Horoscope Today: ಆಸ್ತಿ ವಿವಾದದಲ್ಲಿ ಕಾನೂನಾತ್ಮಕ ಯಶಸ್ಸು ದೊರೆಯಲಿದೆ; ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ
12 ಏಪ್ರಿಲ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (12 April 2024 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(12 April 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಶುಕ್ರವಾರ
ತಿಥಿ : ಚೌತಿ 05.13 ರವರೆಗೂ ಇರುತ್ತದೆ ನಂತರ ಪಂಚಮಿ ಆರಂಭವಾಗುತ್ತದೆ.
ನಕ್ಷತ್ರ: ರೋಹಿಣಿ ನಕ್ಷತ್ರವು ರಾತ್ರಿ 4.37 ರವರೆಗೂ ಇರುತ್ತದೆ ನಂತರ ಮೃಗಶಿರ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 06.09
ಸೂರ್ಯಾಸ್ತ: ಸಂಜೆ 06.31
ರಾಹುಕಾಲ: 10.30 ರಿಂದ12.00
ರಾಶಿಫಲ
ಧನಸ್ಸು
ಆತ್ಮೀಯರೊಂದಿಗೆ ಚರ್ಚಿಸಿ ತೆಗೆದುಕೊಳ್ಳುವ ತೀರ್ಮಾನಗಳು ಯಶಸ್ಸನ್ನು ನೀಡುತ್ತದೆ. ಕಾನೂನಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಅಪೂರ್ಣವಾಗಲಿವೆ. ಉದ್ಯೋಗದಲ್ಲಿನ ಕಷ್ಟದ ಕೆಲಸವೊಂದನ್ನುಏಕಾಂಗಿಯಾಗಿ ಪೂರ್ಣಗೊಳಿಸುವಿರಿ. ಕುಟುಂಬದಲ್ಲಿ ಉತ್ತಮ ಬದಲಾವಣೆಗಳು ಆರಂಭವಾಗುತ್ತವೆ. ಹಣಕಾಸಿನ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದೆ. ನಿಮ್ಮ ಕೈ ಕಾಲುಗಳಿಗೆ ಪೆಟ್ಟು ಬೀಳ ಬಹುದು. ವಂಶದ ಹಿರಿಯರೊಬ್ಬರು ಮನೆಗೆ ಆಗಮಿಸಲಿದ್ದಾರೆ. ನಿಮ್ಮ ಪಾಲಿನ ವಂಶದ ಆಸ್ತಿಯ ಅಲ್ಪ ಭಾಗವನ್ನು ಹಣದ ಅವಶ್ಯಕತೆಗಾಗಿ ಮಾರಾಟ ಮಾಡುವಿರಿ. ಉಷ್ಣದ ತೊಂದರೆ ಉಂಟಾಗುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಗುರುವಿನ ದೇಗುಲಕ್ಕೆ ಭೇಟಿ ನೀಡುವಿರಿ.
ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಆಕಾಶ ನೀಲಿ
ಮಕರ
ಹೊಂದಾಣಿಕೆಯ ಗುಣ ಇರುವ ಕಾರಣ ಸುಖಜೀವನ ನಡೆಸುವಿರಿ. ವಾಹನಗಳ ದುರಸ್ತಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಉತ್ತಮ ಅದಾಯವಿರುತ್ತದೆ. ಆಸ್ತಿಯ ವಿವಾದದಲ್ಲಿ ಕಾನೂನಾತ್ಮಕ ಯಶಸ್ಸು ದೊರೆಯುತ್ತದೆ. ವಿಶ್ರಾಂತಿ ಇಲ್ಲದೆ ದುಡಿಯುವಿರಿ. ಕೆಲಸ ಕಾರ್ಯಗಳನ್ನು ಆತುರದಿಂದ ಪೂರ್ಣಗೊಳಿಸುವಿರಿ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ವಾಸಸ್ಥಳವನ್ನು ಬದಲಾಯಿಸುವಿರಿ. ಸ್ನೇಹಿತರೊಬ್ಬರಿಂದ ಪಡೆದಿದ್ದ ಹಣವನ್ನು ಮರಳಿಸುವಿರಿ. ಆಪತ್ತಿನಲ್ಲಿರುವ ಬಂಧುವರ್ಗಕ್ಕೆ ಸಹಾಯ ಮಾಡುವಿರಿ. ಎಲ್ಲರನ್ನೂ ಅನುಮಾನದ ದೃಷ್ಠಿಯಲ್ಲಿ ನೋಡುವಿರಿ. ಮನೆಯಲ್ಲಿ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಡೆಯಲಿದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಕೆಂಪು
ಕುಂಭ
ಹಣಕಾಸಿನ ಕಾರಣದಿಂದ ಕುಟುಂಬದಲ್ಲಿ ಬೇಸರದ ಛಾಯೆ ಮೂಡುತ್ತದೆ. ಸತತ ಪ್ರಯತ್ನದಿಂದ ಉದ್ಯೋಗದಲ್ಲಿ ಯಶಸ್ಸನ್ನು ಗಳಿಸುವಿರಿ. ಸ್ವಂತ ಕೆಲಸ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಿರಿ. ಮಾತನಾಡದೆ ಮೌನವಾಗಿ ವ್ಯಾಪಾರ ವ್ಯವಹಾರದಲ್ಲಿ ಶ್ರದ್ಧೆ ತೋರುವಿರಿ. ಅತಿಯಾದ ತಲೆ ನೋವು ನಿಮ್ಮನ್ನು ಕಾಡುತ್ತದೆ. ಬೇರೆಯವರ ವಾದ ವಿವಾದಗಳ ಮಧ್ಯಸ್ಥಿಕೆ ವಹಿಸಿದರೆ ತೊಂದರೆ ಉಂಟಾಗುತ್ತದೆ. ಆಹಾರ ಸೇವನೆಯಲ್ಲಿ ಮಿತಿ ಇರಲಿ. ಹಿರಿಯ ಸೋದರನ ನಡುವೆ ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗುತ್ತದೆ. ದೂರದ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ. ಹಣಕಾಸಿನ ಸಮಸ್ಯೆ ಬಗೆ ಹರಿಯುತ್ತದೆ. ಮಕ್ಕಳಿಗೆ ಉದ್ಯೋಗ ದೊರೆಯುತ್ತದೆ. ಪ್ರಾಣಿಗಳಿಗೆ ನೀರು ಆಹಾರದ ಸರಬರಾಜು ಮಾಡುವಿರಿ. ಆತ್ಮಸಂತೋಷದ ಕೊರತೆ ಇರುತ್ತದೆ.
ಪರಿಹಾರ : ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಕೇಸರಿ
ಮೀನ
ಅರ್ಥಪೂರ್ಣವಾದ ಮಾತುಕತೆ ಜೀವನದಲ್ಲಿ ಹೊಸ ಆಸೆಯನ್ನು ಉಂಟುಮಾಡುತ್ತದೆ. ಖರ್ಚಿನ ಮೇಲಿನ ನಿಯಂತ್ರಣ ಹಣದ ತೊಂದರೆಯನ್ನು ದೂರ ಮಾಡುತ್ತದೆ. ಮನೆಯವರ ಒತ್ತಡಕ್ಕೆ ಮಣಿದು ಉದ್ಯೋಗ ಬದಲಿಸುವಿರಿ. ವ್ಯಾಪಾರದಲ್ಲಿ ಮಧ್ಯಮ ಗತಿಯ ಲಾಭವಿರುತ್ತದೆ. ವಿದ್ಯಾರ್ಥಿಗಳು ಸುಲಭವಾಗಿ ಗುರಿ ತಲುಪುತ್ತಾರೆ. ಉನ್ನತ ಅಧ್ಯಯನದ ಸೂಚನೆಗಳಿವೆ. ಗಂಟಲಿನ ಸೋಂಕು ಉಂಟಾಗುವುದು. ಅಭಿನಯ ಕ್ಷೇತ್ರದಲ್ಲಿ ಇದ್ದಲ್ಲಿ ದೊಡ್ಡ ಅವಕಾಶವೊಂದು ಬರಲಿದೆ. ಅನಿವಾರ್ಯವಾಗಿ ವ್ಯಾಪಾರವನ್ನು ಮೊಟಕುಗೊಳಿಸುವಿರಿ. ಮನಸ್ಸಿಗೆ ನೆಮ್ಮದಿ ಇರದು. ಮಹಿಳೆಯರ ಒಡೆತನದ ಉದ್ಯಮದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ.
ಪರಿಹಾರ : ಬೆಳ್ಳಿ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಗುಲಾಬಿ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ