬಗ್ಗೆ ಮನೆಯಲ್ಲಿ ಭಿನಾಭಿಪ್ರಾಯಗಳು ಉಂಟಾಗಲಿವೆ.
ಪರಿಹಾರ : ತಾಯಿಯವರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ :1
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಬೂದು
ಕುಂಭ
ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವುದಿಲ್ಲ. ಬೇರೆಯವರ ಸಹಾಯವಿಲ್ಲದೆ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಯಶಸ್ಸು ಗಳಿಸಲು ಸಾಧ್ಯವಾಗದೆ ಹೋದಲ್ಲಿ ಮಾನಸಿಕ ಒತ್ತಡದಿಂದ ಬಳಲುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೋರುವಿರಿ. ವಿದ್ಯಾರ್ಥಿಗಳು ಕರ್ತವ್ಯ ಪಾಲನೆಗೆ ಹೆಚ್ಚಿನ ಪ್ರಯತ್ನಪಡುತ್ತಾರೆ. ಬಿಡುವಿಲ್ಲದ ಕೆಲಸದಿಂದ ದೈಹಿಕವಾಗಿ ಕುಗ್ಗುವಿರಿ. ಅನಾವಶ್ಯಕ ವಾದ ವಿವಾದಗಳಿಗೆ ಬೇಸರ ಉಂಟಾಗಲಿದೆ. ಅಗತ್ಯಕ್ಕಿಂತ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗುತ್ತವೆ. ಹಿತೈಷಿಗಳ ಮಾರ್ಗದರ್ಶನದಲ್ಲಿ ಮುಂದುವರೆದರೆ ಯಾವುದೇ ತೊಂದರೆ ಎದುರಾಗದು. ಮನೆಯಲ್ಲಿರುವ ಪುಟ್ಟ ಮಕ್ಕಳ ಜೊತೆಯಲ್ಲಿ ಸಂತೋಷದಿಂದ ವೇಳೆ ಕಳೆಯುವಿರಿ.
ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಆಕಾಶ ನೀಲಿ ಬಣ್ಣ
ಮೀನ
ಬೇರೆಯವರ ಮನಸ್ಸನ್ನು ನೋಯಿಸದೆ ಸಂತೋಷ ಹಂಚುವಿರಿ. ವಿಶೇಷವಾದ ಕಲೆಯೊಂದು ನಿಮಗೆ ಒಲಿದಿರುತ್ತದೆ. ಒಮ್ಮತದ ಕಾರಣ ಹಣಕಾಸಿನ ತೊಂದರೆ ಕಂಡು ಬರದು. ಪ್ರತಿಯೊಂದು ಕೆಲಸವನ್ನು ಪೂರ್ವಯೋಜನೆಯಿಂದ ಮಾಡುವ ಕಾರಣ ಯಾವುದೇ ತೊಂದರೆ ಎದುರಾಗದು. ಅಪರೂಪವೆಂಬಂತೆ ಸಂಗಾತಿ ಮಕ್ಕಳ ಜೊತೆಯಲ್ಲಿ ಕಿರು ಪ್ರವಾಸ ಕೈಗೊಳ್ಳುವಿರಿ. ಕೃಷಿ ಭೂಮಿಯನ್ನು ಕೊಳ್ಳುವ ಆಸೆ ಈಡೇರುತ್ತದೆ. ಹಳ್ಳಿಯ ಜೀವನ ನಡೆಸುವ ಪ್ರಯತ್ನ ಈಡೇರುವುದಿಲ್ಲ. ಕಷ್ಟದಲ್ಲಿದ್ದವರಿಗೆ ಹಣದ ಸಹಾಯ ಮಾಡುವಿರಿ. ಬೇರೆಯವರ ಸಹಾಯದಿಂದ ಕೆಲಸ ನಿರ್ವಹಿಸುವ ಅನಿವಾರ್ಯತೆ ಉಂಟಾಗುತ್ತದೆ. ಪ್ರಾಣಿ ಪಕ್ಷಿಗಳ ಬಗ್ಗೆ ಅನುಕಂಪವಿರುತ್ತದೆ.
ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿ
ಅದೃಷ್ಟದ ಸಂಖ್ಯೆ 7
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ಕೆಂಪು
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ