ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಸ್ನೇಹಿತರು ದೂರ ಉಳಿಯಲಿದ್ದಾರೆ, ಹಣಕಾಸಿನ ವಿವಾದದಿಂದ ಮುಕ್ತಿ ದೊರೆಯಲಿದೆ; ಏಪ್ರಿಲ್‌ 13ರ ದಿನ ಭವಿಷ್ಯ

Horoscope Today: ಸ್ನೇಹಿತರು ದೂರ ಉಳಿಯಲಿದ್ದಾರೆ, ಹಣಕಾಸಿನ ವಿವಾದದಿಂದ ಮುಕ್ತಿ ದೊರೆಯಲಿದೆ; ಏಪ್ರಿಲ್‌ 13ರ ದಿನ ಭವಿಷ್ಯ

13th ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (13th April 2024 Daily Horoscope).

ಧನು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ
ಧನು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(13th April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಶನಿವಾರ

ತಿಥಿ : ಪಂಚಮಿ 04.01 ರವರೆಗೂ ಇದ್ದು ನಂತರ ಷಷ್ಠಿ ಆರಂಭವಾಗುತ್ತದೆ.

ನಕ್ಷತ್ರ : ಮೃಗಶಿರ ನಕ್ಷತ್ರವು ರಾತ್ರಿ 04.37 ರವರೆಗೂ ಇದ್ದು ನಂತರ ಆರ್ದ್ರೆ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.08

ಸೂರ್ಯಾಸ್ತ: ಸಂಜೆ 06.31

ರಾಹುಕಾಲ: ಬೆಳಗ್ಗೆ 09.00 ರಿಂದ 10.30

ರಾಶಿಫಲ

ಧನಸ್ಸು

ಅನಿರೀಕ್ಷಿತವಾದ ಬದಲಾವಣೆಯೊಂದು ಹೊಸ ಆಸೆಗೆ ಕಾರಣವಾಗಲಿದೆ. ಮನೆ ಕೊಳ್ಳಲು ಸೋದರ ಮಾವ ಹಣದ ಸಹಾಯ ಮಾಡುತ್ತಾರೆ. ವಾಹನ ಕೊಳ್ಳುವ ವ್ಯವಹಾರದಲ್ಲಿ ಸೋದರಿಯು ಸಹಾಯ ನೀಡುತ್ತಾರೆ. ಕೃಷಿಕರಾದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸಾರ್ವಜನಿಕರಿಗಾಗಿ ನೀರಿನ ವ್ಯವಸ್ಥೆ ಮಾಡುವಿರಿ. ಇಚ್ಚೆ ಇದ್ದರೆ ರಾಜಕೀಯ ಪ್ರವೇಶಿಸಲು ಇದು ಸಕಾಲ. ಉತ್ತಮ ಆದಾಯ ಇರುತ್ತದೆ. ನಿಮ್ಮಲ್ಲಿನ ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಗೆ ಒಳಗಾಗುವಿರಿ. ಮಕ್ಕಳ ಬಗ್ಗೆ ಅಸಡ್ಡೆ ತೋರಿದಲ್ಲಿ ಅವರು ತಪ್ಪು ಮಾಡಲು ಆಸ್ಪದ ನೀಡಿದಂತಾಗುತ್ತದೆ. ಉಪಕಾರಕ್ಕೆ ಪ್ರತ್ಯುಪಕಾರ ಬಯಸುವ ಕಾರಣ, ಸ್ನೇಹಿತರು ನಿಮ್ಮಿಂದ ದೂರ ಉಳಿಯಲು ಬಯಸುತ್ತಾರೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕೆಂಪು

ಮಕರ

ಅನಿವಾರ್ಯವಾಗಿ ಕುಟುಂಬದ ಜವಾಬ್ದಾರಿಯನ್ನು ಒಪ್ಪಬೇಕಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸಿದಂತೆ ಬದಲಾವಣೆ ಉಂಟಾಗದು. ಪಾಲುದಾರಿಕೆ ವ್ಯಾಪಾರದಲ್ಲಿ ಉತ್ತಮ ವರಮಾನ ಇರುತ್ತದೆ. ಹಣಕಾಸಿನ ನಿರೀಕ್ಷೆ ಹುಸಿ ಆಗದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಗಳಿಸುವರು. ಹೊಸ ಕಾರ್ಯ ಆರಂಭಿಸಿದಲ್ಲಿ ಉತ್ತಮ ಆರಂಭ ದೊರೆಯುತ್ತದೆ. ಹಣಕಾಸಿನ ವಿವಾದದಿಂದ ಪಾರಾಗುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆತು ದೂರದ ಸ್ಥಳಕ್ಕೆ ವರ್ಗವಾಗುತ್ತದೆ. ವಾಯುದೋಷ ನಿಮ್ಮನ್ನು ಕಾಡುತ್ತದೆ. ಮುಖ್ಯ ವಿಚಾರಗಳನ್ನು ರಹಸ್ಯವಾಗಿ ಇಡುವಿರಿ. ನಿಮ್ಮ ಒಳ್ಳೆಯ ಮನಸ್ಸು ವ್ಯಕ್ತಿತ್ವವನ್ನು ದುರುಪಯೋಗ ಪಡಿಸಿಕೊಳ್ಳುವ ಜನ ಸುತ್ತಲೂ ಇದ್ದಾರೆ.

ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕೇಸರಿ

ಕುಂಭ

ಕುಟುಂಬದಲ್ಲಿ ಒಮ್ಮತ ಮೂಡದೆ ಬೇಸರ ಮೂಡಲಿದೆ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಇದರಿಂದಾಗಿ ಆದಾಯದಲ್ಲಿ ಏರಿಕೆ ಉಂಟಾಗುತ್ತದೆ. ಯಾರ ಸಲಹೆ ಸೂಚನೆಯನ್ನೂ ನೀವು ಪಾಲಿಸುವುದಿಲ್ಲ. ನಿಮ್ಮ ರೀತಿ ನೀತಿಗಳನ್ನು ಒಪ್ಪುವಂತೆ ಅನ್ಯರ ಮೇಲೆ ಒತ್ತಡ ಹಾಕುವಿರಿ. ದಿನ ಪೂರ್ತಿ ವಿವಾದಗಳಲ್ಲಿಯೇ ಕಳೆಯುವಿರಿ. ನಿಮ್ಮ ಆತ್ಮೀಯರೊಬ್ಬರು ಪರೋಕ್ಷವಾಗಿ ತಪ್ಪುಗಳನ್ನು ತಿದ್ದುತ್ತಾರೆ. ಕೆಲಸ ಕಾರ್ಯಗಳ ಒತ್ತಡ ನಿಮ್ಮನ್ನು ಕಾಡುತ್ತದೆ. ಹಿರಿಯರ ಕೆಲಸ ಅಥವಾ ವ್ಯಾಪಾರ ವ್ಯವಹಾರವನ್ನು ಆರಂಭಿಸುವಿರಿ. ವಂಶದ ಆಸ್ತಿಯ ಮಾರಾಟದಲ್ಲಿ ಬರುವ ಆದಾಯದಲ್ಲಿ ಮತ್ತೊಬ್ಬರಿಗೆ ಪಾಲು ನೀಡಬೇಕಾಗುತ್ತದೆ. ಸಹನೆಯಿಂದ ಎಲ್ಲವನ್ನೂ ಗೆಲ್ಲಲು ಪ್ರಯತ್ನಿಸಿ. ಆಡುವ ಮಾತಿನ ಮೇಲೆ ನಿಯಂತ್ರಣ ಸಾಧಿಸಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಮೀನ

ಕುಟುಂಬದಲ್ಲಿ ಬೇಸರದ ವಾತಾವರಣ ಉಂಟಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಿಂದ ಉತ್ತಮ ಫಲಗಳು ದೊರೆಯುತ್ತವೆ. ಎದುರಾಗುವ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ಎದುರಿಸುವಿರಿ. ಅವಶ್ಯಕತೆ ಇದ್ದಾಗ ತಂದೆ ಅಥವ ತಾಯಿಯ ಸಹಾಯ ನಿಮಗೆ ದೊರೆಯಲಿದೆ. ಸಂದರ್ಭಕ್ಕೆ ಅನುಗುಣವಾಗಿ ವರ್ತಿಸಬಲ್ಲ ನೀವು ಎಲ್ಲರ ಮನ ಗೆಲ್ಲುವಿರಿ. ಸಮಾಜದಲ್ಲಿಉನ್ನತ ಸ್ಥಾನ ಮಾನ ದೊರೆಯುತ್ತದೆ. ಪುರಾತನ ಪದ್ಧತಿಗಳಾದ ಆಯುರ್ವೇದ, ಯೋಗದ ಅಧ್ಯಯನದಲ್ಲಿ ಸಾಧನೆ ಮಾಡುವಿರಿ, ಹಣದ ಕೊರತೆ ಇರುತ್ತದೆ. ಆದರೂ ಬೇರೆಯವರಿಂದ ಹಣವನ್ನು ಸಾಲ ಪಡೆಯುವುದಿಲ್ಲ. ವಿದ್ಯಾರ್ಥಿಗಳಿಗೆ ಶುಭವಿದೆ. ಮನೆಯಲ್ಲಿರುವ ಬೇಡದ ವಸ್ತುಗಳನ್ನು ವಿಲೇವಾರಿ ಮಾಡುವಿರಿ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).