ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ದುಡುಕುತನದಿಂದ ಕುಟುಂಬದವರಿಗೆ ಬೇಸರ, ವಿದ್ಯಾರ್ಥಿಗಳು ಸಾಧನೆ ಮಾಡಲಿದ್ದಾರೆ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ನಿಮ್ಮ ದುಡುಕುತನದಿಂದ ಕುಟುಂಬದವರಿಗೆ ಬೇಸರ, ವಿದ್ಯಾರ್ಥಿಗಳು ಸಾಧನೆ ಮಾಡಲಿದ್ದಾರೆ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಜುಲೈ 11ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ).

ನಿಮ್ಮ ದುಡುಕುತನದಿಂದ ಕುಟುಂಬದವರಿಗೆ ಬೇಸರ, ವಿದ್ಯಾರ್ಥಿಗಳು ಸಾಧನೆ ಮಾಡಲಿದ್ದಾರೆ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ನಿಮ್ಮ ದುಡುಕುತನದಿಂದ ಕುಟುಂಬದವರಿಗೆ ಬೇಸರ, ವಿದ್ಯಾರ್ಥಿಗಳು ಸಾಧನೆ ಮಾಡಲಿದ್ದಾರೆ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (11th July 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಆಷಾಢ ಮಾಸ-ಶುಕ್ಲಪಕ್ಷ-ಗುರುವಾರ

ತಿಥಿ : ಪಂಚಮಿ ಬೆಳಗ್ಗೆ 08.05 ರವರೆಗು ಇದ್ದು ನಂತರ ಷಷ್ಠಿ ಆರಂಭವಾಗುತ್ತದೆ.

ನಕ್ಷತ್ರ : ಪುಬ್ಬ ನಕ್ಷತ್ರವು 12.05 ರವರೆಗೂ ಇದ್ದು ನಂತರ ಉತ್ತರ ನಕ್ಷತ್ರ ಇರುತ್ತದೆ.

ಸೂರ್ಯೋದಯ: ಬೆಳಗ್ಗೆ 06.00

ಸೂರ್ಯಾಸ್ತ: ಸಂಜೆ 06.49

ರಾಹುಕಾಲ: 02.04 ರಿಂದ 03.40

ರಾಶಿಫಲ

ಮೇಷ

ಕುಟುಂಬದ ಹಿರಿಯರಿಗೆ ಸಂಬಂಧಪಟ್ಟ ಕೆಲಸದ ವಿಚಾರದ ಜವಾಬ್ದಾರಿ ನಿಮ್ಮದಾಗುತ್ತದೆ. ಮನೆಯಲ್ಲಿ ನಡೆಯಲಿರುವ ಮಂಗಳಕಾರ್ಯ ಹಣವನ್ನು ಸರಿಹೊಂದಿಸುವ ಜವಾಬ್ದಾರಿ ವಹಿಸಿಕೊಳ್ಳಲಿದ್ದೀರಿ. ಉದ್ಯೋಗದಲ್ಲಿ ಯಾವುದೇ ಪ್ರಗತಿ ಇರುವುದಿಲ್ಲ. ಆದರೆ ಸ್ವಂತ ಪರಿಶ್ರಮದಿಂದ ತಡವಾಗಿ ಅಭಿವೃದ್ಧಿ ಹೊಂದುವಿರಿ. ವಿದ್ಯಾರ್ಥಿಗಳು ದೃಢವಾದ ಮನಸ್ಸಿನಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಸ್ವಂತ ಉದ್ಧಿಮೆ ಇದ್ದಲ್ಲಿ ನೌಕರರ ಸಹಕಾರದ ಕಾರಣ ಯಾವುದೇ ತೊಂದರೆ ಎದುರಾಗದು. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಹಳೆಯ ವಸ್ತುಗಳನ್ನು ವಿಲೇವಾರಿ ಮಾಡಿ ಹೊಸದನ್ನು ಬದಲಿಸಲು ಹೆಚ್ಚಿನ ಹಣ ಖರ್ಚು ಮಾಡುವಿರಿ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಎಲೆ ಹಸಿರು

ವೃಷಭ

ಆತ್ಮೀಯರ ವಾಣಿಜ್ಯ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ನಿಮ್ಮ ಬಹುದಿನದ ಕನಸಿನಂತೆ ಉನ್ನತ ಅಧಿಕಾರ ಗಳಿಸುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಹಣಕಾಸಿನ ತೊಂದರೆ ಇರುವುದಿಲ್ಲ. ಪಯೋಜನವಿಲ್ಲದ ವಿಚಾರಗಳಿಗೆ ಹಣ ಖರ್ಚಾಗುತ್ತದೆ. ವಿದ್ಯಾರ್ಥಿಗಳು ಮನರಂಜನೆಯಿಂದ ಕಲಿಕೆಯಿಂದ ದೂರ ಉಳಿಯುವರು. ವ್ಯಾಪಾರ ವ್ಯವಹಾರದಲ್ಲಿ ಮಧ್ಯಮ ಲಾಭ ದೊರೆಯುತ್ತದೆ. ತಂದೆಯ ಹೆಸರಿನ ಹಣದ ವಿವಾದವನ್ನು ಬಗೆಹರಿಸುವಿರಿ. ದಾಂಪತ್ಯ ಜೀವನದಲ್ಲಿ ಶಾಂತಿ ನೆಮ್ಮದಿ ಮನೆ ಮಾಡಿರುತ್ತದೆ. ಬಂಧು ಬಳಗದ ಜೊತೆ ಉತ್ತಮ ಬಾಂಧವ್ಯ ಹೊಂದುವಿರಿ. ಮನೆಯ ಸುತ್ತಮುತ್ತಲಿನ ಪರಿಸರ ಕಾಪಾಡುವಿರಿ.

ಪರಿಹಾರ : ಬೆಲ್ಲದಿಂದ ಮಾಡಿದ ಆಹಾರ ಸೇವಿಸಿ ದಿನದ ಕೆಲಸವನ್ನು ಆರಂಭಿಸಿ

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕೇಸರಿ

ಮಿಥುನ

ತೆಗೆದುಕೊಳ್ಳಬೇಕಾದ ತೀರ್ಮಾನವು ನಿಧಾನವಾಗುವ ಕಾರಣ ಅವಕಾಶವೊಂದು ದೂರವಾಗುತ್ತದೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು ಉಂಟಾಗುತ್ತದೆ. ಕುಟುಂಬದ ಒಗ್ಗಟ್ಟಿಗೆ ಯಾವುದೇ ತೊಂದರೆ ಬಾರದು. ಆತ್ಮವಿಶ್ವಾಸದಿಂದ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸುವಿರಿ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ತಮ್ಮ ಗುರಿ ಸಾಧಿಸುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಸಂಗಾತಿ ಜೊತೆ ನೆಮ್ಮದಿಯ ಜೀವನ ನಡೆಸುವಿರಿ. ಬಿಡುವು ತೆಗೆದುಕೊಳ್ಳದೆ ನಿಮ್ಮ ಕೆಲಸವನ್ನು ಪೂರೈಸುವಿರಿ. ಅವಿವಾಹಿತರಿಗೆ ವಿವಾಹದ ಬಗ್ಗೆ ಚಿಂತೆ ಇರುತ್ತದೆ. ಸೋದರರ ಜೊತೆಗೂಡಿ ಸ್ವಂತ ಮನೆಯನ್ನು ಖರೀದಿಸುವಿರಿ. ಸಿಹಿ ತಿಂಡಿ ತಿನಿಸಿನಿಂದ ದೂರ ಇರುವುದು ಒಳ್ಳೆಯದು.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಂದು

ಕಟಕ

ಸಮಯವನ್ನು ಗೌರವಿಸುವ ನೀವು ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಕುಟುಂಬದ ಜನರ ಜೊತೆ ವೇಳೆ ಕಳೆಯಲು ಇಚ್ಚಿಸುವಿರಿ. ಶಾಂತಿ ಸಹನೆಯು ನಿಮ್ಮನ್ನು ತೊಂದರೆಯಿಂದ ಪಾರು ಮಾಡುತ್ತದೆ. ಮಾತುಕತೆಯಿಂದ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಬಾರದು. ಉದ್ಯೋಗದಲ್ಲಿ ಬದಲಾವಣೆ ತರುವ ನಿಮ್ಮ ತೀರ್ಮಾನವನ್ನು ಮೇಲಧಿಕಾರಿಗಳು ಒಪ್ಪುತ್ತಾರೆ. ಹಣದ ತೊಂದರೆ ಇರುವುದಿಲ್ಲ. ಸ್ವಂತ ಕೆಲಸ ಕಾರ್ಯದಲ್ಲಿ ಒತ್ತಡದ ಸನ್ನಿವೇಶ ಎದುರಾಗುತ್ತದೆ. ವಿದ್ಯಾರ್ಥಿಗಳು ಯಾರ ಜೊತೆಯೂ ಬೆರೆಯದೆ ಅಭ್ಯಾಸದಲ್ಲಿ ನಿರತರಾಗುತ್ತಾರೆ. ದುಡುಕುತನದಿಂದ ಕುಟುಂಬದಲ್ಲಿ ಬೇಸರ ಉಂಟಾಗುತ್ತದೆ. ಆತ್ಮೀಯ ವ್ಯಕ್ತಿಯೊಬ್ಬರ ಆಗಮನ ಸಂತಸ ಮೂಡಿಸುತ್ತದೆ. ಕುಟುಂಬದ ಹಿರಿಯರ ಆಶೀರ್ವಾದ ನಿಮಗಿರುತ್ತದೆ.

ಪರಿಹಾರ : ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ. ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.