Horoscope Today: ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಕೈಕಾಲಿಗೆ ಪೆಟ್ಟಾಗುವ ಸಾಧ್ಯತೆ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಕೈಕಾಲಿಗೆ ಪೆಟ್ಟಾಗುವ ಸಾಧ್ಯತೆ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

Horoscope Today: ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಕೈಕಾಲಿಗೆ ಪೆಟ್ಟಾಗುವ ಸಾಧ್ಯತೆ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

ಮಾರ್ಚ್​ 14, ಗುರುವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (14 March 2024 Daily Horoscope).

ಮಾರ್ಚ್​ 14ರ ದಿನಭವಿಷ್ಯ
ಮಾರ್ಚ್​ 14ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (14 March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಗುರುವಾರ

ತಿಥಿ : ಪಂಚಮಿ ರಾ.04.49 ರವರೆಗು ಇರುತ್ತದೆ. ಆನಂತರ ಷಷ್ಠಿ ಆರಂಭವಾಗುತ್ತದೆ.

ನಕ್ಷತ್ರ : ಭರಣಿ ನಕ್ಷತ್ರವು ರಾ.10.01ರವರೆಗೆ ಇರುತ್ತದೆ. ಆನಂತರ ಕೃತ್ತಿಕ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.29

ಸೂರ್ಯಾಸ್ತ: ಸ.06.29

ರಾಹುಕಾಲ : ಹ.01.30ರಿಂದ ಹ.03.00

ರಾಶಿ ಫಲಗಳು

ಧನಸ್ಸು

ಕುಟುಂಬದಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳು ನಡೆಯಲಿವೆ. ಧೈರ್ಯ ಮತ್ತು ಸಹನೆ ಜೀವನದಲ್ಲಿ ಹೊಸ ಆಯಾಮವನ್ನು ಸೃಷ್ಟಿಸುತ್ತದೆ. ಒಳ್ಳೆಯ ಅಭ್ಯಾಸಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ದೊರೆವ ಅವಕಾಶಗಳನ್ನು ಸಮರ್ಥಕವಾಗಿ ಬಳಸಿಕೊಳ್ಳುವಿರಿ. ಉತ್ತಮ ಆದಾಯವಿದ್ದರೂ ಹಣಕಾಸಿನ ಕೊರತೆ ಕಾಡುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಸದಾಕಾಲ ಒಳ್ಳೆಯ ನಿರೀಕ್ಷೆಯಲ್ಲಿ ಇರುವಿರಿ. ಆತ್ಮೀಯರು ಸಮಸ್ಯೆಗಳಿಂದ ಪಾರಾಗಲು ಸಹಾಯ ಮಾಡುತ್ತಾರೆ. ಕುಟುಂಬದ ಜನರೊಂದಿಗೆ ಬೆರೆಯಲು ಸಮಯವನ್ನು ಮೀಸಲಿಡಿ. ದಂಪತಿಗಳ ನಡುವೆ ಉತ್ತಮ ಅನುಬಂಧ ಇರಲಿದೆ. ನಿಮ್ಮ ವಯಸ್ಸಿನ ಜನರಿಗೆ ನಾಯಕರಾಗಿ ಬಾಳುವಿರಿ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ಮಕರ

ನಿಮ್ಮ ಆಸೆ ಆಕಾಂಕ್ಷೆಗಳನ್ನು ಸರಳವಾದ ರೀತಿಯಲ್ಲಿ ಗಳಿಸುವಿರಿ. ದುಡುಕಿ ಮಾತನಾಡುವ ಕಾರಣ ಸಮಸ್ಯೆಗೆ ಸಿಲುಕುವಿರಿ. ಕುಟುಂಬದಲ್ಲಿ ಸಂತೋಷ ಮನೆ ಮಾಡಿರುತ್ತದೆ. ಅತಿಯಾದ ಉತ್ಸಾಹದಿಂದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುವಿರಿ. ಸಾಲದ ವ್ಯವಹಾರದಲ್ಲಿ ತೊಂದರೆ ಇರುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ವಿರುತ್ತದೆ. ಸಾಧ್ಯವಾದಷ್ಟು ದುಂದು ವೆಚ್ಚಗಳನ್ನು ಕಡಿಮೆ ಮಾಡಿ. ಮಕ್ಕಳ ಅಭ್ಯುದಯಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಲಾಭವಿಲ್ಲದ ಕೆಲಸಕಾರ್ಯಗಳಿಂದ ದೂರ ಉಳಿಯುವಿರಿ. ಸಂಗಾತಿಯು ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಕುಂಭ

ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಗುರು ಹಿರಿಯರ ಆಶೀರ್ವಾದದಿಂದ ಜೀವನದಲ್ಲಿ ಸುಖ ಶಾಂತಿ ನೆಲೆಸಲಿದೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಉದ್ಯೋಗವನ್ನು ಬದಲಾಯಿಸುವ ಆಲೋಚನೆ ಮನಸ್ಸಿರುತ್ತದೆ. ಅನಿವಾರ್ಯವಾಗಿ ಆತ್ಮೀಯವಾದ ಹಣವನ್ನು ಪಡೆಯಬೇಕಾಗುತ್ತದೆ. ಸಂಗಾತಿಗೆ ಉದ್ಯೋಗ ದೊರೆಯಲಿದೆ. ಕುಟುಂಬದಲ್ಲಿನ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವಿರಿ. ನಿಮ್ಮಲ್ಲಿ ಹುದುಗಿರುವ ವಿಶೇಷ ಪ್ರತಿಭೆಯನ್ನು ತೋರಲು ಉತ್ತಮ ವೇದಿಕೆ ದೊರೆಯುತ್ತದೆ. ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯಲಿದೆ. ಕೈಕಾಲಿಗೆ ಪೆಟ್ಟಾಗುವ ಸಂಭವವಿದೆ. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ಸಮಾಜದ ಗಣ್ಯ ವ್ಯಕ್ತಿ ಒಬ್ಬರ ಪರಿಚಯ ನಿಮಗಾಗಲಿದೆ.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಹೊಗೆಯ ಬಣ್ಣ

ಮೀನ

ವಿಶೇಷವಾದ ಆತ್ಮವಿಶ್ವಾಸ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡಲಿದೆ. ಅಧಿಕವಾದ ಕಾರ್ಯದ ಒತ್ತಡವಿದ್ದರೂ ನಿರೀಕ್ಷಿತ ಫಲಿತಾಂಶವನ್ನು ಪಡೆಯುವಿರಿ. ಬೇಗನೆ ಕೋಪ ಬಂದರು ಬಹುಕಾಲ ನಿಲ್ಲುವುದಿಲ್ಲ. ಉದ್ಯೋಗವನ್ನು ಬದಲಾಯಿಸುವ ನಿರ್ಧಾರ ಮಾಡುವಿರಿ. ಹಣಕಾಸಿನ ಕೊರತೆ ಉಂಟಾಗುವುದಿಲ್ಲ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದರೆ ತೊಂದರೆ ಉಂಟಾಗುತ್ತದೆ. ಸಣ್ಣಪುಟ್ಟ ವಿಚಾರಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡುವಿರಿ. ಸಂಗಾತಿಯ ಹಣದ ಸಹಾಯದಿಂದ ಸಣ್ಣಪುಟ್ಟ ವ್ಯಾಪಾರವನ್ನು ಆರಂಭಿಸುವಿರಿ. ಬೇರೆಯವರ ವಿಚಾರದಿಂದಾಗಿ ದಂಪತಿಗಳ ನಡುವೆ ವಾದ ವಿವಾದಗಳಿರುತ್ತವೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯವಿರುತ್ತದೆ. ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಒಟ್ಟಾರೆ ಎಲ್ಲರೊಂದಿಗೆ ಸಂತಸದಿಂದ ದಿನ ಕಳೆಯುವಿರಿ.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಆಕಾಶನೀಲಿ ಬಣ್ಣ

----------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.