ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಕುಟುಂಬದಲ್ಲಿ ಬೇಸರದ ಸನ್ನಿವೇಶ ಎದುರಾಗಲಿದೆ, ಧಾರ್ಮಿಕ ಕೇಂದ್ರಕ್ಕೆ ಭೇಟಿ; ಮೇಷದಿಂದ ಕಟಕ ರಾಶಿವರೆಗಿನ ದಿನಭವಿಷ್ಯ

Horoscope Today: ಕುಟುಂಬದಲ್ಲಿ ಬೇಸರದ ಸನ್ನಿವೇಶ ಎದುರಾಗಲಿದೆ, ಧಾರ್ಮಿಕ ಕೇಂದ್ರಕ್ಕೆ ಭೇಟಿ; ಮೇಷದಿಂದ ಕಟಕ ರಾಶಿವರೆಗಿನ ದಿನಭವಿಷ್ಯ

11 ಏಪ್ರಿಲ್ 2024 ಗುರುವಾರ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದಾನೆ. ಆಯಾ ರಾಶಿಗಳ ಜನರು ಮಾಡುವ ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳ ಫಲಗಳು ಸಿಗುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನ ಭವಿಷ್ಯ ಇಲ್ಲಿದೆ. (11th April 2024 Daily Horoscope)

ಏಪ್ರಿಲ್‌ 11ರ ದಿನಭವಿಷ್ಯ ಮೇಷದಿಂದ ಕಟಕದವರೆಗೆ
ಏಪ್ರಿಲ್‌ 11ರ ದಿನಭವಿಷ್ಯ ಮೇಷದಿಂದ ಕಟಕದವರೆಗೆ

ಇಂದಿನ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಸಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವುದು ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀಲವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್‌. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (11th April 2024 Horoscope)

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ಗುರುವಾರ

ತಿಥಿ: ತದಿಗೆ ಸಂಜೆ 6.18ರವರೆಗೂ ಇರುತ್ತದೆ. ಅನಂತರ ಚೌತಿ ಆರಂಭವಾಗುತ್ತದೆ.

ನಕ್ಷತ್ರ: ಕೃತ್ತಿಕ ನಕ್ಷತ್ರವು ಬೆಳಗಿನ ಜಾವ 5.03ರವರೆಗೂ ಇರುತ್ತದೆ. ಅನಂತರ ರೋಹಿಣಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಿಗ್ಗೆ 6.09

ಸೂರ್ಯಾಸ್ತ: ಸಂಜೆ 6.31

ರಾಹುಕಾಲ: ಮಧ್ಯಾಹ್ನ 1.30 ರಿಂದ ಮಧ್ಯಾಹ್ನ 3.00

ಮೇಷ

ದುಡುಕದೆ ದೊರೆವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಿರಿ. ತಾಯಿಯ ಹೆಸರಿನ ಭೂವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸುವಿರಿ. ಗೃಹಿಣಿಯರು ಮಕ್ಕಳ ಬಟ್ಟೆಯ ತಯಾರಿಕೆ ಮತ್ತು ಮಾರಾಟ ಕೇಂದ್ರ ಆರಂಭಿಸಲಿದ್ದಾರೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ಆಧಾರವಿಲ್ಲದೆ ಬೇರೆಯವರ ಮಾತನ್ನು ನಂಬದಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಉನ್ನತ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಹಣಕಾಸಿನ ವಿಚಾರದಲ್ಲಿ ವಿವಾದವನ್ನು ಎದುರಿಸುವಿರಿ. ಆತುರದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯದು. ಸ್ತ್ರೀಯರಾಗಲಿ ಪುರುಷರಾಗಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮ ಆರಂಭಿಸುವಿರಿ.

ಪರಿಹಾರ: ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 3

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ವೃಷಭ

ವಿದ್ಯಾರ್ಥಿಗಳ ಹಠದ ಗುಣದಿಂದಾಗಿ ಆತಂಕದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ತಂದೆಗೆ ರಕ್ತಸಂಬಂಧಿಕರ ಜೊತೆಯಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಕುಟುಂಬದಲ್ಲಿ ಬೇಸರದ ಸನ್ನಿವೇಶ ಎದುರಾಗುತ್ತದೆ. ಕುಟುಂಬಕ್ಕೆ ಸೇರಿದ್ದ ಭೂಮಿಯೊಂದು ವಿವಾದಕ್ಕೆ ಸಿಲುಕಬಹುದು. ರಾಜಕೀಯದಲ್ಲಿ ಪ್ರಭಾವಶಾಲಿ ಹುದ್ಧೆಯನ್ನು ಪಡೆಯುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ದೃಢವಾದ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಿರದು. ಕಮಿಷನ್‌ ವ್ಯವಹಾರದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಬೇಸರ ಕಳೆಯಲು ಕಿರುಪ್ರವಾಸ ಕೈಗೊಳ್ಳುವಿರಿ. ಸಾಧು ಸಂತರನ್ನು ಭೇಟಿ ಮಾಡುವಿರಿ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಂದರೆ ಕಾಣದು.

ಪರಿಹಾರ: ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ : ಕೇಸರಿ ಬಣ್ಣ

ಮಿಥುನ

ಆಸಕ್ತಿ ಇಲ್ಲದೆ ಕೆಲಸವನ್ನು ಆರಂಭಿಸಿ ಸಂದಿಗ್ಧತೆಗೆ ಸಿಲುಕುವಿರಿ. ಉದ್ಯೋಗದಲ್ಲಿ ಸಣ್ಣ ತಪ್ಪಿನಿಂದಾಗಿ ಹಿನ್ನಡೆ ಉಂಟಾಗುವ ಸಾಧ್ಯತೆ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಆದಾಯಕ್ಕೆ ತೊಂದರೆ ಇರದು. ಸಂಗಾತಿಯ ಸಹಕಾರ ಹೊಸ ಜೀವನವನ್ನು ರೂಪಿಸುತ್ತದೆ. ದುಡುಕಿ ಮಾತನಾಡುವ ಕಾರಣ ಆತ್ಮೀಯರ ವಿರೋಧವನ್ನು ಎದುರಿಸುವಿರಿ. ವಿದ್ಯಾರ್ಥಿಗಳು ಆತಂಕದ ಪರಿಸ್ಥಿತಿಯಲ್ಲಿಯೂ ಧೃತಿಗೆಡದೆ ಕಾರ್ಯ ಸಾಧಿಸುತ್ತಾರೆ. ಜಮೀನೊಂದನ್ನು ಮಾರಾಟ ಮಾಡಿ ಹೊಸ ಮನೆಕೊಳ್ಳುವ ತೀರ್ಮಾನಕ್ಕೆ ಬರುವಿರಿ. ಸೋದರನಿಂದ ಹಣದ ಸಹಾಯ ದೊರೆಯುತ್ತದೆ. ಸ್ವಂತ ಬಳಕೆಕಾಗಿ ಐಷಾರಾಮಿ ವಾಹನ ಕೊಳ್ಳುವಿರಿ. ಧಾರ್ಮಿಕ ಕೇಂದ್ರಕ್ಕೆ ಎಲ್ಲರೊಂದಿಗೆ ಭೇಟಿ ನೀಡುವಿರಿ.

ಪರಿಹಾರ: ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಕಟಕ

ಹೆಚ್ಚಿನ ನಿರೀಕ್ಷೆಯಿಂದ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸಮಯವನ್ನು ಗೌರವಿಸುವ ನೀವು ಯಾವುದಾದರೊಂದು ಕೆಲಸದಲ್ಲಿ ನಿರತರಾಗುವಿರಿ. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಉದ್ಯೋಗದಲ್ಲಿನ ಅನಿರೀಕ್ಷಿತವಾದ ಬದಲಾವಣೆಗಳು ಅನುಕೂಲವಾಗಲಿವೆ. ವಿದ್ಯಾರ್ಥಿಗಳು ಆತ್ಮಸ್ತೈರ್ಯದಿಂದ ಎದುರಾಗುವ ಸವಾಲುಗಳನ್ನು ಗೆಲ್ಲುತ್ತಾರೆ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ರಾಜಕೀಯ ಪ್ರವೇಶಿಸುವ ಆಸೆ ಈಡೇರಲಿದೆ. ದೊರೆವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಿರಿ. ತೋಟಗಾರಿಕೆಯಿಂದ ಉತ್ತಮ ಆದಾಯ ದೊರೆಯುತ್ತದೆ. ವ್ಯವಸಾಯಕ್ಕೆ ಅವಶ್ಯಕವಾದ ಯಂತ್ರೋಪಕರಣಗಳ ಸರಬರಾಜಿನಲ್ಲಿ ಹಣ ಗಳಿಸುವಿರಿ.

ಪರಿಹಾರ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 85468 65832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಗೌರಿವಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).