Horoscope Today: ಯಾರನ್ನೂ ಕೀಳಾಗಿ ನೋಡದಿರಿ, ಹೋಟೆಲ್ ಆರಂಭಿಸುವ ಕನಸು ನನಸಾಗಲಿದೆ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಯಾರನ್ನೂ ಕೀಳಾಗಿ ನೋಡದಿರಿ, ಹೋಟೆಲ್ ಆರಂಭಿಸುವ ಕನಸು ನನಸಾಗಲಿದೆ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ

Horoscope Today: ಯಾರನ್ನೂ ಕೀಳಾಗಿ ನೋಡದಿರಿ, ಹೋಟೆಲ್ ಆರಂಭಿಸುವ ಕನಸು ನನಸಾಗಲಿದೆ; ಮೇಷದಿಂದ ಕಟಕರಾಶಿವರೆಗಿನ ದಿನಭವಿಷ್ಯ

14 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (14th April 2024 Daily Horoscope).

ಏಪ್ರಿಲ್‌ 14ರ ದಿನಭವಿಷ್ಯ
ಏಪ್ರಿಲ್‌ 14ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (14th April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ಭಾನುವಾರ

ತಿಥಿ: ಷಷ್ಠಿ ಬೆಳಿಗ್ಗೆ 3.32ರವರೆಗೂ ಇರುತ್ತದೆ. ಅನಂತರ ಸಪ್ತಮಿ ಆರಂಭವಾಗುತ್ತದೆ.

ನಕ್ಷತ್ರ: ಆರ್ದ್ರೆ ನಕ್ಷತ್ರವು ಬೆಳಗಿನ ಜಾವ 5.05 ರವರೆಗೂ ಇರುತ್ತದೆ. ಅನಂತರ ಪುನರ್ವಸು ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಿಗ್ಗೆ 6.08

ಸೂರ್ಯಾಸ್ತ: ಸಂಜೆ 6.31

ರಾಹುಕಾಲ: ಸಂಜೆ 4.30 ರಿಂದ ಸಂಜೆ 6.00

ಮೇಷ

ಯಾವುದೇ ಕೆಲಸವನ್ನು ಮಾಡಬಲ್ಲ ಆತ್ಮವಿಶ್ವಾಸ ನಿಮ್ಮಲ್ಲಿ ಇರುತ್ತದೆ. ಪೂರ್ವ ನಿಯೋಜನೆ ಇಲ್ಲದೆ ಯಾವುದೆ ಕೆಲಸ-ಕಾರ್ಯಗಳನ್ನು ಮಾಡುವುದಿಲ್ಲ. ಇದರಿಂದಾಗಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಗೃಹಕೃತ್ಯಗಳಿಗೆ ಬೇಕಾದ ವಸ್ತುವನ್ನು ಕೊಳ್ಳುವಿರಿ. ಉತ್ತಮ ಹೊಂದಾಣಿಕೆ ಇರುವ ಕಾರಣ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಬಂಧು ಬಳಗದವರ ಜೀವನದಲ್ಲಿ ಎದುರಾಗುವ ಅಡ್ಡಿ ಆತಂಕಗಳಿಗೆ ಪರಿಹಾರ ನೀಡುವಿರಿ. ಯಾರನ್ನು ಅಥವಾ ಯಾವುದೇ ವಿಚಾರವನ್ನು ಕಡೆಗಣ್ಣಿನಿಂದ ನೋಡದಿರಿ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಸ್ತ್ರೀಯರು ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಸಂಘ ಸಂಸ್ಥೆಯ ನೇತೃತ್ವ ವಹಿಸುತ್ತಾರೆ. ಆದಾಯದ ವಿಷಯದಲ್ಲಿ ಸಂತೃಪ್ತಿ ಇರುತ್ತದೆ. ದಾಂಪತ್ಯ ಜೀವನವು ಸುಖಮಯದಿಂದ ಕೂಡಿರುತ್ತದೆ. ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡುವಿರಿ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ವೃಷಭ

ಹೊಸ ನಿರೀಕ್ಷೆಯೊಂದಿಗೆ ದಿನದ ಕೆಲಸವನ್ನು ಆರಂಭಿಸುವಿರಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಬಹುದಿನದ ಹಣಕಾಸಿನ ವ್ಯವಹಾರಗಳು ಪೂರ್ಣಗೊಳ್ಳಲಿವೆ. ಬರಬೇಕಿದ್ದ ಹಣವು ಸುಲಭವಾಗಿ ನಿಮ್ಮ ಕೈ ಸೇರುತ್ತದೆ. ಅವಿವಾಹಿತರಿಗೆ ವಿವಾಹ ಮಾಡುವ ಮಾತುಕತೆ ನಡೆಯಲಿದೆ. ಅನಿರೀಕ್ಷಿತ ವರ್ತಮಾನವೊಂದು ಕುಟುಂಬದಲ್ಲಿ ಸಂತಸವನ್ನು ಉಂಟುಮಾಡುತ್ತದೆ. ಸಂಗಾತಿ ಮತ್ತು ಮಕ್ಕಳ ಜೊತೆ ಸಂತಸದಿಂದ ದಿನ ಕಳೆಯುವಿರಿ. ಸಂಗೀತ ನಾಟ್ಯದ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ದಂಪತಿಗಳ ನಡುವೆ ಇದ್ದ ಭಿನ್ನಾಭಿಪ್ರಾಯ ದೂರಾಗುತ್ತದೆ. ಸ್ನೇಹಿತರೊಂದಿಗೆ ಮನರಂಜನಾಕೂಟಕ್ಕೆ ತೆರಳುವಿರಿ. ಅಪರೂಪವೆಂಬಂತೆ ಆತ್ಮೀಯರ ಆಗಮನ ಪರೋಕ್ಷವಾಗಿ ಸಹಕಾರಿಯಾಗುತ್ತದೆ.

ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ತಿಳಿಹಸಿರು ಬಣ್ಣ

ಮಿಥುನ

ಸಹನೆಯಿಂದ ನೆರೆಹೊರೆಯವರೊಂದಿಗೆ ತೋರುವ ರೀತಿ ಮತ್ತು ನೀತಿ ಸಮಾಜದ ಮೆಚ್ಚುಗೆ ಗಳಿಸುತ್ತದೆ. ಕುಟುಂಬದಲ್ಲಿ ಶಾಂತಿ ಸಂಯಮಗಳು ಮನೆ ಮಾಡುತ್ತವೆ. ಹಣಕಾಸಿನ ತೊಂದರೆ ಎದುರಾಗದು. ಆದರೆ ಹಣ ಉಳಿಸಲು ಪ್ರಯತ್ನಿಸಿ. ಉದ್ಯೋಗದಲ್ಲಿ ತಡವಾದರೂ ದೊರೆಯಬೇಕಿದ್ದ ಸ್ಥಾನಮಾನಗಳು ದೊರೆಯಲಿದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಆದಾಯದ ಕೊರತೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಸಹಪಾಠಿಗಳ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮುಂದುವರಿಸುವ ಅವಕಾಶ ದೊರೆಯುತ್ತದೆ. ಹೋಟೆಲ್ ಅಥವಾ ಬೇಕರಿಯನ್ನು ಆರಂಭಿಸುವ ಕನಸು ನನಸಾಗಲಿದೆ. ಹಣೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ. ಪ್ರಾಣಿ ಪಕ್ಷಿಗಳ ಬಗ್ಗೆ ಅನುಕಂಪ ಮೂಡಲಿದೆ.

ಪರಿಹಾರ: ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಕಟಕ

ಸಾರ್ವಜನಿಕ ಕಾರ್ಯಕ್ರಮವೊಂದರ ನೇತೃತ್ವ ನಿಮ್ಮದಾಗುತ್ತದೆ. ಆದಾಯದಲ್ಲಿ ನಿರೀಕ್ಷಿತ ಪ್ರಗತಿ ಕಂಡು ಬರುತ್ತದೆ. ಹಣಕಾಸಿನ ವ್ಯವಹಾರದ ಬಗ್ಗೆ ಎಚ್ಚರಿಕೆ ಇರಲಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ತೊಂದರೆ ದೂರವಾಗಲಿದೆ. ಕುಟುಂಬದಲ್ಲಿ ಎಲ್ಲರೊಡನೆ ಸಂತಸದಿಂದ ಬೆರೆಯುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹೊರತಾಗಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದಿರುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿಆದಾಯದ ಕೊರತೆ ಕಂಡುಬರುತ್ತದೆ. ಪ್ರೀತಿ ಪಾತ್ರರಿಗೆ ಹಣದ ಸಹಾಯ ಮಾಡಲೇಬೇಕಾಗುತ್ತದೆ. ಆಹಾರಕ್ರಮದಲ್ಲಿ ಬದಲಾವಣೆ ತಂದು ಉತ್ತಮ ಆರೋಗ್ಯವನ್ನು ಪಡೆಯುವಿರಿ. ಧಾರ್ಮಿಕ ಕೇಂದ್ರಕ್ಕೆ ಹಣದ ಸಹಾಯ ಮಾಡುವಿರಿ

ಪರಿಹಾರ: ಜೇನು ಸೇವಿಸಿ ನೀರು ಕುಡಿದ ನಂತರ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 3

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.