Horoscope Today: ಮೌನವಾಗಿದ್ದಷ್ಟು ಉತ್ತಮ ಫಲಿತಾಂಶ, ಅನಿರೀಕ್ಷಿತ ಧನ ಲಾಭ ಇರುತ್ತೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಮೌನವಾಗಿದ್ದಷ್ಟು ಉತ್ತಮ ಫಲಿತಾಂಶ, ಅನಿರೀಕ್ಷಿತ ಧನ ಲಾಭ ಇರುತ್ತೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ

Horoscope Today: ಮೌನವಾಗಿದ್ದಷ್ಟು ಉತ್ತಮ ಫಲಿತಾಂಶ, ಅನಿರೀಕ್ಷಿತ ಧನ ಲಾಭ ಇರುತ್ತೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ

11 ಜೂನ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (11th June 2024 Horoscope).

ಸಿಂಹ, ಕನ್ಯಾ, ತುಲಾ, ವೃಶ್ಚಿಕ ದಿನ ಭವಿಷ್ಯ ತಿಳಿಯಿರಿ
ಸಿಂಹ, ಕನ್ಯಾ, ತುಲಾ, ವೃಶ್ಚಿಕ ದಿನ ಭವಿಷ್ಯ ತಿಳಿಯಿರಿ

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (11th June 2024 Horoscope)

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಮಂಗಳವಾರ

ತಿಥಿ: ಪಂಚಮಿ ಸಾ. 05.29 ರವರೆಗೂ ಇರುತ್ತದೆ. ಆನಂತರ ಷಷ್ಠಿ ಆರಂಭವಾಗುತ್ತದೆ.

ನಕ್ಷತ್ರ: ಆಶ್ಲೇಷ ನಕ್ಷತ್ರವು ರಾ. 12.08 ರವರೆಗು ಇರುತ್ತದೆ. ಆನಂತರ ಮಖ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.45

ರಾಹುಕಾಲ: ಹ. 03.35 ರಿಂದ ಸ. 05.11

ಸಿಂಹ ರಾಶಿ

ಎಲ್ಲರ ಮನಸ್ಸನ್ನು ಗೆಲ್ಲುವಂತೆ ಮಾತನಾಡುವಿರಿ. ಕಣ್ಣಿನ ದೋಷವಿರುತ್ತದೆ. ಗೃಹಿಣಿಯರಿಗೆ ವಿಶೇಷವಾದಂತಹ ಫಲ ದೊರೆಯುತ್ತದೆ. ಕುಟುಂಬದ ಹಿರಿಯರಿಗೆ ಅನಿರೀಕ್ಷಿತ ಧನ ಲಾಭ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತವಿರುತ್ತದೆ. ದಾಂಪತ್ಯದಲ್ಲಿ ಪರಸ್ಪರ ಉತ್ತಮ ಹೊಂದಾಣಿಕೆ ಇರುತ್ತದೆ. ಸ್ವಂತ ಮನೆ ಮಾಡಬೇಕೆಂಬ ಆಸೆಯೂ ಮೂಡುತ್ತದೆ. ಹಣದ ಮೇಲೆ ಅತಿಯಾದ ಆಸೆ ಇರುವುದಿಲ್ಲ. ಸಣ್ಣಪುಟ್ಟ ಯಶಸ್ಸನ್ನು ಸಂಭ್ರಮಿಸುವಿರಿ. ಗುಟ್ಟಾಗಿ ಹಣವನ್ನು ಸಂಪಾದಿಸುವಿರಿ. ಇರುವ ವಾಹನವನ್ನು ಮಾರಾಟ ಮಾಡುವಿರಿ, ಆದರೆ ತಕ್ಷಣವೇ ಹೊಸ ವಾಹನವನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಕೆಂಪು

ಕನ್ಯಾ ರಾಶಿ

ಮನೆಯಲ್ಲಿರುವ ಮಕ್ಕಳನ್ನು ನೀರಿರುವ ಸ್ಥಳಕ್ಕೆ ಬಿಡದಿರಿ. ಬಂಧು ಬಳಗದವರಿಂದ ದೂರವಿರುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಪ್ರಯೋಜನ ಇಲ್ಲದ ವಿಚಾರಗಳಿಗೆ ಯೋಚನೆ ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಇರುವುದಿಲ್ಲ. ಎಲ್ಲರಿಗೂ ಅನುಕೂಲ ವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುವಿರಿ. ಧಾರ್ಮಿಕ ಕೇಂದ್ರದ ಪುನರುಜ್ಜೀವನದ ಉಸ್ತುವಾರಿ ವಹಿಸುವಿರಿ. ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವ ಮೊದಲು ಅದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸುವಿರಿ. ನಿಮಗೆ ವಿಶಾಲವಾದಂತಹ ಮನಸ್ಸಿರುತ್ತದೆ. ಅನಾವಶ್ಯಕವಾದ ವಿವಾದಗಳಿಂದ ಕುಟುಂಬದಲ್ಲಿ ಅಶಾಂತಿ ಮನೆ ಮಾಡುತ್ತದೆ.

ಪರಿಹಾರ: ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 10

ಅಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ತುಲಾ ರಾಶಿ

ವಿದ್ಯಾರ್ಥಿಗಳಿಗೆ ವಿಶೇಷವಾದಂತಹ ಫಲಗಳು ದೊರೆಯುತ್ತವೆ. ಯುವಕ ಯುವತಿಯರು ಬಂಧು ಬಳಗದವರ ವಿರೋಧವನ್ನು ಎದುರಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಆರಂಭದಲ್ಲಿ ಯಾವುದೇ ಕೆಲಸ ಕಾರ್ಯವಾದರೂ ಅಡಚಣೆಗಳನ್ನು ಎದುರಿಸುವಿರಿ. ಕೋಪಗೊಂಡಾಗ ಅತಿ ಉದ್ವೇಗದಿಂದ ವರ್ತಿಸುವಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ. ಹಣದ ವಿಚಾರದಲ್ಲಿ ಆಲೋಚನೆ ಇರುತ್ತದೆ. ಮಕ್ಕಳ ಉತ್ತಮ ಜೀವನಕ್ಕೆ ಸೂಕ್ತ ತಳಹದಿ ಹಾಕುವಿರಿ.

ಪರಿಹಾರ: ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಹಳದಿ

ವೃಶ್ಚಿಕ ರಾಶಿ

ವಿರೋಧಿಗಳು ಇದ್ದರು ಯಾವುದೇ ತೊಂದರೆ ಉಂಟಾಗದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಯೋಜನೆಗಳನ್ನು ಯಾರಿಗೂ ತಿಳಿಸದಿರಿ. ಮೌನವಾಗಿದ್ದಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಸಂತಾನಲಾಭವಿದೆ. ಬಂಧು-ಬಳಗದವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡುವಿರಿ. ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಅನಿರೀಕ್ಷಿತ ಧನ ಲಾಭವಿರುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ಉತ್ತಮ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ಜನಸೇವೆಯಲ್ಲಿ ಇರುವವರಿಗೆ ಯಶಸ್ಸಿನ ಜೊತೆ ಮೇಲ್ಮಟ್ಟದ ಗೌರವ ದೊರೆಯುತ್ತದೆ. ಸಮಯಕ್ಕೆ ಸರಿಯಾಗಿ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವಿರಿ. ಕೋಪ ಸ್ವಭಾವವನ್ನು ಕಡಿಮೆ ಮಾಡಿರಿ.

ಪರಿಹಾರ: ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಹಸಿರು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.