ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಸ್ವಂತ ವ್ಯಾಪಾರದಲ್ಲಿ ಲಾಭ, ಕುಟುಂಬದ ಹಿರಿಯರಿಗೆ ಹಣದ ಕೊರತೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ

Horoscope Today: ಸ್ವಂತ ವ್ಯಾಪಾರದಲ್ಲಿ ಲಾಭ, ಕುಟುಂಬದ ಹಿರಿಯರಿಗೆ ಹಣದ ಕೊರತೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ

11 ಏಪ್ರಿಲ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (11th May 2024 Daily Horoscope).

ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ದಿನ ಭವಿಷ್ಯ ತಿಳಿಯಿರಿ
ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ದಿನ ಭವಿಷ್ಯ ತಿಳಿಯಿರಿ

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (11th May 2024 Horoscope)

ಇಂದಿನ ಪಂಚಾಂಗ

ಶ್ರೀಕ್ರೋಧಿನಾಮ ಸಂವತ್ಸರ-ಉತ್ತರಾಯನ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಶನಿವಾರ

ತಿಥಿ: ಚೌತಿ ರಾ. 04.10 ರವರೆಗು ಇರುತ್ತದೆ. ಆನಂತರ ಪಂಚಮಿ ಆರಂಭವಾಗುತ್ತದೆ.

ನಕ್ಷತ್ರ: ಮೃಗಶಿರ ನಕ್ಷತ್ರವು ಹ. 12.15 ರವರೆಗು ಇರುತ್ತದೆ. ಆನಂತರ ಆರ್ದ್ರೆ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 5.54

ಸೂರ್ಯಾಸ್ತ: ಸಂಜೆ 6.35

ರಾಹುಕಾಲ: ಬೆಳಗ್ಗೆ 9.09 ರಿಂದ ಬೆ.10.44

ಸಿಂಹ ರಾಶಿ

ಸಂತೋಷ ತರುವ ಘಟನೆಗಳು ಕುಟುಂಬದಲ್ಲಿ ನಡೆಯಲಿವೆ. ಕೈ ಹಿಡಿದ ಕೆಲಸ ಕಾರ್ಯಗಳು ಯಶಸ್ವಿ ಆಗಲಿವೆ. ವಿಶ್ರಾಂತಿಯನ್ನು ಲೆಕ್ಕಿಸದೆ ನಿಮ್ಮ ಕರ್ತವ್ಯವನ್ನು ಪೂರೈಸುವಿರಿ. ಸುಲಭವಾಗಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಹೆಚ್ಚಿನ ಕಾಲವನ್ನು ಸ್ವಂತ ಕೆಲಸ ಕಾರ್ಯಗಳಿಗೆ ಮೀಸಲಿಡುವಿರಿ. ಕಾರಣವಿಲ್ಲದೆ ಹೋದರೂ ಕೋಪ ಬೇಗನೆ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಉದ್ಯೋಗದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯುತ್ತದೆ. ಸ್ನೇಹಿತರು ಮತ್ತು ಬಂಧುಗಳು ನಿಮ್ಮ ವಿಶ್ವಾಸಗಳಿಸಲು ಹಾತೊರೆಯುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಮತ್ತು ಹಣ ಗಳಿಕೆ ಇರುತ್ತದೆ.

ಪರಿಹಾರ: ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಹಸಿರು ಬಣ್ಣ

ಕನ್ಯಾ ರಾಶಿ

ಆರೋಗ್ಯದಲ್ಲಿ ಪ್ರಗತಿ ಇರುತ್ತದೆ. ಮಾನಸಿಕ ಒತ್ತಡ ಮರೆಯಾಗಿ ಕೆಲಸ ಕಾರ್ಯಗಳಲ್ಲಿ ಉನ್ನತಿ ಉಂಟಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಮನರಂಜನೆಯತ್ತ ಮನಸ್ಸು ಜಾರುತ್ತೆ. ಅನಿರೀಕ್ಷಿತ ಧನಲಾಭ ಉಂಟಾಗುತ್ತದೆ. ಹಣದ ಕೊರತೆ ಕಡಿಮೆಯಾಗುತ್ತದೆ. ದೂರದ ಬಂಧು ಬಳಗದವರೊಂದಿಗೆ ಉತ್ತಮ ಬಾಂಧವ್ಯ ಉಂಟಾಗುತ್ತದೆ. ಕುಟುಂಬದ ಹಿರಿಯರ ಮಾತನ್ನು ಗೌರವಿಸುವಿರಿ. ಸೋಲುವ ವೇಳೆ ಎಲ್ಲರನ್ನೂ ಟೀಕಿಸುವಿರಿ. ಕುಟುಂಬದ ಹಿರಿಯರ ಹಣದ ಕೊರತೆ ಕಡಿಮೆ ಆಗಲಿದೆ.

ಪರಿಹಾರ: ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 5

ಅಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ನೀಲಿ ಬಣ್ಣ

ತುಲಾ ರಾಶಿ

ಕಷ್ಟದ ವೇಳೆ ಆತ್ಮೀಯರು ತಾವಾಗಿಯೇ ಸಹಾಯಕ್ಕೆ ಬರುತ್ತಾರೆ. ಕುಟುಂಬದಲ್ಲಿ ಆಶಾದಾಯಕ ಬದಲಾವಣೆಗಳು ಹೊಸ ಆಶಾಭಾವನೆ ಮೂಡಿಸುತ್ತಾರೆ. ಕೆಲಸ ಕಾರ್ಯಗಳಲ್ಲಿನ ಅಡಚಣೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ವರಮಾನ ದೊರೆಯುತ್ತದೆ. ಬೇಸರ ಕಳೆಯಲು ಸ್ನೇಹಿತರ ಮನೆಗೆ ತೆರಳುವಿರಿ. ಸಂಗಾತಿಯೊಂದಿಗೆ ಯಾತ್ರಾಸ್ಥಳಕ್ಕೆ ತೆರಳುವಿರಿ. ವಿದ್ಯಾರ್ಥಿಗಳು ಒತ್ತಡದ ನಡುವೆಯೂ ತಮ್ಮ ಕರ್ತವ್ಯದಲ್ಲಿ ಮುಂದಿರುತ್ತಾರೆ. ಪಾಲುಗಾರಿಕೆಯ ವ್ಯಾಪಾರವೊಂದಕ್ಕೆ ಬೇರೆಯವರ ಜೊತೆ ಒಡಂಬಡಿಕೆ ಮಾಡಿಕೊಳ್ಳುವಿರಿ. ಗೃಹಿಣಿಯರು ವಿಶೇಷವಾದ ಗೌರವಕ್ಕೆ ಪಾತ್ರರಾಗುತ್ತಾರೆ.

ಪರಿಹಾರ: ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ನೇರಳೆಬಣ್ಣ

ವೃಶ್ಚಿಕ ರಾಶಿ

ಅನಿರೀಕ್ಷಿತ ಫಲಿತಾಂಶಗಳು ಕುಟುಂಬದ ಸಂತೋಷವನ್ನು ಕಾಪಾಡುತ್ತದೆ. ಆತ್ಮೀಯರ ಸಹಾಯದಿಂದ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಕುಟುಂಬದಲ್ಲಿ ಪರಸ್ಪರ ಸಹಕಾರದ ಮನೋಭಾವನೆ ಕಂಡುಬರುತ್ತದೆ. ಮನದ ದುಗುಡವನ್ನು ಮರೆತು ಸಂತೋಷದಿಂದ ಬಾಳುವಿರಿ. ಹಣಕಾಸಿನ ಕೊರತೆಯಿಂದ ಮನಸ್ಸಿಗೆ ಬೇಸರ ಮೂಡುತ್ತದೆ. ಉದ್ಯೋಗದಲ್ಲಿ ಸ್ನೇಹಮಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ ಕಂಡು ಬರುತ್ತದೆ. ಹಣದ ಕೊರತೆ ಇದ್ದಲ್ಲಿ ಆತ್ಮೀಯರಿಗೆ ನೀಡಿದ್ದ ಹಣ ಮರಳಿ ಕೈ ಸೇರುವುದು. ವಿದ್ಯಾರ್ಥಿಗಳ ಜೀವನದಲ್ಲಿ ಪ್ರಗತಿ ಕಂಡು ಬರುತ್ತದೆ.

ಪರಿಹಾರ: ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).