ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹೊಸ ಮನೆ ಕೊಳ್ಳುವಿರಿ, ಗಣಿತ ಪಠ್ಯವನ್ನು ಬೋಧಿಸುವವರಿಗೆ ವಿಶೇಷ ಅವಕಾಶ; ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ

ಹೊಸ ಮನೆ ಕೊಳ್ಳುವಿರಿ, ಗಣಿತ ಪಠ್ಯವನ್ನು ಬೋಧಿಸುವವರಿಗೆ ವಿಶೇಷ ಅವಕಾಶ; ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ

14 ಜೂನ್‌ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (14th June 2024 Daily Horoscope).

ಹೊಸ ಮನೆ ಕೊಳ್ಳುವಿರಿ, ಗಣಿತ ಪಠ್ಯವನ್ನು ಬೋಧಿಸುವವರಿಗೆ ವಿಶೇಷ ಅವಕಾಶ; ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ
ಹೊಸ ಮನೆ ಕೊಳ್ಳುವಿರಿ, ಗಣಿತ ಪಠ್ಯವನ್ನು ಬೋಧಿಸುವವರಿಗೆ ವಿಶೇಷ ಅವಕಾಶ; ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(14th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಶುಕ್ರವಾರ

ತಿಥಿ : ಅಷ್ಟಮಿ ರಾ. 10.36ರವರೆಗೂ ಇರುತ್ತದೆ ನಂತರ ನವಮಿ ಆರಂಭವಾಗುತ್ತದೆ.

ನಕ್ಷತ್ರ : ಉತ್ತರ ನಕ್ಷತ್ರವು ದಿನಪೂರ್ತಿ ಇರುತ್ತದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಬೆಳಗ್ಗೆ 06.45

ರಾಹುಕಾಲ: 10.47 ರಿಂದ 12.23

ಧನಸ್ಸು

ನಿಮ್ಮ ಕುಟುಂಬದಲ್ಲೇ ನಿಮಗೆ ವಿಶೇಷ ಸ್ಥಾನಮಾನ ದೊರೆಯಲಿದೆ. ಸಾಕು ಪ್ರಾಣಿಗಳಲ್ಲಿ ಆಸಕ್ತಿ ಉಂಟಾಗುತ್ತದೆ. ಅನಿರೀಕ್ಷಿತವಾಗಿ ಜೀವನದಲ್ಲಿ ಶುಭಫಲಗಳು ದೊರೆಯುತ್ತವೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಬೇರೆಯವರಿಗೆ ಅರ್ಥವಾಗುವಂತೆ ಬುದ್ಧಿ ಹೇಳುವಿರಿ. ಕುಟುಂಬದ ಹೊರಗು ಒಳಗೂ ನಿಮ್ಮ ಗೌರವ ಹೆಚ್ಚುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ದೋಷವಿರುತ್ತದೆ. ಇರುವ ಹಣವನ್ನೆಲ್ಲ ಖರ್ಚು ಮಾಡಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ವಿಶೇಷ ಜ್ಞಾನವಿರುತ್ತದೆ. ಥೈರಾಯ್ಡ್ ತೊಂದರೆ ಇರುವ ಹೆಣ್ಣು ಮಕ್ಕಳು ಚಿಕಿತ್ಸೆ ಪಡೆಯಬೇಕು. ಗರ್ಭಿಣಿ ಸ್ತ್ರೀಯರು ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಗೆ ಪ್ರಾಮುಖ್ಯತೆ ನೀಡಬೇಕು.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೇಸರಿ

ಮಕರ

ಆದಾಯದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಒಳ್ಳೆಯ ಕೆಲಸಗಳಿಗೆ ಸಂಪಾದಿಸಿದ ಹಣವನ್ನು ಖರ್ಚು ಮಾಡುವಿರಿ. ವಿಶೇಷ ವ್ಯಕ್ತಿ ಒಬ್ಬರನ್ನು ಭೇಟಿ ಮಾಡುವಿರಿ. ನಿಮ್ಮಲ್ಲಿರುವ ಆಕರ್ಷಕ ವ್ಯಕ್ತಿತ್ವಕ್ಕೆ ಎಲ್ಲರೂ ಮಾರು ಹೋಗುತ್ತಾರೆ. ಸಮಯಕ್ಕೆ ತಕ್ಕಂತೆ ನಡೆದುಕೊಳ್ಳುವ ಬುದ್ಧಿ ನಿಮ್ಮಲ್ಲಿರುತ್ತದೆ. ಬೇರೆಯವರಿಗೆ ಬುದ್ಧಿವಾದ ಹೇಳುವುದರಲ್ಲಿ ನಿಸ್ಸೀಮರು. ಪಿತ್ತದ ದೋಷ ಉಂಟಾಗಲಿದೆ. ಗಣಿತ ಪಠ್ಯವನ್ನು ಬೋಧಿಸುವವರಿಗೆ ವಿಶೇಷ ಅವಕಾಶಗಳು ದೊರೆಯುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸಂಗಾತಿಯ ಬಗ್ಗೆ ವಿಶೇಷ ಪ್ರೀತಿ ಅಕ್ಕರೆ ಇರುತ್ತದೆ. ಹೊಸ ಒಡವೆ ವಸ್ತ್ರಗಳಿಗೆ ಹಣ ಖರ್ಚಾಗುತ್ತದೆ. ನಿಸರ್ಗದ ಸವಿಯನ್ನು ಅನುಭವಿಸಲು ಧೀರ್ಘಕಾಲದ ಪ್ರವಾಸವನ್ನು ಆಯೋಜಿಸುವಿರಿ. ಮಗಳಿಗೆ ಆಕರ್ಷಕ ಉಡುಗೊರೆಯೊಂದನ್ನು ನೀಡುವಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಕುಂಭ

ಆದಾಯಕ್ಕೆ ಸರಿಸಮನಾದ ಖರ್ಚು ವೆಚ್ಚವಿರುತ್ತದೆ. ಚರ್ಮದ ದೋಷದಿಂದ ಗುಣ ಹೊಂದುವಿರಿ. ಹಣಕಾಸಿನ ವಿಚಾರದಲ್ಲಿ ಆತ್ಮೀಯರೊಬ್ಬರು ವಿವಾದ ಉಂಟು ಮಾಡುತ್ತಾರೆ. ಆರೋಗ್ಯ ಸಮಸ್ಯೆ ನಿಮ್ಮನ್ನು ಬಾಧಿಸುತ್ತದೆ. ಹೊಸ ವಾಹನ ಕೊಳ್ಳುವಿರಿ. ಕುಟುಂಬದಲ್ಲಿನ ಸ್ತ್ರೀಯರಿಗೆ ದೈಹಿಕ ದೌರ್ಬಲ್ಯವಿರುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಅನಾವಶ್ಯಕವಾಗಿ ಬದಲಿಸುವಿರಿ. ನೋಡಲು ಶಾಂತರಂತೆ ಕಂಡರು ಕೋಪಗೊಂಡಾಗ ಉದ್ವೇಗದಿಂದ ವರ್ತಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ನವ ವಿವಾಹಿತರು ಹೊಸ ಮನೆ ಕೊಳ್ಳಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನವಿರುತ್ತದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸಗಳು ಹೆಚ್ಚುತ್ತವೆ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕೆಂಪು

ಮೀನ

ಪ್ರಯತ್ನಕ್ಕೆ ತಕ್ಕಂತೆ ಆದಾಯ ಇರುತ್ತದೆ. ಪ್ರತಿಯೊಂದು ವಿಚಾರದಲ್ಲಿಯೂ ಕುಟುಂಬದಲ್ಲಿ ಒಮ್ಮತವಿರುತ್ತದೆ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡುವಿರಿ. ಕಷ್ಟದಲ್ಲಿ ಇರುವ ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಮಧ್ಯವಯಸ್ಕರಿಗೆ ವಿವಾಹ ನಿಶ್ಚಯವಾಗುತ್ತದೆ. ಕುಟುಂಬದ ಹಿರಿಯರೊಬ್ಬರು ಉದ್ಯೋಗದ ಕಾರಣ ಕುಟುಂಬದಿಂದ ದೂರವಿರುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ವಿರುತ್ತದೆ. ಸೋದರಿಯು ದುಡುಕುತನದಿಂದ ಕೌಟುಂಬಿಕ ಜೀವನದಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಸೋದರನಿಗೆ ಹಣದ ಸಹಾಯ ಮಾಡುವಿರಿ. ಪತ್ನಿಯ ಸಲುವಾಗಿ ಅನಾವಶ್ಯಕ ಖರ್ಚು ವೆಚ್ಚಗಳು ಇರುತ್ತವೆ. ಮಕ್ಕಳ ಸಮಯ ಪ್ರಜ್ಞೆಯಿಂದ ತೊಂದರೆಯೊಂದರಿಂದ ಪಾರಾಗುವಿರಿ.

ಪರಿಹಾರ : ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಕಪ್ಪು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.