ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚರ್ಮದ ಸಮಸ್ಯೆ ಎದುರಾಗಬಹುದು, ಅಪರೂಪದ ಆತ್ಮೀಯರೊಬ್ಬರು ಸಿಗಲಿದ್ದಾರೆ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ

ಚರ್ಮದ ಸಮಸ್ಯೆ ಎದುರಾಗಬಹುದು, ಅಪರೂಪದ ಆತ್ಮೀಯರೊಬ್ಬರು ಸಿಗಲಿದ್ದಾರೆ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ

10 ಜೂನ್‌ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (10th June 2024 Daily Horoscope).

ಅಪರೂಪದ ಆತ್ಮೀಯರೊಬ್ಬರು ಸಿಗಲಿದ್ದಾರೆ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ
ಅಪರೂಪದ ಆತ್ಮೀಯರೊಬ್ಬರು ಸಿಗಲಿದ್ದಾರೆ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (10th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಸೋಮವಾರ

ತಿಥಿ: ಚೌತಿ ಬೆಳಿಗ್ಗೆ 4.33ರವರೆಗೂ ಇರುತ್ತದೆ. ಅನಂತರ ಪಂಚಮಿ ಆರಂಭವಾಗುತ್ತದೆ.

ನಕ್ಷತ್ರ: ಪುಷ್ಯ ನಕ್ಷತ್ರವು ರಾತ್ರಿ 10.25 ರವರೆಗೂ ಇರುತ್ತದೆ. ಅನಂತರ ಆಶ್ಲೇಷ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಿಗ್ಗೆ 5.52

ಸೂರ್ಯಾಸ್ತ: ಸಂಜೆ 6.45

ರಾಹುಕಾಲ: ಬೆಳಿಗ್ಗೆ 7.35 ರಿಂದ ಬೆಳಿಗ್ಗೆ 9.11

ಮೇಷ

ಚರ್ಮಕ್ಕೆ ಸಂಬಂಧಪಟ್ಟ ತೊಂದರೆ ಇರುತ್ತದೆ. ಕೈಕಾಲುಗಳಲ್ಲಿ ಊತ ಕಂಡುಬರಬಹುದು. ವಿಶ್ರಾಂತಿಯಿಂದ ಮಾತ್ರ ಆರೋಗ್ಯ ಸುಧಾರಿಸುತ್ತದೆ. ಯಾವುದನ್ನೂ ಲೆಕ್ಕಿಸದೆ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಆದರೆ ಸಹನೆ ಕಡಿಮೆಯಾಗಿ ಸಣ್ಣಪುಟ್ಟ ದೋಷಗಳಿಗೂ ಕೋಪದಿಂದ ಪ್ರತಿಕ್ರಿಯಿಸುವಿರಿ. ಹತ್ತು ಜನರು ಸೇರುವ ಕಡೆ, ಯಾರೊಂದಿಗೂ ಮಾತನಾಡದೆ ಏಕಾಂಗಿಯಾಗಿ ಇರುವಿರಿ. ಹಣದ ತೊಂದರೆ ಕಂಡುಬರುವುದಿಲ್ಲ. ರುಚಿಕರವಾದ ಭೋಜನವನ್ನು ಸೇವಿಸುವಿರಿ. ಮನಸ್ಸಿನಲ್ಲಿ ಯಾವುದೋ ಒಂದು ವಿಚಾರಕ್ಕೆ ಯೋಚನೆ ಇದ್ದೇ ಇರುತ್ತದೆ. ಶಾಂತವಾಗಿ ಕಾಣುವ ನೀವು ಕೋಪದಲ್ಲಿ ಉದ್ವೇಗದಿಂದ ವರ್ತಿಸುವಿರಿ. ಮಕ್ಕಳ ಸಾಧನೆಯಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ.

ಪರಿಹಾರ: ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ವೃಷಭ

ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ನಿಮ್ಮ ಕಾರ್ಯದಕ್ಷತೆಗೆ ಹಿರಿಯರ ಮೆಚ್ಚುಗೆ ದೊರೆಯುತ್ತದೆ. ಉದ್ಯೋಗದಲ್ಲಿದ್ದ ಅಡಚಣೆಗಳು ಮರೆಯಾಗಲಿವೆ. ಸಹೋದ್ಯೋಗಿಗಳು ಪ್ರತಿಯೊಂದು ವಿಚಾರದಲ್ಲಿಯೂ ನಿಮ್ಮ ಸಲಹೆಯನ್ನು ಪಾಲಿಸುತ್ತಾರೆ. ಮಕ್ಕಳಿಗೆ ಉತ್ತಮ ಸಹಾಯ ಅಥವಾ ಸಹಕಾರದ ಅವಶ್ಯಕತೆ ಇದೆ. ಶಿಕ್ಷೆಗಿಂತಲೂ ಬುದ್ಧಿಮಾತಿನಿಂದ ಮಕ್ಕಳ ಜೀವನವನ್ನು ರೂಪಿಸುವಿರಿ. ಹಣದ ತೊಂದರೆ ಇರುವುದಿಲ್ಲ. ನಿಮ್ಮ ಮನಸ್ಸಿಗೆ ಇಷ್ಟವೆನಿಸುವ ವಸ್ತುಗಳನ್ನು ಖರೀದಿಸುವಿರಿ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಮಕ್ಕಳ ಜೊತೆಯಲ್ಲಿ ದೂರದ ಊರಿಗೆ ಪ್ರವಾಸ ಬೆಳೆಸುವಿರಿ. ಉನ್ನತ ಅಧಿಕಾರದ ಆಸೆ ಇದ್ದರೂ ಕಾರ್ಯಗತಗೊಳ್ಳುವುದಿಲ್ಲ.

ಪರಿಹಾರ: ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 1

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಮಿಥುನ

ಕಾರ್ಯದಕ್ಷತೆಯಿಂದ ಒಳ್ಳೆಯ ಹೆಸರನ್ನು ಗಳಿಸುವಿರಿ. ಸಮಾಜದ ಗಣ್ಯ ವ್ಯಕ್ತಿಗಳಿಗೆ ಹತ್ತಿರವಾಗುವಿರಿ. ಯಾರ ಮೇಲೂ ಅವಲಂಬಿತರಾಗದೆ ಸ್ವಂತ ಪ್ರತಿಭೆಯ ಮೇಲೆ ನಂಬಿಕೆ ಇಡುವಿರಿ. ಹಣದ ತೊಂದರೆ ಎದುರಾಗುವುದಿಲ್ಲ. ಲೋಹಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಅನುಭವಿಸುತ್ತಾರೆ. ಕುಟುಂಬದ ಸದಸ್ಯರಿಂದ ಅವಶ್ಯಕತೆಗೆ ಸಾಕಾಗುವಷ್ಟು ಆದಾಯ ದೊರೆಯುತ್ತದೆ. ಕಣ್ಣಿನ ದೋಷವಿರುತ್ತದೆ. ಆತುರ ಪಡದೆ ತಾಳ್ಮೆಯಿಂದ ವರ್ತಿಸುವಿರಿ. ಹೊಸ ವಿಚಾರವನ್ನು ಕಲಿಯುವಲ್ಲಿ ಆಸಕ್ತಿ ತೋರುವಿರಿ. ಬಂಧು-ಬಳಗದವರ ಜೊತೆ ಉತ್ತಮ ಅನುಬಂಧ ಉಂಟಾಗುತ್ತದೆ. ಸಂಗಾತಿಯ ಸಹಾಯ ಸಹಕಾರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ಕಟಕ

ಗೃಹಿಣಿಯರು ಎಚ್ಚರಿಕೆಯಿಂದ ಇರಬೇಕು. ಸಂಗಾತಿಗೆ ಸೋದರರ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳಿರುತ್ತವೆ. ನಿಮಗೆ ಇಷ್ಟವೆನಿಸುವ ವಸ್ತುವೊಂದು ಉಡುಗೊರೆಯಾಗಿ ದೊರೆಯಲಿದೆ. ಅಪರೂಪವೆಂಬಂತೆ ಆತ್ಮೀಯರೊಬ್ಬರನ್ನು ಭೇಟಿ ಮಾಡುವಿರಿ. ಸೋದರರ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುವುದಿಲ್ಲ. ಮನಸ್ಸಿನಲ್ಲಿ ಉಪಯೋಗವಿಲ್ಲದ ಯೋಚನೆಗಳು ಇರುತ್ತವೆ. ಸೋದರಿಯೂ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಧೈರ್ಯದಿಂದ ಎದುರಾಗುವ ಸವಾಲುಗಳನ್ನು ಜಯಿಸುವಿರಿ. ವಾದ ವಿವಾದಕ್ಕೆ ಎಡೆಗೊಡದೆ ಬುದ್ಧಿವಂತಿಕೆಯಿಂದ ಕೆಲಸ ಸಾಧಿಸುವಿರಿ. ತಾಳ್ಮೆಯಿಂದ ಹಣಕಾಸಿನ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಿರಿ. ಮನಸ್ಸಿನಲ್ಲಿ ಅಂಜಿಕೆಯ ಗುಣವಿರುತ್ತದೆ. ನಿಮ್ಮ ಜೀವನದ ಅಭಿವೃದ್ಧಿಗೆ ಆತ್ಮೀಯರೊಬ್ಬರ ಸಹಾಯ ದೊರೆಯುತ್ತದೆ.

ಪರಿಹಾರ: ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).