Horoscope Today: ಅನಗತ್ಯ ಖರ್ಚು ವೆಚ್ಚಗಳಿಂದ ಬೇಸರ, ಸಂಬಂಧಿಕರ ಜೊತೆ ವಿವಾಹ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ
ಮಾರ್ಚ್ 14, ಗುರುವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (14 March 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (14 March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಗುರುವಾರ
ತಿಥಿ : ಪಂಚಮಿ ರಾ.04.49 ರವರೆಗು ಇರುತ್ತದೆ. ಆನಂತರ ಷಷ್ಠಿ ಆರಂಭವಾಗುತ್ತದೆ.
ನಕ್ಷತ್ರ : ಭರಣಿ ನಕ್ಷತ್ರವು ರಾ.10.01ರವರೆಗೆ ಇರುತ್ತದೆ. ಆನಂತರ ಕೃತ್ತಿಕ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.29
ಸೂರ್ಯಾಸ್ತ: ಸ.06.29
ರಾಹುಕಾಲ : ಹ.01.30ರಿಂದ ಹ.03.00
ರಾಶಿ ಫಲಗಳು
ಸಿಂಹ
ಬಿಡುವಿಲ್ಲದ ಕೆಲಸ ಬೇಸರಕ್ಕೆ ಕಾರಣವಾಗುತ್ತದೆ. ಸಾಧ್ಯವಾದಲ್ಲಿ ಕೆಲಸ ಕಾರ್ಯಗಳ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳಲು ಪ್ರಯತ್ನಿಸಿ. ಕುಟುಂಬದ ಜವಾಬ್ದಾರಿ ಹೆಚ್ಚುವ ಕಾರಣ ಮಾನಸಿಕ ಒತ್ತಡವಿರುತ್ತದೆ. ನೀವಾಗಿಯೇ ಯಾರ ಸಹಾಯವನ್ನು ಬಯಸುವುದಿಲ್ಲ. ಆದರೆ ಬೇರೆಯವರ ಸಹಕಾರವನ್ನು ತಿರಸ್ಕರಿಸುವುದು ಇಲ್ಲ. ಅನಗತ್ಯ ಖರ್ಚು ವೆಚ್ಚಗಳಿಂದ ಬೇಸರಗೊಳ್ಳುವಿರಿ. ನಿಮ್ಮ ಕಾರ್ಯನಿರ್ವಹಣೆಗೆ ಎಲ್ಲರ ಪ್ರಶಂಸೆ ಲಭ್ಯವಾಗುತ್ತದೆ. ಅವಿವಾಹಿತರಿಗೆ ವಿವಾಹದ ಮಾತುಕತೆ ನಡೆಯಲಿದೆ. ಬಾಳ ಸಂಗಾತಿಯ ಸಹಾಯ ಸಹಕಾರ ಸದಾ ಕಾಲ ದೊರೆಯಲಿದೆ. ಉದ್ಯೋಗದಲ್ಲಿ ಹೊಸ ಭರವಸೆಯೊಂದಿಗೆ ಮುಂದುವರೆಯುವಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮಲ್ಲಿನ ಪ್ರತಿಭೆಗೆ ತಕ್ಕಂತೆ ಉತ್ತಮ ಅವಕಾಶಗಳು ದೊರೆಯಲಿವೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಕಂದು ಬಣ್ಣ
ಕನ್ಯಾ
ಆತ್ಮವಿಶ್ವಾಸದಿಂದ ಕೈಹಿಡಿದ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದಲ್ಲಿ ಪರಸ್ಪರ ಹೆಚ್ಚಿನ ನಂಬಿಕೆ ಇರುತ್ತದೆ. ಉತ್ತಮ ಆದಾಯ ಗಳಿಸಿ ಆರ್ಥಿಕವಾಗಿ ಸಬಲರಾಗುವಿರಿ. ಆತ್ಮೀಯರೊಂದಿಗೆ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸುವಿರಿ. ಸಂಗಾತಿಯ ಸಹಕಾರ ಹೊಸ ಚೇತನವನ್ನು ತುಂಬಲಿದೆ. ಬಿಡುವಿನ ವೇಳೆ ದೈಹಿಕವಾಗಿ ಅಶಕ್ತರಾಗಿರುವ ಜನರಿಗೆ ಸಹಾಯ ಮಾಡುವಿರಿ. ಚಾಡಿ ಮಾತುಗಳಿಗೆ ಬೆಲೆ ನೀಡದಿರಿ. ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಇರಲಿದೆ. ಜೀವನದಲ್ಲಿನ ಅತ್ಯುತ್ತಮ ಕೆಲಸ ಒಂದನ್ನು ಮಾಡುವಿರಿ. ಏಕಾಂಗಿಯಾಗಿ ಕಿರು ಪ್ರವಾಸ ಕೈಗೊಳ್ಳುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಕಪ್ಪು ಬಣ್ಣ
ತುಲಾ
ಆತುರದಲ್ಲಿ ಕೆಲಸ ನಿರ್ವಹಿಸಿದರೆ ತೊಂದರೆ ಉಂಟಾಗಬಹುದು. ಕಷ್ಟ ನಷ್ಟಗಳಿಗೆ ಹೆದರದೆ ಕರ್ತವ್ಯ ನಿರತರಾಗುತ್ತಾರೆ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವಿರಿ. ಇದರಿಂದಾಗಿ ಆತ್ಮವಿಶ್ವಾಸದ ಕೊರತೆ ಕಾಣುವುದಿಲ್ಲ. ರಕ್ತ ಸಂಬಂಧಿಕರ ಸಹಾಯ ಸದಾ ಕಾಲ ಇರುತ್ತದೆ. ಕುಟುಂಬದ ಹಿರಿಯರಿಂದ ಹಣದ ಸಹಾಯ ದೊರೆಯುತ್ತದೆ. ದಂಪತಿಗಳಲ್ಲಿ ಪರಸ್ಪರ ಪ್ರೀತಿ ಗೌರವ ಇರಲಿದೆ. ಕಾರ್ಯ ಯೋಜನೆಗಳು ಸಫಲವಾಗಲಿದೆ. ಉದ್ಯೋಗದಲ್ಲಿ ಅನುಕೂಲಕರ ಬೆಳವಣಿಗೆಗಳು ಕಂಡು ಬರಲಿವೆ. ಆರೋಗ್ಯದ ಬಗ್ಗೆ ಗಮನವಿರಲಿ. ಹೊಸ ವ್ಯವಹಾರಗಳಲ್ಲಿ ಆತುರ ತೋರದೆ ನಿರೀಕ್ಷಿಸಿದ ಲಾಭವನ್ನು ಪಡೆಯುವಿರಿ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ.
ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಬಿಸಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ
ವೃಶ್ಚಿಕ
ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಆಪತ್ತಿನಿಂದ ಪಾರು ಮಾಡುತ್ತದೆ. ಹೊಸ ಮನೆಯನ್ನು ಕೊಳ್ಳುವ ಯೋಜನೆ ರೂಪಿಸುವಿರಿ. ಸೋದರ ಮಾವನಿಂದ ಹಣದ ಸಹಾಯ ದೊರೆಯಲಿದೆ. ಅವಿವಾಹಿತರಿಗೆ ಸಂಬಂಧದಲ್ಲಿ ವಿವಾಹವಾಗುತ್ತದೆ. ವಂಶಾನಗತವಾಗಿ ಬಂದ ಆಸ್ತಿಯಲ್ಲಿ ಸಮಪಾಲು ದೊರೆಯಲಿದೆ. ಬೇರೆಯವರ ಮನಸ್ಸನ್ನು ಅರಿತುಕೊಂಡು ಸಹನಯಿಂದ ವ್ಯವಹರಿಸಿ. ಕುಟುಂಬದಲ್ಲಿ ಮಂಗಳಕರ ಕಾರ್ಯವೊಂದು ಯಶಸ್ವಿಯಾಗಲಿದೆ. ಮಕ್ಕಳೊಂದಿಗೆ ಮನರಂಜನಾ ಸ್ಥಳಕ್ಕೆ ತೆರಳುವಿರಿ. ಸಣ್ಣ ಬಂಡವಾಳದ ವ್ಯಾಪಾರವನ್ನು ಆರಂಭಿಸಿ ಉತ್ತಮ ಆದಾಯವನ್ನು ಗಳಿಸುವಿರಿ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ
----------------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ