ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ, ಸಾಲದ ವ್ಯವಹಾರ ಬೇಡ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

Horoscope Today: ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ, ಸಾಲದ ವ್ಯವಹಾರ ಬೇಡ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

12 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (12 April 2024 Daily Horoscope).

ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ದಿನ ಭವಿಷ್ಯ
ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (12 April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಶುಕ್ರವಾರ

ತಿಥಿ : ಚೌತಿ 05.13 ರವರೆಗೂ ಇರುತ್ತದೆ ನಂತರ ಪಂಚಮಿ ಆರಂಭವಾಗುತ್ತದೆ.

ನಕ್ಷತ್ರ: ರೋಹಿಣಿ ನಕ್ಷತ್ರವು ರಾತ್ರಿ 4.37 ರವರೆಗೂ ಇರುತ್ತದೆ ನಂತರ ಮೃಗಶಿರ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.09

ಸೂರ್ಯಾಸ್ತ: ಸಂಜೆ 06.31

ರಾಹುಕಾಲ: 10.30 ರಿಂದ12.00

ರಾಶಿಫಲ

ಮೇಷ

ಸಾಮಾಜಿಕ ಜವಾಬ್ದಾರಿ ನಡುವೆ ಸ್ವಂತ ಕೆಲಸ ಕಾರ್ಯಗಳಿಗೆ ಸಮಯ ಇರುವುದಿಲ್ಲ. ಕುಟುಂಬದಲ್ಲಿ ಸಂತೋಷದ ಕೊರತೆ ಬರಲಿದೆ. ಹಣಕಾಸಿನ ವಿಚಾರದಲ್ಲಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳುವ ಜವಾಬ್ದಾರಿ ನಿಮ್ಮದಾಗುತ್ತದೆ. ಮನದ ಬೇಸರ ಕಡಿಮೆ ಮಾಡಲು ಸಂತೋಷ ಕೂಟಗಳಲ್ಲಿ ಭಾಗವಹಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ನಾಯಕನ ಸ್ಥಾನ ಲಭಿಸುತ್ತದೆ. ಸಹೋದ್ಯೋಗಿಗಳ ಸಹಕಾರ ಮತ್ತು ವಿಶ್ವಾಸ ದೊರೆಯುತ್ತದೆ. ಅಧಿಕಾರಿಗಳ ಜೊತೆ ವಾದವಿರುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಅಗ್ರಸ್ಥಾನವನ್ನು ಪಡೆಯುವರು. ಸಂಗಾತಿಯ ನಡುವಿನ ಸಮಸ್ಯೆಯೊಂದು ಪರಿಹಾರಗೊಳ್ಳಲಿದೆ. ಹಣಕಾಸಿನ ಕೊರತೆ ಕಡಿಮೆಯಾಗುತ್ತದೆ. ಮಹಿಳಾ ಉದ್ಯೋಗಿಗಳಿಗೆ ವಿಶೇಷ ಅನುಕೂಲತೆಗಳು ದೊರೆಯಲಿವೆ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬಿಳಿ

ವೃಷಭ

ಆರೋಗ್ಯದಲ್ಲಿ ಚೇತರಿಕೆ ಉಂಟಾಗಲಿದೆ. ಆದಾಯದ ಬಗ್ಗೆ ಗಂಭೀರತೆ ಇರುವುದಿಲ್ಲ. ಹೊಂದಾಣಿಕೆಯ ಗುಣದಿಂದ ಎಲ್ಲರ ಮನ ಗೆಲ್ಲುವಿರಿ. ಕುಟುಂಬದ ಆಸ್ತಿಯ ವಿವಾದದಲ್ಲಿ ಪರಿಹಾರ ಕಂಡುಕೊಳ್ಳುವಿರಿ. ಸ್ಟಾಕ್ ಮತ್ತುಷೇರಿನ ವ್ಯವಹಾರದಲ್ಲಿ ಲಾಭವಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಅನಾವಶ್ಯಕವಾಗಿ ಬದಲಿಸದಿರಿ. ಉದ್ಯೋಗದ ವಿಚಾರವಾಗಿ ಮನದಲ್ಲಿ ಆತಂಕ ಉಂಟಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಮಧ್ಯಮ ಲಾಭ ದೊರೆಯಲಿದೆ. ಹಿರಿಯರ ಅಣತಿಯಂತಿಯಂತೆ ಮನೆಯ ಆಡಳಿತವನ್ನು ಸ್ವೀಕರಿಸುವಿರಿ. ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಬೇಕೆನಿಸುತ್ತದೆ. ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಸಾಲದ ವ್ಯವಹಾರ ಬೇಡ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 10

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ : ಬೂದು

ಮಿಥುನ

ಕುಟುಂಬದಲ್ಲಿ ಒಮ್ಮತ ಮೂಡುತ್ತದೆ. ಅತಿಯಾದ ಆತ್ಮ ವಿಶ್ವಾಸ ದಿನದ ಸಂತಸವನ್ನು ಮರೆ ಮಾಚುತ್ತದೆ. ತಪ್ಪನ್ನು ಸರಿಪಡಿಸಿಕೊಳ್ಳಲು ಬುದ್ಧಿವಾದ ಹೇಳಿದಲ್ಲಿ ವಿವಾದ ಉಂಟಾಗಬಹುದು. ಉದ್ಯೋಗದಲ್ಲಿ ಧನಾತ್ಮಕ ಪ್ರಕ್ರಿಯೆ ಆರಂಭವಾಗುತ್ತದೆ. ಹಣದ ಸ್ಥಿತಿಯನ್ನು ಉತ್ತಮಗೊಳಿಸಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಸ್ಥಿರವಾದ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗುವಿರಿ. ಸಂತಾನಯೋಗವಿದೆ. ಸಂಗಾತಿಗಾಗಿ ವಿದೇಶ ಪ್ರವಾಸ ಮಾಡುವಿರಿ. ತಾಯಿಯವರ ಅರೋಗ್ಯದಲ್ಲಿ ಚೇತರಿಕೆ ನಿಮಗೆ ಸಮಾಧಾನ ನೀಡಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ನಿಮ್ಮ ಸೋದರಿಯ ವೃತ್ತಿಯಲ್ಲಿ ಬೇಸರದ ವಾತಾವರಣ ಉಂಟಾಗಲಿದೆ. ಧಾರ್ಮಿಕ ಕೇಂದ್ರಕ್ಕೆ ಹಳದಿ ಹೂಗಳನ್ನು ನೀಡಿ ದಿನದ ಕೆಲಸ ಆರಂಭಿಸಿರಿ.

ಪರಿಹಾರ : ದೇವರಿಗೆ ತುಪ್ಪದ ದೀಪ ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು

ಕಟಕ

ಜೀವನದಲ್ಲಿನ ಬದಲಾವಣೆಗಳು ಅನುಕೂಲಕರವಾಗುತ್ತದೆ. ಅನಿರೀಕ್ಷಿತ ಘಟನೆಯೊಂದು ಬಾಳಿನಲ್ಲಿ ಹೊಸ ನಿರೀಕ್ಷೆ ಉಂಟುಮಾಡುತ್ತದೆ. ಉದ್ಯೋಗದಲ್ಲಿನ ತೊಂದರೆಯೊಂದು ಮಾತುಕತೆ ಮೂಲಕ ಸುಖಾಂತ್ಯಗೊಳ್ಳಲಿದೆ. ವಿದ್ಯಾರ್ಥಿಗಳು ಕೇವಲ ಪಠ್ಯ ವಿಚಾರದಲ್ಲದೇ ಕ್ರೀಡಾಸ್ಪರ್ಧೆಗಳಲ್ಲಿಯೂ ಮುಂದಿರುತ್ತಾರೆ. ನಿಮ್ಮಲ್ಲಿರುವ ಕ್ರಿಯಾಶೀಲ ವ್ತ್ಯಕ್ತಿತ್ವ ಜನಮನ್ನಣೆ ಗಳಿಸುತ್ತದೆ. ಕುಟುಂಬ ಮತ್ತು ಸಮಾಜದಲ್ಲಿ ಗೌರವಯುತ ಸ್ಥಾನ ಗಳಿಸುವಿರಿ. ಸಂಗಾತಿಗೆ ಚಿನ್ನದ ಕಾಣಿಕೆಯೊಂದನ್ನು ನೀಡುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕುತೂಹಲದಿಂದ ಮೊದಲು ಸ್ವಂತ ಕೆಲಸ ಕಾರ್ಯಗಳನ್ನು ಮಾಡಲಿಚ್ಚಿಸುವಿರಿ. ಹಿರಿಯ ಅಧಿಕಾರಿಗಳ ನಡುವಿನ ಮಾತುಕತೆ ನೂತನ ಅವಕಾಶವನ್ನು ಕಲ್ಪಿಸುತ್ತದೆ. ಇಂದಿನ ಖರ್ಚು ವೆಚ್ಚಗಳನ್ನು ಸರಿತೂಗಿಸಲು ಸಾಧ್ಯವಾಗದು.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಪ್ಪು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).