ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಕುಟುಂಬದಲ್ಲಿ ಬೇಸರದ ವಾತಾವರಣ, ಕಲಾವಿದರಿಗೆ ಉತ್ತಮ ಅವಕಾಶ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

Horoscope Today: ಕುಟುಂಬದಲ್ಲಿ ಬೇಸರದ ವಾತಾವರಣ, ಕಲಾವಿದರಿಗೆ ಉತ್ತಮ ಅವಕಾಶ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

15 ಮೇ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (15th May 2024 Daily Horoscope).

15 ಮೇ 2024ರ ದಿನ ಭವಿಷ್ಯ
15 ಮೇ 2024ರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (15th May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಬುಧವಾರ

ತಿಥಿ: ಅಷ್ಟಮಿ ದಿನಪೂರ್ತಿ ಇರುತ್ತದೆ

ನಕ್ಷತ್ರ: ಆಶ್ಲೇಷ ನಕ್ಷತ್ರವು 04.40ರವರೆಗೂ ಇದ್ದು ನಂತರ ಮಖ ನಕ್ಷತ್ರವು ಆರಂಭವಾಗುತ್ತದೆ

ಸೂರ್ಯೋದಯ: ಬೆಳಗ್ಗೆ 05.54

ಸೂರ್ಯಾಸ್ತ: ಸಂಜೆ 06.37

ರಾಹುಕಾಲ: 12.20 ರಿಂದ 01.55

ರಾಶಿಫಲ

ಸಿಂಹ

ಕುಟುಂಬದ ಗೌರವ ಘನತೆಯನ್ನು ಉಳಿಸುವಲ್ಲಿ ಸಫಲರಾಗುವಿರಿ. ಸಮಯ ವ್ಯರ್ಥ ಮಾಡದೆ ಯಾವುದಾದರೊಂದು ಕೆಲಸವನ್ನು ಮಾಡುವಿರಿ. ದಿನದ ಆರಂಭದಲ್ಲಿ ವಿವಾದವೊಂದು ಎದುರಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಸಮಾಜದಲ್ಲಿ ವರ್ಚಸ್ಸು ಇರುವ ನಾಯಕರಾಗಿ ರೂಪುಗೊಳ್ಳುವಿರಿ. ಸ್ನೇಹಿತರ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಸಂಘ ಸಂಸ್ಥೆಗಳಲ್ಲಿ ಅಧಿಕಾರ ದೊರೆಯುತ್ತದೆ. ಪುಟ್ಟ ಮಕ್ಕಳಲ್ಲಿ ಕಫದ ತೊಂದರೆ ಇರುತ್ತದೆ. ಮುಂಗೋಪದಿಂದ ವರ್ತಿಸಿದಲ್ಲಿ ಆತ್ಮೀಯರು ದೂರವಾಗುತ್ತಾರೆ. ಜನಪ್ರಿಯತೆಯ ಜೊತೆ ಮಾನಸಿಕ ಒತ್ತಡವೂ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಗುರು ಹಿರಿಯರ ಸಹಕಾರ ದೊರೆಯುತ್ತದೆ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿ ದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕಪ್ಪು

ಕನ್ಯಾ

ಕುಟುಂಬದವರನ್ನು ಗೌರವದಿಂದ ಕಾಣುವಿರಿ. ನಿಮ್ಮನ್ನು ಹೊಗಳುವವರನ್ನು ಸುಲಭವಾಗಿ ನಂಬುವಿರಿ. ಪರಿಪಕ್ವ ನಿರ್ಧಾರಗಳ ಕಾರಣ ಕುಟುಂಬದಲ್ಲಿ ನೆಮ್ಮದಿ ನೆಲೆಸಿರುತ್ತದೆ. ನಿರುದ್ಯೋಗಿಗಳಿಗೆ ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಬೆಂಬಲ ದೊರೆಯುತ್ತದೆ. ಹಣದ ಕೊರತೆ ಕಡಿಮೆ ಆಗಲಿದೆ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಅನಾರೋಗ್ಯ ಇರಲಿದೆ. ಕುಟುಂಬದಲ್ಲಿ ವಿರಸದ ಸನ್ನಿವೇಶಗಳು ಎದುರಾಗಲಿದೆ. ತಾಯಿಯ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಹಣಕಾಸಿನ ವ್ಯವಹಾರದಲ್ಲಿ ನಿಮ್ಮ ನಿರ್ಧಾರವೇ ಅಂತಿಮವಾಗಲಿದೆ. ಧಾರ್ಮಿಕ ಕೇಂದ್ರಗಳಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ತಿಳಿ ಹಸಿರು

ತುಲಾ

ಅಧ್ಯಾಪಕರಾದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಲಭಿಸುತ್ತವೆ. ಸಮಯಕ್ಕೆ ತಕ್ಕಂತೆ ವರ್ತಿಸಿ ಜೀವನವನ್ನು ಅರ್ಥಪೂರ್ಣಗೊಳಿಸುವಿರಿ. ಬೇರೆಯವರ ತೀರ್ಮಾನಗಳನ್ನು ಗೌರವಿಸುವಿರಿ. ಆದರೆ ಸ್ವಂತ ತೀರ್ಮಾನಗಳಿಗೆ ಬದ್ದರಾಗುವಿರಿ. ವಿದ್ಯಾರ್ಥಿಗಳು ಸ್ವಂತ ಸಾಮರ್ಥ್ಯದಿಂದ ಗುರಿ ತಲುಪುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸಂಗಾತಿಯ ಕಷ್ಟ ನಷ್ಟಗಳಿಗೆ ಪರಿಹಾರವನ್ನು ಕಂಡುಹಿಡಿಯುವಿರಿ. ಕುಟುಂಬದ ಹಿರಿಯರ ಜೊತೆಗೂಡಿ ಯಾತ್ರಾಸ್ಥಳಕ್ಕೆ ಪ್ರವಾಸ ಹೋಗುವಿರಿ. ಸಾಲದ ವ್ಯವಹಾರ ಇಷ್ಟಪಡುವುದಿಲ್ಲ. ಉದ್ಯೋಗ ದೊರೆತು ಮಕ್ಕಳು ವಿದೇಶಕ್ಕೆ ತೆರಳಲಿದ್ದಾರೆ. ಯಾತ್ರಾರ್ಥಿಗಳಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ನಸು ಗೆಂಪು

ವೃಶ್ಚಿಕ

ಹಿರಿಯರು ಮಾಡುತ್ತಿದ್ದ ವ್ಯಾಪಾರ ವ್ಯವಹಾರವನ್ನು ಮುಂದುವರಿಸುವಿರಿ. ಕುಟುಂಬದವರ ದಿನನಿತ್ಯದ ಚಟುವಟಿಕೆಗಳಿಗೆ ಸಹಾಯ ಮಾಡುವಿರಿ. ವೃತ್ತಿ ಕ್ಷೇತ್ರದಲ್ಲಿ ನಿಮ್ಮಲ್ಲಿನ ಕಾರ್ಯ ನೈಪುಣ್ಯತೆಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ ಗಳಿಸುವಿರಿ. ಮನೆತನದ ಭೂಮಿಯ ವಿಚಾರದಲ್ಲಿ ಸಂಧಾನ ನಡೆಸುವಿರಿ. ಸಂಗಾತಿಯ ಜೊತೆಯಲ್ಲಿ ವಿರಸದ ಸನ್ನಿವೇಶಗಳು ಎದುರಾಗುತ್ತವೆ. ಸ್ಟಾಕ್‌ ಮತ್ತು ಷೇರಿನ ವ್ಯವಹಾರದಿಂದ ಹಣ ಗಳಿಸುವಿರಿ. ಸಮಯ ವ್ಯರ್ಥಮಾಡದೆ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗುವಿರಿ. ನಿಮ್ಮಲ್ಲಿನ ಒಳ್ಳೆಯತನದ ದುರುಪಯೋಗ ಆಗಬಹುದು ಎಚ್ಚರಿಕೆ ಇರಲಿ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಕುಟುಂಬದ ಹಿರಿಯರ ಸಹಾಯ ದೊರೆಯುತ್ತದೆ.

ಪರಿಹಾರ : ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).