ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಆಡುವ ಮಾತಿಗೆ ಹತೋಟಿ ಇರಲಿ, ಜಾರಿ ಬೀಳುವ ಸೂಚನೆ ಇದೆ ಎಚ್ಚರ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

Horoscope Today: ಆಡುವ ಮಾತಿಗೆ ಹತೋಟಿ ಇರಲಿ, ಜಾರಿ ಬೀಳುವ ಸೂಚನೆ ಇದೆ ಎಚ್ಚರ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

11 ಏಪ್ರಿಲ್ 2024 ಗುರುವಾರ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದಾನೆ. ಆಯಾ ರಾಶಿಗಳ ಜನರು ಮಾಡುವ ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳ ಫಲಗಳು ಸಿಗುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನ ಭವಿಷ್ಯ ಇಲ್ಲಿದೆ. (11th April 2024 Daily Horoscope)

ಏಪ್ರಿಲ್‌ 11ರ ದಿನಭವಿಷ್ಯ
ಏಪ್ರಿಲ್‌ 11ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಸಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವುದು ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀಲವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್‌. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (11th April 2024 Horoscope)

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ಗುರುವಾರ

ತಿಥಿ: ತದಿಗೆ ಸಂಜೆ 6.18ರವರೆಗೂ ಇರುತ್ತದೆ. ಅನಂತರ ಚೌತಿ ಆರಂಭವಾಗುತ್ತದೆ.

ನಕ್ಷತ್ರ: ಕೃತ್ತಿಕ ನಕ್ಷತ್ರವು ಬೆಳಗಿನ ಜಾವ 5.03ರವರೆಗೂ ಇರುತ್ತದೆ. ಅನಂತರ ರೋಹಿಣಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಿಗ್ಗೆ 6.09

ಸೂರ್ಯಾಸ್ತ: ಸಂಜೆ 6.31

ರಾಹುಕಾಲ: ಮಧ್ಯಾಹ್ನ 1.30 ರಿಂದ ಮಧ್ಯಾಹ್ನ 3.00

ಧನಸ್ಸು

ಆಡುವ ಮಾತು ಹತೋಟಿಗೆ ಸಿಲುಕುವುದಿಲ್ಲ. ಅನಾವಶ್ಯಕವಾಗಿ ಕುಟುಂಬದಲ್ಲಿನ ಮನಸ್ತಾಪಕ್ಕೆ ಕಾರಣರಾಗುವಿರಿ. ಮುಂಗೋಪದಿಂದ ಅಮೂಲ್ಯವಾದ ಅವಕಾಶವೊಂದನ್ನು ದೂರ ಮಾಡುವಿರಿ. ಉದ್ಯೋಗದಲ್ಲಿ ಇಚ್ಚಿಸಿದ ಫಲಗಳು ದೊರೆಯಲಿವೆ. ಪ್ರೀತಿ ವಿಶ್ವಾಸದಿಂದ ಸ್ನೇಹಿತರ ಜೊತೆ ಬೆರೆತು ಮಹತ್ಕಾರ್ಯವೊಂದನ್ನು ಸಾಧಿಸುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ತನ್ಮಯರಾಗುತ್ತಾರೆ. ಅತಿಯಾದ ಹಣದ ಆಸೆ ಇರುವುದಿಲ್ಲ. ಆದರೆ ದೈನಂದಿನ ಜೀವನಕ್ಕೆ ಅವಶಕವಾದ ಹಣವನ್ನು ಗಳಿಸುವಿರಿ. ಉದ್ಯೋಗವನ್ನು ಅರಸಿ ವಿದೇಶಕ್ಕೆ ತೆರಳುವಿರಿ. ಧಾರ್ಮಿಕ ಕಾರ್ಯವೊಂದರ ಜವಾಬ್ದಾರಿ ದೊರೆಯುತ್ತದೆ. ಆಹಾರ ಸೇವನೆಯಲ್ಲಿ ಇತಿಮಿತಿ ಇರಲಿ.

ಪರಿಹಾರ: ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಹಸಿರು ಬಣ್ಣ

ಮಕರ

ಸಮಯ ಸಂದರ್ಭವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸುಖ ಜೀವನ ನಡೆಸುವಿರಿ. ವಾಹನಗಳ ದುರಸ್ಥಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿ ಅದಾಯವಿರುತ್ತದೆ. ಕುಟುಂಬದಲ್ಲಿನ ಆಸ್ತಿಯ ವಿವಾದದಲ್ಲಿ ಯಶಸ್ಸು ದೊರೆಯುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ ಕೈಕಾಲುಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ವಾಸಸ್ಥಳವನ್ನು ಬದಲಾಯಿಸುವಿರಿ. ಸ್ನೇಹಿತರೊಬ್ಬರು ಹಣದ ಸಹಾಯ ಮಾಡುತ್ತಾರೆ. ಮನೆಯಲ್ಲಿನ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಡೆಸಿಕೊಡುವಿರಿ. ಹೊಸವಾಹನ ಕೊಳ್ಳುವಿರಿ. ಕಷ್ಟಪಟ್ಟು ಕೆಲಸ ಮಾಡುವ ಜನರಿಗೆ ಅವಶ್ಯಕವಾದ ಅನುಕೂಲತೆಗಳನ್ನು ಕಲ್ಪಿಸುವಿರಿ.

ಪರಿಹಾರ: ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 6

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಕುಂಭ

ಕುಟುಂಬದ ಸದಸ್ಯರ ಸಹಾಯದಿಂದ ಎದುರಾಗುವ ತೊಂದರೆಯೊಂದರಿಂದ ಪಾರಾಗುವಿರಿ. ಜನಸೇವೆಯಲ್ಲಿ ಸಾಮಾಜಿಕ ಕಳಕಳಿಯಿರುತ್ತದೆ. ಹಣದ ಕೊರತೆಯನ್ನು ಕಡಿಮೆ ಮಾಡಲು ಉಪವೃತ್ತಿಯನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. ಉನ್ನತ ಅಧಿಕಾರ ದೊರೆತು ಉದ್ಯೋಗದಲ್ಲಿ ಹೊಸತನ ರೂಪುಗೊಳ್ಳುತ್ತದೆ. ಸಾಮಾಜಿಕ ಜೀವನದಲ್ಲಿ ನಾಯಕನ ಸ್ಥಾನಮಾನ ದೊರೆಯುತ್ತದೆ. ವ್ಯಾಪಾರದಲ್ಲಿ ಹೇರಳ ಲಾಭವಿರುತ್ತದೆ. ನೀರಾವರಿ ಭೂಮಿ ಇದ್ದಲ್ಲಿ ಹಣ್ಣು ಮತ್ತು ತರಕಾರಿ ಬಿತ್ತನೆಗೆ ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕೆ ವಿದೇಶಕ್ಕೆ ತೆರಳುತ್ತಾರೆ. ಆರೋಗ್ಯದ ಬಗ್ಗೆ ಗಮನ ಇರಲಿ. ತಂದೆಯವರಿಗೆ ಅನಿರೀಕ್ಷಿತ ಧನಲಾಭ ಇರುತ್ತದೆ.

ಪರಿಹಾರ: ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಮೀನ

ದಿನದ ಆರಂಭದಿಂದಲೇ ನಿರೀಕ್ಷಿತ ಬದಲಾವಣೆಗಳು ಎದುರಾಗಲಿವೆ. ಯಾವುದೇ ಅಡಚಣೆ ಇಲ್ಲದೆ ದಿನದ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ನೆಲದ ಮೇಲೆ ಜಾರಿ ಬೀಳುವ ಸೂಚನೆ ಇದೆ ಎಚ್ಚರಿಕೆ ಇರಲಿ. ಮನೆಯ ಸದಸ್ಯರ ಜೊತೆಯಲ್ಲಿ ಯಾತ್ರಾಸ್ಥಳಕ್ಕೆ ತೆರಳುವಿರಿ. ನೀರಾವರಿ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಸ್ವಂತ ಭೂಮಿಯ ಲಾಭ ದೊರೆಯುತ್ತದೆ. ಪಾಲುದಾರಿಕೆಯ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ. ದೂರವಾಗಿದ್ದ ಆತ್ಮೀಯರೊಬ್ಬರು ಮತ್ತೊಮ್ಮೆ ನಿಮ್ಮ ಸ್ನೇಹ- ಸಂಬಂಧಕ್ಕೆ ಹಾತೊರೆಯುತ್ತಾರೆ. ವಿದ್ಯಾರ್ಥಿಗಳಿಗೆ ಶುಭ ವರ್ತಮಾನವೊಂದು ಬರಲಿದೆ. ಸ್ಟಾಕ್‌ ಷೇರಿನ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ.

ಪರಿಹಾರ: ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಗುಲಾಬಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 85468 65832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಗೌರಿವಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).