ಕುಟುಂಬದಲ್ಲೇ ನಿಮಗೆ ವಿಶಿಷ್ಟ ಸ್ಥಾನಮಾನ ಲಭಿಸಲಿದೆ, ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಫಲ
ಜುಲೈ 13ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (13th July 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಆಷಾಢ ಮಾಸ-ಶುಕ್ಲಪಕ್ಷ-ಶನಿವಾರ
ತಿಥಿ : ಸಪ್ತಮಿ 12.01 ರವರೆಗೂ ಇದ್ದು ನಂತರ ಅಷ್ಠಮಿ ಆರಂಭವಾಗುತ್ತದೆ.
ನಕ್ಷತ್ರ : ಹಸ್ತ ನಕ್ಷತ್ರವು ಸಂಜೆ 05.14 ರವರೆಗು ಇದ್ದು ನಂತರ ಚಿತ್ತೆ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 06.00
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: ಬೆಳಗ್ಗೆ 09.16 ರಿಂದ 10.52
ರಾಶಿಫಲ
ಸಿಂಹ
ಸಿಡುಕುತನ ತಪ್ಪು ದಾರಿಗೆ ಎಳೆದೊಯ್ಯಬಹುದು. ಗುರು ಹಿರಿಯರ ನೆರವು ದೊರೆಯುತ್ತದೆ. ಮಕ್ಕಳು ಸಹ ನಿಮ್ಮ ಬುದ್ಧಿ ಮಾತನ್ನು ಕೇಳುವುದಿಲ್ಲ. ಯಾವುದೇ ಸಮಸ್ಯೆ ಉದ್ಭವಿಸದು. ನಿಮಗಿಷ್ಟವಾದ ವಸ್ತು ಕಳುವಾಗಬಹುದು ಎಚ್ಚರಿಕೆ ಇರಲಿ. ಕುಟುಂಬದಲ್ಲಿ ಪರಸ್ಪರ ಸಾಮರಸ್ಯ ಇರುತ್ತದೆ. ಉದ್ಯೋಗದಲ್ಲಿ ಎಲ್ಲರ ಮನಸ್ಸಿಗೆ ಹತ್ತಿರವಾಗುವಿರಿ. ಮಕ್ಕಳಿಗೆ ಕುಟುಂಬದಲ್ಲೇ ವಿಶಿಷ್ಟ ಸ್ಥಾನಮಾನ ಲಭಿಸುತ್ತದೆ. ವಿದ್ಯಾರ್ಥಿಗಳು ಕಲಿಕೆಯೊಡನೆ ಮನರಂಜನೆಯಲ್ಲಿಯೂ ಆಸಕ್ತಿ ಮೂಡಲಿದೆ. ಹಣಕಾಸಿನ ವ್ಯವಹಾರದಲ್ಲಿ ತೊಂದರೆಬಾರದು. ಸಮಸ್ಯೆ ಎದುರಾದಾಗ ಸಂಯಮದಿಂದ ವರ್ತಿಸುವಿರಿ. ದೂರದ ಸಂಬಂಧಿಕರ ಜೊತೆ ಸಂಪರ್ಕ ಸಾಧಿಸುವಿರಿ.
ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ನೀಲಿ
ಕನ್ಯಾ
ಕುಟುಂಬದಲ್ಲಿನ ನಡೆಯುವ ಅನಿರೀಕ್ಷಿತ ಘಟನೆಗಳು ನೆಮ್ಮದಿ ಹಾಳು ಮಾಡುತ್ತದೆ. ನಿಮ್ಮ ಪ್ರತಿಯೊಂದು ತೀರ್ಮಾನದಲ್ಲೂ ಕುಟುಂಬದ ಸದಸ್ಯರ ಸಹಕಾರ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಣಕಾಸಿನ ಪರಿಸ್ಥಿತಿಯಲ್ಲಿ ದಿಢೀರ್ ಬದಲಾವಣೆ ಕಂಡುಬರುತ್ತದೆ. ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಗುಣಮಟ್ಟ ಕಾಪಾಡಿಕೊಳ್ಳುತ್ತಾರೆ. ಕುಟುಂಬದ ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಕುಟುಂಬದ ಸದಸ್ಯರ ಜೊತೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಹೊಸ ವಾಹನವನ್ನು ಕೊಳ್ಳುವಿರಿ. ಧಾರ್ಮಿಕ ಕೇಂದ್ರದ ನಿರ್ವಹಣೆಯ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು ಪೂರ್ವ
ಅದೃಷ್ಟದ ಬಣ್ಣ: ನೇರಳೆ ಬಣ್ಣ
ತುಲಾ
ಮನದ ಆತಂಕ ದೂರವಾಗುವ ಕಾರಣ ಸಂತಸದಿಂದ ಬಾಳುವಿರಿ. ಕುಟುಂಬದಲ್ಲಿ ನಿಮ್ಮ ಮಾತಿಗೆ ಎಲ್ಲರ ಒಪ್ಪಿಗೆ ದೊರೆಯುತ್ತದೆ. ಸಮಾಜದಲ್ಲಿ ನಿಮ್ಮ ಸ್ಥಾನಕ್ಕೆ ವಿಶೇಷವಾದ ಗೌರವಾದರ ದೊರೆಯುತ್ತದೆ. ಮನಸ್ಸಿಗೆ ಸರಿ ಬರದ ಯಾವುದೇ ಕೆಲಸ ಮಾಡುವುದಿಲ್ಲ. ಚಾಡಿ ಮಾತುಗಳನ್ನು ನಂಬದಿರಿ. ಆತ್ಮೀಯರ ಜೊತೆಯಲ್ಲಿ ನೆಮ್ಮದಿಯಿಂದ ಕಿರು ಪ್ರವಾಸ ಕೈಗೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಇಚ್ಛೆಗೆ ಅನುಗುಣವಾಗಿ ಉತ್ತಮ ಪ್ರತಿಫಲ ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಗಿವ ಮುನ್ನವೇ ಉದ್ಯೋಗ ಲಭಿಸುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಮನೆಯಲ್ಲಿ ಸಾಕಿರುವ ಪ್ರಾಣಿಗಳಿಗೆ ವಿಸೇಷ ಸೌಲಭ್ಯ ಕಲ್ಪಿಸುವಿರಿ.
ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ವೃಶ್ಚಿಕ
ಹಟದ ಗುಣದಿಂದ ಸೋಲುವ ವೇಳೆಯಲ್ಲಿಯೂ ಗೆಲುವು ಕಾಣುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿ ದೊರೆಯುತ್ತವೆ. ಅತಿ ಮುಖ್ಯವಾದ ಕೆಲಸವೊಂದನ್ನು ಮುಂದೂಡಬೇಕಾಗುತ್ತದೆ. ಕುಟುಂಬದ ಸದಸ್ಯರ ಸಹಾಯ ಸಹಕಾರ ನಿಮಗಿರುತ್ತದೆ. ಸ್ನೇಹಿತರ ನಡುವೆ ಬಿಗುವಿನ ವಾತಾವರಣ ಉಂಟಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಸ್ಪೂರ್ತಿಯ ಅಗತ್ಯ ಇದೆ. ಹೊಸ ವ್ಯಾಪಾರವಿದ್ದಲ್ಲಿ ಮಧ್ಯಮಗತಿ ಆದಾಯ ದೊರೆಯುತ್ತದೆ. ನಿಮ್ಮ ಬುದ್ಧಿವಂತಿಕೆಯ ನಿರ್ಧಾರದಿಂದ ಹಣದ ಕೊರತೆ ಕಡಿಮೆಯಾಗುತ್ತದೆ. ಸೋದರರ ನಡುವೆ ಅನಾವಶ್ಯಕ ವಾದವಿರುತ್ತದೆ. ಗುರುಹಿರಿಯರನ್ನು ಬೇಟಿ ಮಾಡುವ ಅವಕಾಶ ದೊರೆಯುತ್ತದೆ.
ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).