ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶೀತವಾಯುವಿನ ದೋಷ ಉಂಟಾಗಲಿದೆ, ವಿವಾಹದ ವಿಚಾರದಲ್ಲಿ ವಿರೋಧ ವ್ಯಕ್ತವಾಗುತ್ತದೆ; ಧನುರಾಶಿಯಿಂದ ಮೀನದವರೆಗೆ ದಿನಭವಿಷ್ಯ

ಶೀತವಾಯುವಿನ ದೋಷ ಉಂಟಾಗಲಿದೆ, ವಿವಾಹದ ವಿಚಾರದಲ್ಲಿ ವಿರೋಧ ವ್ಯಕ್ತವಾಗುತ್ತದೆ; ಧನುರಾಶಿಯಿಂದ ಮೀನದವರೆಗೆ ದಿನಭವಿಷ್ಯ

10 ಜೂನ್‌ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (10th June 2024 Daily Horoscope).

ವಿವಾಹದ ವಿಚಾರದಲ್ಲಿ ವಿರೋಧ ವ್ಯಕ್ತವಾಗುತ್ತದೆ; ಧನುರಾಶಿಯಿಂದ ಮೀನದವರೆಗೆ ದಿನಭವಿಷ್ಯ
ವಿವಾಹದ ವಿಚಾರದಲ್ಲಿ ವಿರೋಧ ವ್ಯಕ್ತವಾಗುತ್ತದೆ; ಧನುರಾಶಿಯಿಂದ ಮೀನದವರೆಗೆ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (10th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಸೋಮವಾರ

ತಿಥಿ: ಚೌತಿ ಬೆಳಿಗ್ಗೆ 4.33ರವರೆಗೂ ಇರುತ್ತದೆ. ಅನಂತರ ಪಂಚಮಿ ಆರಂಭವಾಗುತ್ತದೆ.

ನಕ್ಷತ್ರ: ಪುಷ್ಯ ನಕ್ಷತ್ರವು ರಾತ್ರಿ 10.25 ರವರೆಗೂ ಇರುತ್ತದೆ. ಅನಂತರ ಆಶ್ಲೇಷ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಿಗ್ಗೆ 5.52

ಸೂರ್ಯಾಸ್ತ: ಸಂಜೆ 6.45

ರಾಹುಕಾಲ: ಬೆಳಿಗ್ಗೆ 7.35 ರಿಂದ ಬೆಳಿಗ್ಗೆ 9.11

ಧನಸ್ಸು

ದೊರೆವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ. ಆತುರಕ್ಕೆ ಒಳಗಾಗದೆ ಸಮಯಕ್ಕೆ ತಕ್ಕಂತಹ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸಂಗಾತಿಯು ಮಾತುಕತೆಯ ಮೂಲಕ ಹಣಕಾಸಿನ ವಿವಾದಕ್ಕೆ ಪರಿಹಾರ ಕಂಡುಹಿಡಿಯುವರು. ಹುಳಿ ಪದಾರ್ಥದಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಕಣ್ಣಿನ ಉರಿ ಅಥವಾ ನೀರು ಸೋರುವ ತೊಂದರೆ ಇರುತ್ತದೆ. ತಂದೆಯವರ ಆರೋಗ್ಯದಲ್ಲಿ ಏರಿಳಿತ ಕಂಡು ಬರಲಿದೆ. ಮಕ್ಕಳ ವಿಚಾರವಾಗಿ ಅನಾವಶ್ಯಕ ಚಿಂತೆಗೆ ಒಳಗಾಗುವಿರಿ. ಮೊಣಕೈ ಅಥವಾ ಮೊಣಕಾಲುಗಳಲ್ಲಿ ಇದ್ದ ನೋವು ದೂರವಾಗುತ್ತದೆ. ಹಠವಾದಿಗಳು. ಸಮಯಕ್ಕೆ ತಕ್ಕಂತೆ ವರ್ತಿಸಿ ಎಲ್ಲರ ಮನ ಗೆಲ್ಲುವಿರಿ. ಸೋದರನು ಯಾವುದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ಪರಿಹಾರ: ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ಮಕರ

ಗೌರವವನ್ನು ಕಾಪಾಡುವ ಜವಾಬ್ದಾರಿಯು ನಿಮ್ಮದಾಗಿರುತ್ತದೆ. ಧರ್ಮ ಗುರುಗಳನ್ನು ಭೇಟಿ ಮಾಡುವಿರಿ. ಕೆಲಸ ಕಾರ್ಯಗಳಲ್ಲಿ ನೀವು ನಿರೀಕ್ಷಿಸಿದ ಯಶಸ್ಸು ದೊರೆಯುವುದಿಲ್ಲ. ಆದರೆ ಯಾವುದೇ ತೊಂದರೆ ಬಾರದು. ಪ್ರತಿಯೊಂದು ವಿಚಾರಗಳನ್ನು ವಿಮರ್ಶನಾ ದೃಷ್ಟಿಯಿಂದಲೇ ನೋಡುವಿರಿ. ಕೋಪಗೊಂಡರು ಮನಸ್ಸಿನಲ್ಲಿ ಒಳ್ಳೆಯ ಭಾವನೆಯೇ ಇರುತ್ತದೆ. ಶೀತವಾಯುವಿನ ದೋಷ ನಿಮ್ಮನ್ನು ಕಾಡಲಿದೆ. ನವವಿವಾಹಿತರ ಜೀವನವು ಸುಖ ಸಂತೋಷಗಳಿಂದ ಕೂಡಿರುತ್ತದೆ. ನೆರೆಹೊರೆಯವರ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ಸೋದರನಿಗೆ ನಿಮ್ಮಿಂದ ಸಹಾಯವಾಗುತ್ತದೆ. ಸೋದರಿಯಿಂದ ಉಡುಗೊರೆಯೊಂದು ದೊರೆಯಲಿದೆ. ದಿನದ ಕೊನೆಯ ಭಾಗದಲ್ಲಿ ಅನಿರೀಕ್ಷಿತವಾಗಿ ಶುಭಫಲಗಳು ದೊರೆಯಲಿದೆ. ಅನಿವಾರ್ಯವಾಗಿ ಬೇರೆಯವರ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

ಪರಿಹಾರ: ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 1

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಕುಂಭ

ಮನದಲ್ಲಿರುವ ನೋವು ನಿರಾಸೆಗಳನ್ನು ಯಾರಿಗೂ ತೋರ್ಪಡಿಸುವುದಿಲ್ಲ. ದೇವರಲ್ಲಿ ನಂಬಿಕೆ ಇದ್ದರು ಸ್ವಂತ ಪ್ರಯತ್ನದ ಮೇಲೆ ಅವಲಂಬಿತವಾಗುವಿರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ನಿರೀಕ್ಷೆಗೆ ಮೀರಿದ ಸಾಧನೆಯನ್ನು ಮಾಡುತ್ತಾರೆ. ವಿವಾಹದ ವಿಚಾರದಲ್ಲಿ ವಿರೋಧವನ್ನು ಎದುರಿಸಬೇಕಾಗುತ್ತದೆ. ವಿದೇಶಿ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಮಂತ್ರ ತಂತ್ರಗಳಲ್ಲಿ ನಂಬಿಕೆ ಬರಲಿದೆ. ಬೇರೆಯವರ ಭಾವನೆಗಳಿಗೆ ತೊಂದರೆಯಾಗದಂತೆ ಮಾತನಾಡುವಿರಿ. ತಪ್ಪನ್ನು ಮನ್ನಿಸುವ ಗುಣ ನಿಮ್ಮಲ್ಲಿ ಇರುತ್ತದೆ. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಯಾತ್ರಾ ಸ್ಥಳಕ್ಕೆ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ.

ಪರಿಹಾರ: ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಮೀನ

ಹಣಕಾಸಿನ ಕೊರತೆ ಇರುವುದಿಲ್ಲ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳು ನಿರೀಕ್ಷಿಸಿದ ಹಾದಿಯಲ್ಲಿ ಸಾಗಲಿದ್ದಾರೆ. ಉತ್ತಮ ಆರೋಗ್ಯವಿರುತ್ತದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದ ಕೊರತೆ ಇರುತ್ತದೆ. ಸೋದರೊಂದಿಗೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಸಂಗಾತಿಯೊಂದಿಗೆ ಅನಾವಶ್ಯಕ ವಾದ ವಿವಾದಗಳಿರುತ್ತವೆ. ಎಡಗಣ್ಣಿಗೆ ಪೆಟ್ಟು ಬೀಡಬಹುದು. ಬೇಡದ ವಿಚಾರಗಳಿಗಾಗಿ ಹಣ ಖರ್ಚಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಹಣಕಾಸಿನ ವ್ಯವಹಾರದಲ್ಲಿ ಎದುರಾಗುವ ತೊಂದರೆಯಿಂದ ಪಾರಾಗುವಿರಿ. ಬೇರೆಯವರ ಮಾತನ್ನು ಸುಲಭವಾಗಿ ಒಪ್ಪುವುದಿಲ್ಲ. ನಾನು ಮಾಡುವ ಕೆಲಸವೆಲ್ಲ ಸರಿ ಎಂಬ ಭಾವನೆ ನಿಮ್ಮಲ್ಲಿ ಇರುತ್ತದೆ.

ಪರಿಹಾರ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಆಕಾಶ ನೀಲಿ ಬಣ್ಣ

 

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).